Tirupati Rain: ಶ್ರೀವಾರಿ ಭಕ್ತರಿಗೆ ಎಚ್ಚರಿಕೆ.. ಇಂದು ಭಾರೀ ಮಳೆ ಮುನ್ಸೂಚನೆ
ತಿರುಪತಿಯಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದಾಗಿ ಶ್ರೀವಾರಿ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ವಾತಾವರದಲ್ಲಿನ ತೀವ್ರ ಸ್ವರೂಪದ ಬದಲಾವಣೆಯಿಂದಾಗಿ ಇಂದು ತಿರುಪತಿ ಎಲ್ಲೆಡೆ ಭಾರಿ ಮಳೆಯಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ತಿರುಪತಿಯಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದೆ. ಕಳೆದ ದಿನ ಅಲ್ಲಲ್ಲಿ ತುಂತುರು ಮಳೆ ದಾಖಲಾಗಿದೆ. ಆದರೆ ಇಂದು ಧಾರಾಕಾರ ಮಳೆಯಾಗಲಿದ್ದು ಭಕ್ತರು ಈ ಬಗ್ಗೆ ಎಚ್ಚರಿಕೆಯಿಂದರಬೇಕು ಎಂದು ಟಿಟಿಡಿ ತಿಳಿಸಿದೆ. ತಿಮ್ಮಪ್ಪನ ದೇವಸ್ಥಾನಕ್ಕೆ ಭಕ್ತರು ಅಗತ್ಯ ವಸ್ತುಗಳೊಂದಿಗೆ ತೆರಳಬೇಕು ಎಂದಿದೆ.

ದಟ್ಟವಾದ ಮೋಡಗಳೊಂದಿಗೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡವು ಆಂಧ್ರಪ್ರದೇಶವನ್ನು ಸಮೀಪಿಸುತ್ತಿದೆ. ಇದರ ಪರಿಣಾಮದಿಂದ ಈಗಾಗಲೇ ತಮಿಳುನಾಡಿನಲ್ಲಿ ಮಳೆಯಾಗುತ್ತಿದ್ದು, ಅದು ಆಂಧ್ರಪ್ರದೇಶ ಕಡೆಗೆ ಚಲಿಸುತ್ತಿರುವುದರಿಂದ ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ದಕ್ಷಿಣ ಶ್ರೀಲಂಕಾದಿಂದ ದಕ್ಷಿಣ ಕರಾವಳಿ ಪ್ರದೇಶವನ್ನು ಸಮೀಪಿಸುತ್ತಿದೆ. ಇದರಿಂದಾಗಿ ದಕ್ಷಿಣದ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪದಲ್ಲಿ ಐದು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.

ತಮಿಳುನಾಡು ಮತ್ತು ಕೇರಳದ ಕೆಲವೆಡೆ ಭಾರೀ ಮಳೆಯಾಗಲಿದ್ದು ಇಂದು ರಾಯಲಸೀಮೆಯ ಕೆಲವೆಡೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾನುವಾರದಿಂದ ಮಳೆಯಾಗುತ್ತಿದೆ. ಸೋಮವಾರ ಬೆಳಗ್ಗೆಯಿಂದಲೇ ತಿರುಮಲ ಬೆಟ್ಟದಲ್ಲಿ ತುಂತುರು ಮಳೆ ಆರಂಭವಾಗಿದೆ. ಮಂಗಳವಾರವೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ರಾಯಲಸೀಮೆಯಲ್ಲಿ ಮೋಡಗಳು ಸೃಷ್ಟಿಯಾದರೆ, ಬಹುತೇಕ ತೆಲುಗು ರಾಜ್ಯಗಳಿಗೆ ಮೋಡ ಹರಡುವ ಸೂಚನೆ ಇದೆ.
ಪೂರ್ವ ರಾಯಲಸೀಮಾ ಮತ್ತು ದಕ್ಷಿಣ ಕರಾವಳಿಯಲ್ಲಿ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ಅಲ್ಲದೆ ತಿರುಮಲದಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ತುಂತುರು ಮಳೆ ಶುರುವಾಗಿದೆ. IMD ಪ್ರಕಾರ ಬಂಗಾಳಕೊಲ್ಲಿಯಲ್ಲಿ ಗಂಟೆಗೆ 35 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
ಇನ್ನೊಂದೆಡೆ ಚೆನ್ನೈನ ಅಡ್ಯಾರ್, ಅಣ್ಣಾಸಲೈ, ವೆಪ್ಪೇರಿ, ಗಿಂಡಿ, ಕೊಯಂಬೇಡು ಮುಂತಾದೆಡೆ ಭಾನುವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಸೋಮವಾರವೂ ಚೆನ್ನೈನಲ್ಲಿ ಮಳೆಯಾಗಿದೆ. ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಮುಂದಿನ ಐದು ದಿನಗಳಲ್ಲಿ ಸಾಧಾರಣದಿಂದ ಅಧಿಕ ಮಳೆಯಾಗಲಿದ್ದು, ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications