ಕುಮಟಾ-ಶಿವಮೊಗ್ಗ-ಬೆಂಗಳೂರು-ತಿರುಪತಿ ವೇಗದೂತ ಬಸ್: ವೇಳಾಪಟ್ಟಿ, ದರ
ಬೆಂಗಳೂರು, ಮೇ 23: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿರುಪತಿಗೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಬಸ್ ಸೇವೆಯನ್ನು ಆರಂಭಿಸಿದೆ. ಕುಮಟಾದಿಂದ ಹೊರಡುವ ಬಸ್ ಶಿವಮೊಗ್ಗ, ಬೆಂಗಳೂರು ಮೂಲಕ ತಿರುಪತಿಗೆ ಸಂಚಾರ ನಡೆಸಲಿದೆ.
ಕುಮಟಾ- ತಿರುಪತಿ ಮಾರ್ಗದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವೇಗದೂತ ಬಸ್‌ಗಳನ್ನು ಓಡಿಸಲಿದೆ. ಬಸ್ ವೇಳಾಪಟ್ಟಿ, ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಿರುಪತಿಗೆ ಸಾಗುವ ಭಕ್ತರು ಬಸ್ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

ಬಸ್ ವೇಳಾಪಟ್ಟಿ, ದರ: ಕುಮಟಾ-ತಿರುಪತಿ ನಡುವಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್‌ಗೆ 855 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ಕಿಂಗ್‌ಗಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ವೇಗದೂತ ಬಸ್ ಕುಮಟಾದಿಂದ 16:00ಕ್ಕೆ ಹೊರಟು, ತಿರುಪತಿಯನ್ನು 09:30ಕ್ಕೆ ತಲುಪಲಿದೆ. ಹಾಗೆಯೇ ತಿರುಪತಿಯಿಂದ 16:00 ಗಂಟೆಗೆ ಹೊರಟು, ಕುಮಟಾವನ್ನು 10.30ಕ್ಕೆ ತಲುಪಲಿದೆ ಎಂದು ವೇಳಾಪಟ್ಟಿ ಹೇಳಿದೆ.
ಕುಮಟಾ-ತಿರುಪತಿ ನಡುವಿನ ವೇಗದೂತ ಬಸ್ ಶಿರಸಿ, ಸಿದ್ಧಾಪುರ, ಶಿವಮೊಗ್ಗ, ಬೆಂಗಳೂರು ಮೂಲಕ ಸಂಚಾರ ನಡೆಸುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 7760991730 ಸಂಖ್ಯೆಗೆ ಕರೆ ಮಾಡಬಹುದು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಲವು ಮಾರ್ಗಗಳಲ್ಲಿ ವೇಗದೂತ ಬಸ್‌ಗಳನ್ನು ಓಡಿಸುತ್ತಿದೆ. ಬೆಳಗಾವಿ-ಬಬಲಾದಿ ನಡುವೆಯೂ ವೇಗದೂತ ಬಸ್ ಓಡಿಸುತ್ತಿದೆ.
ಈ ಬಸ್ ಬೆಳಗಾವಿಯನ್ನು ಬಿಡುವ ವೇಳೆ 16:00, ಬಬಲಾದಿ ತಲುಪುವ ವೇಳೆ 20:00. ಬಬಲಾದಿ ಬಿಡುವ ವೇಳೆ 06:00, ಬೆಳಗಾವಿ ತಲುಪುವ ವೇಳೆ 10:00. ಈ ಬಸ್ ಯರಗಟ್ಟಿ, ಯಾದವಾಡ, ಮುಧೋಳ್, ಗಲಗಲಿ ಮೂಲಕ ಸಂಚಾರ ನಡೆಸುತ್ತದೆ.
ಪಲ್ಲಕ್ಕಿ ಬಸ್‌ಗಳು: ಈಗ ಕರ್ನಾಟಕದಲ್ಲಿ ಪಲ್ಲಕ್ಕಿ ನಾನ್ ಎಸಿ ಬಸ್‌ಗಳು ಜನಪ್ರಿಯವಾಗುತ್ತಿವೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ-ಶಿರಡಿ, ಬೆಳಗಾವಿ-ಲಾತೂರ, ರಾಮದುರ್ಗ-ಬೆಂಗಳೂರು, ಮುರುಡೇಶ್ವರ- ಬೆಂಗಳೂರು ಮತ್ತು ಬೀಳಗಿ-ಬೆಂಗಳೂರು ಮಾರ್ಗದಲ್ಲಿ ಈ ಬಸ್‌ಗಳನ್ನು ಓಡಿಸುತ್ತಿದೆ.
