One Day Trip: ಗಗನ ಚುಕ್ಕಿ- ಭರಚುಕ್ಕಿ ಫಾಲ್ಸ್ ಹೋಗುವ ಮಾರ್ಗದಲ್ಲಿ ಇಷ್ಟೆಲ್ಲಾ ಚಂದದ ತಾಣಗಳನ್ನು ಮರಿಬೇಡಿ
ವೀಕೆಂಡ್ ಬಂದೇ ಬಿಡ್ತು. ಬಿಡುವಿಲ್ಲದ ಕೆಲಸದಲ್ಲಿ ದಿನಗಳು ಉರುಳೋದೇ ಗೊತ್ತಾಗೋದಿಲ್ಲ. ವಾರವಿಡೀ ಕೆಲಸ ಮಾಡುವ ಪ್ರತಿಯೊಬ್ಬರಿಗೂ ವೀಕೆಂಡ್ ಅಂದ್ರೆ ಅದೇನೋ ಖುಷಿ. ಅದೇನೋ ರಿಲ್ಯಾಕ್ಸ್. ನಾವು ನಮ್ಮವರೊಂದಿಗೆ, ನಮಗೆ ಬೇಕಾದ ರೀತಿಯಲ್ಲಿ ಕಳೆಯುವ ದಿನ ಅಂದ್ರೆ ಅದು ವೀಕೆಂಡ್ ಮಾತ್ರ. ಈ ದಿನಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬರಿಗೂ ನಾವು ಕೆಲ ಸ್ಥಳಗಳ ಪರಿಚಯ ಮಾಡಿಕೊಡಲಿದ್ದೇವೆ. ಹಾಗಾದರೆ ಈ ವೀಕೆಂಡ್‌ನಲ್ಲಿ ನೀವು ನಿಮ್ಮವರೊಂದಿಗೆ ಎಲ್ಲಿಗೆ ಪ್ರವಾಸ ಹೋಗಬಹುದು? ಒಂದು ದಿನದ ಪ್ರವಾಸವನ್ನು ಎಂಜಾಯ್ ಮಾಡಲು ಯಾವ ಸ್ಥಳ ಒಳ್ಳೆಯದು? ಎನ್ನುವುದನ್ನು ನೋಡೋಣ.
ಈವರೆಗೆ ನಾವು ಬೆಂಗಳೂರಿಗೆ ಹತ್ತಿರವಿರುವ ಸ್ಥಳಗಳ ಬಗ್ಗೆ ಗಮನ ಹರಿಸಿದ್ದೇವೆ. ಸದ್ಯ ರಾಮನಗರದತ್ತ ಪ್ರಯಾಣ ಮಾಡೋಣ. ಅಂದಹಾಗೆ ರಾಮನಗರದಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಕೆಲವು ಬಹುತೇಕ ಜನರಿಗೆ ತಿಳಿದೇ ಇಲ್ಲ. ಹಾಗಾದರೆ ಈ ಸ್ಥಳಗಳ ಬಗ್ಗೆ ಕೊಂಚ ಗಮನ ಹರಿಸುತ್ತಾ, ನಿಮ್ಮ ವೀಕೆಂಡ್ ಅನ್ನ ಹೇಗೆ ಎಂಜಾಯ್ ಮಾಡಬಹುದು ಅನ್ನೋದನ್ನು ನೋಡೋಣ.

