Get Updates
Get notified of breaking news, exclusive insights, and must-see stories!

NWKRTC- Gokak Falls: ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರದಿಂದ ಗೋಕಾಕ್ ಫಾಲ್ಸ್‌ಗೆ ವಿಶೇಷ ಬಸ್‌; ದರಪಟ್ಟಿ, ಮಾಹಿತಿ ತಿಳಿಯಿರಿ

ಬೆಳಗಾವಿ, ಜುಲೈ. 11: ಮಳೆಗಾಲದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಧುಮ್ಮಿಕ್ಕಿ ಹರಿಯುತ್ತಿರುವ ಈ ಗೋಕಾಕ್ ಫಾಲ್ಸ್‌ ಕಣ್ಮುಂಬಿಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ ನದಿಯ ಮೇಲಿರುವ ಈ ಫಾಲ್ಸ್‌ಗೆ ಹೋಗಲು ಸಾರಿಗೆಗೆ ಬೇಡಿಕೆ ಹೆಚ್ಚಾಗಿದೆ.

ಈ ಜಲಪಾತವು ಗೋಕಾಕ್ ಪಟ್ಟಣದಿಂದ ಆರೂವರೆ ಕಿಲೋಮೀಟರ್ ದೂರದಲ್ಲಿದೆ. ಸದ್ಯ ಮುಂಗಾರಿನಲ್ಲಿ ಮಳೆ ಹೆಚ್ಚಾಗಿದ್ದು, ಫಾಲ್ಸ್‌ನ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೇ ವೇಳೆ ಸ್ಥಳೀಯರು ಸೇರಿದಂತೆ ಹಲವು ಭಾಗಗಳಿಂದ ಪ್ರವಾಸಿಗರು ಫಾಲ್ಸ್‌ಗೆ ತೆರಳುತ್ತಿದ್ದು, ಕರ್ನಾಟಕ ಸಾರಿಗೆ ಇಲಾಖೆ ಕೂಡ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.

NWKRTC special transport facility from Chikkodi Nippani and Sankeshwar to Gokak Falls

ಪ್ರವಾಸಿಗರು ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದನ್ನು ಗಮನಿಸಿ ಪ್ರತಿ 2ನೇ ಮತ್ತು 4ನೇ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಚಿಕ್ಕೋಡಿ, ನಿಪ್ಪಾಣಿ ಹಾಗೂ ಸಂಕೇಶ್ವರ ಬಸ್ ನಿಲ್ದಾಣದಿಂದ ಗೋಕಾಕ್ ಫಾಲ್ಸ್ ಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಸಾರಿಗೆ ಸೌಲಭ್ಯ ನೀಡುವ ಘೋಷಣೆ ಮಾಡಿದೆ.

ಜುಲೈ 13 ರಿಂದ ಆಗಸ್ಟ್ 25ರ ವರೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಚಿಕ್ಕೋಡಿ, ನಿಪ್ಪಾಣಿ ಹಾಗೂ ಸಂಕೇಶ್ವರ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

NWKRTC special transport facility from Chikkodi Nippani and Sankeshwar to Gokak Falls

ಸಂಕೇಶ್ವರದಿಂದ ಗೋಕಾಕ ಫಾಲ್ಸ್‌ಗೆ ವಿಶೇಷ ಸಾರಿಗೆ ವ್ಯವಸ್ಥೆ

ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 09:30 ಹೊರಡುವ ಬಸ್ ಬೆಳಗ್ಗೆ 10:30ಕ್ಕೆ ಹಿಡಕಲ್ ಡ್ಯಾಮ್ ತಲುಪುತ್ತದೆ. ಹಿಡಕಲ್ ಡ್ಯಾಮ್‌ನಿಂದ 11:30ಕ್ಕೆ ಹೊರಡುವ ಬಸ್ ಗೊಡಚಿನಮಲ್ಕಿಗೆ 12:00ಕ್ಕೆ ಬರಲಿದೆ. ಗೊಡಚಿನಮಲ್ಕಿಯನ್ನು 13:30ಕ್ಕೆ ಬಿಡುವ ಬಸ್ 14:00ಕ್ಕೆ ಗೋಕಾಕ ಫಾಲ್ಸ್ ಬರಲಿದೆ.

16:30ಕ್ಕೆ ಗೋಕಾಕ ಫಾಲ್ಸ್ ನೋಡಿದ ಬಳಿಕ ಸಂಜೆ 18:00 ಗಂಟೆಗೆ ಸಂಕೇಶ್ವರ ಬಸ್ ನಿಲ್ದಾಣಕ್ಕೆ ವಾಪಸ್ ಬರಲಿದೆ. ಹೋಗಿ ಬರುವ ಸೇರಿ ಖರ್ಚು ಸೇರಿ ಒಟ್ಟು 160 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ 77609 91877 ಮತ್ತು 77609 91555 ಸಂಖ್ಯೆಯನ್ನು ಸಂಪರ್ಕಿಸಬಹುದು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರು www.ksrtc.in ವೆಬ್‌ಸೈಟ್ ಸಂಪರ್ಕಿಸಬಹುದು.