ಹುಬ್ಬಳ್ಳಿ-ಶಿರಡಿ ಮಾರ್ಗದ ಬಸ್ ಹುಬ್ಬಳ್ಳಿಯಿಂದ ಹೊರಟು 20:08, ಶಿರಡಿಯನ್ನು 08;45ಕ್ಕೆ ತಲುಪುತ್ತದೆ. ಶಿರಡಿಯಿಂದ 20:00ಕ್ಕೆ ಹೊರಟು, ಹುಬ್ಬಳ್ಳಿಯನ್ನು 08:45ಕ್ಕೆ ತಲುಪಲಿದೆ. ಬಸ್ ಧಾರವಾಡ, ಬೆಳಗಾವಿ, ಪುಣೆ, ಅಹಮದ್ ನಗರ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಪ್ರಯಾಣ ದರ 1,300 ರೂ.ಗಳು.
ಬೆಳಗಾವಿ-ಲಾತೂರ ಬಸ್ ಪ್ರಯಾಣ ದರ 924 ರೂ.ಗಳು. ಈ ಬಸ್ ಲೋಕಾಪುರ, ಜಮಖಂಡಿ, ವಿಜಯಪುರ, ಸೊಲ್ಲಾಪುರ, ತುಳುಜಾಪುರ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಬಸ್ ಬೆಳಗಾವಿಯಿಂದ 20:00ಕ್ಕೆ ಹೊರಟು, ಲಾತೂರ 06:20ಕ್ಕೆ ತಲುಪಲಿದೆ. ಲಾತೂರದಿಂದ 19:30ಕ್ಕೆ ಹೊರಟು, ಬೆಳಗಾವಿಗೆ 50.30ಕ್ಕೆ ತಲುಪುತ್ತದೆ.
ಮುರುಡೇಶ್ವರ-ಬೆಂಗಳೂರು ನಡುವಿನ 'ಪಲ್ಲಕ್ಕಿ' ಬಸ್ ಭಟ್ಕಳ, ಬೈಂದೂರು, ಕೊಲ್ಲೂರು, ನಗರ, ಹೊಸನಗರ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಪ್ರಯಾಣ ದರ 1018 ರೂ.ಗಳು. ಬಸ್ ಮುರುಡೇಶ್ವರದಿಂದ 19:15ಕ್ಕೆ ಹೊರಟು ಬೆಂಗಳೂರು ನಗರವನ್ನು 06:30ಕ್ಕೆ ತಲುಪುತ್ತದೆ. ಬೆಂಗಳೂರು ನಗರದಿಂದ 19:15ಕ್ಕೆ ಹೊರಟು ಮುರುಡೇಶ್ವರವನ್ನು 07:00ಕ್ಕೆ ತಲುಪಲಿದೆ.
ರಾಮದುರ್ಗ-ಬೆಂಗಳೂರು ಬಸ್ ಪ್ರಯಾಣ ದರ 1070 ರೂ.ಗಳು. ನರಗುಂದ, ನವಲಗುಂದ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು ಮಾರ್ಗವಾಗಿ ಈ ಪಲ್ಲಕ್ಕಿ ಬಸ್ ಸಂಚಾರ ನಡೆಸುತ್ತದೆ. ರಾಮದುರ್ಗದಿಂದ ಬಸ್ 20:03ಕ್ಕೆ ಹೊರಟು, ಬೆಂಗಳೂರು ನಗರವನ್ನು 07:10ಕ್ಕೆ ತಲುಪುತ್ತದೆ. ಬೆಂಗಳೂರು ನಗರದಿಂದ 21:15ಕ್ಕೆ ಹೊರಟು, ರಾಮದುರ್ಗವನ್ನು 07:30ಕ್ಕೆ ತಲುಪಲಿದೆ.












Click it and Unblock the Notifications