Get Updates
Get notified of breaking news, exclusive insights, and must-see stories!

Mysuru: ಕಾಯಕಲ್ಪಕ್ಕೆ ಕಾದಿರುವ ಹೆಚ್.ಡಿ.ಕೋಟೆಯ ಬ್ರಿಟೀಷರ ಕಾಲದ ಸೇತುವೆ!

ಮೈಸೂರು, ಜೂನ್‌ 09: ಪ್ರತಿ ಬಾರಿಯೂ ಮಳೆಗಾಲ ಆರಂಭವಾದಾಗ ಜಿಲ್ಲೆಯ ಹೆಚ್.ಡಿ.ಕೋಟೆಯ ಹೃದಯಭಾಗದಲ್ಲಿರುವ ಶತಮಾನ ಸವೆಸಿದ ಸೇತುವೆಯ ವಿಚಾರ ಮುನ್ನಲೆಗೆ ಬರುತ್ತದೆ. ಇದು ಎಲ್ಲಿ ಕುಸಿದು ಹೋಗಿ ಬಿಡುತ್ತದೆಯೋ? ಎಂಬ ಆತಂಕವನ್ನು ಜನಸಾಮಾನ್ಯರು ಹೊರಹಾಕುತ್ತಾರೆ. ಆದರೆ ಅದಾದ ಬಳಿಕ ಯಾರೂ ತಲೆಕೆಡಿಸಿಕೊಳ್ಳದ ಕಾರಣ ಆ ವಿಚಾರ ಮರೆತು ಹೋಗಿ ಬಿಡುತ್ತದೆ. ಏಕೆ ಹೀಗೆ? ಎಂಬ ಪ್ರಶ್ನೆಗೆ ಉತ್ತರಗಳು ಮಾತ್ರ ಸಿಗುತ್ತಿಲ್ಲ.

ನಿಜವಾಗಿ ಹೇಳಬೇಕೆಂದರೆ ಹೆಚ್.ಡಿ.ಕೋಟೆ ಪಟ್ಟಣದ ಹೃದಯಭಾಗದಲ್ಲಿರುವ ಈ ಸೇತುವೆ ನಿರ್ಮಾಣಗೊಂಡು ಸುಮಾರು 136 ವರ್ಷಗಳು ಕಳೆದಿವೆ. ಹಿಂದೆ ಬ್ರಿಟೀಷರ ಕಾಲದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಅವತ್ತಿನಿಂದ ಇವತ್ತಿನವರೆಗೆ ಇದರ ಮೇಲೆ ಅದೆಷ್ಟು ವಾಹನಗಳು ಸಾಗಿ ಹೋಗಿವೆಯೋ ಗೊತ್ತಿಲ್ಲ. ಆದರೆ ಈಗ ಅದು ನಿರ್ಲಕ್ಷದಿಂದಾಗಿ ಶಿಥಿಲಾವಸ್ಥೆಗೆ ತಲುಪಿರುವ ಲಕ್ಷಣಗಳು ಎದ್ದು ಕಾಣಿಸುತ್ತಿವೆ.

The British Era Bridge Of HD Kote In Mysore District Is Yet To Be Developed

ಸದ್ಯಕ್ಕೆ ಸೇತುವೆ ಗಟ್ಟಿಮುಟ್ಟಾಗಿದೆ. ಆದರೆ ಪಕ್ಕದಲ್ಲಿ ಬೇರೆ ಸೇತುವೆಯಿದ್ದರೂ ಬಹಳಷ್ಟು ವಾಹನಗಳು ಇದರ ಮೇಲೆ ಸಾಗುತ್ತಿರುವುದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಇವತ್ತಿನ ಈ ಕಾಲದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಪಕ್ಕದಲ್ಲಿ ಸೇತುವೆ ಇದ್ದರೂ ಹೆಚ್ಚಿನ ವಾಹನಗಳು ಇದರ ಮೇಲೆ ಸಾಗಿ ಹೋಗುತ್ತಿವೆ. ಹಾಗಾಗಿ ಅಪಾಯ ಸಂಭವಿಸುವ ಮುನ್ನ ಎಚ್ಚರವಹಿಸಿ ಎನ್ನುವುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.

