Tirupati Tirumala: ತಿರುಮಲ ನಕಲಿ ವೆಬ್‌ಸೈಟ್‌ಗಳ ಹಾವಳಿ: ಭಕ್ತರಿಗೆ ಟಿಟಿಡಿ ಎಚ್ಚರಿಕೆ! ಈ ದಿನ ಸರ್ವದರ್ಶನ ರದ್ದು
ತಿರುಮಲ ಶ್ರೀವಾರಿಯ ಭಕ್ತರಿಗೆ ಮಹತ್ವದ ಸೂಚನೆಯೊಂದನ್ನು ಟಿಟಿಡಿ ನೀಡಿದೆ. ತಿರುಮಲ ನಕಲಿ ವೆಬ್‌ಸೈಟ್‌ಗಳ ಹಾವಳಿ ಹೆಚ್ಚಾಗಿದ್ದು ಭಕ್ತರು ಮೋಸ ಹೋಗದಂತೆ ಟಿಟಿಡಿ ಎಚ್ಚರಿಕೆ ನೀಡಿದೆ.
ತಿರುಮಲ ಅನ್ನಮಯ್ಯ ಭವನದಲ್ಲಿ ಕಳೆದ ದಿನ ನಡೆದ ಡಯಲ್ ಯುವರ್ ಈವೋ ಕಾರ್ಯಕ್ರಮದಲ್ಲಿ ನಕಲಿ ವೆಬ್‌ಸೈಟ್‌ಗಳ ಬಗ್ಗೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಟಿಟಿಡಿ ಇಒ ಧರ್ಮಾ ರೆಡ್ಡಿ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಕಲಿ ವೆಬ್‌ಸೈಟ್ ಮೂಲಕ ಭಕ್ತರಿಗೆ ಮೋಸ ಮಾಡಲಾಗುತ್ತಿದೆ. ಇದರಿಂದ ಭಕ್ತರು ಜಾಗೃತರಾಗಬೇಕು. ತಿರುಪತಿ ಅಧಿಕೃತ ವೆಬ್‌ಸೈಟ್ ಮೂಲಕವೇ ಟಿಕೆಟ್ ಪಡೆಯಬೇಕು ಎಂದರು. ಜೊತೆಗೆ ಟಿಟಿಡಿ ಐಟಿ ಇಲಾಖೆಯು 52 ನಕಲಿ ವೆಬ್‌ಸೈಟ್‌ಗಳು ಮತ್ತು 13 ನಕಲಿ ಮೊಬೈಲ್ ಆ್ಯಪ್‌ಗಳನ್ನು ಪತ್ತೆ ಮಾಡಿದೆ. ಶ್ರೀವಾರಿ ಭಕ್ತರು ನಕಲಿ ವೆಬ್‌ಸೈಟ್‌ಗಳಿಂದ ಮೋಸ ಹೋಗುವುದನ್ನು ತಡೆಯುವ ಸಲುವಾಗಿ ಪೊಲೀಸರಿಗೆ ದೂರು ನೀಡಿರುವುದಾಗಿ ಟಿಟಿಡಿ ಇಒ ಧರ್ಮಾ ರೆಡ್ಡಿ ಅವರು ತಿಳಿಸಿದ್ದಾರೆ. ಹೀಗಾಗಿ ನಕಲಿ ವೆಬ್‌ಸೈಟ್‌ಗಳಿಗೆ ಮರುಳಾಗಬೇಡಿ ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ಹೇಳಿದ್ದಾರೆ.
ನೀವು ಫೆಬ್ರವರಿಯಲ್ಲಿ ತಿರುಮಲಕ್ಕೆ ಹೋಗುತ್ತೀರಾ?
ಸಾವಿರಾರು ಜನರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಬಹಳ ಕಷ್ಟಪಟ್ಟು ತಿರುಮಲ ತಲುಪುವ ಭಕ್ತರು ಭಗವಂತನನ್ನು ಕಂಡ ಕೂಡಲೇ ತಮ್ಮೆಲ್ಲ ಶ್ರಮವನ್ನು ಮರೆತು ಬಿಡುತ್ತಾರೆ. ಅಲ್ಲದೆ, ತಿರುಮಲ ತಿರುಪತಿ ದೇವಸ್ಥಾನ ಕೂಡ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದೆ. ಆದರೆ ಫೆಬ್ರವರಿ 16 ರಂದು ತಿರುಮಲದಲ್ಲಿ ರಥಸಪ್ತಮಿ ಆಚರಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿ ಭಕ್ತರಿಗೆ ಸೂಚನೆಯೊಂದನ್ನು ನೀಡಿದೆ.

