ಬೆಂಗಳೂರಿನ ಸಮೀಪದಲ್ಲಿರುವ ಈ ಅದ್ಭುತ ತಾಣಗಳಲ್ಲಿ ಪ್ರೇಮಿಗಳು ಏನೆಲ್ಲಾ ಮಾಡಬಹುದು ಗೊತ್ತಾ?-ಆಯ್ಕೆಗಳು ಹೀಗಿವೆ
ನಿಮ್ಮ ಸಂಗಾತಿಯೊಂದಿಗೆ ಸುಂದರದ ಕ್ಷಣಗಳನ್ನು ಕಳೆಯಲು ಬೆಂಗಳೂರಿನ ಹತ್ತಿತರಲ್ಲಿರುವ ಪ್ರವಾಸಿ ತಾಣಗಳನ್ನು ಹುಡುಕುತ್ತಿದ್ದೀರಾ. ಹಾಗಾದರೆ ಇಲ್ಲಿದೆ ನೋಡಿ ಮಾಹಿತಿ.
ಇದೀಗ ಚಳಿಗಾಲ ಆರಂಭವಾಗಿದ್ದು, ಸಾಮಾನ್ಯವಾಗಿ ಈ ಸಮಯದಲ್ಲಿ ಕೆಲವು ಅದ್ಭುತ ತಾಣಗಳಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಅದರಲ್ಲೂ ಪ್ರೇಮಿಗಲೋಮದಿಗೆ ಪ್ರಯಾಣ ಮಾಡುವವರಿಗೆ ಇವು ಸೂಕ್ತ ತಾಣವಾಗಿವೆ. ಹಾಗಾದರೆ ಆ ತಾಣಗಳು ಯಾವುವು ಅಲ್ಲಿ ಏನೆನೆಲ್ಲ ಸೌಲಭ್ಯಗಳಿ ಸಿಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.

ನಂದಿ ಬೆಟ್ಟ: ಬೆಂಗಳೂರಿನಿಂದ 61 ಕಿಲೋ ಮೀಟರ್ ದೂರದಲ್ಲಿರುವ ನಂದಿ ಬೆಟ್ಟ ಜನಪ್ರಿಯ ತಾಣವಾಗಿದೆ. ದಿದುರ್ಗ ಎಂದು ಕರೆಯಲ್ಪಡುವ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 1,478 ಮೀಟರ್ ಅಂದರೆ 4,850 ಅಡಿಗಳಷ್ಟು ಎತ್ತರದಲ್ಲಿದೆ. ಗಳೂರಿನ ಸಮೀಪದಲ್ಲಿರುವ ಈ ಬೆಟ್ಟವು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತದೆ. ಗ ನಂದೀಶ್ವರ ದೇವಾಲಯದ ಹೊರಭಾಗವನ್ನು ಕಾವಲು ಕಾಯುತ್ತಿರುವ ಗೂಳಿ ನಂದಿಯ ಅದ್ಭುತ ಪ್ರತಿಮೆಯಿದೆ. ಆದ್ದರಿಂದ ಈ ಸ್ಥಳಕ್ಕೆ ನಂದಿ ಬೆಟ್ಟ ಎಂದು ಹೆಸರಿಸಲಾಗಿದೆ.
ಲಾಲ್‌ಬಾಗ್ ಗಾರ್ಡನ್: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಲಾಲ್‌ಬಾಗ್, ಕೆಂಪು ತೋಟ ಅಥವಾ ಲಾಲ್‌ಬಾಗ್ ಸಸ್ಯೋದ್ಯಾನದ ಕಡೆ ಪ್ರವಾಸ ಮಾಡಲು ಇದು ಸೂಕ್ತ ಸಮಯವಾಗಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು ಎನ್ನಲಾಗಿದೆ. ಇಲ್ಲಿ ನೀವು ವಿವಿಧ ರೀತಿಯ ಹೂಗಳು ಅಲ್ಲದೆ ಅಚ್ಚಹಸಿರಿನ ಪ್ರಕೃತಿ ಸೌಂದರ್ಯಕ್ಕಂತೂ ಮರುಳಾಗುವುದಂತೂ ನಿಜ.
ಹಲಸೂರು ಕೆರೆ: ಹಲಸೂರು ಕೆರೆಯು ಬೆಂಗಳೂರಿನ ಸಮೀಪದಲ್ಲಿದ್ದು, ಇದು ಫಿಟ್‌ನೆಸ್ ಉತ್ಸಾಹಿಗಳು, ಪಕ್ಷಿ ವೀಕ್ಷಕರು, ಪ್ರಕೃತಿ ಛಾಯಾಗ್ರಾಹಕರು, ಎಲ್ಲಾ ವಯಸ್ಸಿನ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಒಂದು ಅದ್ಭುತ ತಾಣವಾಗಿದೆ. ಅದರಲ್ಲೂ ಪ್ರೇಮಿಗಳಿಗೆ ಸಮಯ ಕಳೆಯಲು ಹೇಳಿ ಮಾಡಿಸಿದ ಜಾಗವಾಗಿದೆ. CBD ಪ್ರದೇಶದಲ್ಲಿ ನಗರದ ಹೃದಯಭಾಗದಲ್ಲಿರುವ 1.5 ಚದರ ಕಿ.ಮೀ ಗಿಂತಲೂ ಹೆಚ್ಚು ಹರಡಿರುವ ಈ ಸರೋವರವು ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಹಲಸೂರು ಸರೋವರವು ಬೆಂಗಳೂರಿನ ಅತ್ಯಂತ ಹಳೆಯ ಮತ್ತು ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಸೆಲೆಬ್ರಿಟಿ ಫಿಟ್‌ನೆಸ್ ಉತ್ಸಾಹಿಗಳಿಗೂ ಸಹ ಜಾಗಿಂಗ್ ಮಾಡುವವರಿಗೆ ನೆಚ್ಚಿನ ಸ್ಥಳವಾಗಿದೆ. ಮಿನಿ-ಜಿಮ್, ಜಾಗಿಂಗ್ ಟ್ರ್ಯಾಕ್, ಗಾರ್ಡನ್, ಬೋಟಿಂಗ್, ಸೂರ್ಯೋದಯವನ್ನು ವೀಕ್ಷಿಸುವುದು ಮತ್ತು ಪಕ್ಷಿ ವೀಕ್ಷಣೆ, ಇತರ ನಗರಗಳ ನಿವಾಸಿಗಳು ಮತ್ತು ಪ್ರಯಾಣಿಕರು ಆನಂದಿಸುವ ಕೆಲವು ಚಟುವಟಿಕೆಗಳಾಗಿವೆ.
