ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರದಲ್ಲಿ ಹೊಸ ವರ್ಷ ಆಚರಣೆಗೆ ಪ್ರವಾಸಿ ತಾಣಗಳು, ಇಲ್ಲಿದೆ ವಿವರ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಡಿಸೆಂಬರ್‌, 16: ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಅದರಲ್ಲಿಯೂ ಕರಾವಳಿಯಲ್ಲಿನ ಕಡಲ ತೀರಗಳು, ದೇವಾಲಯಗಳು, ಕೋಟೆಗಳು, ಜಲಸಾಹಸಿ ಕ್ರೀಡೆ, ರೆಸಾರ್ಟ್‌ಗಳು, ಟ್ರಕ್ಕಿಂಗ್ ಪಾಯಿಂಟಸ್ಸ್ ಹೀಗೆ ಇವೆಲ್ಲವುಗಳ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಗೆ ಇದು ಸೂಕ್ತ ಸಮಯವಾಗಿದೆ.

ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯ ಘೋಷ ವಾಕ್ಯವಾಗಿರುವ 'ಒಂದು ರಾಜ್ಯ ಹಲವು ಜಗತ್ತು' ಎನ್ನುವುದು ಉತ್ತರಕನ್ನಡ ಜಿಲ್ಲೆಗೆ ಸೂಕ್ತವಾಗಿದೆ. ಇದು ಒಂದು ಜಿಲ್ಲೆ ಹಲವು ಶ್ರೇಷ್ಟತೆಗಳನ್ನು ಒಳಗೊಂಡಿದೆ. ಒಮ್ಮೆ ಜಿಲ್ಲೆಗೆ ಆಗಮಿಸಿದರೆ ಹತ್ತಾರು ಪ್ರದೇಶಗಳ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅಲ್ಲದೆ ಇನ್ನೇನು 2023ರ ವರ್ಷಕ್ಕೆ ಕಾಲಿಡುವ ಸಮಯವೂ ಹತ್ತಿ ಬಂದಿದೆ. ಹೊಸವರ್ಷ ಎಂದರೆ ಸಾಮಾನ್ಯವಾಗಿ ಕಂನಿಗಳಲ್ಲಿ ಕೆಲಸ ಮಾಡುವವರಿಗೆ ಸಾಲು ರಜೆಗಳಿರುತ್ತವೆ. ಆದ್ದರಿಂದ ರಜೆಗಳನ್ನು ಕಳೆಯಲು ಹೊಸವರ್ಷಕ್ಕೆ ಪ್ಲಾನ್‌ ಮಾಡಿಕೊಂಡಿರುತ್ತಾರೆ. ಹಾಗೆಯೇ ಹೊಸ ವರ್ಷ ಸಂಭ್ರಮಾಚರಣೆ ಮಾಡಲು ಕಾರವಾರದಲ್ಲಿನ ರೆಸಾರ್ಟ್ ಹೋಂ ಸ್ಟೇಗಳು ಪ್ರವಾಸಿಗರಿಗೆ ಹೆಚ್ಚು ಅನುಕೂಲಕರವಾಗಿವೆ.

ಕಾರವಾರ ತೀರದಲ್ಲಿ ಡಾಲ್ಫಿನ್‌ಗಳ ಚೆಲ್ಲಾಟ: ಯೋಜನೆ ಜಾರಿಗೆ ಒತ್ತಾಯಕಾರವಾರ ತೀರದಲ್ಲಿ ಡಾಲ್ಫಿನ್‌ಗಳ ಚೆಲ್ಲಾಟ: ಯೋಜನೆ ಜಾರಿಗೆ ಒತ್ತಾಯ

ಮುರುಡೇಶ್ವರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಇದು ಅತೀ ಎತ್ತರದ ಶಿವನ‌ಮೂರ್ತಿ ಹೊಂದಿರುವ ಹಾಗೂ ಆತ್ಮಲಿಂಗದ ಒಂದು ಭಾಗವಿರುವ ಶ್ರೀ ಕ್ಷೇತ್ರ ಧಾರ್ಮಿಕವಾಗಿದೆ.

