One Day Trip: ಹುಲಿಗಳ ನಾಡು ಚಾಮರಾಜನಗರದಲ್ಲಿವೆ ಅದ್ಬುತ ಪ್ರವಾಸಿ ತಾಣಗಳು...
ಹುಲಿಗಳ ನಾಡು ಎಂದೇ ಹೆಸರು ಪಡೆದಿರುವ ಚಾಮರಾಜನಗರದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಈ ವಾರಾಂತ್ಯಕ್ಕೆ ಹತ್ತಿರದಲ್ಲೇ ಯಾವುದಾದರೂ ಸ್ಥಳ ವೀಕ್ಷಣೆಗೆ ನೀವು ಪ್ಲ್ಯಾನ್ ಮಾಡ್ತಾಯಿದ್ದರೆ ಚಾಮರಾಜನಗರದ ಪ್ರವಾಸ ನಿಮಗೆ ಖುಷಿ ನೀಡುವುದರಲ್ಲಿ ಅನುಮಾನವೇ ಇಲ್ಲ.
ಬೆಂಗಳೂರಿನಿಂದ ಚಾಮರಾಜನಗರ 173 ಕಿಲೋಮೀಟರ್ ದೂರದಲ್ಲಿದೆ. ಒಂದು ದಿನದ ಪ್ರವಾಸಕ್ಕೆ ಈ ಸ್ಥಳ ಹೇಳಿ ಮಾಡಿಸಿದ ಆಯ್ಕೆ. ಕುಟುಂಬಸ್ಥರೊಂದಿಗೆ, ಸ್ನೋಹಿತರೊಂದಿಗೆ ಈ ಸ್ಥಳ ಎಂಜಾಯ್ ಮಾಡಬಹುದು. ಅಂದಹಾಗೆ ಚಾಮರಾಜನಗರದಲ್ಲಿ ಯಾವೆಲ್ಲಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ನೋಡೋಣ.

ಮಲೆ ಮಹದೇಶ್ವರ ಬೆಟ್ಟ
ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಹಾದೇಶ್ವರನ ದೇವಸ್ಥಾನ ಅತ್ಯಂತ ಜನಪ್ರಿಯ ಶೈವ ಯಾತ್ರಾ ಕೇಂದ್ರ ಮತ್ತು ಅತ್ಯಂತ ಶಕ್ತಿಶಾಲಿ ಶಿವನ ದೇವಸ್ಥಾನವಾಗಿದೆ. ಇದು ಮೈಸೂರುನಿಂದ ಸುಮಾರು 150 ಕಿ.ಮೀ ಮತ್ತು ಬೆಂಗಳೂರಿನಿಂದ 210 ಕಿ.ಮೀ ದೂರದಲ್ಲಿದೆ.
ಇಲ್ಲಿಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ಲಕ್ಷಾಂತರ ಯಾತ್ರಿಗಳು ಆಗಮಿಸುತ್ತಾರೆ.
ದಟ್ಟ ಕಾಡಿನ ಮಧ್ಯೆ ಈ ದೇವಾಲಯವು ಯಾತ್ರಾರ್ಥಿಗಳು ಮಾತ್ರವಲ್ಲದೆ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು 3000 ಅಡಿಗಳಷ್ಟಿದೆ. ಮುಂಗಾರು ಆಗಮನವಾಗಿರುವ ಈ ಸಮಯದಲ್ಲಿ ಮಲೆ ಮಹದೇಶ್ವರ ಬೆಟ್ಟ ಹರಿಸಿನಿಂದ ಕಂಗೊಳಿಸುತ್ತದೆ. ಮಾರ್ಗದುದ್ದಕ್ಕೂ ವಿನೂತನ ಅನುಭವ ನೀಡುತ್ತದೆ.
ನಾಗಮಲೆ ಪುಣ್ಯ ಕ್ಷೇತ್ರ
ಮಲೆಮಹದೇಶ್ವರ ಬೆಟ್ಟದಿಂದ 12 ಕಿಲೋಮೀಟರ್ ದೂರದಲ್ಲಿರುವ ನಾಗಮಲೆ ಕ್ಷೇತ್ರವು ಪ್ರಮುಖ ಭಕ್ತಿಯ ತಾಣವಾಗಿ ಹೆಸರುವಾಸಿಯಾಗಿದ್ದು, ವಿಶಿಷ್ಟ ಆಧ್ಯಾತ್ಮ ಸ್ಥಳವಾಗಿದೆ. ಇಲ್ಲಿ ಮಹದೇಶ್ವರ ಸ್ವಾಮಿಯ ವಿಗ್ರಹವು ಕಲ್ಲಿನ ರೂಪದಲ್ಲಿದ್ದು, ಅದಕ್ಕೆ ನೇರಳಾಗಿರುವ ಹಾವಿನ ಹೆಡೆಯ ಕಲ್ಲಿನ ಕೆತ್ತನೆ ಆಕರ್ಷಕವಾಗಿದೆ.
ಹೊಗನಕಲ್ ಜಲಪಾತ
ಬೇಸಿಗೆ ಬಿಸಿಲು ಕಳೆದು ಮುಂಗಾರು ಮಳೆಯನ್ನು ಸ್ವಾಗತಿಸುತ್ತಿರುವ ಈ ಸಮಯದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಆನಂದ. ಅಂತಹ ಆಕರ್ಷಣೆಯ ಜಲಪಾತಗಳಲ್ಲಿ ಹೊಗನಕಲ್ ಜಲಪಾತವೂ ಒಂದು. ಇದು ಬೆಂಗಳೂರಿಗೆ 126 ಕಿಲೋಮೀಟರ್ ದೂರದಲ್ಲಿದೆ. ಹೊಗೇನಕಲ್ ಜಲಪಾತ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಬಂಡೆಗಳು, ನೀರು ಮತ್ತು ಮಂಜಿನ ಒಂದು ಸುಂದರವಾದ ಸಂಯೋಜನೆಯಾಗಿದೆ.
'ಹೊಗೆ' ಎಂದರೆ ಹೊಗೆ ಮತ್ತು 'ಕಲ್ಲು' ಎಂದರೆ ಕನ್ನಡದಲ್ಲಿ ಬಂಡೆ. ಹೊಗೆನಕ್ಕಲ್ ಎಂದರೆ ಬಂಡೆಗಳ ಮೇಲೆ ಹೊಗೆ ಎಂದರ್ಥ, ಕಾವೇರಿ ನದಿ ಕರ್ನಾಟಕದಿಂದ ತಮಿಳುನಾಡಿಗೆ ಪ್ರವೇಶಿಸುತ್ತಿದ್ದಂತೆ ಬಂಡೆಗಳ ಮೇಲೆ ಸಾಕಷ್ಟು ನೀರು ಬೀಳುವಾಗ ಅದು ಹೇಗೆ ಕಾಣುತ್ತದೆ. ಜಲಪಾತವನ್ನು ಆನಂದಿಸುವವರಿಗೆ ಈ ಸ್ಥಳ ಹೊಸತನವನ್ನು ನೀಡುತ್ತದೆ. ಮುಂಗಾರು ಆಗಮಿಸಿರುವ ಈ ಸಮಯದಲ್ಲಿ ಇದರ ಆಕರ್ಷಣೆ ಮತ್ತಷ್ಟು ಹೆಚ್ಚಾಗಿರುತ್ತದೆ.












Click it and Unblock the Notifications