ರಾಮದೇವರ ಬೆಟ್ಟ
ರಾಮದೇವರ ಬೆಟ್ಟ ಬೆಂಗಳೂರಿನಿಂದ 48 ಕಿ.ಮೀ ದೂರದಲ್ಲಿದೆ. ಇದಕ್ಕೆ ಪ್ರಯಾಣ ಸಮಯ 1.17 ಗಂಟೆ ತೆಗೆದುಕೊಳ್ಳುತ್ತದೆ. ಪ್ರಾಕೃತಿಕ ಸೌಂದರ್ಯದ ತಾಣವಾಗಿರುವ ಈ ಗಿರಿಯು ರಣಹದ್ದುಗಳ ವಾಸಸ್ಥಾನವಾಗಿಯೂ ಪ್ರಸಿದ್ಧವಾಗಿದೆ. ಈ ಸ್ಥಳಕ್ಕೆ ವರ್ಷವಿಡಿಯೋ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ.
ಬೆಳಗಿನ ಜಾವ ಈ ಸ್ಥಳಕ್ಕೆ ಚಾರಣ ಹೋಗುವುದು ಅದ್ಬುತ ಅನುಭವವನ್ನು ನೀಡುತ್ತದೆ. ಕಿರಿದಾದ ಬೆಟ್ಟದ 300 ಮೆಟ್ಟಿಗಳನ್ನು ಹತ್ತುವ ಮೂಲಕ ಮೆಟ್ಟದ ತುದಿಗೆ ತಲುಪಲಾಗುತ್ತದೆ. ಇಲ್ಲಿ ಪಟ್ಟಾಭಿರಾಮನ ದರ್ಶನ ಪಡೆಯಬಹುದಾಗಿದೆ. ಮುಂಗಾರು ಆಗಮನದ ಈ ಸಮಯದಲ್ಲಿ ಈ ಚಾರಣ ಇನ್ನೂ ಅದ್ಬುತವಾಗಿರುತ್ತದೆ. ಬೆಟ್ಟದ ಮೇಲೆ ಮೋಡಗಳು ಹತ್ತಿರದಿಂದ ಸಾಗುತ್ತವೆ.

ಇದು ಐತಿಹಾಸಿಕ ಕುರುಹುಗಳಲ್ಲಿ ಒಂದಾಗಿದ್ದು ಈ ಸ್ಥಳದಲ್ಲಿ ಶ್ರೀರಾಮ ದಂಪತಿ ಸಮೇತ ನೆಲೆಸಿದ್ದ ಎನ್ನಲಾಗುತ್ತದೆ. ಸಿನಿಮಾಗಳ ಶೂಟಿಂಗ್ ಸ್ಪಾಟ್ ಕೂಡ ಆಗಿದೆ. ಬೆಟ್ಟವು ವಿಶೇಷ ಆಕರ್ಷಣೆಯನ್ನು ಹೊಂದಿದ್ದು, ಬಗೆ ಬಗೆಯ ಚಿಟ್ಟೆಗಳು ಇಲ್ಲಿ ಕಾಣ ಸಿಗುತ್ತವೆ. ಮಳೆಗಾಲದಲ್ಲಿ ಬೆಟ್ಟ ಹಚ್ಚ ಹರಿರಾಗಿ ಕಾಣಿಸುತ್ತದೆ. ಬೆಟ್ಟವು ರಾಮನಗರದಿಂದ ಐದು ಕಿ.ಮೀ ಹಾಗೂ ಬೆಂಗಲೂರಿನಿಂದ 55ಕಿ.ಮೀ ದೂರದಲ್ಲಿ ಇದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸಬಹುದು. ಬಸ್ ಅಥವಾ ರೈಲಿನಲ್ಲಿ ತೆರಳುವವರು ರಾಮನಗರ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಆಟೋದಲ್ಲಿ ಬೆಟ್ಟಕ್ಕೆ ಹೋಗಬಹುದು.

ಕೆಂಗಲ್ ಹನುಮಂತ ದೇವಸ್ಥಾನ
ಇನ್ನೂ ಇದೇ ಮಾರ್ಗದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಲು ನೀವೇನಾದರು ಬಯಸಿದರೆ ಕೆಲ ದೇವಸ್ಥಾನಗಳಿವೆ. ಕೆಂಗಲ್ ಹನುಮಂತ ದೇವಸ್ಥಾನ ಬೆಂಗಳೂರಿನಿಂದ 57 ಕಿ.ಮಿ ದೂರದಲ್ಲಿದೆ. ಕೆಂಗಲ್ ಹನುಮಂತ ದೇವಸ್ಥಾನ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಎಂಬ ಗ್ರಾಮದಲ್ಲಿದ್ದು ತುಂಬಾ ಪ್ರಸಿದ್ಧ ದೇವಸ್ಥಾನವಾಗಿದೆ. ಬೆಂಗಳೂರು ಮತ್ತು ಮೈಸೂರಿನ ಮಾರ್ಗದಲ್ಲಿ ಹೋಗುವ ರಸ್ತೆಯಲ್ಲಿ ಈ ಗ್ರಾಮವಿದೆ. ಈ ದೇವರ ವಿಗ್ರಹ 5.5 ಅಡಿ ಎತ್ತರವಿದ್ದು, ಈ ವಿಗ್ರಹವನ್ನು ಸ್ವಯಂಭು ಹನುಮಾನ್ ಎಂದೂ ಕರೆಯುತ್ತಾರೆ. ಇಲ್ಲಿ ನೀವು ದೇವರ ದರ್ಶನ ಪಡೆಯಬಹುದು.

