Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ನೈಋತ್ಯ ರೈಲ್ವೆ Multi Modal Plan; ಯೋಜನೆ ವಿವರ

ಬೆಂಗಳೂರು, ಜನವರಿ 09: ಬೆಂಗಳೂರು ನಗರ ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರುತ್ತದೆ. ಬೆಂಗಳೂರು ವಿಭಾಗ ನಗರದಲ್ಲಿನ ರೈಲು ಸಂಚಾರಕ್ಕೆ ಹೊಸ ರೂಪ ನೀಡಲು ಯೋಜನೆಯೊಂದನ್ನು ರೂಪಿಸಿದೆ, ಇದು ಬೆಂಗಳೂರು ನಗರದ ಅಕ್ಕಪಕ್ಕದ ಪಟ್ಟಣಗಳಿಗೆ ಸಂಪರ್ಕಿಸಲು ಸಹ ಸಹಾಯಕವಾಗಲಿದೆ.

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ Multi Modal Plan ಇದು. ಈ ಯೋಜನೆಯ ಅನ್ವಯ ರೈಲು ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಹೆಚ್ಚಿನ ಜನರನ್ನು ರೈಲು ಸಂಚಾರಕ್ಕೆ ಉತ್ತೇಜಿಸುವುದಾಗಿದೆ. ಈ ಯೋಜನೆಯ ಅನ್ವಯ ಯಲಹಂಕ-ದೇವನಹಳ್ಳಿ, ದೇವನಹಳ್ಳಿ-ಬಂಗಾರಪೇಟೆ-ಕೋಲಾರ ಮಾರ್ಗದಲ್ಲಿ ರೈಲ್ವೆ ಹಳಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ದ್ವಿಪಥ ಮಾಡಲಾಗುತ್ತದೆ. ಈ ಮೂಲಕ ಸುಗಮ, ವೇಗದ ರೈಲು ಸಂಚಾರಕ್ಕೆ ಆದ್ಯತೆ ನೀಡಲಾಗುತ್ತಿದೆ.

SWR Multi Modal Plan For Bengaluru Know Project Details

ಯೋಜನೆಯ ವಿವರ; ಭಾರತೀಯ ರೈಲ್ವೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲಿನ ಮೂಲಕ ಪ್ರಯಾಣಿಕರನ್ನು ಸೆಳೆಯುವ ಯೋಜನೆ ಯಶಸ್ಸು ಕಾಣುತ್ತಿಲ್ಲ. ಈ ಹಿನ್ನಲೆಯಲ್ಲಿ ಬೆಂಗಳೂರು ವಿಭಾಗ ಹೊಸ ಯೋಜನೆ ಮೂಲಕ ಬೆಂಗಳೂರು ಏರ್‌ಪೋರ್ಟ್‌ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಜನರನ್ನು ಸೆಳೆಯಲು ಮುಂದಾಗಿದೆ.

ಮೊದಲ ಹಂತದಲ್ಲಿ ಯಲಹಂಕ-ದೇವನಹಳ್ಳಿ, ದೇವನಹಳ್ಳಿ-ಬಂಗಾರಪೇಟೆ-ಕೋಲಾರ ಮಾರ್ಗದಲ್ಲಿ ದ್ವಿಪಥ ನಿರ್ಮಾಣ ಮಾಡಲಾಗುತ್ತದೆ. ಈ ಕುರಿತು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಇಲಾಖೆ ಯೋಜನೆ ರೂಪಿಸಿದೆ.

ಯಲಹಂಕ-ದೇವನಹಳ್ಳಿ ಮಾರ್ಗದ 23 ಕಿ. ಮೀ. ಮಾರ್ಗದಲ್ಲಿ ದ್ವಿಪಥ ನಿರ್ಮಾಣ, ಯಾಂತ್ರೀಕೃತ ಸಿಗ್ನಲ್ ವ್ಯವಸ್ಥೆ, ಸ್ಥಳಾವಕಾಶ ಮುಂತಾದ ಅಂಶಗಳ ಕುರಿತು ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲಾಗುತ್ತದೆ. ಇದಕ್ಕಾಗಿ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ.

ದೇವನಹಳ್ಳಿ-ಬಂಗಾರಪೇಟೆ-ಕೋಲಾರ ಮಾರ್ಗದ 125 ಕಿ. ಮೀ.ಯ ದ್ವಿಪಥ ನಿರ್ಮಾಣ, ಸಿಗ್ನಲ್, ಕಾಮಗಾರಿ ಮುಂತಾದವುಗಳ ಕುರಿತು ಕಾರ್ಯ ಸಾಧ್ಯತಾ ವರದಿಯನ್ನು 2 ಕೋಟಿ ರೂ. ವೆಚ್ಚದಲ್ಲಿ ತಯಾರು ಮಾಡಲಾಗುತ್ತದೆ. ಈ ಅಂತಿಮ ವರದಿ ಬಳಿಕ ಇಲಾಖೆ ಮಾಸ್ಟರ್ ಪ್ಲಾನ್‌ಗೆ ಒಪ್ಪಿಗೆ ನೀಡಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ರೈಲುಗಳನ್ನು ಓಡಿಸಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್‌ ಸ್ಟೇಷನ್ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಪ್ರಯಾಣಿಕರ ಪ್ರತಿಕ್ರಿಯೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ವಿಮಾನ ನಿಲ್ದಾಣದ ಪ್ರಯಾಣಿಕರು ಹೆಚ್ಚಾಗಿ ಬಸ್, ಕ್ಯಾಬ್ ಅವಲಂಬಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಸಿಗಲಿದೆ. ಆಗ ರೈಲಿನ ಬೇಡಿಕೆ ಮತ್ತಷ್ಟು ಕುಗ್ಗಲಿದೆ. ಆದ್ದರಿಂದ ನೈಋತ್ಯ ರೈಲ್ವೆ ಈಗಲೇ ಭವಿಷ್ಯದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮಲ್ಟಿ ಮಾಡೆಲ್ ಯೋಜನೆ ರೂಪಿಸಲಾಗುತ್ತಿದೆ.

ಯೋಜನೆ ಅನ್ವಯ ದ್ವಿಪಥ ನಿರ್ಮಾಣಗೊಂಡರೆ ಬೆಂಗಳೂರು-ಕೋಲಾರ ಮಾರ್ಗದಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಬಹುದು. ಅದರಲ್ಲೂ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ರೈಲುಗಳ ಸಂಚಾರ ನಡೆಸಬಹುದು. ಆಗ ಪ್ರಯಾಣಿಕರು ಬಸ್, ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಎರಡು ಮಾರ್ಗಗಳು ಇದ್ದರೆ ಡೆಮು ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಅಲ್ಲದೇ ಗೂಡ್ಸ್ ರೈಲುಗಳ ಸಂಚಾರವು ಹೆಚ್ಚಲಿದ್ದು, ಪ್ರಯಾಣಿಕರು, ಸರಕು ಸಾಗಣೆಗೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಕಾರ್ಯ ಸಾಧ್ಯತಾ ವರದಿಗಳು ಬಂದ ಬಳಿಕ ಯೋಜನೆಯ ಕುರಿತು ಅಂತಿಮ ಚಿತ್ರಣ ರೂಪಿಸಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು-ಕೋಲಾರ ನಡುವೆ ಸಂಚಾರ ನಡೆಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+