ನಿಮಗಿದು ಗೊತ್ತೇ? ಚಾಮುಂಡಿ ಬೆಟ್ಟದ ಪರಿಸರ ಕಾಪಾಡುವುದು ಈ ಮಹದೇವ!

ಮೈಸೂರು, ಜೂನ್‌ 02: ಮತ್ತೆ ಪರಿಸರ ದಿನ ಬಂದಿದೆ. ಅವತ್ತು ಒಂದಷ್ಟು ಗಿಡಗಳನ್ನು ನೆಟ್ಟು ಪರಿಸರ ಕಾಪಾಡುವ ಪ್ರತಿಜ್ಞೆ ಮಾಡುತ್ತೇವೆ. ಆ ನಂತರ ಮರೆತು ಬಿಡುತ್ತೇವೆ. ಪರಿಸರ ಸಂಕ್ಷಣೆ ಎನ್ನುವುದು ಕೇವಲ ಗಿಡ ನೆಡುವುದಲ್ಲ ನೆಟ್ಟ ಗಿಡಗಳನ್ನು ಸಂರಕ್ಷಿಸುವುದು ಮತ್ತು ಪರಸರವನ್ನು ಕಾಪಾಡಿಕೊಳ್ಳುವುದು ಕೂಡ ಬಹುಮುಖ್ಯವಾಗಿದೆ.

ಪ್ರತಿ ವರ್ಷವೂ ಜೂನ್ 5 ನ್ನು ಪರಿಸರ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಅವತ್ತು ಒಂದಷ್ಟು ಗಿಡಗಳನ್ನು ನೆಟ್ಟು ಫೋಸ್ ಕೊಟ್ಟು ಪರಿಸರ ಪ್ರೇಮಿಗಳಂತೆ ಬೀಗುತ್ತೇವೆ. ಅಲ್ಲಿಗೆ ಎಲ್ಲವೂ ಮುಗಿದು ಹೋದಂತೆಯೇ. ಆದರೆ ಎಲೆ ಮರೆಯಕಾಯಿಯಂತೆ ಬಹಳಷ್ಟು ಮಂದಿ ತಮ್ಮದೇ ಆದ ಕೊಡುಗೆಯನ್ನು ಪ್ರಕೃತಿ ನೀಡುತ್ತಲೇ ಬಂದಿದ್ದಾರೆ.

Mahadeva Clean Chamundi Hills Steps

ಇಂಥ ಪರಿಸರ ಪ್ರೇಮಿಗಳ ನಡುವೆ ಚಾಮುಂಡಿಬೆಟ್ಟದಲ್ಲಿ ಮೆಟ್ಟಿಲನ್ನು ಗುಡಿಸುತ್ತಾ ಪರಿಸರ ಸಂರಕ್ಷಣೆಯಲ್ಲಿ ತಮ್ಮದೇ ಆದ ಅಳಿಲು ಸೇವೆ ಮಾಡುತ್ತಾ ಬಂದಿರುವ ವೃದ್ಧ ಮಹದೇವ ಅವರು ಗಮನಸೆಳೆಯುತ್ತಾರೆ. ಮುಂಜಾನೆ ಚಾಮುಂಡಿಬೆಟ್ಟದ ಪಾದದ ಮೂಲಕ ಮೆಟ್ಟಿಲೇರುವ ಎಲ್ಲರಿಗೂ ಇವರ ಪರಿಚಯ ಇದ್ದೇ ಇರುತ್ತದೆ.