* ಸರೋವರವು ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
* ದೋಣಿ ವಿಹಾರವು ಹವಾಮಾನ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತದೆ.
ಮಡಿಕೇರಿ: ಮಡಿಕೇರಿಯು ಕರ್ನಾಟಕದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ವಿಶಾಲವಾದ ಕಾಫಿ ತೋಟಗಳು, ದಟ್ಟವಾದ ಕಾಡುಗಳು ಮತ್ತು ಮಂಜಿನಿಂದ ಕೂಡಿದ ಬೆಟ್ಟಗಳನ್ನು ಇಲ್ಲಿ ಕಾಣಬಹುದಾಗಿದೆ. ಮಡಿಕೇರಿಯು ಕೊಡಗು ಅಥವಾ ಕೂರ್ಗ ಜಿಲ್ಲೆಯ ಭಾಗವಾಗಿದೆ. ಇದನ್ನು ಮಕೇರಾ ಎಂದೂ ಕೂಡಾ ಕರೆಯಲ್ಪಡುತ್ತದೆ. ಇಲ್ಲಿನ ಸುಂದರವಾದ ದೃಶ್ಯಗಳು ಮತ್ತು ಹಸಿರಿನ ನಡುವೆ ಆರಾಮವಾಗಿ ಕಾಲ ಕಳೆಯಲು ಪ್ರಕೃತಿ ಪ್ರೇಮಿಗಳಿಗೆ ಮಡಿಕೇರಿಯ ಗಿರಿಧಾಮವು ಅತ್ಯಂತ ಸೂಕ್ತವಾದ ತಾಣವಾಗಿದೆ. ಈ ಸ್ಥಳವು ಅತ್ಯುತ್ತಮವಾದ ನೈಸರ್ಗಿಕ, ಐತಿಹಾಸಿಕ ಮತ್ತು ಧಾರ್ಮಿಕ ಆಕರ್ಷಣೆಗಳನ್ನು ಹೊಂದಿದೆ.
ಯುಬಿ ಸಿಟಿ: ಬೆಂಗಳೂರಿನ ಮೂರನೇ ಅತೀ ದೊಡ್ಡ ಮಾಲ್ ಯುಬಿ ಸಿಟಿ ಮಾಲ್ ಆಗಿದೆ. UB ಸಿಟಿಯಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಐಷಾರಾಮಿ ಶಾಪಿಂಗ್ ಮತ್ತು ಐಸ್‌ಕ್ರೀಂನಿಂದ ಹಿಡಿದು ವಿವಿಧ ರೀತಿಯ ಊಟವನ್ನು ಸವಿಯಬಹುದಾಗಿದೆ. ಅಲ್ಲದ ಬ್ರಾಂಡೆಡ್ ಪರಿಕರಗಳನ್ನು ಇಲ್ಲಿ ಕೊಳ್ಳಬಹುದಾಗಿದೆ.
ರಾಸ್ತಾ ಕೆಫೆ: ರಾಸ್ತಾ ಕೆಫೆಯು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಅತ್ಯಂತ ಉತ್ತಮ ಕೆಫೆಗಳಲ್ಲಿ ಒಂದಾಗಿದೆ. ಮೂರು ಎಕರೆ ಜಾಗವನ್ನು ಹೊಂದಿರುವ ಈ ಕೆಫೆ ಆಧುನಿಕತೆಗೆ ತಕ್ಕಂತೆ ಸುಂದರ ವಾತಾವರಣವನ್ನು ಹೊಂದಿದೆ. ಇನ್ನು ರಾಸ್ತಾ ಕೆಫೆಯಲ್ಲಿ ನಿಮ್ಮ ಪ್ರತೀಯ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಬಹುದಾಗಿದೆ. ಐಷಾರಾಮಿ ಹಸಿರು ಹುಲ್ಲುಹಾಸು, ಕ್ರೀಡಾ ಕ್ಷೇತ್ರ, ಅದ್ಭುತ ರೆಸ್ಟೋರೆಂಟ್ ಅಥವಾ ರುಚಿಕರವಾದ ಆಹಾರ ಆಯ್ಕೆಗಳನ್ನು ಇಲ್ಲಿ ಕಾಣಬಹುದಾಗಿದೆ.












Click it and Unblock the Notifications