One Day Trip: ಬೆಂಗಳೂರಿನಲ್ಲಿರುವ ಈ ಸ್ಥಳಗಳಿಗೆ ಭೇಟಿ ನೀಡಿ ವಾರಾಂತ್ಯವನ್ನು ಸುಂದರಗೊಳಿಸಿ
ದಿನಗಳು ಕಳೆಯೋದೇ ಗೊತ್ತಾಗೋದಿಲ್ಲ. ಮತ್ತೆ ವೀಕೆಂಡ್ ಬಂದೇ ಬಿಡ್ತು. ಈ ಬಾರಿ ಗಣೇಶ ಚತುರ್ಥಿ ಇರುವುದರಿಂದ ಸಾಲು ಸಾಲು ರಜೆಗಳಿವೆ. ಒನ್ ಡೇ ಟ್ರಿಪ್ ಎಲ್ಲಿಗಪ್ಪ ಹೋಗೋದು ಅಂತ ಯೋಚನೆ ಮಾಡ್ತಾಯಿದ್ದರೆ ನಾವು ನಿಮಗೆ ಸಹಾಯ ಮಾಡ್ತೀವಿ. ಅಂದರೆ ಬೆಂಗಳೂರಿನಲ್ಲಿ ನೋಡಲೇಬೇಕಾದ ಸ್ಥಳಗಳಿವೆ. ಅವುಗಳಿಗೆ ನೀವು ವೀಕೆಂಡ್‌ಗೆ ಭೇಟಿ ನೀಡಬಹುದು. ಹಾಗಾದರೆ ಆ ಸ್ಥಳಗಳು ಯಾವವು ಎಂದು ತಿಳಿಯೋಣ.
ರಾಗಿ ಗುಡ್ಡ
ಬೆಂಗಳೂರಿನಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ರಾಗಿಗುಡ್ಡ ಕೂಡ ಒಂದು. ಇಲ್ಲಿ ಪ್ರಸನ್ನಾಂಜನೇಯ ದೇವಸ್ಥಾನವಿದೆ. ವರ್ಷದ ಹನುಮಜಯಂತಿಯನ್ನು ಇಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ನಡೆಸಲಾಗುತ್ತದೆ. ರಾಗಿ ಗುಡ್ಡ ಬರೀ ದೇವಸ್ಥಾನ ಮಾತ್ರವಲ್ಲ ಅಲ್ಲಿ ಇನ್ನೇನಿದೆ ಅನ್ನೋದನ್ನು ತಿಳಿಯೋಣ.

ರಾಗಿಗುಡ್ಡ ಬೆಂಗಳೂರಿನ ಜಯನಗರ 9ನೇಯ ಬ್ಲಾಕಿನಲ್ಲಿರುವ ಪುಟ್ಟ ಬೆಟ್ಟದ ಮೇಲಿದೆ. ದೇವಾಲಯ ಸಂಕೀರ್ಣ ಐದು ಎಕರೆ ವಿಸ್ತಾರದಲ್ಲಿ ಹರಡಿದೆ. ರಾಗಿದಿಬ್ಬದಿಂದ ಉದ್ಭವವಾದದ್ದು ಮತ್ತು ಬೆಟ್ಟದ ಮೇಲೆ ಇದ್ದಿದ್ದರಿಂದ ಇಲ್ಲಿಗೆ ರಾಗಿ ಗುಡ್ಡ ಎನ್ನಲಾಗುತ್ತದೆ. ಇಲ್ಲಿ ಆಂಜನೇಯ, ರಾಮ, ಲಕ್ಷಣ ಸೀತೆ, ರಾಜರಾಜೇಶ್ವರಿ, ದಕ್ಷಿಣಮೂರ್ತಿ, ಗಣೇಶ ಹಾಗೂ ನವಗ್ರಹಗಳ ಗುಡಿಯೂ ಇದೆ. ಇಲ್ಲಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುವುದು ಮಾತ್ರವಲ್ಲದೆ ನೀವು ನಿಮ್ಮವರೊಂದಿಗೆ ಕಳೆಯಲು ಒಂದೆಳ್ಳೆ ಸ್ಥಳ.
ಟಿಪ್ಪು ಕೋಟೆ
ಟಿಪ್ಪುವಿನ ಕೋಟೆ ಕೃಷ್ಣ ರಾಜೇಂದ್ರ ರಸ್ತೆ ಮತ್ತು ಅಲ್ಬರ್ಟ್ ವಿಕ್ಟೋರಿಯಾ ರಸ್ತೆ ಛೇದಕದಲ್ಲಿ ಜನನಿಬಿಡ ಕೃಷ್ಣ ರಾಜೇಂದ್ರ ನಗರ ಮಾರುಕಟ್ಟೆಯ ಸಮೀಪದಲ್ಲಿದೆ. ಟಿಪ್ಪು ಸುಲ್ತಾನನ ಅರಮನೆಯು ಸಂತೋಷದ ನಿವಾಸ ಎಂದೂ ಕರೆಯಲ್ಪಡುವ ಕೋಟೆಯ ಆವರಣವನ್ನು ಸುತ್ತುವರೆದಿದೆ.