ಮುರುಡೇಶ್ವರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ

ಮುರುಡೇಶ್ವರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ

ಅಲ್ಲದೆ ಮುರುಡೇಶ್ವರದಲ್ಲಿನ ಬೀಚ್, ಸ್ಕೂಬಾ ಡೈವಿಂಗ್, ಜಲಸಾಹಸಿ ಕ್ರೀಡೆಗಳು ಕೂಡ ಪ್ರವಾಸಿಗರನ್ನು ತನ್ನತ್ತ ಆಕರ್ಷಣೆ ಮಾಡುತ್ತಲೇ ಇರುತ್ತವೆ. ಸ್ಕೂಬಾ ಡೈವಿಂಗ್ ಈ ಮೊದಲು ದೇಶದ ಬೇರೆ ಕಡೆ ಮಾತ್ರ ಲಭ್ಯವಿತ್ತು. ಇದೀಗ ಸ್ಕೂಬಾ ಡೈವಿಂಗ್ ಮಾಡಲು ಆಸಕ್ತಿ ಹೊಂದಿದವರಿಗೆ ನೇತ್ರಾಣಿ ಅಡ್ವೆಂಚರ್‌ನವರು ಮುರುಡೇಶ್ವರದಿಂದ ಸುಮಾರು 18 ಕಿಲೋ ಮೀಟರ್‌ ದೂರದ ನೇತ್ರಾಣಿ ದ್ವೀಪಕ್ಕೆ ಬೋಟ್ ಮೂಲಕ ಕರೆದೊಯ್ದು ಸ್ಕೂಬಾ ಕೂಡ ಮಾಡಿಸುತ್ತಾರೆ. ಇಲ್ಲಿಗೆ ಭೇಟಿ ನೀಡುವವರಿಗೆ ಭಟ್ಕಳ, ಕುಮಟಾ, ಹೊನ್ನಾವರ ಹೀಗೆ ಎಲ್ಲ ಭಾಗಗಳಿಂದಲೂ ಸಾರಿಗೆ ವ್ಯವಸ್ಥೆ ಇದೆ. ಅಲ್ಲದೆ ಬಂದಂತಹ ಪ್ರವಾಸಿಗರಿಗೆ ತಂಗುವುದಕ್ಕೂ ಸಾಕಷ್ಟು ಲಾಡ್ಜ್, ಹೊಟೇಲ್‌ಗಳು ಕೂಡ ಇವೆ. ಆದರೆ ವಾರಾಂತ್ಯ, ರಜಾ ದಿನ, ಹೊಸ ವರ್ಷದ ವೇಳೆ ಅತಿ ಹೆಚ್ಚು ಪ್ರವಾಸಿಗರು ಸೇರುತ್ತಾರೆ. ಅದಕ್ಕಾಗಿ ಅವರಿಗೂ ಸಹ ತಂಗಲು ಉತ್ತಮವಾದ ವ್ಯವಸ್ಥೆಯನ್ನು ಮಾಡಲಾಗಿದೆ.

ಜಿಲ್ಲೆಯಲ್ಲಿರುವ ಇಕೋ ಬೀಚ್‌ನ ವಿಶೇಷತೆ

ಜಿಲ್ಲೆಯಲ್ಲಿರುವ ಇಕೋ ಬೀಚ್‌ನ ವಿಶೇಷತೆ

ಇನ್ನು ಹೊನ್ನಾವರ ತಾಲೂಕಿನಲ್ಲಿ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಪಡೆದಿರುವ ಇಕೋ ಬೀಚ್ ಕೂಡ ಪ್ರವಾಸಿಗರ ಆಕರ್ಷಣೆಯಾಗಿದೆ. ಹೊನ್ನಾವರದ ಕಾಸರಗೋಡು ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಬೀಚ್‌ನಲ್ಲಿ ಪ್ರತಿನಿತ್ಯ ಸಾವಿರಾರು ಜನ ಸೇರಿರುತ್ತಾರೆ. ಅದರಲ್ಲಿಯೂ ರಜಾ ದಿನಗಳಲ್ಲಿ ಹಾಗೂ ನಿತ್ಯ ಸಂಜೆ ವೇಳೆಗೆ ಪ್ರವಾಸಿಗರ ದಂಡೇ ನೆರೆಯುತ್ತದೆ. ಅಲ್ಲದೆ ಇಲ್ಲಿ ಆಸನ ವ್ಯವಸ್ಥೆ, ವಾಚ್ ಟವರ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪರಿಸರ ಸ್ನೇಹಿ ಸೌಲಭ್ಯಗಳ ವ್ಯವಸ್ಥೆ ಕೂಡ ಇದೆ. ಇದರೊಂದಿಗೆ ಮಕ್ಕಳ ಆಟಿಕೆಗಳನ್ನು ಸಹ ಅಳವಡಿಸಲಾಗಿದೆ. ಇದರ ಸಮೀಪದಲ್ಲಿಯೇ ಉದ್ಯಾನವನ ಕೂಡ ಇದೆ. ಅಲ್ಲದೆ ಇಲ್ಲಿಂದ ಸ್ವಲ್ಪ ದೂರದಲ್ಲಿ ಕಾಂಡ್ಲಾ ವಾಕಿಂಗ್ ಪಾತ್ ಕೂಡ ಇದ್ದು, ಪ್ರವಾಸಿಗರು, ಫೋಟೋ ಪ್ರೀಯರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಜೊತೆಗೆ ಇಲ್ಲಿಂದ ಸ್ವಲ್ಪ ದೂರದಲ್ಲಿ ಇಡಗುಂಜಿ ಮಹಾಗಣಪತಿ ದೇವಸ್ಥಾನ, ಕರಿಕಾನಮ್ಮ ದೇವಸ್ಥಾನ ಕೂಡ ಇದೆ. ಇಡಗುಂಜಿಗೆ ಹೊನ್ನಾವರದಿಂದ ಸಾರಿಗೆ ವ್ಯವಸ್ಥೆಯೂ ಲಭ್ಯವಿದೆ. ಇಕೋ ಬೀಚ್ ಕೂಡ ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಸ್ವಂತ ವಾಹನ ವ್ಯವಸ್ಥೆ ಇದ್ದರೆ ಇನ್ನು ಅನುಕೂಲವಾಗಲಿದೆ. ಇಲ್ಲಿ ವಾಸ್ತವ್ಯ ಹಾಗೂ ಊಟ, ತಿಂಡಿಗೆ ಹೆದ್ದಾರಿಯ ಅಂಚಿನಲ್ಲಿ ಸಾಕಷ್ಟು ಹೊಟೇಲ್‌ಗಳು ಇವೆ. ಒಂದು ವೇಳೆ ಪ್ರವಾಸಿಗರು ತಂಗಲು ಇಲ್ಲಿಂದ ಹೊನ್ನಾವರ ಪಟ್ಟಣಕ್ಕೂ ತೆರಳಬಹುದಾಗಿದೆ.