ಫಲಾಫೇಕ್ಷೆಯಿಲ್ಲದ ಕಾರ್ಯ

ಚಾಮುಂಡಿಬೆಟ್ಟದ ಹಸಿರ ಹಚ್ಚಡದ ನಡುವೆ ಇರುವ ಸಾವಿರ ಮೆಟ್ಟಿಲೇರಿ ಸಾಗುವವರಿಗೆ ಪ್ರತಿಮೆಟ್ಟಿಲನ್ನು ಗುಡಿಸಿ ಸ್ವಚ್ಛವಾಗಿಡುವ ಕೆಲಸವನ್ನು ವೃದ್ಧ ಮಹದೇವ ಅವರು ಮಾಡುತ್ತಾ ಬರುತ್ತಿದ್ದಾರೆ. ಇವರು ಯಾವುದೇ ಪ್ರಚಾರ ಬಯಸದೇ, ಯಾವ ಫಲಾಫೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದು, ಅದನ್ನು ಚಾಮುಂಡಿತಾಯಿಯ ಸೇವೆ ಎಂದು ಅವರು ನಂಬಿದ್ದಾರೆ.

ಎಪ್ಪತ್ತು ವರ್ಷ ಪ್ರಾಯದ ಮಹದೇವ ಅವರು ಮೂಲತಃ ನಂಜನಗೂಡಿನ ಬಿಳುಗುಲಿಯವರು ಸದ್ಯ ಮೈಸೂರಿನ ಗೌರಿಶಂಕರನಗರದಲ್ಲಿ ವಾಸವಿದ್ದಾರೆ. ವಯಸ್ಸಾಗಿರುವುದರಿಂದ ಬೇರೆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮುಂಜಾನೆ ಪೊರಕೆಯೊಂದಿಗೆ ಚಾಮುಂಡಿಬೆಟ್ಟದ ಪಾದದ ಮೂಲಕ ಮೆಟ್ಟಿಲೇರಿ ದಿನಕ್ಕೆ ನೂರೋ ಇನ್ನೂರೋ ಮೆಟ್ಟಿಲನ್ನು ಗುಡಿಸಿ ಹಿಂತಿರುಗುತ್ತಾರೆ.

Mahadeva Clean Chamundi Hills Steps

ಪರಿಸರ ಕಾಪಾಡುವ ಕೆಲಸ

ವೃದ್ಧಾಪ್ಯ ವೇತನ ಬಿಟ್ಟರೆ ಬೇರೆ ಯಾವುದೇ ಆದಾಯವಿಲ್ಲ. ಜೊತೆಗೆ ಇಳಿ ವಯಸ್ಸಿನಲ್ಲಿ ಬೇರೆ ಯಾವುದೇ ಕೆಲಸ ಮಾಡಲು ಸಾಧ್ಯವಾಗದ ಕಾರಣದಿಂದಾಗಿ ಇವರು ಪ್ರತಿದಿನವೂ ಮೆಟ್ಟಿಲನ್ನು ಗುಡಿಸುವ ಕಾಯಕವನ್ನು ಮಾಡಿಕೊಂಡಿದ್ದಾರೆ. ಯಾವತ್ತೋ ಒಂದು ದಿನ ಪರಿಸರದ ಬಗ್ಗೆ ಮಾರದ್ಧ ಮಾತನಾಡುವವರ ನಡುವೆ ತಮ್ಮ ಪಾಡಿಗೆ ಪರಿಸರ ಕಾಪಾಡುವ ಕೆಲಸವನ್ನು ಮಾಡುತ್ತಿರುವ ಮಹದೇವ ಅವರು ಎದ್ದು ಕಾಣಿಸುತ್ತಾರೆ.

ಇನ್ನು ಚಾಮುಂಡಿ ಬೆಟ್ಟಕ್ಕೆ ಭಕ್ತರು ಮಾತ್ರವಲ್ಲದೆ, ಪ್ರವಾಸಿಗರು ಕೂಡ ಬರುತ್ತಿರುವುದರಿಂದ ಎಲ್ಲ ಪ್ರವಾಸಿ ತಾಣಗಳಂತೆ ಇಲ್ಲಿಯೂ ಅಶುಚಿತ್ವ ತಾಂಡವವಾಡುತ್ತಿದೆ. ಇಲ್ಲಿನ ವೀವ್ ಪಾಯಿಂಟ್‌ಗಳಲ್ಲಿ ಕಾಲ ಕಳೆಯುವ ಪ್ರವಾಸಿಗರು ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬಾಟಲಿ ಇನ್ನಿತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ.

