ಅಕ್ಟೋಬರ್ 12ರಂದು ಮಂಗಳೂರು-ಮಡಂಗಾವ್ ನಡುವೆ ರೈಲು ಸಂಚಾರ ರದ್ದು, ಕಾರಣ ತಿಳಿಯಿರಿ
ಮಂಗಳೂರು, ಅಕ್ಟೋಬರ್, 11: ಅಕ್ಟೋಬರ್ 12ರಂದು ಮಡಗಾಂವ್ ಹಾಗೂ ಕುಮಟಾ ನಡುವೆ ರೈಲು ಸಂಚಾರ ರದ್ದಾರಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು, ರದ್ದಾಗಲಿರುವ ರೈಲು ಸಂಖ್ಯೆಗಳ ವಿವರ ಇಲ್ಲಿದೆ ತಿಳಿಯಿರಿ.
ರೈಲ್ವೆ ಹಳಿ ದುರಸ್ತಿ ಕಾಮಗಾರಿ ಹಿನ್ನೆಲೆ ಮಡಗಾಂವ್ ಹಾಗೂ ಕುಮಟಾ ನಡುವೆ ಅಕ್ಟೋಬರ್ 12ರಂದು ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಗುರುವಾರ (ಅಕ್ಟೋಬರ್ 12) ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಸಂಖ್ಯೆ 06602 ಮಂಗಳೂರು ಸೆಂಟ್ರಲ್-ಮಡಗಾಂವ್ ವಿಶೇಷ ರೈಲು ಕುಮಟಾ ನಿಲ್ದಾಣದಲ್ಲಿ ಕೊನೆ ಆಗಲಿದೆ. ಕುಮಟಾ-ಮಡಗಾಂವ್ ನಡುವೆ ಸಂಚಾರ ಭಾಗಶಃ ರದ್ದಾಗಲಿದೆ ಎಂದು ತಿಳಿದುಬಂದಿದೆ.

ಗುರುವಾರ ಮಡಗಾಂವ್‌ನಿಂದ ಮಂಗಳೂರಿಗೆ ಹೊರಡಬೇಕಿದ್ದ ರೈಲು ಸಂಖ್ಯೆ 06601 ಮಡಗಾಂವ್-ಮಂಗಳೂರು ಸೆಂಟ್ರಲ್ ವಿಶೇಷ ರೈಲು ಸೇವೆಯು ಮಡಗಾಂವ್ ಬದಲು ಕುಮಟಾದಿಂದ ಪ್ರಾರಂಭ ಆಗಲಿದೆ. ಮಡಗಾಂವ್-ಕುಮಟಾ ನಡುವೆ ಬಹುತೇಕ ಸಂಚಾರ ರದ್ದುಗೊಳ್ಳಲಿದ್ದು, ಸಂಜೆ 4:01 ಗಂಟೆಗೆ ಕುಮಟಾದಿಂದ ಮಂಗಳೂರಿನತ್ತ ಪ್ರಯಾಣ ಬೆಳೆಸಲಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಹಲವು ರೈಲುಗಳ ಸಂಚಾರ ರದ್ದು, ಸಮಯ, ದಿನಾಂಕಗಳ ವಿವರ
ಹಾಗೆಯೇ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದ ಕೆಲವು ಸೆಕ್ಷನ್‌ಗಳಲ್ಲಿ ಇಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆ ಅಕ್ಟೋಬರ್ 11ರಿಂದ 16ರ ವರೆಗೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿದುಬಂದಿದೆ.
ಇಂದು (ಬುಧವಾರ) 22637 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ -ಮಂಗಳೂರು ಸೆಂಟ್ರಲ್ ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್‌ನ ಸೇವೆಯನ್ನು ಒಂದೂವರೆ ಗಂಟೆ, 22638 ಮಂಗಳೂರು ಸೆಂಟ್ರಲ್ -ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ 20 ನಿಮಿಷ, 12283 ಎರ್ನಾಕುಲಂ-ನಿಜಾಮುದ್ದೀನ್ ಸಾಪ್ತಾಹಿಕ ದುರಂತೋ ಎಕ್ಸ್‌ಪ್ರೆಸ್ 30 ನಿಮಿಷ, 16159 ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ 1 ಗಂಟೆ 20 ನಿಮಿಷ, 16160 ಮಂಗಳೂರು ಸೆಂಟ್ರಲ್ -ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ಸೇವೆಯನ್ನು 15 ನಿಮಿಷ ಕಾಲ ನಿಲ್ಲಿಸಲಾಗುತ್ತದೆ.