ಹೊಸದಿದ್ದರೂ ಹಳೇ ಸೇತುವೆಯಲ್ಲಿ ಸಂಚಾರ

ಈ ಸೇತುವೆ ಬ್ರಿಟೀಷರ ಕಾಲದ ಪಳೆಯುಳಿಕೆಯಾಗಿದ್ದು, ಇದರ ಸಂರಕ್ಷಣೆ ಇಂದಿನ ಅಗತ್ಯತೆಯಾಗಿದೆ. ಈ ಸೇತುವೆ ತಾರಕ ನದಿಗೆ ಅಡ್ಡಲಾಗಿ ಕಟ್ಟಿದ್ದು, ಇದರ ನಿರ್ವಹಣೆಯತ್ತ ನಿರ್ಲಕ್ಷ್ಯ ವಹಿಸಿದ ಕಾರಣದಿಂದಾಗಿ ಇದು ವರ್ಷದಿಂದ ವರ್ಷಕ್ಕೆ ಶಿಥಿಲಾವಸ್ಥೆಗೆ ತಲುಪುವಂತಾಗಿದೆ. ಆದರೆ ವಾಹನ ಸವಾರರು ಇದನ್ನು ಅರಿಯದೆ ಇದರ ಮೇಲೆಯೇ ಸಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

The British Era Bridge Of HD Kote In Mysore District Is Yet To Be Developed

ಇನ್ನು ಸುಮಾರು 24 ವರ್ಷಗಳ ಹಿಂದೆ ಅಂದರೆ ಎಸ್.ಎಂ.ಕೃಷ್ಣರವರು ಸಿಎಂ ಆಗಿದ್ದ ಕಾಲದಲ್ಲಿ ಈ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಡೆಸಿದಾಗ ಸೇತುವೆ ನಡುಗಿದಂತೆ ಅನುಭವ ಆಗುತ್ತಿದ್ದರಿಂದ ಅವತ್ತಿನ ಕಾಂಗ್ರೇಸ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮಾಜಿ ಸಚಿವ ಎಂ.ಶಿವಣ್ಣ ಅವರು ಹಳೆ ಸೇತುವೆಗೆ ಹೊಂದಿಕೊಂಡಂತೆ ಹೊಸ ಬೃಹತ್ ಸೇತುವೆ ನಿರ್ಮಾಣಕ್ಕೆ ಮುಂದಾಗಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತವಾದ ನಂತರ ಈ ಸೇತುವೆಯ ನಿರ್ವಹಣೆಗೆ ಮುಂದಾಗದ ಪರಿಣಾಮ ಈ ದುಸ್ಥಿತಿ ಬಂದೊದಗಿದೆ.

ಬ್ರಿಟೀಷರ ಕಾಲದ ಹಳೆಯ ಸೇತುವೆಯತ್ತ ನಿರ್ಲಕ್ಷ್ಯ

ಆದರೆ ಹೊಸ ಸೇತುವೆ ನಿರ್ಮಾಣದ ಬಳಿಕವೂ ಹಳೆಯ ಸೇತುವೆ ಮೇಲೆ ಈಗಲೂ ಕಾರು ಜೀಪು ಮಾಕ್ಸಿಕ್ಯಾಬ್ ವಾಹನಗಳು ಹಾಗೂ ದ್ವಿಚಕ್ರ ವಾಹನ ಸಂಚಾರ ಜೊತೆಗೆ ಪಟ್ಟಣದ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ತಾಲ್ಲೂಕಿನ ಜನರ ಸೇವೆಗೆ ಬಳಕೆಯಾಗುತ್ತಿದೆ. ಈ ಹಿಂದೆ ಸೇತುವೆಯನ್ನು ಸುಣ್ಣದ ಕಲ್ಲು, ಮೊಟ್ಟೆ ಬಳಸಿ ನಿರ್ಮಾಣ ಮಾಡಿರುವುದರಿಂದ ತಾರಕ ಜಲಾಶಯದಿಂದ ಹೆಚ್ಚಿನ ನೀರು ಹೊರ ಹರಿಸಿದಾಗ ಉಂಟಾಗುವ ಪ್ರವಾಹಕ್ಕೂ ಜಗ್ಗದೇ ಈಗಲೂ ಬಹಳ ಗಟ್ಟಿಮುಟ್ಟಾಗಿ ನಿಂತಿದೆ.

The British Era Bridge Of HD Kote In Mysore District Is Yet To Be Developed

ಹೊಸ ಸೇತುವೆ ನಿರ್ಮಾಣಗೊಂಡ ಬಳಿಕ ಈ ಸೇತುವೆ ಜನರ ಬಳಕೆಗೆ ಮುಕ್ತವಾಗಿ ಬಳಕೆಯಾಗುತ್ತಿದ್ದರೂ ಸೇತುವೆಯನ್ನು ಕಾಲ ಕಾಲಕ್ಕೆ ದುರಸ್ತಿ ನಡೆಸಿ ನಿರ್ವಹಣೆ ಮಾಡಬೇಕಾದ ಇಲ್ಲಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಸೇತುವೆ ನಿರ್ವಹಣೆ ಮತ್ತು ಸಂರಕ್ಷಣೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸೇತುವೆ ದುಸ್ಥಿತಿಯತ್ತ ಸಾಗಿದೆ. ಸೇತುವೆ ದುಸ್ಥಿತಿಗೀಡಾಗಿರುವ ಕಾರಣ ಮಳೆಗಾಲದ ಸಂದರ್ಭ ಸೇತುವೆ ಮೇಲೆ ನಿರ್ಮಾಣವಾಗಿರುವ ಗುಂಡಿಗಳಲ್ಲಿ ಮಳೆ ನೀರು ನಿಂತಲ್ಲೇ ನಿಂತು ಸಮಸ್ಯೆ ಎದುರಿಸುವಂತಾಗಿದೆ.

ಇನ್ನಾದರೂ ಸೇತುವೆಯತ್ತ ಗಮನಹರಿಸ ಬೇಕಿದೆ

ಸೇತುವೆ ದುಸ್ಥಿತಿಯಲ್ಲಿದ್ದರೂ ಭಾರದ ವಾಹನಗಳ ಸಂಚಾರವೂ ನಿಂತಿಲ್ಲ, ಶಿಥಿಲ ಸೇತುವೆ ಮೇಲೆ ವಾಹನ ಸಂಚಾರ ಮಾಡುವಾಗ ಸೇತುವೆ ಕುಸಿದು ಏನಾದರೂ ದುರಂತ ನಡೆದರೆ ಎಂಬ ಭಯವೂ ಇಲ್ಲದಿಲ್ಲ. ಇನ್ನೊಂದೆಡೆ ಪಾರಂಪರಿಕ ಕಟ್ಟಡಗಳ ಉಳಿಗೆ ಮುಂದಾಗಬೇಕಿದ್ದ ಪ್ರಾಚ್ಯವಸ್ತು ಇಲಾಖೆ ಕೂಡ ಇತ್ತ ಗಮನಹರಿಸಿ ಇದರ ಉಳಿವಿಗೆ ಆದ್ಯತೆ ನೀಡಬೇಕಿದೆ.

ಇನ್ನಾದರೂ, ಕ್ಷೇತ್ರದ ಸಂಸದರು, ಶಾಸಕರು ಶತಮಾನ ಕಂಡಿರುವ ಐತಿಹಾಸಿಕ ಸೇತುವೆ ದುರಸ್ಥಿ ಕಾರ್ಯ ಕೈಗೊಂಡು ಐತಿಹಾಸಿಕ ಸೇತುವೆಯನ್ನು ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಸೇರಿಸಿ, 136 ವರ್ಷ ಪೂರೈಸಿರುವ ಸೇತುವೆ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂಬುದು ಇಲ್ಲಿನವರ ಒತ್ತಾಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+