ರಥಸಪ್ತಮಿ ಹಿನ್ನೆಲೆಯಲ್ಲಿ ಫೆಬ್ರವರಿ 15, 16 ಮತ್ತು 17 ರಂದು ಸರ್ವದರ್ಶನ ಟೈಮ್ ಸ್ಲಾಟ್ ಟೋಕನ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಟಿಟಿಡಿ ಇಒ ಧರ್ಮ ರೆಡ್ಡಿ ಬಹಿರಂಗಪಡಿಸಿದ್ದಾರೆ. ರಥಸಪ್ತಮಿಯಂದು ತಿರುಮಲಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅನ್ನಮಯ್ಯ ಭವನದಲ್ಲಿ ರಥಸಪ್ತಮಿ ವ್ಯವಸ್ಥೆ ಕುರಿತು ಇವೊ ಧರ್ಮ ರೆಡ್ಡಿ ಅವರು ಟಿಟಿಡಿ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರಥಸಪ್ತಮಿಯಂದು ಬೆಟ್ಟಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು. ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಅದ್ಧೂರಿಯಾಗಿ ಆಚರಣೆ ಮಾಡಬೇಕು ಎಂದು ಸೂಚಿಸಿದರು.
ಭಕ್ತರಿಗೆ ಮೂರೂವರೆ ಲಕ್ಷ ಲಡ್ಡು
ಅಲ್ಲದೆ ಭಕ್ತರಿಗೆ ಮೂರೂವರೆ ಲಕ್ಷ ಲಡ್ಡುಗಳನ್ನು ಲಭ್ಯವಾಗುವಂತೆ ಮಾಡುವಂತೆ ಧರ್ಮಾ ರೆಡ್ಡಿ ದೇವಸ್ಥಾನದ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಥಸಪ್ತಮಿಯ ಸಂದರ್ಭದಲ್ಲಿ ಶ್ರೀವಾರಿ ವಾಹನಸೇವೆಯನ್ನು ಎಲ್ಲರೂ ನೋಡುವಂತೆ ಶ್ರೀ ವೆಂಕಟೇಶ್ವರ ಭಕ್ತಿ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುವುದು. ಇನ್ನೂ ಭಕ್ತರಿಗೆ ಮಜ್ಜಿಗೆ, ಅನ್ನ, ಸಾಂಬಾರ್, ಪೊಂಗಲ್, ಪುಳಿವೊಗರೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಸಾಮಾನ್ಯವಾಗಿ ಬ್ರಹ್ಮೋತ್ಸವಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಸ್ವಾಮಿ ವಾಹನಗಳ ಮೇಲೆ ಮೆರವಣಿಗೆ ಮಾಡುತ್ತಾರೆ. ಆದರೆ ರಥಸಪ್ತಮಿ ದಿನದಂದು ಶ್ರೀಗಳು ಏಳು ವಾಹನಗಳ ಮೇಲೆ ಕಾಣಿಸಿಕೊಳ್ಳುತ್ತಾರೆ. ಆದ್ದರಿಂದಲೇ ಈ ಶುಭದಿನದಂದು ಶ್ರೀದೇವಿ ಮತ್ತು ಭೂದೇವಿ ಸಮೇತ ಮಲಯಪ್ಪಸ್ವಾಮಿಯನ್ನು ನೋಡಲು ಭಕ್ತರು ತಿರುಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.
ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿ ರಥಸಪ್ತಮಿಯಂದು ಸರ್ವದರ್ಶನಂ ಟೈಮ್ ಸ್ಲಾಟ್ ಟೋಕನ್‌ಗಳ ಜೊತೆಗೆ ಆರ್ಜಿತ ಸೇವೆಗಳು ಮತ್ತು ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ. ಅಲ್ಲದೆ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳನ್ನು ರದ್ದುಗೊಳಿಸಲಾಗಿದೆ.












Click it and Unblock the Notifications