ಪರಿಸರಕ್ಕೆ ಧಕ್ಕೆ ತರುವ ಕೆಲಸ

ಇನ್ನು ಮುಂದೆಯಾದರೂ ಭಕ್ತರಾಗಲೀ, ಪ್ರವಾಸಿಗರಾಗಲೀ ಇಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಸುಂದರ ಪರಿಸರಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡದಿದ್ದರೆ ಅಷ್ಟೇ ಸಾಕು. ಪ್ರತಿ ವರ್ಷವೂ ಕೆಲವು ಸಂಘ ಸಂಸ್ಥೆಗಳು ಇಲ್ಲಿ ಶ್ರಮದಾನ ಮಾಡುವ ಮೂಲಕ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತಾರೆ. ಆದರೂ ಇಡೀ ಬೆಟ್ಟವನ್ನು ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಬೆಟ್ಟ ಸ್ವಚ್ಛವಾಗಿಡುವ ಕೆಲಸವನ್ನು ಜನರೇ ಮಾಡಬೇಕಾಗಿದೆ. ಇನ್ನು ಮುಂದೆಯಾದರೂ ಇಲ್ಲಿಗೆ ಭೇಟಿ ನೀಡುವವರಿಗೆ ಎಲ್ಲೆಂದರಲ್ಲಿ ಕಸವನ್ನು ಎಸೆಯದಂತೆ ಬುದ್ಧಿಯನ್ನು ತಾಯಿ ಚಾಮುಂಡೇಶ್ವರಿ ಕೊಡಬೇಕಾಗಿದೆ.

Mahadeva Clean Chamundi Hills Steps

ಒಂದು ದಿನಕ್ಕೆ ಸೀಮಿತವಾಗದಿರಲಿ

ಇದೆಲ್ಲದರ ನಡುವೆ ಪರಿಸರ ದಿನಾಚರಣೆ ಹತ್ತಿರ ಬರುತ್ತಿರುವುದರಿಂದ ಪರಿಸರದ ಬಗ್ಗೆ ಹೇಳಲೇ ಬೇಕಾಗುತ್ತದೆ. ಏಕೆಂದರೆ ಪರಿಸರ ದಿನ ಎನ್ನುವುದು ಒಂದು ದಿನಕ್ಕೆ ಸೀಮಿತವಾದುದಲ್ಲ. ಅದು ವರ್ಷದ ಮೂನ್ನೂರ ಅರುವತೈದು ದಿನವೂ ನಮ್ಮ ಮನದಂಗಳದಲ್ಲಿ ಉಳಿಯ ಬೇಕು. ಆಗ ಮಾತ್ರ ಒಂದೊಳ್ಳೆಯ ಪರಿಸರವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.

ಕಳೆದ ಕೆಲವು ದಶಕಗಳಿಂದೀಚೆಗೆ ಪರಿಸರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಜನ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಜನವಸತಿ ಪ್ರದೇಶಗಳು ಹೆಚ್ಚಾಗಿವೆ. ಹೀಗಾಗಿ ಕೋಟ್ಯಂತರ ಎಕರೆ ಕೃಷಿ ಭೂಮಿಗಳು ಜನವಸತಿ ಪ್ರದೇಶಗಳಾಗಿ ಬದಲಾಗಿವೆ. ಅಲ್ಲಿದ್ದ ಗಿಡಮರಗಳು ನಾಶವಾಗಿವೆ.

