ತಿರುಪತಿಗೆ ಹೋಗುವ ಭಕ್ತರ ಗಮನಕ್ಕೆ; ಹಲವು ರೈಲುಗಳು ರದ್ದು
ಬೆಂಗಳೂರು, ಜುಲೈ 12; ದಕ್ಷಿಣ ಮಧ್ಯ ರೈಲ್ವೆಯ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ, ಕೆಲವು ಭಾಗಶಃ ರದ್ದುಗೊಂಡಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.
ಗುಂತಕಲ್ ವಿಭಾಗ ವಾಪ್ತಿಯ ತಿರುಪತಿ ನಿಲ್ದಾಣದ ಪ್ಲಾಟ್‌ಫಾರಂ ನಂಬರ್ 2 ಮತ್ತು ನಂಬರ್ 3ರ ಹಳಿ ದುರಸ್ತಿ ಕಾಮಗಾರಿ ಸಲುವಾಗಿ ಜುಲೈ 12 ರಿಂದ ಆಗಸ್ಟ್ 10 ರವರೆಗೆ ಕೆಲವು ರೈಲುಗಳನ್ನು ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ ಮಾಡಲಾಗುತ್ತಿದೆ.

ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳ ಕಾಲ ಈ ಆದೇಶ ಜಾರಿಯಲ್ಲಿರುತ್ತದೆ. ಆದ್ದರಿಂದ ರೈಲು ಪ್ರಯಾಣ ಮಾಡುವ ಮೊದಲು ರೈಲು ಸಂಚಾರದ ಬಗ್ಗೆ ಮಾಹಿತಿ ತಿಳಿಯಿರಿ. ರೈಲುಗಳ ಪಟ್ಟಿ ಇಲ್ಲಿದೆ ನೋಡಿ.
ರೈಲುಗಳು ರದ್ದು
* ಜುಲೈ 12 ರಂದು ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16203 ಎಂ.ಜಿ.ಆರ್.ಚೆನ್ನೈ ಸೆಂಟ್ರಲ್ - ತಿರುಪತಿ ಎಕ್ಸ್‌ಪ್ರೆಸ್ ರೈಲನ್ನು ಜುಲೈ 12 ರಿಂದ ಆಗಸ್ಟ್ 10 ರವರೆಗೆ ರದ್ದುಗೊಳಿಸಲಾಗುತ್ತಿದೆ.
* ಜುಲೈ 12 ರಂದು ತಿರುಪತಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16204 ತಿರುಪತಿ-ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಜುಲೈ 12 ರಿಂದ ಆಗಸ್ಟ್ 10 ರ ತನಕ ರದ್ದು.
ರೈಲುಗಳು ಭಾಗಶಃ ರದ್ದು; ಜುಲೈ 11 ರಂದು ಚಾಮರಾಜನಗರದಿಂದ ಹೊರಡುವ ರೈಲು ಸಂಖ್ಯೆ 16219 ಚಾಮರಾಜನಗರ-ತಿರುಪತಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಜುಲೈ 11 ರಿಂದ ಆಗಸ್ಟ್ 10 ರವರೆಗೆ ಪಕಲಾ-ತಿರುಪತಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
ಜುಲೈ 12 ರಂದು ತಿರುಪತಿಯಿಂದ ಹೊರಡುವ ರೈಲು ಸಂಖ್ಯೆ 16220 ಚಾಮರಾಜನಗರ-ತಿರುಪತಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಜುಲೈ 12 ರಿಂದ ಆಗಸ್ಟ್ 11ರವರೆಗೆ ತಿರುಪತಿ - ಪಕಲಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
ಜುಲೈ 11 ರಂದು ಕದ್ರಿದೇವರಪಲ್ಲಿಯಿಂದ ಹೊರಡುವ ರೈಲು ಸಂಖ್ಯೆ 07590 ಕದ್ರಿದೇವರಪಲ್ಲಿ - ತಿರುಪತಿ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 11 ರಿಂದ ಆಗಸ್ಟ್ 10 ರವರೆಗೆ ಪಕಲಾ - ತಿರುಪತಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
ಜುಲೈ 12 ರಂದು ತಿರುಪತಿಯಿಂದ ಹೊರಡುವ ರೈಲು ಸಂಖ್ಯೆ 07657 ತಿರುಪತಿ ಹುಬ್ಬಳ್ಳಿ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 12 ರಿಂದ ಆಗಸ್ಟ್ 10 ರವರೆಗೆ ತಿರುಪತಿ - ರೆಣಿಗುಂಟಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
ಜುಲೈ 11 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 07658 ಎಸ್.ಎಸ್.ಎಸ್. ಹುಬ್ಬಳ್ಳಿ - ತಿರುಪತಿ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಜುಲೈ 11 ರಿಂದ ಆಗಸ್ಟ್ 10 ರವರೆಗೆ ರೆಣಿಗುಂಟಾ - ತಿರುಪತಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
ರೈಲುಗಳು ಮಾರ್ಗ ಬದಲಾವಣೆ; ಜುಲೈ 15, 22, 29 ಆಗಸ್ಟ್ 5 ರಂದು ಹಟಿಯಾದಿಂದ ಹೊರಡುವ ರೈಲು ಸಂಖ್ಯೆ 18637 ಹಟಿಯಾ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ರೈಲು ಮೇಲ್ಪಕ್ಕಂ ನಿಲ್ದಾಣದ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ, ಪಕಲಾ ಮತ್ತು ಚಿತ್ತೂರು ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.
ಜುಲೈ 11, 18, 25 ಆಗಸ್ಟ್ 1, 8 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 18638 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಹಟಿಯಾ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಮೇಲ್ಪಕ್ಕಂ ನಿಲ್ದಾಣದ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು, ಪಕಲಾ ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.












Click it and Unblock the Notifications