ಪ್ರವಾಸಿಗರ ಆಕರ್ಷಣೆಯಾದ ಮಿರ್ಜಾನ್ ಕೋಟೆ

ಪ್ರವಾಸಿಗರ ಆಕರ್ಷಣೆಯಾದ ಮಿರ್ಜಾನ್ ಕೋಟೆ

ಇನ್ನು ಕುಮಟಾ ತಾಲೂಕಿನ ಮಿರ್ಜಾನ್ ಕೋಟೆ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಕುಮಟಾದಿಂದ 10 ಕಿಲೋ ಮೀಟರ್‌ ದೂರದಲ್ಲಿರುವ ಈ ಕೋಟೆ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ಸಾವಿರಾರು ವರ್ಷಗಳ ಹಳೆಯದಾದ ಕೋಟೆ ಇಂದಿಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ ಯಾಣ, ಕುಮಟಾದ ವನ್ನಳ್ಳಿ ಬೀಚ್, ಬಾಡ ಬೀಚ್ ಕೂಡ ಪ್ರವಾಸಿಗರಿಗೆ ಅನುಕೂಲವಾಗಿದೆ. ಹೊಸ ವರ್ಷಾಚರಣೆ, ವಾರಾಂತ್ಯದ ಟ್ರಿಪ್ ಮಾಡುವವರಿಗೆ ಈ ಬೀಚ್‌ಗಳು ಸೂಕ್ತವಾಗಿದೆ. ಇಲ್ಲಿ ಸಾಕಷ್ಟು ರೆಸಾರ್ಟ್, ಹೋಂ ಸ್ಟೇಗಳಿದ್ದು, ಪಕ್ಕದಲ್ಲಿಯೇ ಬೀಚ್ ಕೂಡ ಇದೆ.

ಗೋಕರ್ಣದಲ್ಲಿ ಯಾವೆಲ್ಲ ತಾಣಗಳಿವೆ?

ಗೋಕರ್ಣದಲ್ಲಿ ಯಾವೆಲ್ಲ ತಾಣಗಳಿವೆ?

