ಜಿನುಗು ಮಳೆ ನಡುವೆಯೇ ಕಾಫಿನಾಡಿನ ಪ್ರಮುಖ ಪ್ರವಾಸಿ ತಾಣಗಳತ್ತ ಹರಿದುಬಂತು ಪ್ರವಾಸಿಗರ ದಂಡು

ಚಿಕ್ಕಮಗಳೂರು, ಜುಲೈ, 02: ವಾರಾಂತ್ಯ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ ಪ್ರವಾಸಿಗರ ದಂಡೇ ಹರಿದುಬಂದಿದೆ.

ಜಿನುಗು ಮಳೆಯ ನುಡುವೆಯೇ ರಾಜ್ಯದ ಬಹುತೇಕ ಭಾಗಗಳಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಲು ಪ್ರವಾಸಿಗರ ದಂಡೇ ಆಗಮಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಗಿರಿ ಭಾಗಕ್ಕೆ ಪ್ರವಾಸಿಗರು ಆಗಮಿಸಿದ ಹಿನ್ನೆಲೆ ಗಿರಿ ರಸ್ತೆಯಲ್ಲಿ 3 ಕಿಲೋ ಮೀಟರ್‌ವರೆಗೂ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

Tourists flock to Chikkamagalurus wonderful tourist spot Mullayanagiri Peak

ಒಂದು ಗಂಟೆಗೂ ಹೆಚ್ಚು ಕಾಲ ಪ್ರವಾಸಿಗರ ವಾಹನಗಳು ನಿಂತಲ್ಲೇ ನಿಲ್ಲುವಂತಾಯುತ್ತು. ಇನ್ನು ತುಂತುರು ಮಳೆಯಲ್ಲಿ ಟ್ರಾಫಿಕ್ ಜಾಮ್‌ನಿಂದ ಪ್ರವಾಸಿಗರು ಹೈರಣಾಗಿದ್ದಾರೆ. ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳುವ ಮಾರ್ಗದ ಮಧ್ಯೆ ಟ್ರಾಫಿಕ್ ಜಾಮ್ ಉಂಟಾಗಿ ಕೆಲಕಾಲ ಪ್ರವಾಸಿಗರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸ ಪಟ್ಟರು.

ಕಾಫಿನಾಡಿನ ಪ್ರವಾಸಿ ತಾಣಗಳ ವಿವರ

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಮಾಣಿಕ್ಯಧಾರ, ಮೂಡಿಗೆರೆ ಚಾರ್ಮಡಿ ಘಾಟ್, ದತ್ತಾತ್ರೇಯ ಪೀಠ, ಕಳಸ ಕಳಸೇಶ್ವರ ದೇವಸ್ಥಾನ, ಲಕ್ಕವಳ್ಳಿ ಭದ್ರಾ ಜಲಾಶಯ, ಶೃಂಗೇರಿ ಋಷ್ಯಾ ಶೃಂಗಪುರ, ಶೃಂಗೇರಿ ಶಾರದಾಂಬೆ, ಮೂಡಿಗೆರೆ ದೇವರಮನೆ ಬೆಟ್ಟ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಜಿಲ್ಲೆಯಲ್ಲಿ ಐತಿಹಾಸಿಕ ಹಾಗೂ ಮನಮೋಹನ ಪ್ರವಾಸಿ ತಾಣಗಳಿವೆ.

ಮುಳ್ಳಯ್ಯನಗಿರಿ ಕರ್ನಾಟಕದ ಎತ್ತರ ಗಿರಿಶಿಖರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇದು ಸಮುದ್ರ ಮಟ್ಟದಿಂದ 1,930 ಮೀಟರ್ (6,330ಅಡಿ) ಎತ್ತರವನ್ನು ಹೊಂದಿದೆ. ಇದು ಚಿಕ್ಕಮಗಳೂರು ನಗರದಿಂದ 26 ಕಿಲೋ ಮೀಟರ್‌ ದೂರದಲ್ಲಿದ್ದು, ಮುಳ್ಳಯ್ಯನಗಿರಿಗೆ ಸಾಗುವ ದಾರಿಯಲ್ಲಿ ಸೀತಾಳಯ್ಯ ನಗಿರಿ ಮೊದಲು ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ಮುಳ್ಳಯ್ಯನಗಿರಿ ತುತ್ತ ತುದಿಗೆ ತಲುಪುತ್ತೇವೆ.