ಕಲುಷಿತ ವಾತಾವರಣ ತಡೆಯಬೇಕಿದೆ

ಇನ್ನು ನಮ್ಮ ಬೆಳವಣಿಗೆಗೆ ತಕ್ಕಂತೆ ಹೆದ್ದಾರಿ, ಕಟ್ಟಡಗಳು, ಕಾರ್ಖಾನೆಗಳು, ಹೀಗೆ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ಅದು ಸಾಧ್ಯವಾಗಿದ್ದರಿಂದ ಪರಿಸರದ ಮೇಲೆ ಪರಿಣಾಮವಾಗಿದೆ. ಆದರೆ ಹೆಚ್ಚುತ್ತಿರುವ ಕಲುಷಿತ ವಾತಾವರಣವನ್ನು ತಡೆಯುವ ಕೆಲಸವನ್ನು ಮಾಡಲು ಪ್ರತಿಯೊಬ್ಬ ನಾಗರಿಕರಿಗೂ ಅವಕಾಶವಿದೆ.

ಪರಿಸರವನ್ನು ಕಾಪಾಡುವುದು ಅಂದರೆ ಗಿಡಗಳನ್ನು ನೆಟ್ಟು ಬಿಡುವುದಷ್ಟೇ ಅಲ್ಲ. ನೆಟ್ಟ ಗಿಡವನ್ನು ನೀರು ಗೊಬ್ಬರ ಹಾಕಿ ಬೆಳೆಸುವುದು ಮತ್ತು ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಂಡು, ರೋಗರುಜಿನಗಳು ಬಾರದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ಜನರ ಮನೋಭಾವ ಬದಲಾಗಬೇಕು

ವಾತಾವರಣದಲ್ಲಿ ಏರುಪೇರುಗಳನ್ನು ಇತ್ತೀಚೆಗಿನ ದಿನಗಳಲ್ಲಿ ನಾವು ನೋಡುತ್ತಿದ್ದೇವೆ. ವಾಡಿಕೆಯಂತೆ ಮಳೆ, ಬಿಸಿಲು, ಚಳಿ ಯಾವುದೂ ನಡೆಯುತ್ತಿಲ್ಲ. ವಿಕೋಪಗಳು ಜಾಸ್ತಿಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಕಾಡುಗಳು ನಾಶವಾಗಿ ತೋಟಗಳಾಗಿವೆ. ಗದ್ದೆಗಳು ನಿವೇಶನಗಳಾಗಿ ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ.

ಮಾವು, ಹಲಸು, ನೇರಳೆ ಸೇರಿದಂತೆ ಹಲವು ರೀತಿಯ ಪರಿಸರ ಸ್ನೇಹಿ ಗಿಡನೆಟ್ಟು ಅದರಿಂದ ಒಂದಷ್ಟು ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ಮನೋಭಾವವಿಲ್ಲ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ.

ಪರಿಸರ ಸಂರಕ್ಷಣೆ ನಮ್ಮ ಹೊಣೆ

ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್‌ಓಕ್, ತೇಗದ ಮರಗಳನ್ನು ನೆಡುತ್ತೇವೆ. ಅವುಗಳಿಂದ ಹಸಿರು ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ. ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಸಾಧ್ಯನಾ ಎಂದು ನಾವ್ಯಾರು ಯೋಚಿಸುತ್ತಲೇ ಇಲ್ಲ.

ಪ್ರತಿವರ್ಷ ಪರಿಸರ ದಿನಾಚರಣೆಯನ್ನು ಗಿಡನೆಡುವುದರ ಮೂಲಕ ಆಚರಿಸುತ್ತಿದ್ದೇವೆ. ಸಾವಿರಾರು ಗಿಡಗಳನ್ನು ನೆಡುತ್ತಿದ್ದೇವೆ. ಇವತ್ತಿನ ಪರಿಸ್ಥಿತಿಯಲ್ಲಿ ಗಿಡವನ್ನು ನೆಡುವುದಕ್ಕಿಂತ ನೆಟ್ಟ ಗಿಡವನ್ನು ರಕ್ಷಿಸುವುದು ಅಗತ್ಯವಾಗಿದೆ. ಅದನ್ನು ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+