ಪರಶೀವನ ಆತ್ಮಲಿಂಗವಿರುವ ಗೋಕರ್ಣ ಧಾರ್ಮಿಕ ಕ್ಷೇತ್ರವಲ್ಲದೆ ಪ್ರವಾಸಿಗರ ನೆಚ್ಚಿನ ತಾಣವೂ ಆಗಿದೆ. ಇಲ್ಲಿನ ಮುಖ್ಯ ಕಡಲತೀರ, ಓಂ ಬೀಚ್, ಕುಡ್ಲೆ ಬೀಚ್, ರೆಸಾರ್ಟ್, ಹೊಂ ಸ್ಟೇಗಳು, ಜಲಸಾಹಸಿ ಕ್ರೀಡೆಗಳು ಗಮನ ಸೆಳೆಯುತ್ತವೆ. ಅಲ್ಲದೆ ವಾರಾಂತ್ಯ, ಹೊಸ ವರ್ಷಾಚರಣೆಯನ್ನು ಆಚರಿಸಲು ಕುಟುಂಬ ಸಮೇತ ಬಂದು ತಂಗಲು ಇಲ್ಲಿ ಸಾಕಷ್ಟು ಹೊಂ ಸ್ಟೇ ರೆಸಾರ್ಟ್, ಲಾಡ್ಜ್‌ಗಳು ಕೂಡ ಇವೆ.‌ ಅಲ್ಲದೆ ವಿದೇಶಿಗರು ಹೆಚ್ಚಾಗಿ ಭೇಟಿ ನೀಡುವ ಸ್ಥಳ ಇದಾಗಿದೆ. ಕುಮಟಾ ಅಂಕೋಲಾದಿಂದ ಹೆಚ್ಚು ಬಸ್‌ಗಳ ವ್ಯವಸ್ಥೆಯೂ ಇದೆ.

ತಾಣಗಳ ಮಾಹಿತಿಗೆ ವೆಬ್‌ಸೈಟ್ ಅಭಿವೃದ್ಧಿ

ತಾಣಗಳ ಮಾಹಿತಿಗೆ ವೆಬ್‌ಸೈಟ್ ಅಭಿವೃದ್ಧಿ

ಇನ್ನು ಕಾರವಾರ ಅಂಕೋಲಾದಲ್ಲಿಯೂ ಸಾಕಷ್ಟು ಪ್ರವಾಸಿ ತಾಣಗಳಿವೆ. ಅಂಕೋಲಾದ ಹನಿ ಬೀಚ್, ಕಾರವಾರದ ತಿಳಮಾತಿ, ಟ್ಯಾಗೋರ್ ಬೀಚ್, ದೇವಭಾಗ ಬೀಚ್ ಹಾಗೂ ರೆಸಾರ್ಟ್ ಮತ್ತು ಇಲ್ಲಿನ ಜಲಸಾಹಸಿ ಕ್ರೀಡೆಗಳು, ಕಾಳಿ ರಿವರ್ ಗಾರ್ಡನ್, ಶೀಖರ ಬೋಟ್ ರೈಡಿಂಗ್, ರಾಕ್ ಗಾರ್ಡನ್, ವಾರ್ಸಿಪ್ ಮ್ಯೂಸಿಯಂ ಪ್ರಮುಖ ಆಕರ್ಷಣೀಯ ಕೇಂದ್ರಗಳಾಗಿವೆ. ಪ್ರತಿನಿತ್ಯ ದೇಶ ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಲೇ ಇರುತ್ತಾರೆ. ನಗರದ ಸಮೀಪದಲ್ಲಿಯೇ ಇರುವ ಕಾರಣ ಹೋಟೆಲ್, ಲಾಡ್ಜ್ ಎಲ್ಲವೂ ಸಿಗಲಿದ್ದು, ಪ್ರವಾಸಿಗರಿಗೆ ಎಂಜಾಯ್ ಮಾಡಲು ಉತ್ತಮ ಸ್ಥಳವಾಗಿದೆ.
ಇನ್ನು ಎಲ್ಲ ಪ್ರದೇಶವನ್ನು ಒಂದೇ ದಿನ ನೋಡಲು ಅಸಾಧ್ಯವಾಗಿದೆ. ಹೀಗಾಗಿ ಎಲ್ಲಾ ಸ್ಥಳಗಳಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಹೋಂ ಸ್ಟೇಗಳು, ರೆಸಾರ್ಟ್‌ಗಳು ಲಭ್ಯವಿದೆ. ಅಲ್ಲದೇ ಇದೆಲ್ಲವನ್ನು ಇನ್ನೂ ಸುಲಭಗೊಳಿಸಲು ಇಲಾಖೆಯ 'ಉತ್ತರ ಕನ್ನಡ ಟೂರಿಸಂ' (https://uttarakannada.org/) ಎನ್ನುವ ವೆಬ್‌ಸೈಟ್ ಕೂಡಾ ಅಭಿವೃದ್ಧಿಪಡಿಸಿದೆ. ಜಿಲ್ಲೆಯ ಪ್ರವಾಸಕ್ಕೆ ಹೊರಡುವವರು ಈ ವೆಬ್‌ಸೈಟ್ ಕೂಡ ನೋಡಬಹುದಾಗಿದೆ.

English summary
Best tourist places in Uttara Kannada district to celebrate New Year 2023. Here see complete details, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X