ಕರ್ನಾಟಕ ಕರಾವಳಿಗೆ ರೈಲು ಸಂಪೂರ್ಣ ರದ್ದು, ರೈಲುಗಳ ಪಟ್ಟಿ

ಬೆಂಗಳೂರು, ಜುಲೈ 28: ಭಾರೀ ಮಳೆಯ ಕಾರಣ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಡಕಮುರಿ-ಕಡಗರಹಳ್ಳಿ ನಿಲ್ದಾಣಗಳ ನಡುವೆ ರೈಲ್ವೆ ಹಳಿಯ ಕೆಳಗೆ ಭೂ ಕುಸಿತವಾಗಿದೆ. ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಭಾನುವಾರ ಮಧ್ಯಾಹ್ನದ ನೈಋತ್ಯ ರೈಲ್ವೆ ಪ್ರಕಟಣೆಯ ಮಾಹಿತಿಯಂತೆ 14 ರೈಲುಗಳ ಸಂಚಾರ ಸ್ಥಗಿತವಾಗಿದೆ. ಆದ್ದರಿಂದ ಕರ್ನಾಟಕದ ಕರಾವಳಿ ಭಾಗಕ್ಕೆ ರೈಲುಗಳ ಸಂಚಾರ ಸಂಪೂರ್ಣ ರದ್ದುಗೊಂಡಿದೆ.

Train To Coastal Karnataka Completely Cancel Trains List

ಯಡಕಮುರಿ-ಕಡಗರಹಳ್ಳಿ ರೈಲು ನಿಲ್ದಾಣಗಳ ನಡುವೆ ಭೂ ಕುಸಿತವಾದ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಇದು ಪೂರ್ಣಗೊಳ್ಳಲು ಅಂದಾಜು 5 ದಿನಗಳು ಬೇಕು ಎಂದು ನಿರೀಕ್ಷೆ ಮಾಡಲಾಗಿದೆ. ಆದ್ದರಿಂದ ಈ ಮಾರ್ಗದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ರದ್ದುಗೊಂಡಿರುವ ರೈಲುಗಳ ಪಟ್ಟಿ

* ರೈಲು ನಂಬರ್ 16511. ಕೆಎಸ್ಆರ್ ಬೆಂಗಳೂರು-ಕಣ್ಣೂರು. ಜುಲೈ 29 ರಿಂದ ಆಗಸ್ಟ್ 3ರ ತನಕ ರದ್ದು. ರೈಲು ನಂಬರ್ 16512. ಕಣ್ಣೂರು-ಕೆಎಸ್ಆರ್‌ ಬೆಂಗಳೂರು. ಜುಲೈ 30 ರಿಂದ ಆಗಸ್ಟ್ 4ರ ತನಕ ರದ್ದು.

* ರೈಲು ನಂಬರ್ 16595. ಕೆಎಸ್ಆರ್ ಬೆಂಗಳೂರು-ಕಾರವಾರ. ಜುಲೈ 29ರಿಂದ ಆಗಸ್ಟ್ 3ರ ತನಕ ಸ್ಥಗಿತ. ರೈಲು ನಂಬರ್ 16596. ಕಾರವಾರ-ಕೆಎಸ್ಆರ್ ಬೆಂಗಳೂರು. ಜುಲೈ 30 ರಿಂದ ಆಗಸ್ಟ್ 4ರ ತನಕ ರದ್ದು.

* ರೈಲು ನಂಬರ್ 16585. ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ. ಜುಲೈ 29 ರಿಂದ ಆಗಸ್ಟ್ 3ರ ತನಕ ರದ್ದು. ರೈಲು ನಂಬರ್ 16586. ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು. ಜುಲೈ 30 ರಿಂದ ಆಗಸ್ಟ್ 4ರ ತನಕ ರದ್ದು.

* ರೈಲು ನಂಬರ್ 07377. ವಿಜಯಪುರ-ಮಂಗಳೂರು ಸೆಂಟ್ರಲ್. ಜುಲೈ 29 ರಿಂದ ಆಗಸ್ಟ್ 3ರ ತನಕ ರದ್ದು. ರೈಲು ನಂಬರ್ 07378. ಮಂಗಳೂರು ಸೆಂಟ್ರಲ್-ವಿಜಯಪುರ. ಜುಲೈ 30 ರಿಂದ ಆಗಸ್ಟ್ 4ರ ತನಕ ರದ್ದು.

* ರೈಲು ನಂಬರ್16515. ಯಶವಂತಪುರ-ಕಾರವಾರ. ಜುಲೈ 29, 31 ಮತ್ತು ಆಗಸ್ಟ್ 2ರಂದು ರದ್ದು. ರೈಲು ನಂಬರ್ 16516. ಕಾರವಾರ-ಯಶವಂತಪುರ. ಜುಲೈ 30, ಆಗಸ್ಟ್ 1 ಮತ್ತು 3ರಂದು ರದ್ದು.

* ರೈಲು ನಂಬರ್ 16575. ಯಶವಂತಪುರ-ಮಂಗಳೂರು ಜಂಕ್ಷನ್. ಜುಲೈ 30 ಮತ್ತು ಆಗಸ್ಟ್ 1ರಂದು ರದ್ದು. ರೈಲು ನಂಬರ್ 16576. ಮಂಗಳೂರು ಜಂಕ್ಷನ್-ಯಶವಂತಪುರ. ಜುಲೈ 31 ಮತ್ತು ಆಗಸ್ಟ್ 2ರಂದು ರದ್ದು.

* ರೈಲು ನಂಬರ್ 16539. ಯಶವಂತಪುರ-ಮಂಗಳೂರು ಜಂಕ್ಷನ್. ಆಗಸ್ಟ್ 3ರಂದು ರದ್ದು. ರೈಲು ನಂಬರ್ 16540. ಮಂಗಳೂರು ಜಂಕ್ಷನ್-ಯಶವಂತಪುರ ಆಗಸ್ಟ್ 4ರಂದು ರದ್ದು.

ಈ ಯಡಕಮುರಿ-ಕಡಗರಹಳ್ಳಿ ರೈಲು ನಿಲ್ದಾಣದ ನಡುವೆ ಭೂ ಕುಸಿತ ಉಂಟಾಗಿರುವ ಪ್ರದೇಶ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಸೇರುತ್ತದೆ. ಡಿಆರ್‌ಎಂ ಶಿಲ್ಪಾ ಅಗರ್‌ವಾಲ್ ಸೇರಿದಂತೆ ಅಧಿಕಾರಿಗಳು ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ರೈಲು ಸಂಚಾರ ಪುನಃ ಆರಂಭಿಸಲು ಪ್ರಯತ್ನ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಆಗಾಗ ಅಪ್‌ಡೇಟ್ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+