ಗುರುವಾರ, (ಅಕ್ಟೋಬರ್ 12) 22638 ಮಂಗಳೂರು ಸೆಂಟ್ರಲ್ ಎಂಜಿಆರ್ ಚೆನ್ನೈ ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ 30 ನಿಮಿಷ ಸೇವೆ ರದ್ದಾಗಲಿದೆ. ಶುಕ್ರವಾರ (ಅಕ್ಟೋಬರ್ 13) 22637 ವೆಸ್ಟ್‌ಕೋಸ್ಟ್ 40 ನಿಮಿಷ ಕಾಲ ರದ್ದು ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಶನಿವಾರ (ಅಕ್ಟೋಬರ್ 14) 20910 ಪೋರಬಂದರ್ ಕೊಚ್ಚುವೇಲಿ ವೀಕ್ಲಿ ಸೂಪರ್‌ಫಾಸ್ಟ್ 30 ನಿಮಿಷ, 16649 ಮಂಗಳೂರು ಸೆಂಟ್ರಲ್ ನಾಗರಕೋವಿಲ್ ಜಂಕ್ಷನ್ ಪರಶುರಾಮ ಎಕ್ಸ್‌ಪ್ರೆಸ್ 20 ನಿಮಿಷ, 12678 ಎರ್ನಾಕುಳಂ ಕೆಎಸ್‌ಆರ್ ಬೆಂಗಳೂರು ರೈಲನ್ನು 30 ನಿಮಿಷ ಕಾಲ ನಿಯಂತ್ರಿಸಲಾಗುತ್ತದೆ.
ಭಾನುವಾರ (ಅಕ್ಟೋಬರ್ 15) 22638 ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ಅನ್ನು 1.40 ಗಂಟೆ, 12618 ನಿಜಾಮುದ್ದೀನ್-ಎರ್ನಾಕುಳಂ ಮಂಗಳಾ ಲಕ್ಷದ್ವೀಪ್ 1.10 ಗಂಟೆ, 12224 ಎರ್ನಾಕುಲಂ-ಲೋಕಮಾನ್ಯ ತಿಲಕ್ ವೀಕ್ಲಿ ಎಕ್ಸ್‌ಪ್ರೆಸ್ 2.35 ಗಂಟೆ, 22637 ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ ಅನ್ನು 1.40 ಗಂಟೆ ರದ್ದು ಮಾಡಲಾಗುತ್ತದೆ.
ಸೋಮವಾರ (ಅಕ್ಟೋಬರ್ 16) 22637 ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ 1.40 ಗಂಟೆ, ನಂಬರ್ 22638 ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ 1.40 ಗಂಟೆ, 12618 ನಿಜಾಮುದ್ದೀನ್ ಎರ್ನಾಕುಲಂ ಮಂಗಳಾ ಎಕ್ಸ್‌ಪ್ರೆಸ್ 1.10 ಗಂಟೆ, 16603 ಮಂಗಳೂರು ಸೆಂಟ್ರಲ್ ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ 1.10 ಗಂಟೆ, 12484 ಅಮೃತಸರ -ಕೊಚ್ಚುವೇಲಿ ವೀಕ್ಲಿ ಎಕ್ಸ್‌ಪ್ರೆಸ್ 30 ನಿಮಿಷ, 11098 ಎರ್ನಾಕುಲಂ-ಪುಣೆ ಜಂಕ್ಷನ್ ಪೂರ್ಣ ಎಕ್ಸ್‌ಪ್ರೆಸ್ 45 ನಿಮಿಷ ಕಾಲ ರದ್ದಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications