Vande Bharat: ತಿರುವನಂತಪುರಂ-ಮಂಗಳೂರು ರೈಲು ವೇಳಾಪಟ್ಟಿ ಬದಲು

ಮಂಗಳೂರು, ಮೇ 11: ತಿರುವನಂತಪುರಂ-ಮಂಗಳೂರು ನಡುವ ಸಂಚಾರ ನಡೆಸುವ ಜನರಿಗೆ ಪ್ರಮುಖ ಮಾಹಿತಿಯೊಂದಿದೆ. ಮೇ 13ರಿಂದ ಜಾರಿಗೆ ಬರುವಂತೆ ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ನಡುವಿನ ವಂದೇ ಭಾರತ್ ರೈಲು ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ.

ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ. ರೈಲು ನಂಬರ್ 20632 ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ರೈಲು ಮೇ 13ರಿಂದ ಬದಲಾದ ವೇಳಾಪಟ್ಟಿ ಅನ್ವಯ ಸಂಚಾರ ನಡೆಸಲಿದೆ. ಪ್ರಯಾಣಿಕರು ಪರಿಷ್ಕತ ಸಮಯ ತಿಳಿಯುವಂತೆ ಮನವಿ ಮಾಡಲಾಗಿದೆ.

Thiruvananthapuram Mangaluru Central Vande Bharat Train Schedule Change

ಬದಲಾದ ವೇಳಾಪಟ್ಟಿ: ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎರ್ನಾಕುಲಂ ಜಂಕ್ಷನ್, ತ್ರಿಶೂರ್, ಶೋರ್ನೂರ್ ಜಂಕ್ಷನ್, ತಿರೂರ್, ಕೊಯಿಕ್ಕೋಡ್, ಕಣ್ಣೂರು, ಕಾಸರಗೋಡು ಮೂಲಕ ಸಂಚಾರ ನಡೆಸುತ್ತದೆ.

ಪರಿಷ್ಕೃತ ವೇಳಾಪಟ್ಟಿಯಂತೆ ತಿರುವನಂತಪುರಂ ಸೆಂಟ್ರಲ್‌ನಿಂದ ಹೊರಡುವ ವಂದೇ ಭಾರತ್ ರೈಲು 19.56/19.58 ಎರ್ನಾಕುಲಂ ಜಂಕ್ಷನ್, 19.56/ 19.58 ತ್ರಿಶೂರ್, 20.30/ 20.32 ಶೋರ್ನೂರ್ ಜಂಕ್ಷನ್, 21.02/21.04 ತಿರೂರ್, 21.32/ 21.34 ಕೊಯಿಕ್ಕೋಡ್, 22.36/ 22.38 ಕಣ್ಣೂರು, 23.46/ 23.48 ಕಾಸರಗೋಡು ಆಗಮನ/ ನಿರ್ಗಮನವಾಗಲಿದೆ.

ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಉಳಿದ ಯಾವುದೇ ಸಮಯ, ದರ, ಬೋಗಿಗಳ ಸಂಯೋಜನೆ, ನಿಲ್ದಾಣದಲ್ಲಿ ಬದಲಾವಣೆ ಇಲ್ಲ ಎಂದು ಪಾಲಕ್ಕಾಡ್ ರೈಲ್ವೆ ವಿಭಾಗ ಸ್ಪಷ್ಟಪಡಿಸಿದೆ.

ಮಾರ್ಚ್‌ನಲ್ಲಿ ಸಂಚಾರ ಆರಂಭ: ಮಂಗಳೂರು ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರಂದು ಚಾಲನೆ ನೀಡಿದ್ದರು. ಕಾಸರಗೋಡು-ತಿರುವನಂತಪುರಂ ನಡುವೆ ಸಂಚಾರ ನಡೆಸುತ್ತಿದ್ದ ರೈಲನ್ನು ಕರ್ನಾಟಕ ಕರಾವಳಿಯ ಮಂಗಳೂರು ಸೆಂಟ್ರಲ್ ನಿಲ್ದಾಣದ ತನಕ ವಿಸ್ತರಣೆ ಮಾಡಲಾಗಿತ್ತು.

ಮಂಗಳೂರು ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ಸೆಂಟ್ರಲ್ ನಡುವೆ ರೈಲು ನಂಬರ್ 20362 ಮತ್ತು ತಿರುವನಂತಪುರಂ-ಕಾಸರಗೋಡು-ಮಂಗಳೂರು ಸೆಂಟ್ರಲ್ ನಡುವೆ 20632 ನಂಬರ್ ರೈಲು ಸಂಚಾರ ನಡೆಸುತ್ತಿದೆ.

ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಡುವ ರೈಲು ಮ್ಯಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪಲಿದೆ. ತಿರುವನಂತಪುರಂನಿಂದ ರೈಲು ಸಂಜೆ 4.05ಕ್ಕೆ ಹೊರಡು ರೈಲು 12.40ಕ್ಕೆ ಮಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ಎಲ್ಲಾ ದಿನ ರೈಲು ಸಂಚಾರ ನಡೆಸುತ್ತದೆ.

ಈಗ ರೈಲ್ವೆ ಇಲಾಖೆ ಮೇ 13ರಿಂದ ಜಾರಿಗೆ ಬರುವಂತೆ ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ನಡುವಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿಲ್ಲ. ತಿರುವನಂತಪುರಂ-ಕಾಸರಗೋಡು-ಮಂಗಳೂರು ಸೆಂಟ್ರಲ್ ನಡುವಿನ ವೇಳಾಪಟ್ಟಿಯನ್ನು ಮಾತ್ರ ಪರಿಷ್ಕರಣೆ ಮಾಡಿದೆ.

ಮಂಗಳೂರು ನಗರಕ್ಕೆ ಎರಡು ವಂದೇ ಭಾರತ್ ರೈಲುಗಳ ಸಂಪರ್ಕವಿದೆ. ಮಂಗಳೂರು ಮತ್ತು ಮಡಗಾಂವ್ ನಡುವೆ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಪ್ರಯಾಣಿಕರ ಬೇಡಿಕೆಯಂತೆ ಮಂಗಳೂರು ಸೆಂಟ್ರಲ್-ತಿರುವನಂತಪುರಂ ಸೆಂಟ್ರಲ್ ರೈಲು ಸೇವೆ ಆರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+