ಕರ್ನಾಟಕಕ್ಕೆ ಬೇಕು ಹೊಸ ರೈಲು, ವೇಳಾಪಟ್ಟಿ ಬದಲು; ಇಲ್ಲಿದೆ ಪಟ್ಟಿ

ಕರ್ನಾಟಕದಲ್ಲಿ ಕೆಲವು ಹೊಸ ರೈಲುಗಳ ಅಗತ್ಯವಿದೆ. ಕೆಲವು ರೈಲುಗಳ ವೇಳಾಪಟ್ಟಿ ಬದಲಾವಣೆ ಆಗಬೇಕಿದೆ. ಅವುಗಳ ಪಟ್ಟಿ ಇಲ್ಲಿದೆ.

ಬೆಂಗಳೂರು, ಮಾರ್ಚ್ 06; ಕರ್ನಾಟಕದಲ್ಲಿ ರೈಲುಗಳ ಸಂಚಾರದಲ್ಲಿ ಹಲವು ಸುಧಾರಣೆಗಳು ಆಗಬೇಕು. ಹಲವು ಮಾರ್ಗಗಳಲ್ಲಿ ಹೊಸ ರೈಲುಗಳು ಸಂಚಾರ ನಡೆಸಬೇಕು ಎಂದು ಬೇಡಿಕೆ ಇಡಲಾಗಿದೆ. ರಾಜ್ಯದ ರೈಲುಗಳ ಸಂಚಾರ ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳನ್ನು ಪಟ್ಟಿ ಮಾಡಿ ಟ್ವೀಟ್ ಮಾಡಲಾಗಿದೆ.

Karnataka Rail Users ಎಂಬ ಟ್ವೀಟ್‌ ಖಾತೆಯಿಂದ ಮಾನ್ಯರೇ, ರಾಜ್ಯದ ಕೆಲ ಹೊಸ ರೈಲು ಬೇಡಿಕೆಗಳ ಪಟ್ಟಿ ನಿಮ್ಮ ಅವಗಾಹನೆಗೆ ಎಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಹಲವು ಜಿಲ್ಲೆಗಳ ರೈಲುಗಳು ಸೇರಿವೆ. ನೈಋತ್ಯ ರೈಲ್ವೆ ಸೇರಿದಂತೆ ವಿವಿಧ ವಲಯಗಳು ಈ ಬೇಡಿಕೆಗೆ ಮನ್ನಣೆಯನ್ನು ನೀಡಲಿವೆಯೇ? ಎಂದು ಕಾದು ನೋಡಬೇಕಿದೆ.

New Train And Schedule Change Demand By Karnataka Rail Users

Karnataka Rail Users ಎಂಬುದು ರೈಲ್ವೆ ಇಲಾಖೆಯ ಖಾತೆಯಲ್ಲ. ರಾಜ್ಯದ ರೈಲು ಬಳಕೆದಾರರಿಗೆ ಮಾಹಿತಿ ನೀಡುವ ಖಾತೆಯಾಗಿದೆ. ಈ ಖಾತೆಯಲ್ಲಿ ರಾಜ್ಯದ ರೈಲು ಸಂಚಾರದ ವೇಳಾಪಟ್ಟಿ, ಹೊಸ ರೈಲುಗಳ ಘೋಷಣೆ ಸೇರಿದಂತೆ ರೈಲ್ವೆ ಇಲಾಖೆಯ ವಿವಿಧ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಈಗ ಪಟ್ಟಿ ಮಾಡಿರುವ ಹೊಸ ರೈಲುಗಳ ಮಾಹಿತಿ ಇಲ್ಲಿದೆ.

ಬೆಂಗಳೂರು-ಬೀದರ್ ವಯಾ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ನಡುವೆ ನೂತನ ರೈಲು ಓಡಿಸುವುದು. ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ಮತ್ತು ವಿಜಯಪುರ-ಮಂಗಳೂರು ರೈಲನ್ನು ಸಮಯ ಪರಿಷ್ಕರಣೆಯೊಂದಿಗೆ ವಿಶೇಷ ರೈಲುಗಳ ಬದಲಾಗಿ ಶಾಶ್ವತ ರೈಲುಗಳಾಗಿ ಪರಿವರ್ತಿಸಬೇಕು ಎಂದು ಟ್ವೀಟ್‌ ಮೂಲಕ ಬೇಡಿಕೆ ಇಡಲಾಗಿದೆ.

New Train And Schedule Change Demand By Karnataka Rail Users

ಬೆಳಗಾವಿ/ ಹುಬ್ಬಳ್ಳಿ-ಪುಣೆ ಇಂಟರ್ ಸಿಟಿ ರೈಲುನ್ನು ಪ್ರಾರಂಭಿಸುವುದು ಬೆಳಗಾವಿ/ ಮಿರಾಜ್-ಮೈಸೂರು ವಯಾ ಹಾಸನ ಹೊಸ ರೈಲು ಪ್ರಾರಂಭಿಸುವುದು. ವಾರಕ್ಕೆ ಒಂದು ದಿನ ಸಂಚರಿಸುತ್ತಿರುವ ಯಶವಂತಪುರ-ಮುರುಡೇಶ್ವರ ರೈಲನ್ನು ಕಾರವಾರದವರೆಗೂ ವಿಸ್ತರಿಸುವುದು ಜೊತೆಗೆ ಸಮಯ ಪರಿಷ್ಕರಣೆಯೊಂದಿಗೆ ಪ್ರತಿ ದಿನ ಸಂಚರಿಸುವಂತೆ ಮಾಡುವುದು ಎಂದು ಬೇಡಿಕೆ ಮುಂದಿಡಲಾಗಿದೆ.

