Navratri 2023: ದಸರಾ ಸಂದರ್ಭದಲ್ಲಿ ಭೇಟಿ ನೀಡಲೇಬೇಕಾದ ಬೆಂಗಳೂರಿನ ಪ್ರಮುಖ ದೇವಿ ದೇವಸ್ಥಾನಗಳ ಪಟ್ಟಿ ಇಲ್ಲಿದೆ...
ಬೆಂಗಳೂರಿನಲ್ಲಿ ಹಲವಾರು ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ಶಕ್ತಿಯುತ ಹಾಗೂ ಜನಜನಿತವಾಗಿವೆ. ನಿತ್ಯ ಜನ ತಮಗೆ ಹತ್ತಿರದಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ನವರಾತ್ರಿ ಸಂದರ್ಭದಲ್ಲಿ ಶಕ್ತಿ ದೇವತೆ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಲು ಹಲವಾರು ಜನ ಯೋಚಿಸುತ್ತಾರೆ. ಆದರೆ ಆ ದೇವಸ್ಥಾನಗಳು ಇರುವ ಸ್ಥಳಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಭೇಟಿ ನೀಡಲು ಸಾಧ್ಯವಾಗದೇ ಇರಬಹುದು. ಹಾಗಾದರೆ ಬೆಂಗಳೂರಿನಲ್ಲಿರುವ ಪ್ರಮುಖ ದೇವಿ ದೇವಸ್ಥಾನಗಳು ಯಾವವು ಎಂದು ತಿಳಿಯೋಣ.
ನವರಾತ್ರಿ ಭಾನುವಾರ ಅಕ್ಟೋಬರ್ 15ರಿಂದ ಆರಂಭವಾಗುತ್ತದೆ. ಅಕ್ಟೋಬರ್ 23ರವರೆಗೆ ಅಂದರೆ ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ರೂಪಗಳನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿ ದುಷ್ಟ ಮಹಿಷಾಸುರನೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿ ಜಯ ಗಳಿಸಿದ ಸಂಕೇತವಾಗಿ ಹತ್ತನೇ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಅಂದರೆ ಈ ವರ್ಷ ಅಕ್ಟೋಬರ್ 24ರಂದು ದಸರಾ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಈ ದಿನ ತುಂಬಾ ವಿಶೇಷವಾಗಿದ್ದು ಕೆಟ್ಟದರ ವಿರುದ್ಧ ಜಯದ ಸಂಕೇತವಾಗಿ ಆಚರಣೆ ಮಾಡಲಾಗುತ್ತದೆ.
ಈ ಒಂಬತ್ತು ದಿನಗಳಲ್ಲೂ ದೇವಿ ದೇವಸ್ತಾನಗಳಲ್ಲಿ ವಿಶೇಷ ಪೂಜೆ ಮತ್ತು ಕಾರ್ಯಕ್ರಮಗಳನ್ನು ಮಾಡಲಾಗುವುದು. ಈ ವೇಳೆ ಭಕ್ತ ಸಾಗರವೇ ದೇವಸ್ಥಾನದಲ್ಲಿ ಕಾಣ ಸಿಗುತ್ತದೆ. ಬೆಂಗಳೂರಿನಲ್ಲೂ ದುರ್ಗಾ ಪೂಜೆಯನ್ನು ಕೆಲ ಪ್ರಮುಖ ದೇವಸ್ಥಾನಗಳಲ್ಲಿ ಅತ್ಯಂತ ಆಕರ್ಷಕವಾಗಿ ಮಾಡಲಾಗುತ್ತದೆ. ಅಂತಹ ದೇವಸ್ಥಾನಗಳ ಬಗ್ಗೆ ಮಾಹಿತಿ ಇಲ್ಲದೆ.