ಕೋಟೆಯ ಮೂಲವು ಬೆಂಗಳೂರಿನ ಸಂಸ್ಥಾಪಕ ಕೇಂಪೇಗೌಡರಿಂದ 1537ರ ಹಿಂದಿನದು. ಈ ಕೋಟೆ ಬ್ರಿಟಿಷರ ಆಳ್ವಿಕೆಯ ವಿರುದ್ಧ ಬಲಿಷ್ಠ ರಾಜನ ಹೋರಾಟದ ಮುಂದ್ರೆಯನ್ನು ಸಹ ಹೊಂದಿದೆ. ಈ ಐತಿಹಾಸಿಕ ಸ್ಥಳಕ್ಕೆ ನೀವು ಭೇಟಿ ನೀಡುವ ಮೂಲಕ ಒಂದೊಳ್ಳೆ ಅನುಭವವನ್ನು ಪಡೆಯಬಹುದು.
ವಿಶ್ವಶಾಂತಿ ಆಶ್ರಮ
ಬೆಂಗಳೂರು ಗ್ರಾಮಾಂತರ ಜೆಲ್ಲೆಯ ನೆಲಮಂಗಲ ತಾಲ್ಲೂಕು ಅರಿಶಿನ ಕುಂಟೆ ಗ್ರಾಮದಲ್ಲಿರುವ ವಿಜಯ ವಿಠಲ ಮಂದಿರವು ಇತ್ತೀಚಿನ ದಿನಗಳಲ್ಲಿ ವಿಶ್ವ ಶಾಂತಿ ಆಶ್ರಮ ಎಂದೇ ಪ್ರಸಿದ್ಧಿಯಾಗಿದೆ. ನೆಲಮಂಗಲ ತಾಲ್ಲೂಕು ಸ್ಥಳದಿಂದ 5 ಕಿ.ಮೀ(ಬೆಂಗಳೂರು ಕಡೆಗೆ) ದೂರದಲ್ಲಿದೆ.

1982ರಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸಲು ತುಮಕೂರು ಹೆದ್ದಾರಿಯಲ್ಲಿ ಅರಿಶಿನಕುಂಟೆ ಗ್ರಾಮದಲ್ಲಿ ವಿಶ್ವ ಶಾಂತಿ ಆಶ್ರಮವನ್ನು ಸ್ಥಾಪಿಸಿದರು. ಈ ಆಶ್ರಮವು ವಿಶಾಲವಾದ ಎಂಟು ಎಕರೆ ಭೂಪ್ರದೇಶದಲ್ಲಿ ಸುಂದರವಾದ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಬೃಹತ್ ವಿಷ್ಣುವಿನ ಮೂರ್ತಿ ಇದೆ.
ಪ್ರತಿ ವರ್ಷ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಇದು ಎಲ್ಲಾ ರೀತಿಯ ಪ್ರವಾಸಿಗರನ್ನು ಸೆಳೆಯುತ್ತದೆ. ಮಕ್ಕಳ ಮನೋರಂಜನೆಗಾಗಿ ಮಕ್ಕಳ ಆಟವಾಡುವ ಪ್ರದೇಶವನ್ನು ಇಲ್ಲಿ ನಿರ್ಮಿಸಲಾಗಿದೆ. ವಾರಾಂತ್ಯದಲ್ಲಿ ಭೇಟಿ ನೀಡಲು ಇದೊಂದು ಅದ್ಯುತ ಸ್ಥಳವಾಗಿದೆ.
ಶ್ರೀ ಮಾರುತಿ ಸಾಯಿಧಾಮ ದೇವಸ್ಥಾನ
36 ಅಡಿ ಎತ್ತರ ಮತ್ತು 100 ಟನ್ ತೂಕದ ಏಕೈಕ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾದ ಹನುಮಾನ್ ಪ್ರಧಾನ ವಿಗ್ರಹವು ಮಾರುತಿ ಸಾಯಿ ಧಾಮ್ ದೇವಸ್ತಾನದಲ್ಲಿದೆ. ಇದು ತುಮಕೂರು ರಸ್ತೆಯ ಅಡಕಮಾರನಹಳ್ಳಿ ಬಸ್ ಸ್ಟಾಪ್ ಕಾರ್ನರ್, ಹಿಮಾಲಯ ಡ್ರಗ್ ಕಂಪನಿಯ ಹತ್ತಿರ ಇದೆ.

ಇಲ್ಲಿನ ಹನುಮನ ಮೂರ್ತಿ ನೋಡುವುದೇ ಒಂದು ಆನಂದ. ದೇವಸ್ಥಾನದ ಒಳಗೆ ಪ್ರವೇಶಿಸುತ್ತಿದ್ದಂತೆ ಹೊಸತನವನ್ನು ಈ ದೇವಸ್ಥಾನ ತಂದು ಕೊಡುತ್ತದೆ. ಈ ವಾರಾಂತ್ಯಕ್ಕೆ ನೀವು ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸಂತೋಷದಿಂದ ಗಣೇಶ ಚತುರ್ಥಿ ಆಚರಿಸಿ.












Click it and Unblock the Notifications