ಬೆಂಗಳೂರು-ಮಂಗಳೂರು ವಯಾ ಮೈಸೂರು ರೈಲನ್ನು ವಾರದ 6 ದಿನದ ಬದಲಾಗಿ ವಾರದ ಎಲ್ಲಾ ದಿನ ಸಮಯ ಪರಿಷ್ಕರಣೆಯೊಂದಿಗೆ ಸಂಚರಿಸುವಂತೆ ಮಾಡುವುದು. ಮುಂಬೈ-ಗದಗ ಎಕ್ಸ್‌ಪ್ರೆಸ್ ರೈಲನ್ನು ಬಳ್ಳಾರಿ ಅಥವಾ ಹೊಸಪೇಟೆವರೆಗೆ ವಿಸ್ತರಿಸುವುದು. ಮೈಸೂರು/ ಬೆಂಗಳೂರಿನಿಂದ ಮುಂಬೈಗೆ ಹೊಸ ಸೂಪರ್ ಫಾಸ್ಟ್ ರೈಲನ್ನು ಓಡಿಸುವುದು ಎಂದು ಬೇಡಿಕೆ ಇಡಲಾಗಿದೆ.

ಈಗಿರುವ ಚಿಕ್ಕಮಗಳೂರು-ಬೆಂಗಳೂರು ರೈಲಿನ ವೇಗ ವೃದ್ಧಿಸುವುದು ಹುಬ್ಬಳ್ಳಿ/ ಬೆಳಗಾವಿ-ಚೆನ್ನೈ ಪ್ರತಿ ದಿನ ಸಂಚರಿಸುವ ಹೊಸ ರೈಲು ಓಡಿಸುವುದು. ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ರೈಲುಗಳನ್ನು ಸಂಪರ್ಕಿಸುವ ಸಲುವಾಗಿ ಚಿಕ್ಕಮಗಳೂರು-ಕಡೂರು/ ಬಿರುರು ನಡುವೆ ಡೆಮು ರೈಲುಗಳನ್ನು ಓಡಿಸುವುದು. ಶಿವಮೊಗ್ಗ-ತಿರುಪತಿ-ಚೆನ್ನೈ ರೈಲು ಸೇವೆಯನ್ನು ವಾರದಲ್ಲಿ ಹೆಚ್ಚು ದಿನ ಓಡಿಸುವುದು. ವಿಜಯಪುರ-ತಿರುಪತಿ/ ಚೆನ್ನೈ ವಯಾ ಗದಗ, ಬಳ್ಳಾರಿ ಹೊಸ ರೈಲನ್ನು ಓಡಿಸುವುದು ಎಂದು ಪಟ್ಟಿ ಮಾಡಲಾಗಿದೆ.

ಬೆಂಗಳೂರು-ದೇವನಹಳ್ಳಿ ಮೆಮು ರೈಲುಗಳನ್ನು ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸುವುದು. ಬೀದರ್/ ಕಲಬುರಗಿ-ಹುಬ್ಬಳ್ಳಿ ವಯಾ ರಾಯಚೂರು, ಬಳ್ಳಾರಿ ಹೊಸ ಇಂಟರ್ ಸಿಟಿ ರೈಲು ಓಡಿಸುವುದು. ಮಂಗಳೂರು-ಮುಂಬೈ ನಡುವೆ ಹೆಚ್ಚುವರಿ ರೈಲನ್ನು ಪ್ರಾರಂಭಿಸುವುದು ಮಿರಾಜ್/ ಬೆಳಗಾವಿ-ವಾಸ್ಕೋ ಇಂಟರ್ ಸಿಟಿ ರೈಲನ್ನು ಪ್ರಾರಂಭಿಸುವುದು. ವಾರದಲ್ಲಿ ಮೂರು ದಿನ ಸಂಚರಿಸುವ ಹೊಸ ಬೆಂಗಳೂರು-ಮಂಗಳೂರು ಇಂಟರ್ ಸಿಟಿ ವಯಾ ತುಮಕೂರು, ಅರಸೀಕೆರೆ, ಹಾಸನ ಸಾಗುವುದು.

ಹೊಸ ಬೀದರ್-ಮಂಗಳೂರು ವಯಾ ಬಳ್ಳಾರಿ, ಚಿತ್ರದುರ್ಗ, ಹಾಸನ ಅಥವಾ ವಯಾ ಬಳ್ಳಾರಿ, ಹುಬ್ಬಳ್ಳಿ, ಕಾರವಾರ ರೈಲು ಗುಂತಕಲ್-ಚಿಕ್ಕಜಜೂರು ರೈಲನ್ನು ಚಿಕ್ಕಮಗಳೂರಿಗೆ ವಿಸ್ತರಿಸುವುದು. ಮಂಗಳೂರು-ಪುಣೆ ವಯ ಕಾರವಾರ, ಬೆಳಗಾವಿ ಹೊಸ ರೈಲು ಕಾರವಾರ-ತಿರುಪತಿ ವಯಾ ಮಂಗಳೂರು, ಹಾಸನ ಹೊಸ ರೈಲು ಓಡಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+