1.ಶ್ರೀ ಚೌಡೇಶ್ವರಿ ದೇವಸ್ಥಾನ (Shree Chowdeshwari Temple)
ಚೌಡೇಶ್ವರಿ ದೇವಸ್ಥಾನ ಬೆಂಗಳೂರಿನಲ್ಲಿ ಪ್ರಸಿದ್ಧವಾದ ದೇವಸ್ಥಾನಗಳಲ್ಲಿ ಒಂದು. ದಸರಾ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಈ ಸಮಯದಲ್ಲಿ ಆಕರ್ಷಕವಾಗಿ ಅಲಂಕಾರಗೊಂಡ ಚೌಡೇಶ್ವರಿ ದೇವಿಯನ್ನು ಕಣ್ತುಂಬಿಕೊಳ್ಳುವುದೇ ಆನಂದ. ನವರಾತ್ರಿಯ ಒಂಬತ್ತು ದಿನಗಳ ಕಾಲ ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಭಕ್ತಿಯಿಂದ ಬೇಡಿದ ವರವನ್ನು ನೀಡುವ ತಾಯಿ ಚೌಡೇಶ್ವರಿಗೆ ನಿತ್ಯ ವಿಶೇಷ ಪೂಜೆಗಳು, ಮಂಗಳಾರತಿ ಮಾಡಲಾಗುತ್ತದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 266T, 269B, 275C ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: 18, 1ಎ ಕ್ರಾಸ ರೋಡ್, ಗೋಕುಲ 1 ಸ್ಟೇಜ್, ಹೆಚ್‌ಎಂಟಿ ಲೇಔಟ್, ಮತ್ತಿಕೆರೆ, ಬೆಂಗಳೂರು, ಕರ್ನಾಟಕ- 560054

2. ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ (Shri Annamma Devi Temple)
ಹೆಸರೇ ಹೇಳುವಂತೆ ಅನ್ನಪೂರ್ಣೇಶ್ವರಿ ದೇವಿಗೆ ಭಕ್ತಿಯಿಂದ ಪೂಜಿಸಿದರೆ ಅನ್ನದ ಕೊರತೆ ಎಂದಿಗೂ ಇರುವುದಿಲ್ಲ. ಬೆಂಗಳೂರಿನಲ್ಲಿ ಇದನ್ನು ಅತ್ಯಂತ ಶಕ್ತಿಯುತವಾದ ದೇವಸ್ಥಾನ ಎನ್ನಲಾಗುತ್ತದೆ. ಕೆಂಪೇಗೌಡರ ಕಾಲದಲ್ಲಿ ಈ ದೇವಸ್ಥಾನದ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ನಂಬಿ ಭಕ್ತರನ್ನು ಕೈಬಿಡದ ಅನ್ನಪೂರ್ಣೇಶ್ವರಿಗೆ ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಚೈತ್ರಮಾಸದಲ್ಲಿ ಇಲ್ಲಿ ಕರಗ ಹಬ್ಬ ಕೂಡ ನಡೆಸಲಾಗುತ್ತದೆ. ವಿಶೇಷವಾಗಿ ಮಕ್ಕಳ ಆರೋಗ್ಯ, ಆಯಸ್ಸಿಗಾಗಿ ಜೊತೆಗೆ ಸುಖ ಸಂಸಾರಕ್ಕಾಗಿ, ಹೊಸ ವಾಹನಗಳನ್ನು ಖರೀದಿ ಮಾಡಿದಾಗ ಈ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 300H ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: 290/7, 1st ಕ್ರಾಸ್ ರೋಡ್, ಲಕ್ಷ್ಮಮ್ಮ ಲೇಔಟ್, ಬಾನಸ್ವಾಡಿ, ಬೆಂಗಳೂರು.

3. ಶ್ರೀ ಮಹಾ ಪ್ರತ್ಯಾಂಗರಿ ದೇವಿ ದೇವಸ್ಥಾನ (Shri Maha Pratyangira Devi Temple)
ಬೆಂಗಳೂರಿನ ಅತ್ಯಂತ ಪ್ರಸಿದ್ಧ ದೇವಸ್ತಾನಗಳಲ್ಲಿ ದೊಡ್ಡಕಲ್ಲಸಂದ್ರದಲ್ಲಿರುವ ಮಹಾ ಪ್ರತ್ಯಾಂಗರಿ ದೇವಿ ದೇವಸ್ಥಾನ ಕೂಡ ಒಂದಾಗಿದೆ. ತಂತ್ರಮಂತ್ರಗಳಿಂದ ಮುಕ್ತಿ ನೀಡುವ ಈ ಶಕ್ತಿ ದೇವತೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಇದನ್ನು ನರಸಿಂಹಿಕ ದೇವಸ್ಥಾನವೆಂತಲೂ ಕರೆಯಲಾಗುತ್ತದೆ. ಈ ದೇವಸ್ಥಾನದಲ್ಲಿ ಹನುಮ ಹಾಗೂ ಅರ್ಧ ಸಿಂಹವಿದೆ. ನವರಾತ್ರಿಯ ಸಮಯದಲ್ಲಿ ಪ್ರತ್ಯಾಂಗರಿ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಈ ವೇಳೆ ಭಕ್ತ ಸಾಗರವೇ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 210N, 210E, 210NP, 210WA ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: ಸ್ವಾಮಿ ವಿವೇಕಾನಂದ ರಸ್ತೆ, ಜಯನಗರ ಹೌಸಿಂಗ್ ಸೋಸೈಟಿ ಲೇಔಟ್, ಸುಬ್ರಹ್ಮಣ್ಯಪುರ, ಬೆಂಗಳೂರು.

