Bengaluru-Mysuru Expressway: ಮೈಸೂರು ದಸರಾ, ವಾಹನ ಸವಾರರಿಗೆ ಸೂಚನೆಗಳು

ಬೆಂಗಳೂರು, ಅಕ್ಟೋಬರ್ 01: ಮೈಸೂರು ದಸರಾ-2024ರ ಹಿನ್ನಲೆಯಲ್ಲಿ ಸಾವಿರಾರು ಪ್ರವಾಸಿಗರು ನಗರಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನಲೆಯಲ್ಲಿ ಮಂಡ್ಯ, ರಾಮನಗರ, ಮೈಸೂರು ಪೊಲೀಸರು ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ದಸರಾ ಅವಧಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚಾರ ನಡೆಸುವ ವಾಹನ ಸವಾರರಿಗೆ ಮಂಡ್ಯ ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಈಗಾಗಲೇ ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನಗರದ ಎಲ್ಲಾ ಸಂಚಾರಿ ಪೊಲೀಸರ ಸಭೆ ನಡೆಸಿದ್ದು, ದಸರಾ ಹಬ್ಬದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಕಂಡು ಬರುವುದರಿಂದ ಅವುಗಳನ್ನು ