Hubblli to Kedarnath Train: ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಕೇದಾರನಾಥ ಹೋಗುವವರಿಗೆ ವಿಶೇಷ ರೈಲು
ಹುಬ್ಬಳ್ಳಿ ಧಾರವಾಡ ಬೆಳಗಾವಿಯಿಂದ ಕೇದಾರನಾಥ ಹೋಗುವವರಿಗೆ ವಿಶೇಷ ರೈಲು ಸೇವೆ ಪ್ರಾರಂಭ ಆಗಿದೆ. ಈ ರೈಲು ಮೇ ತಿಂಗಳಲ್ಲಿ ಮಾತ್ರ ಇರುತ್ತದೆ. ಕೇದರನಾಥಕ್ಕೆ ಹೋಗಲು ಬಯಸುವ ಭಕ್ತರು ಈ ರೈಲು ಸೇವೆಯನ್ನು ಪಡೆಯಬಹುದು. ಹಾಗಾದರೆ ಈ ರೈಲು ಎಲ್ಲಿಂದ? ಎಷ್ಟು ಗಂಟೆಗೆ ಹೊರಡಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಉತ್ತರಖಂಡದ ಪ್ರಸಿದ್ಧ ಚಾರ್‌ಧಾಮ್ ಯಾತ್ರೆ ಮೇ 10ರಿಂದ ಆರಂಭವಾಗಿದೆ. ಚಾರ್‌ಧಾಮ್‌ಗಳಲ್ಲಿ ಕೇದಾರನಾಥ, ಗಂಗೋತ್ರಿ, ಯಮನೋತ್ರಿ ಧಾಮ್‌ಗಳನ್ನು ಮೇ 10ರಂದು ತೆರೆಯಲಾದರೆ, ಬದರಿನಾಥ ಧಾಮವನ್ನು ಮೇ 12ರಂದು ತೆರೆಯಲಾಗಿದೆ. ಈಗ ಕರ್ನಾಟಕದ ಹುಬ್ಬಳ್ಳಿ ಧಾರವಾಡ ಬೆಳಗಾವಿ ಜಿಲ್ಲೆಗಳಿಂದಲೂ ರೈಲು ಪ್ರಯಾಣದ ಮೂಲಕ ಚಾರ್‌ಧಾಮ್ ಯಾತ್ರೆಯನ್ನು ಮಾಡಬಹುದು.

ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ಕೇದಾರನಾಥಕ್ಕೆ ಹೋಗಬಹುದು. ಕೇದಾರನಾಥಕ್ಕೆ ಹೋಗಬೇಕು ಅಂತಾದರೆ ನೀವು ಮೊದಲು ಹರಿದ್ವಾರ ಅಥವಾ ಋಷಿಕೇಶ್ ರೈಲ್ವೆ ಸ್ಟೇಷನ್‌ಗೆ ಹೋಗಬೇಕು. ಇದು ಕೇದಾರನಾಥಕ್ಕೆ ಇರುವ ಹತ್ತಿರದ ರೈಲ್ವೇ ಸ್ಟೇಷನ್ ಆಗಿದೆ. ಈ ಎರಡು ರೈಲ್ವೆ ಸ್ಟೇಷನ್‌ಗೆ ಹುಬ್ಬಳ್ಳಿಯಿಂದ ರೈಲು ಹೊರಡುತ್ತದೆ. ಹಾಗಾದರೆ ಈ ರೈಲು ಯಾವಾಗ? ಎಲ್ಲಿಂದ? ಎಲ್ಲಿಗೆ? ಎಷ್ಟು ಗಂಟೆಗೆ ಹೊರಡುತ್ತದೆ ಎಂದು ತಿಳಿಯೋಣ.
ಈ ರೈಲು ಪ್ರತಿ ಸೋಮವಾರ ಮೇ ತಿಂಗಳಲ್ಲಿ ಮಾತ್ರ ಇರುತ್ತದೆ. ಈ ರೈಲು ಸೋಮವಾರ ರಾತ್ರಿ 9.45 ನಿಮಿಷ ಹುಬ್ಬಳ್ಳಿಂದ ಹೊರಟು ಧಾರವಾಡವನ್ನು ರಾತ್ರಿ 10.16 ನಿಮಿಷಕ್ಕೆ ತಲುಪುತ್ತದೆ. ಬಳಿಕ ಬೆಳಗಾವಿಯನ್ನು ರಾತ್ರಿ 12.25 ನಿಮಿಷಕ್ಕೆ ಬಂದು ತಲುಪುತ್ತದೆ. ಈ ರೀತಿ ನೀವು ಸೋಮವಾರ ಹುಬ್ಬಳ್ಳಿಯಿಂದ ಹೊರಟು ಬುಧವಾರ ಸಂಜೆ 6.45 ನಿಮಿಷಕ್ಕೆ ರಿಷಿಕೇಶ್ವನ್ನು ತಲುಪುತ್ತೀರಿ. ಹರಿದ್ವಾರದಲ್ಲೇ ಇಳಿಯಲು ರೈಲು ರಿಷಿಕೇಶ್ ತಲುಪುವ ಮುನ್ನ 4.10ಕ್ಕೆ ಬಂದು ತಲುಪುತ್ತದೆ. ಈ ರೈಲು ಮೇ 6, 13, 20, 27 ಈ ದಿನಾಂಕಗಳಲ್ಲಿ ಮಾತ್ರ ಇರುತ್ತದೆ.

ಕೇದಾರನಾಥ (ರಿಷಿಕೇಶ್) ರೈಲು ಪ್ರಯಾಣ ದರ ಇಂತಿದೆ:-
ಸ್ಲೀಪರ್ ಕೋಚ್ ಆದರೆ 1,010 ರೂಪಾಯಿ
ಸೆಕೆಂಡ್ ಎಸಿ 2560 ರೂಪಾಯಿ
ಫಸ್ಟ್ ಎಸಿ ಅಂದರೆ 3620 ರೂಪಾಯಿ
ಹರಿದ್ವಾರ ರಿಷಿಕೇಷವನ್ನು ತಲುಪಿದರೆ ಅಲ್ಲಿಂದ ಸೋಂಪ್ರಯಾಗ್ ಬಸ್ ಇರುತ್ತದೆ. ಇಲ್ಲಿಂದ ಗೌರಿಕುಂಡದಲ್ಲಿ ಶೇರಿಂಗ್ ಜೀಪ್‌ನಲ್ಲಿ ಪ್ರಯಾಣ ಮಾಡಬಹುದು. ಗೌರಿಕುಂಡದಿಂದ ಕೇದಾರನಾಥ ದೇವಸ್ಥಾನಕ್ಕೆ ಟ್ರಕ್ಕಿಂಗ್ ಇರುತ್ತದೆ. ಟ್ರಕ್ಕಿಂಗ್ ಮಾಡಲು ಆಗದವರು ಕುದುರೆಗಳ ಮೇಲೆ ಕುಳಿತು ಹೋಗಬಹುದು.
ರಿಷಿಕೇಶದಿಂದ ರೈಲು ವಾಪಾಸ್ ಬರುವುದು ಯಾವಾಗ?
ಇನ್ನೂ ರೈಲು ವಾಪಾಸ್ ಯಾವಾಗ ಬರುತ್ತದೆ ಎಂದು ನೋಡುವುದಾರೆ- ರಿಷಿಕೇಶದಿಂದ ಗುರುವಾರ ಸಂಜೆ 5.35ಕ್ಕೆ ರೈಲು ಹೊರಡುತ್ತದೆ. ಹರಿದ್ವಾರವನ್ನು ಸಂಜೆ 6.45 ನಿಮಿಷಕ್ಕೆ ತಲುಪುತ್ತದೆ. ಶನಿವಾರ ಮಧ್ಯಾಹ್ನ 2.25ಕ್ಕೆ ಬೆಳಗಾವಿ ತಲುಪಿದರೆ ಧಾರವಾಡವನ್ನು ಸಂಜೆ 4.45ಕ್ಕೆ ತಲುಪಲಿದೆ. ಜೊತೆಗೆ ಹುಬ್ಬಳ್ಳಿಯನ್ನು 5.30ಕ್ಕೆ ಬಂದು ತಲುಪುಲಿದೆ.
ನೀವು ಚಾರ್‌ಧಾಮ್‌ಗೆ ಭೇಟಿ ನೀಡಬೇಕು ಅಂದುಕೊಂಡಿದ್ದರೆ ಈ ರೈಲು ಸೇವೆಯನ್ನು ಪಡೆಯಬಹುದು. ಆದರೆ ನೆನೆಪಿನಲ್ಲಿಡಿ ಚಾರ್‌ಧಾಮ್ ಯಾತ್ರೆ ಮಾಡುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಂಡಿರಬೇಕು. ನಂತರವಷ್ಟೇ ಯಾತ್ರೆಗೆ ಅನುಮತಿ ನೀಡಲಾಗುತ್ತದೆ. ಇಲ್ಲವಾದಲ್ಲಿ ಯಾತ್ರೆಗೆ ಅನುಮತಿಯನ್ನು ನೀಡಲಾಗುವುದಿಲ್ಲ. ಹಾಗಾದರೆ ಚಾರ್‌ಧಾಮ್ ಯಾತ್ರೆಗೆ ರಿಜಿಸ್ಟ್ರೇಷನ್ ಮಾಡುವುದು ಹೇಗೆ? ಎಂದು ತಿಳಿಯೋಣ.
ಚಾರ್‌ಧಾಮ್ ಯಾತ್ರೆಗೆ ರಿಜಿಸ್ಟ್ರೇಷನ್ ಮಾಡುವುದು ಹೇಗೆ?
ಉತ್ತರಖಂಡನ ಯಾವುದೇ ಯಾತ್ರೆಗೆ ಹೋಗಬೇಕಾದರು ನೀವು ಯಾತ್ರಾ ರಿಜಿಸ್ಟ್ರೇಷನ್ ಮಾಡಿಸಲೇಬೇಕು. ಆನ್‌ಲೈನ್‌ನಲ್ಲಿ ಯಾತ್ರಾ ರಿಜಿಸ್ಟ್ರೇಷನ್ ಮಾಡಿಸುವುದಾದರೆ https://registrationandtouristcare.uk.gov.in/signin.php ಮೂಲಕ ಮಾಡಬಹುದು. ಇನ್ನೊಂದು tourist care uttarakhand ಮೊಬೈಲ್ ಆಪ್ ಕೂಡ ಇದೆ. ಇದನ್ನು ಡೌನ್‌ಲೋಡ್ ಮಾಡಿಕೊಂಡು ಕೂಡ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಇನ್ನೊಂದು ಯಾತ್ರಾ ರಿಜಿಸ್ಟ್ರೇಷನ್ ನಂಬರ್ 8394833833 ಇದೆ. ಇದನ್ನು ಸೇವ್ ಮಾಡಿಕೊಂಡು ಈ ನಂಬರ್‌ಗೆ ಯಾತ್ರಾ ಅಂತ ಮೆಸೇಜ್ ಮಾಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.












Click it and Unblock the Notifications