4. ಶ್ರೀ ಗಂಗಮ್ಮ ದೇವಿ ದೇವಸ್ಥಾನ (Shri Gangamma Devi Temple)
ಗಂಗಮ್ಮ ದೇವಿ ದೇವಸ್ಥಾನ ಬೆಂಗಳೂರಿನ ಕಾಡು ಮಲ್ಲೇಶ್ವರಂನಲ್ಲಿದೆ. ಗಂಗಮ್ಮ ದೇವಿಯ ಮೂಲ ವಿಗ್ರಹವನ್ನು ನೋಡಿದರೆ ಮನಸ್ಸಿಗೆ ಒಂದು ರೀತಿಯ ಸಂತೋಷ ಉಂಟಾಗುತ್ತದೆ. ನಿಜವಾದ ದೇವಿಯೇ ಎದ್ದು ಬಂದಂತೆ ಭಾಸವಾಗುತ್ತದೆ. ಪ್ರಾಕಾರದಲ್ಲಿ ಇರುವ ಅಮ್ಮನವರ ವಿಗ್ರಹವನ್ನು ಎಷ್ಟು ನೋಡಿದರೂ ಸಮಾಧಾನ ಎನಿಸುವುದಿಲ್ಲ. ಈ ದೇವಸ್ಥಾನಕ್ಕೆ ಕಷ್ಟ ಎಂದು ಬಂದವರ ಭಾಳು ಹಸನಾಗುತ್ತದೆ. ಇದು ಈ ದೇವಾಲಯದ ವೈಶಿಷ್ಟ್ಯ. ನವರಾತ್ರಿ ಸಂದರ್ಭದಲ್ಲಿ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 253J, 258, 258C, 258F, 276B ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: ಎರಡನೇ ಟೆಂಪಲ್ ಸ್ಟ್ರೀಟ್, ವ್ಯಾಲಿಕಾವಲ್, ಕೊಡಂದ್ರಪುರ, ಮಲ್ಲೇಶ್ವರಂ, ಬೆಂಗಳೂರು.

5. ಶ್ರೀ ನಿಮಿಷಾಂಭ ದೇವಿ ದೇವಸ್ಥಾನ (Shri Nimishamba Devi Temple)
ಇದು ಬೆಂಗಳೂರಿನ ಅತ್ಯಂತ ಪ್ರಸಿದ್ಧ ಹಾಗೂ ಶಕ್ತಿಯುತ ದೇವಸ್ಥಾನಗಳಲ್ಲಿ ಒಂದಾಗಿದೆ. ಕೆಂಪು ಲ್ಯಾಟರೈಟ್ ಕಲ್ಲಿನಿಂದ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಹೀಗಾಗಿ ಇದೊಂದು ಅಪರೂಪದ ದೇವಸ್ಥಾನವಾಗಿದೆ. ನವರಾತ್ರಿ ಸಮಯದಲ್ಲಿ ನಿಮಿಷಾಂಭ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಈ ವೇಳೆ ಭಕ್ತ ಸಾಗರವೇ ದೇವಸ್ಥಾನಕ್ಕೆ ಹರಿದು ಬರುತ್ತದೆ. ಈ ದೇವಸ್ಥಾನ ನಿಮಿಷಾಂಭ ದೇವಿ ಜೊತೆಗೆ ಮೌಕ್ತಿಕೇಶ್ವರ(ಶಿವ), ಸಿದ್ಧಿ ವಿನಾಯಕ, ಲಕ್ಷ್ಮಿ ನಾರಾಯಣ ಮತ್ತು ಸರಸ್ವತಿಗೆ ಸಮರ್ಪಿತವಾಗಿದ್ದು ರಾಜರಾಜೇಶ್ವರಿ ನಗರದಲ್ಲಿದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 225C, 225CA ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: ಐಡಲ್ ಹೋಮ್ ಸರ್ಕಲ್, 93, 12 ಕ್ರಾಸ್ ರೋಡ್, ಐಡಲ್ ಹೋಮ್ಸ್ ಟಿಡ್ಲ್ಯೂಪಿ, ಆರ್ಆರ್ ನಗರ, ಬೆಂಗಳೂರು.

6. ಪಟಾಲಮ್ಮ ದೇವಿ ದೇವಸ್ಥಾನ (Patalamma Devi Temple)
ಇದು 400 ವರ್ಷಗಳ ಹಳೆಯ ದೇವಸ್ಥಾನವಾಗಿದೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಪಟಾಲಮ್ಮ ದೇವಿ ಅತ್ಯಂತ ಶಕ್ತಿಯುತ ದೇವತೆ. ಯಡಿಯೂರಿ, ಸಿದ್ಧಾಪುರ, ಕನಕನಪಾಳ್ಯೆ, ನಾಗಸಂದ್ರ ಮತ್ತಿತರ 20 ಗ್ರಾಮಗಳ ಗ್ರಾಮದೇವತೆಯಾಗಿ ಪಟಾಲಮ್ಮ ಕಾಣಿಸಿಕೊಂಡಿದ್ದಾಳೆ. ದ್ರಾವಿಡರು ಪೂಜಿಸುವ ಏಳು ಅಸಾಧಾರಣ ಸಹೋದರಿಯಲ್ಲಿ ಪಟಾಲಮ್ಮ ದೇವಿ ಕೂಡ ಒಬ್ಬಳು. ಈ ದೇವಿ ಸ್ವಯಂಭೂ ರೂಪದಲ್ಲಿ ಕಾಣಿಸಿಕೊಂಡಳು ಹೀಗಾಗಿ ಅವಳನ್ನು ಪಟಾಲಮ್ಮ ಎಂದು ಕರೆಯಲಾಗುತ್ತದೆ. ಪಟಾಳ ಎಂದರೆ ಪಾತಾಳ ಮತ್ತು ಅಮ್ಮ ಎಂದರೆ ತಾಯಿ. ಇಲ್ಲಿ ನವರಾತ್ರಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಎಲ್ಲೆಡೆಯಿಂದ ಜನ ಸಾಗರ ಈ ಸಮಯದಲ್ಲಿ ನೆರೆದಿರುತ್ತದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 15E, 15G, 31, 210AA, V-15E ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಈ ದೇವಸ್ಥಾನಕ್ಕೆ ಮೆಟ್ರೋ ಮೂಲಕ ಹೋಗಬಹುದು. ಮೆಜೆಸ್ಟಿಕ್ ನಿಂದ ಸೌತ್ ಎಂಡ್ ಸರ್ಕಲ್ (ಹಸಿರು ಮಾರ್ಗ)
ಸ್ಥಳ: ನಂ 4, ಪಟಾಲಮ್ಮ ದೇವಸ್ಥಾನ ರಸ್ತೆ, ಸೌತ್ ಎಂಡ್ ಸರ್ಕಲ್ ಬಸವನಗುಡಿ ಹತ್ತಿರ, ಬೆಂಗಳೂರು.

7. ಶ್ರೀ ಬನಶಂಕರಿ ದೇವಿ ದೇವಸ್ಥಾನ (Sri Banashankari Devi Temple)
ಬನಶಂಕರಿ ದೇವಿ ದೇವಸ್ಥಾನ ನಗರದ ಅತ್ಯಂತ ಜನಪ್ರಿಯ ದೇವಸ್ಥಾನವಾಗಿದೆ. ಅತ್ಯಂತ ಶಕ್ತಿಯುತವಾದ ಈ ದೇವಸ್ಥಾನದಲ್ಲಿ ದೇವಿಗೆ ಪೂಜೆ ಮಾಡುತ್ತಾ ಭಕ್ತರು ಭಕ್ತಿಯ ಭಾವಪರವಶತೆಯಲ್ಲಿ ಹೊಳಲಾಡುತ್ತಾರೆ. ಸಾಮಾನ್ಯವಾಗಿ ರಾಹುಕಾಲದಲ್ಲಿ ಪೂಜೆ ಮಾಡಲಾಗುವುದಿಲ್ಲ. ಆದರೆ ಈ ದೇವಸ್ಥಾನದಲ್ಲಿ ರಾಹುಕಾಲದಲ್ಲಿ ಪೂಜೆ ಮಾಡಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 215R ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಮೆಟ್ರೋ ಮೂಲಕ
ಮೆಜೆಸ್ಟಿಕ್‌ನಿಂದ ಬನಶಂಕರಿ ಮೆಟ್ರೋ
ಸ್ಥಳ: ಕನಕಪುರ ರಸ್ತೆ, ಸರ್ಬಂದಪಾಳ್ಯ, ಬನಶಂಕರಿ ದೇವಸ್ಥಾನ ವಾರ್ಡ್, ಬೆಂಗಳೂರು.

