ರಣ ಬಿಸಿಲಿಗೆ ಹಂಪಿ ಭಣಭಣ... ಶಾಖದ ಹೊಡೆತಕ್ಕೆ ಪ್ರವಾಸಿಗರು ಬರಲು ಹಿಂದೇಟು

ಬಿಸಿಲು ರಾಜ್ಯದ ಜನರನ್ನು ಹೈರಾಣ ಮಾಡಿದೆ. ಇನ್ನು ಹೈದರಾಬಾದ್‌ ಕರ್ನಾಟಕದ ಭಾಗದಲ್ಲಂತೂ ಬಿಸಿಲು ತಾಂಡವವಾಡುತ್ತಿದೆ. ಇದೇ ಭಾಗಕ್ಕೆ ಸೇರುವ ಸೇರಿಕೊಳ್ಳುವ ವಿಜಯನಗರ್ ಜಿಲ್ಲೆಗೂ ಬಿಸಿಯ ಧಗೆ ಬಿದ್ದಿದೆ.

ಏಪ್ರಿಲ್‌, ಮೇ ಸಾಮಾನ್ಯವಾಗಿ ಇದು ರಜಾ ದಿನ. ಪಕ್ಕದ ಪ್ರವಾಸಿ ತಾಣಗಳನ್ನು ಜನ ಹೋಗುತ್ತಾರೆ. ಆದರೆ ಬಿಸಿಲು ಮನೆಯಿಂದ ಹೊರಗಡೆ ಬಿಡದಂತೆ ಮಾಡುತ್ತಿದೆ. ಇದರಿಂದ ಪ್ರವಾಸೋದ್ಯಮದ ಮೇಲೂ ಪೆಟ್ಟು ಬಿದ್ದಿದೆ. ಜನರಿಂದ ತುಂಬಿರುತ್ತಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಇಂದು ಪ್ರವಾಸಿಗರಿಲ್ಲದೆ ಭಣಗುಡುತ್ತಿದೆ.

Record Low Tourist Numbers in Karnataka s Hampi Blamed on Intense Heatwave

UNESCO ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ಹಂಪಿಯಲ್ಲಿ, ಕಳೆದ 10 ವರ್ಷಗಳಲ್ಲಿ ಕಡಿಮೆ ಪ್ರವಾಸಿಗರ ಸಂಖ್ಯೆಯನ್ನು ದಾಖಲಾಗಿದೆ. ಅಧಿಕಾರಿಗಳ ಪ್ರಕಾರ ಕಳೆದ 15 ದಿನಗಳಲ್ಲಿ ಹಂಪಿಗೆ ದಿನ ನಿತ್ಯ ಸುಮಾರು 400 ರಿಂದ 500 ಜನ ಮಾತ್ರ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬೇಸಿಗೆಯ ಬೇಗೆ ನೀಗಿಸಲು ಜಿಲ್ಲಾಡಳಿತ ಕ್ರಮಗಳನ್ನು ಮಾಡಿಕೊಂಡಿದೆ. ಪ್ರವಾಸಿಗರು ಹಂಪಿಯತ್ತ ಮುಖಮಾಡದೇ ಇರುವುದರಿಂದ ವ್ಯಾಪಾರ ವಹಿವಾಟು ಸಹ ಕುಂಟಿತವಾಗಿದೆ. ಮಾರ್ಚ್‌ನಲ್ಲಿ ಹಂಪಿಗೆ ಬೇರೆ ರಾಜ್ಯಗಳು ಹಾಗೂ ರಾಜ್ಯದ ಬೇರೆ ಜಿಲ್ಲೆಗಳ ವಿದ್ಯರ್ಥಿಗಳು ಭೇಟಿ ನೀಡುತ್ತಿದ್ದರು. ಆದರೆ ಈ ವರ್ಷ ಈ ಸಂಖ್ಯೆ ಸಹ ಕುಂಠಿತವಾಗಿದೆ.

Record Low Tourist Numbers in Karnataka s Hampi Blamed on Intense Heatwave

ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿದೆ. ಪಾರಂಪರಿಕ ತಾಣದಲ್ಲಿ ವ್ಯಾಪಾರ ವಹಿವಾಟು ಕೂಡ ಕುಂಠಿತಗೊಂಡಿದೆ. ಮಾರ್ಚ್‌ನಲ್ಲಿ ಹಂಪಿಗೆ ಭೇಟಿ ನೀಡುವ ವಿವಿಧ ರಾಜ್ಯಗಳು ಮತ್ತು ಜಿಲ್ಲೆಯ ಅನೇಕ ಶಾಲಾ ವಿದ್ಯಾರ್ಥಿಗಳು ಬಿಸಿಲಿನ ತಾಪದಿಂದಾಗಿ ಬಾರದೆ ಹೋಗಿದ್ದಾರೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಸುಮಾರು 1500 ಜನರ ದಿನಂಪ್ರತಿ ಭೇಟಿ ನೀಡುತ್ತಿದ್ದರು. ಆದರೆ ಈ ಸಂಖ್ಯೆ ದಿಢೀರ ಕುಸಿತಗೊಂಡಿದೆ. ಹಂಪಿಯಲ್ಲಿನ ಗೈಡ್ ಹೇಳುವಂತೆ ಕಳೆದ ಎರಡು ವಾರಗಳಲ್ಲಿ ಹಂಪಿಗೆ 600ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಹಂಪಿಯಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರವಾಸಿಗರ ಭೇಟಿ ಇದಾಗಿದೆ.

ಪ್ರವಾಸಿ ಸಂಘದ ರಾಜ್ಯಾಧ್ಯಕ್ಷ ವಿರೂಪಾಕ್ಷಿ ವಿ ಹಂಪಿ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಮಾಹಿತಿಯಂತೆ, ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದ್ದು ಇಲ್ಲಿನ ಜನರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಇನ್ನು ಸಾಮಾಜಿಕ ತಾಣದಲ್ಲಿ ಬಿಸಿಗಾಳಿಯಿಂದಾಗಿ ಹಂಪಿಯನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ವದಂತಿಗಳೆಲ್ಲಾ ಸುಳ್ಳು. ಹಂಪಿಯಲ್ಲಿ ಜಿಲ್ಲಾಡಳಿತ ಕುಡಿಯುವ ನೀರು, ಪ್ರವಾಸಿಗರಿಗೆ ತಂಗುದಾಣ, ವೈದ್ಯಕೀಯ ವ್ಯವಸ್ಥೆಯನ್ನ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ನಿಜ ಹಂಪಿಯ ಸುತ್ತ ಬೆಟ್ಟ ಗುಡ್ಡಗಳೇ ಇವೆ. ಹಂಪಿಯ ಸೌಂದರ್ಯವನ್ನು ಸವಿಯಲು ಬಿಸಿಲ ಶಾಖ ಬಿಡುವುದಿಲ್ಲ. ಹೀಗಾಗಿ ಹಂಪಿಯ ಸೊಬಗನ್ನು ಸಂಜೆ ಅಥವಾ ಬೆಳಗಿನ ಜಾವ ಸವಿಯಬಹುದಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ರಣ ಬಿಸಿಲಿಗೆ ಹಂಪಿ ಭಣ ಭಣ... ಶಾಖದ ಹೊಡೆತಕ್ಕೆ ಪ್ರವಾಸಿಗರು ಬರಲು ಹಿಂದೇಟು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+