ನಿಪ್ಪಾಣಿಯಿಂದ ಗೋಕಾಕ ಫಾಲ್ಸ್‌ಗೆ ವಿಶೇಷ ಸಾರಿಗೆ ವ್ಯವಸ್ಥೆ

ಪ್ರತಿ 2ನೇ ಮತ್ತು 4ನೇ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ, 13 ನೇ ಜುಲೈ-2024 ರಿಂದ 25 ಆಗಷ್ಟ-2024 ರವರೆಗೆ ವಿಷೇಷ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತದೆ.

ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 08:30 ಹೊರಡುವ ಬಸ್ ಬೆಳಗ್ಗೆ 10:00ಕ್ಕೆ ಹಿಡಕಲ್ ಡ್ಯಾಮ್ ತಲುಪುತ್ತದೆ. ಹಿಡಕಲ್ ಡ್ಯಾಮ್‌ನಿಂದ 11:00ಕ್ಕೆ ಹೊರಡುವ ಬಸ್ ಗೊಡಚಿನಮಲ್ಕಿಗೆ 11:30ಕ್ಕೆ ಬರಲಿದೆ. ಗೊಡಚಿನಮಲ್ಕಿಯನ್ನು 13:00ಕ್ಕೆ ಬಿಡುವ ಬಸ್ 13:30ಕ್ಕೆ ಗೋಕಾಕ ಫಾಲ್ಸ್ ಬರಲಿದೆ. ಗೋಕಾಕ ಫಾಲ್ಸ್ ನೋಡಿದ ಬಳಿಕ ಸಂಜೆ 16:00 ಗಂಟೆಗೆ ಹೊರಟು ನಿಪ್ಪಾಣಿ ಬಸ್ ನಿಲ್ದಾಣಕ್ಕೆ 18:00ಕ್ಕೆ ವಾಪಸ್ ಬರಲಿದೆ.

ಹೋಗಿ ಬರುವ ಸೇರಿ ಖರ್ಚು ಸೇರಿ ಒಟ್ಟು 220 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ 77609 91879 ಸಂಖ್ಯೆಯನ್ನು ಸಂಪರ್ಕಿಸಬಹುದು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರು www.ksrtc.in ವೆಬ್‌ಸೈಟ್ ಸಂಪರ್ಕಿಸಬಹುದು.

ಚಿಕ್ಕೋಡಿಯಿಂದ ಗೋಕಾಕ ಫಾಲ್ಸ್‌ಗೆ ವಿಶೇಷ ಸಾರಿಗೆ ವ್ಯವಸ್ಥೆ

ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 09:00 ಹೊರಡುವ ಬಸ್ ಬೆಳಗ್ಗೆ 10:30ಕ್ಕೆ ಹಿಡಕಲ್ ಡ್ಯಾಮ್ ತಲುಪುತ್ತದೆ. ಹಿಡಕಲ್ ಡ್ಯಾಮ್‌ನಿಂದ 11:30ಕ್ಕೆ ಹೊರಡುವ ಬಸ್ ಗೊಡಚಿನಮಲ್ಕಿಗೆ 12:00ಕ್ಕೆ ಬರಲಿದೆ. ಗೊಡಚಿನಮಲ್ಕಿಯನ್ನು 13:30ಕ್ಕೆ ಬಿಡುವ ಬಸ್ 14:00ಕ್ಕೆ ಗೋಕಾಕ ಫಾಲ್ಸ್ ಬರಲಿದೆ. 16:30ಕ್ಕೆ ಗೋಕಾಕ ಫಾಲ್ಸ್ ನೋಡಿದ ಬಳಿಕ ಸಂಜೆ 18:00 ಗಂಟೆಗೆ ಚಿಕ್ಕೋಡಿ ಬಸ್ ನಿಲ್ದಾಣಕ್ಕೆ ವಾಪಸ್ ಆಗಲಿದೆ.

ಹೋಗಿ ಬರುವ ಸೇರಿ ಖರ್ಚು ಸೇರಿ ಒಟ್ಟು 220 ರೂಪಾಯಿ ದರವಿದೆ. ಹೆಚ್ಚಿನ ವಿವರಗಳಿಗೆ 77609 91875 ಸಂಖ್ಯೆಯನ್ನು ಸಂಪರ್ಕಿಸಬಹುದು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರು www.ksrtc.in ವೆಬ್‌ಸೈಟ್ ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+