8. ಪ್ಲೇಗ್ ಅಮ್ಮ ದೇವಸ್ಥಾನ (Plague Amma Temple)
ಬೆಂಗಳೂರಿನ ಜನಪ್ರಿಯ ದೇವಸ್ಥಾನಗಳಲ್ಲಿ ತ್ಯಾಗರಾಜನಗರದಲ್ಲಿ ಪ್ಲೇಗ್ ಅಮ್ಮ ದೇವಸ್ಥಾನ ಕೂಡ ಒಂದಾಗಿದೆ. ಪ್ಲೇಗ್ ಮತ್ತು ಸಿಡುಬಿನ ನಿರ್ಮೂಲನೆಗೆ ಮೀಸಲಾದ ಪ್ಲೇಗ್ ಅಮ್ಮನ ದೇವಸ್ಥಾನ ಇದಾಗಿದೆ. ಇದು ರಾಜರಾಜೇಶ್ವರಿ ದೇವಿಯೇ ಆದರೂ ಪ್ಲೇಗ್‌ಗೆ ಪರಿಹಾರವನ್ನು ಕೋರಿ ಲಕ್ಷಾಂತರ ಜನರು ಈ ದೇವಾಲಯಕ್ಕೆ ಭೇಟ ನೀಡಿದಾಗ ಅವರ ಆರೋಗ್ಯದ ಸಮಸ್ಯೆಯು ದೂರಾಗಿತ್ತು. ಈ ಕಾರಣಕ್ಕಾಗಿ ಇಲ್ಲಿನ ದೇವಿಯನ್ನು 'ಪ್ಲೇಗ್ ಅಮ್ಮ' ಎಂದು ಕರೆಯಲಾಗುತ್ತದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 210E, 210N, 210WA, 215NA, 15E, 15G, 210AA, 215R ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: 17ನೇ ಕ್ರಾಸ್ ರಸ್ತೆ, ತ್ಯಾಗರಾಜ ನಗರ, ಬಸವನಗುಡಿ, ಬೆಂಗಳೂರು.

9. ಶ್ರೀ ಮುತ್ಯಾಲಮ್ಮ ದೇವಿ ದೇವಸ್ಥಾನ (Shri Muthyalamma Devi Templa)
ಮುತ್ಯಾಲಮ್ಮ ದೇವಿ ದೇವಸ್ಥಾನ ಇತಿಹಾಸ ತುಂಬಾ ಆಸಕ್ತಿದಾಯಕವಾಗಿದೆ. ಸಾವಿರಾರು ಪ್ಲೇಗ್ ರೋಗಿಗಳನ್ನು ರಕ್ಷಿಸಿದ ಘಟನೆಯನ್ನು ಇದು ನೆನಪಿಸುತ್ತದೆ. ಈ ದೇವಿಯನ್ನು ಇಲ್ಲಿನ ಗ್ರಾಮದೇವತೆ ಎಂದು ಪರಿಗಣಿಸಲಾಗುತ್ತದೆ. ಪ್ಲೇಗ್, ಪಾಕ್ಸ್ ಮತ್ತು ಕಾಲರಾದಂತಹ ರೋಗಗಳನ್ನು ನಿವಾರಿಸಲು ಇಲ್ಲಿ ದೇವಾಲಯವನ್ನು ಸ್ಥಾಪಿಸಲಾಗಿದೆ. ಈ ದೇವಾಲಯವು ಎಲ್ಲಾ ವೈಭವ ಮತ್ತು ಭಕ್ತಿಯಿಂದ ಆಚರಿಸಲಾಗುವ ವಾರ್ಷಿಕ ಮುತ್ಯಾಲಮ್ಮ ಉತ್ಸವಕ್ಕೂ ಜನಪ್ರಿಯವಾಗಿದೆ. ನವರಾತ್ರಿಯ ಸಮಯದಲ್ಲಿ ಭಕ್ತ ಸಾಗರವೇ ಇಲ್ಲಿ ಸೇರುತ್ತದೆ. ಹಲವಾರು ಪೂಜೆ ಪುನಸ್ಕಾರಗಳು ದಸರಾ ಹಬ್ಬದಲ್ಲಿ ನಡೆಯುತ್ತವೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 302A, 302B ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: ಸೆಲೋ ಪ್ಲಾಟೀನ ಹತ್ತಿರ, 24, ಮುತ್ಯಾಲಮ್ಮ, ಆಂಜನೇಯ ಟೆಂಪಲ್ ಸ್ಟ್ರೀಟ್, ಸೆಪ್ಪಿಂಗ್ಸ್ ರೋಡ್, ಶಿವಾಜಿ ನಗರ, ಬೆಂಗಳೂರು.

