ವೀಕೆಂಡ್‌ ಟ್ರಿಪ್‌ ಪ್ಲಾನ್‌ ಮಾಡುವ ಮುನ್ನ ಗಮನಿಸಿ: ಉತ್ತರ ಕನ್ನಡದ ಈ ತಾಣಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಕಾರವಾರ, ಜುಲೈ 28: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಕೊಂಚ ಕಡಿಮೆಯಾಗಿದೆ. ಜಲಪಾತಗಳು ಮೈದುಂಬಿ ಹರಿಯುತ್ತಿದ್ದು ಜಲಪಾತಗಳತ್ತ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಇತ್ತೀಚೆಗೆ ಉಡುಪಿಯ ಬೈಂದೂರಿನಲ್ಲಿ ಜಲಪಾತದಲ್ಲಿ ಪ್ರವಾಸಿಗರೊಬ್ಬರು ಜಾರಿ ಬಿದ್ದು ಮೃತಪಟ್ಟ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿರ್ಭಂಧ ಹೇರಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದ‌ ಮಳೆ ಕೊಂಚ ಕಡಿಮೆಯಾಗಿದೆ. ಇದರಿಂದ ಮೈದುಂಬಿ ಹರಿಯುತ್ತಿರುವ ಜಲಪಾತ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ.‌ ಆದರೆ ಹೀಗೆ ಬಂದ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗುವ ಕಾರಣಕ್ಕೆ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಇರುವುದರಿಂದ ಉತ್ತರ ಕನ್ನಡ ಜಿಲ್ಲಾಡಳಿತ ಪ್ರಮುಖ ಕಡಲತೀರಗಳಿಗೆ ಸದ್ಯದ ಮಟ್ಟಿಗೆ ಪ್ರವಾಸಿಗರಿಗೆ ನಿರ್ಭಂಧ ಹೇರಿದೆ.

tourists-banned-from-waterfalls

ಹೊನ್ನಾವರದ ಅಪ್ಸರಕೊಂಡ, ಗೋಕರ್ಣ ಸಮೀಪದ ವಿಭೂತಿ ಫಾಲ್ಸ್, ಮಾಗೋಡ್ ಫಾಲ್ಸ್, ಯಲ್ಲಾಪುರ ತಾಲೂಕು ವ್ಯಾಪ್ತಿಯ ಶಿರ್ಲೆ, ಕುಳಿಮಾಗೋಡು, ಕಾನೂರು ಸೇರಿದಂತೆ ಅನೇಕ ದಟ್ಟ‌ ಅರಣ್ಯ ಪ್ರದೇಶದೊಳಗಿನ ಜಲಪಾತಗಳ ಭೇಟಿ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.

ಆದರೆ ಸ್ಥಳೀಯರ ಗಮನಕ್ಕೆ ಬಾರದಂತೆ ಕೆಲವು ಪ್ರದೇಶಗಳಿಗೆ ತೆರಳಿ ಪ್ರವಾಸಿಗರು ಸಿಕ್ಕಿ ಹಾಕಿಕೊಳ್ಳುತ್ತಿದ್ದು, ಮಳೆಯ ರಕ್ಷಣಾ ಕಾರ್ಯ ಕೂಡ ಸಾಹಸಮಯವಾಗಲಿದೆ. ಹೀಗಾಗಿ ಇಂಥವರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಪ್ರವಾಸಗಳನ್ನು ಮುಂದೂಡಲು ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+