ಅಂಬೆಗಾಲು ಕೃಷ್ಣ ದೇವಸ್ಥಾನ
ಅಂಬೆಗಾಲು ಕೃಷ್ಣ ದೇವಸ್ಥಾನ ಬೆಂಗಳೂರಿನಿಂದ 64 ಕಿಮೀ ದೂರದಲ್ಲಿದೆ. ಶ್ರೀ ಅಪ್ರಮೇಯ ಸ್ವಾಮಿ ದೇವಸ್ಥಾನ ಎಂದೂ ಕರೆಯಲ್ಪಡುವ ಅಂಬೆಗಾಲು ಕೃಷ್ಣ ದೇವಸ್ಥಾನ ರಾಮನಗರ ಜಿಲ್ಲೆಯ ಬೊಂಬನಗರಿ ಚನ್ನಪಟ್ಟಣ ತಾಲೂಕಿನ ಮಾಲೂರು ಗ್ರಾಮದಲ್ಲಿರುವ ಪ್ರಕ್ಷೇಣಿಯ ದೇವಾಲಯವಾಗಿದೆ. ಮಾಲೂರಿನ ಅಂಬೆಗಲ್ಲು ದೇವಸ್ಥಾನದಲ್ಲಿ ಶ್ರೀಕೃಷ್ಣನ ಜನ್ಮದಿನವಾದ ಶುಕ್ರವಾರ ಚಿನ್ನದ ಕಲರವ ಮೇಳ ನಡೆಯಲಿದೆ. ಅಂಬೆಗಾಲು ಕೃಷ್ಣ ದೇವಸ್ಥಾನ ಬೆಳಿಗ್ಗೆ 8 ರಿಂದ ರಾತ್ರಿ 08:30 ರವರೆಗೆ ತೆರೆದಿರುತ್ತದೆ.
ಮಧ್ಯರಂಗ ದೇವಸ್ಥಾನ
ಶ್ರೀರಂಗಪಟ್ಟದಲ್ಲಿ ಆದಿರಂಗ ದೇವಸ್ಥಾನವಿದೆ. ಇಲ್ಲಿ ಕಾವೇರಿ ನದಿ ಇಬ್ಬಾಗವಾಗಿ ದ್ವೀಪ ನಿರ್ಮಾಣವಾಗಿದೆ. ಇದೇ ದ್ವೀಪದಲ್ಲಿ ರಂಗನಾಥ ಸ್ವಾಮಿ ದೇವಸ್ಥಾನವೂ ಇದೆ. ಇದನ್ನು ಮಧ್ಯರಂಗ ದೇವಸ್ಥಾನ ಎಂದೂ ಕರೆಯುತ್ತಾರೆ. ಇದೇ ರೀತಿ ತಮಿಳುನಾಡಿನಲ್ಲೂ ದ್ವೀಪದ ಮಧ್ಯೆ ದೇವಸ್ಥಾನವಿದ್ದು ಅದನ್ನು ಅಂತ್ಯರಂಗ ದೇವಸ್ಥಾನ ಎಂದು ಕರೆಯುತ್ತಾರೆ. ಇದು ಇದರ ವಿಶೇಷತೆಯಾಗಿದೆ.
ಗಗನ ಚುಕ್ಕಿ- ಭರಚುಕ್ಕಿ ಜಲಪಾತ
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇದೇ ಮಾರ್ಗದಲ್ಲಿ ಗಗನ ಚುಕ್ಕಿ- ಭರಚುಕ್ಕಿ ಜಲಪಾತವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಿ ದುಮ್ಮಿಕ್ಕಿ ನೀರು ಹರಿಯುತ್ತದೆ. ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ.












Click it and Unblock the Notifications