10. ಶ್ರೀ ರಾಜ ರಾಜೇಶ್ವರಿ ದೇವಸ್ಥಾನ (Sri Raja Rajeshwari Temple)
ಈ ದೇವಸ್ತಾನ ಬೆಂಗಳೂರಿನ ಅತ್ಯಂತ ಹಳೆಯ ಜನಪ್ರಿಯ ದೇವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿ ದೇವಿ ರಾಜೇಶ್ವರಿಯನ್ನು ವಿಗ್ರಹವಾಗಿ ಪೂಜಿಸುವುದನ್ನು ಕಣ್ತುಂಬಿಕೊಳ್ಳುವುದು ಮನಸ್ಸಿಗೆ ಹಿತ ನೀಡುತ್ತದೆ. ಶ್ರೀ ತಿರುಚ್ಚಿ ಸ್ವಾಮಿಯು ದೇವಿಯನ್ನು ಪ್ರತಿಷ್ಠಾಪಿಸಿದನೆಂದು ಇತಿಹಾಸ ಹೇಳುತ್ತದೆ ಮತ್ತು ಇಂದು ಈ ದೇವಾಲಯವನ್ನು ಜ್ಞಾನ ಕಾಶಿ ರಾಜೇಶ್ವರಿ ದೇವಸ್ಥಾನ ಎಂದೂ ಕರೆಯುತ್ತಾರೆ. ವಿಜಯದಶಮಿಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 225C, 225CA ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: ರಾಜ ರಾಜೇಶ್ವರಿ ದೇವಸ್ಥಾನ ರಸ್ತೆ, ಕೆಂಚೇನಹಳ್ಳಿ, ಆರ್ ಆರ್ ನಗರ, ಬೆಂಗಳೂರು.
11. ಮುತ್ತು ಮಾರಿಯಮ್ಮ ದೇವಸ್ಥಾನ (Shri Muthu Mariamma Temple)
ಎರಡು ದಶಕಗಳಷ್ಟು ಹಳೆಯದಾದ ದೇವಾಲಯಕ್ಕೆ ನಿತ್ಯ ಬರುವ ಭಕ್ತರ ಸಂಖ್ಯೆ ಅಧಿಕ. ಇದನ್ನು ಮಾರಿಯಮ್ಮನ ಅತ್ಯಂತ ಶಕ್ತಿಶಾಲಿ ವಾಸಸ್ಥಾನವೆಂದು ಹೇಳಲಾಗುತ್ತದೆ. ನಂಬಿ ಬಂದ ಭಕ್ತರ ಕೈಬಿಡದ ಮುತ್ತು ಮಾರಿಯಮ್ಮ ದೇವಿಯನ್ನು ವಿಜಯದಶಮಿಯಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ವೇಳೆ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಇದರ ಹೊರತಾಗಿ ನಿತ್ಯ ಪೂಜೆಯೊಂದಿಗೆ ಮಂಗಳವಾರ ಹಾಗೂ ಶುಕ್ರವಾರದಂದು ವಿಶೇಷ ಪೂಜೆಗಳು ನಡೆಯುತ್ತದೆ.
ಯಾವ ಬಸ್‌ಗೆ ಹೋಗಬಹುದು?
ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ ನಂಬರ್ 308A, KBS-12HK, KBS-13K ಬಸ್‌ಗಳು ಈ ದೇವಸ್ಥಾನಕ್ಕೆ ಹೋಗುತ್ತವೆ.
ಸ್ಥಳ: ಟಿನ್ ಫ್ಯಾಕ್ಟರಿ ರೋಡ್. ಹಳೆ ಮದ್ರಾಸ ರಸ್ತೆ, ಬೆಂಗಳೂರು.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು










Click it and Unblock the Notifications