ಬೆಟ್ಟದ ಬುಡದ ತನಕ ವಾಹನ ಚಲಿಸಲು ಅನುಕೂಲವಿದೆ. ಮುಂದೆ ಸರ್ಪದ ದಾರಿಯಂತಿರುವ ಹಾದಿಯಲ್ಲಿ ನಡೆದು ಬೆಟ್ಟದ ತುದಿಯನ್ನು ಏರಬೇಕು. ಇಲ್ಲಿನ ಸುಂದರ ಪರಿಸರ, ಮಂಜಿನ ಹನಿಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಹನ್ನೆರಡು ವರ್ಷಕ್ಕೊಮ್ಮೆ ಬಿಡುವ ಕುರಂಜಿ ಹೂವು ಇಲ್ಲಿನ ವಿಶೇಷ ಆಕರ್ಷಣೆ ಆಗಿದೆ.

ದೇವಿರಮ್ಮ ಬೆಟ್ಟಕ್ಕೆ ತಲುಪುವ ಮಾರ್ಗಗಳು? ಇನ್ನು ಕೆಮ್ಮಣ್ಣುಗುಂಡಿಗೆ ತರೀಕೆರೆ ತಾಲೂಕು ಲಿಂಗದಹಳ್ಳಿ ಮಾರ್ಗವಾಗಿ ಸಾಗಬೇಕು. ಪವರ್ತಗಳ ಸಾಲು, ಕಾಡಿನ ರಸ್ತೆಯಲ್ಲಿ ಸಾಗಿದರೆ ಈ ಗಿರಿಧಾಮ ಸಿಗುತ್ತದೆ. ತರೀಕೆರೆ ಪಟ್ಟಣದಿಂದ ಈ ಪ್ರವಾಸಿ ತಾಣ 38 ಕಿಲೋ ಮೀಟರ್‌ ದೂರದಲ್ಲಿದೆ. ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಇದನ್ನು ತಮ್ಮ ಬೇಸಿಗೆ ಧಾಮವನ್ನಾಗಿ ಮಾಡಿಕೊಂಡಿದ್ದರಿಂದ ಇದನ್ನು ಕೆ.ಆರ್.ಗಿರಿಧಾಮ ಅಂತಲೂ ಕರೆಯಲಾಗುತ್ತದೆ.

ಇಲ್ಲಿ ವರ್ಷವಿಡೀ ತಂಪಾದ ಹವಾಗುಣ, ಸುತ್ತಲು ಚಂದ್ರದ್ರೊಣ ಪರ್ವತ ಸಾಲುಗಳು ಸಾಥ್‌ ನೀಡುತ್ತವೆ. ರಾಜಭವನ ಮತ್ತು ಸೂರ್ಯಾಸ್ತದ ದೃಶ್ಯ, ಝೆಡ್ ಪಾಯಿಂಟ್ ಇಲ್ಲಿಯ ವಿಶೇಷ ಆಕರ್ಷಣೆ ಆಗಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ಬೆಟ್ಟ ಅತ್ಯಂತ ಆಕರ್ಷಣಿಯ ಸ್ಥಳವಾಗಿದೆ. ಪ್ರತೀ ವರ್ಷ ದೀಪಾವಳಿಯ ಹಿಂದಿನ ದಿನದಂದು ರಾತ್ರಿ ಇಲ್ಲಿ ದೀಪೋತ್ಸವ ನಡೆಯುತ್ತದೆ.

ಕಡಿದಾದ ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತಿ ದೇವಿಯ ದರ್ಶನ ಮತ್ತು ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿಗೆ ವರ್ಷಕ್ಕೊಮ್ಮೆ ಮಾತ್ರ ಭೇಟಿ ನೀಡಲು ಸಾಧ್ಯ. ಬೇರೆ ದಿನಗಳಲ್ಲಿ ಬೆಟ್ಟದ ಬುಡದಲ್ಲಿರುವ ದೇವಿರಮ್ಮ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆಯಬಹುದಾಗಿದೆ.

ಬಾಬಾಬುಡನ್ ಗಿರಿ ಎಂದು ಹೆಸರು ಬರಲು ಕಾರಣ? ಮುಳ್ಳಯ್ಯನಗಿರಿಗೆ ಸಾಗುವ ರಸ್ತೆಯಲ್ಲಿಯೇ ಮುಂದೆ ಸಾಗಿದರೆ ಇನಾಂ ದತ್ತತ್ರೇಯ ಬಾಬಾಬುಡನ್ ಗಿರಿ ಸಿಗುತ್ತದೆ. ಈ ಗಿರಿಪ್ರದೇಶ ಅನಾದಿ ಕಾಲದಿಂದಲ್ಲೂ ಪ್ರಸಿದ್ಧಿ ಹೊಂದಿದೆ. ಎತ್ತರದ ಶಿಖರವನ್ನು ಹೊಂದಿದ್ದು, ನೂರಾರು ವರ್ಷಗಳ ಹಿಂದೆ ಬಾಬಾ ಬುಡನ್ ಇಲ್ಲಿದ್ದರೆಂದು ನಂಬಿಕೆ ಇದೆ. ಮುಸ್ಲಿಮರು, ಗುರು ದತ್ತಾತ್ರೇಯ ಸ್ವಾಮಿ ಇಲ್ಲಿ ಇದ್ದರೆಂದು ಹಿಂದೂಗಳ ನಂಬಿಕೆ ಆಗಿದೆ.

ಇಲ್ಲಿನ ಸುತ್ತಲಿನ ಪರ್ವತಶ್ರೇಣಿ ಕಡಿದಾದ ಪ್ರಪಾತ ಕಣ್ಣಿಗೆ ಹಬ್ಬನ್ನುಂಟು ಮಾಡುತ್ತದೆ. ಇನ್ನು ಕುದುರೆ ಮುಖದ ಬಗ್ಗೆ ಹೇಳುವುದಾದರೆ, ಇಲ್ಲಿನ ಪರ್ವತ ಕುದುರೆಮುಖವನ್ನು ಹೋಲುವುದರಿಂದ, ಇದಕ್ಕೆ ಕುದುರೆಮುಖ ಎಂಬ ಹೆಸರು ಬಂದಿದೆ. ಇದು ಕಬ್ಬಿಣದ ನಿಕ್ಷೇಪಗಳನ್ನು ಹೊಂದಿರುವ ಪರ್ವತ ಆಗಿದ್ದು, ಈ ಹಿಂದೆ ಇಲ್ಲಿಂದ ಕಬ್ಬಿಣದ ಅದಿರು ಹೊರತೆಗೆಯಲಾಗುತ್ತಿತ್ತು.ಇದೀಗ ಅಲ್ಲಿ ಕಬ್ಬಿಣ ಅದಿರು ಹೊರ ತೆಗೆಯುವುದನ್ನು ನಿಷೇಧಿಸಲಾಗಿದೆ. ಜನವಸತಿ ಪ್ರದೇಶವು ಪಾಳುಬಿದಿದ್ದು, ಅಂದಿನ ಕುರುಹುಗಳು ಮಾತ್ರ ಉಳಿದುಕೊಂಡಿದೆ. ಇಲ್ಲಿಯ ಸುತ್ತಲ ಪರ್ವತಶ್ರೇಣಿ, ಕಡಿದಾದ ಕಣಿವೆಗಳು, ಪ್ರಪಾತಗಳನ್ನು ಒಳಗೊಂಡಿದ್ದು, ನೋಡಲು ರಮಣೀಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+