KSTDC: ಪ್ರವಾಸಿಗರನ್ನು ಆಕರ್ಷಿಸಲು ಮುಂದಾದ ಕೆಎಸ್‌ಟಿಡಿಸಿ: ತಿರುಮಲ, ಪುದುಚೇರಿ ಮತ್ತು ಶಿರಡಿ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಬೆಂಗಳೂರು ಜುಲೈ 19: ಮಳೆಗಾಲ ಶುರುವಾದಂತೆ ರಾಜ್ಯದ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಪ್ರವಾಸಿಗರ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯವನ್ನು ಒದಗಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮುಂದಾಗಿದೆ.
ಹೌದು.. ತಿರುಮಲ, ಪುದುಚೇರಿ ಮತ್ತು ಶಿರಡಿ ಪ್ರಯಾಣಿಕರಿಗೆ ಕೆಎಸ್‌ಟಿಡಿಸಿ ಸಿಹಿ ಸುದ್ದಿಯನ್ನು ನೀಡಿದೆ. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಹೆಚ್ಚುವರಿ ಸಾರಿಗೆ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇದಕ್ಕಾಗಿ ಮೂರು ವೋಲ್ವೋ ಬಸ್‌ಗಳನ್ನು ತಿರುಮಲ, ಪುದುಚೇರಿ ಮತ್ತು ಶಿರಡಿಗೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ಕೆಎಸ್‌ಟಿಡಿಸಿ ಪ್ರಕಟಿಸಿದೆ.

55 ಆಸನಗಳ ಬಸ್‌ನಲ್ಲಿ ತಿರುಪತಿ, 47 ಆಸನಗಳ ಬಸ್‌ನಲ್ಲಿ ಶಿರಡಿ ಹಾಗೂ 47 ಆಸನಗಳ ಬಸ್‌ನಲ್ಲಿ ಪಾಂಡಿಚೇರು ಪ್ರವಾಸ ಕೈಗೊಳ್ಳಬಹುದು. ನಿಗಮದ ಯಶವಂತಪುರ ಕೇಂದ್ರ ಕಚೇರಿಯ ಬುಕ್ಕಿಂಗ್ ಕೌಂಟರ್, ಮೈಸೂರು ಸಾರಿಗೆ ವಿಭಾಗದ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್, ರೆಡ್‌ಬಸ್ ಪೋರ್ಟಲ್, ಕೆ.ಎಸ್‌ಆರ್.ಟಿ.ಸಿ ಅವತಾರ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದು.
ಈ ಮೂರು ಬಸ್‌ಗಳನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಮದ ವತಿಯಿಂದ ಗುರುವಾರ ಸಾರ್ವಜನಿಕ ಸೇವೆಗೆ ಸರ್ಮಪಿಸಲಾಯಿತು. ರಾಜ್ಯ ಹಾಘೂ ಅಂತರಾಜ್ಯಗಳ ಪ್ರವಾಸಿ ತಾಣಗಳಿಗೆ ಪ್ರವಾಸ ಕೈಗೊಳ್ಳಬಹುದಾದ ಈ ವೋಲ್ವೊ ವಾಹನಗಳಿಗೆ ನಿಗಮದ ಅಧ್ಯಕ್ಷ ಎಂ ಶ್ರೀನಿವಾಸ್ ಹಾಗೂ ಸಿಬ್ಬಂದಿ ವರ್ಗ ಹಸಿರು ನಿಶಾನೆ ತೋರಿಸಿದರು.

ಕೆಎಸ್‌ಟಿಡಿಸಿ ಅಧ್ಯಕ್ಷ ಎಂ ಶ್ರೀನಿವಾಸ್ ಮಾತನಾಡಿ, ಬಸ್‌ಗಳು ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿವೆ. ಹೊಸ ಬಸ್‌ಗಳು ಇಂಧನ-ಸಮರ್ಥ ಎಂಜಿನ್‌ಗಳು ಮತ್ತು ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್‌ಗಳನ್ನು ಒಳಗೊಂಡಿವೆ ಇಂಟರ್‌ಸಿಟಿ ಪ್ರಯಾಣದ ಅನುಭವವನ್ನು ನವೀಕರಿಸಲು ನಿಗಮಕ್ಕೆ ಈ ಬಸ್‌ಗಳು ಸರಿಯಾದ ಆಯ್ಕೆಯಾಗಿವೆ. ತಿರುಪತಿಗೆ ಎರಡು ಬಸ್‌ಗಳು ಗುರುವಾರ ರಾತ್ರಿ ಯಶವಂತಪುರ ಬಸ್ ನಿಲ್ದಾಣದಿಂದ ಹೊರಡಲು ನಿರ್ಧರಿಸಲಾಗಿದೆ. ಮುಂದಿನ ವಾರದಲ್ಲಿ, ನಿಗಮವು ಪುದುಚೇರಿ ಮತ್ತು ಶಿರಡಿಗೆ ವಾರದ ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ಹೇಳಿದರು.
ಮಾಹಿತಿಗಾಗಿ ಸಂಪರ್ಕಿಸಿ: www.kstdc.co , 080-4334 4334/35, 918970650070












Click it and Unblock the Notifications