Train Shedule: ಜುಲೈ 9-10ರಂದು ಹಲವು ರೈಲುಗಳ ಮಾರ್ಗ ಬದಲಾವಣೆ : ವಿವರ ತಿಳಿಯಿರಿ

ನಾಂದ್ರೆ - ಸಾಂಗ್ಲಿ ನಿಲ್ದಾಣಗಳ ನಡುವಿನ ಜೋಡಿ ಮಾರ್ಗದ ಕಾಮಗಾರಿ ನಡೆಯುತ್ತಿದ್ದು ಹಲವು ರೈಲುಗಳ ಮಾರ್ಗಗಗಳನ್ನು ಬದಲಿಸಲಾಗಿದೆ ಮತ್ತು ಮಾರ್ಗ ಮಧ್ಯೆ ನಿಯಂತ್ರಿಸಲು ಕೇಂದ್ರವಲಯ ಸೂಚಿಸಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ಜುಲೈ 9-10ರಂದು ಬೆಂಗಳೂರು, ಮೈಸೂರಿನಿಂದ ಹೊರಡುವ ಹಲವು ರೈಲುಗಳ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಕೆಲವು ರೈಲುಗಳನ್ನು ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Trains Diverted and Regulated For Nandre-Sangli Section Doubling Work

ಜುಲೈ 8ರಂದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16506 ಕೆಎಸ್‌ಆರ್ ಬೆಂಗಳೂರು-ಗಾಂಧಿಧಾಮ್ ಎಕ್ಸ್‌ಪ್ರೆಸ್‌ ರೈಲನ್ನು ಕೇಂದ್ರ ರೈಲ್ವೆ ವಲಯ ವ್ಯಾಪ್ತಿಯಲ್ಲಿ 1.40 ಗಂಟೆಗಳ ಕಾಲ ನಿಯಂತ್ರಿಸಲಾಗುತ್ತದೆ.

ಜುಲೈ 10ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ - ಹಜರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ರೈಲನ್ನು ರೈಲ್ವೆ ವಲಯ ವ್ಯಾಪ್ತಿಯಲ್ಲಿ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ಈ ರೈಲುಗಳ ಮಾರ್ಗ ಬದಲಾವಣೆ

ಜುಲೈ 9 ರಂದು ದಾದರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17318 ದಾದರ್ - ಎಸ್‌ಎಸ್‌ಎಸ್‌ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ದೌಂಡ್, ಕುರ್ದವಾಡಿ ಮತ್ತು ಮೀರಜ್ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು, ಕರಾಡ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಜುಲೈ 9ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17317 ಎಸ್‌ಎಸ್‌ಎಸ್‌ ಹುಬ್ಬಳ್ಳಿ - ದಾದರ್ ಎಕ್ಸ್‌ಪ್ರೆಸ್ ರೈಲು ಮೀರಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು, ಸಾಂಗ್ಲಿ ಮತ್ತು ಕರಾಡ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಜುಲೈ 9ರಂದು ಅಜ್ಮೀರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16534 ಕೆಎಸ್‌ಆರ್ ಬೆಂಗಳೂರು- ಜೋಧಪುರ ಎಕ್ಸ್‌ಪ್ರೆಸ್ ರೈಲು ಮಿರಾಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಸಾಂಗ್ಲಿ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಜುಲೈ 9 ರಂದು ಪುದುಚೆರಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11006 ಪುದುಚೆರಿ-ದಾದರ್ ಎಕ್ಸ್‌ಪ್ರೆಸ್ ರೈಲು ಮಿರಾಜ್, ಕುರ್ದವಾಡಿ ಮತ್ತು ದೌಂಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಸಾಂಗ್ಲಿ ಮತ್ತು ಸತಾರಾ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಜುಲೈ 9 ರಂದು ದೆಹಲಿ ಹಜರತ್ ನಿಜಾಮುದ್ದಿನ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದಿನ್ - ವಾಸ್ಕೋ-ಡ-ಗಾಮಾ ಗೋವಾ ಎಕ್ಸ್‌ಪ್ರೆಸ್ ರೈಲು ದೌಂಡ್, ಕುರ್ದವಾಡಿ ಮತ್ತು ಮಿರಾಜ್ ನಿಲ್ದಾಣಗಳ ಮೂಲ ಚಲಿಸಲಿದ್ದು ಸತಾರಾ, ಕರಾಡ್ ಮತ್ತು ಸಾಂಗ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+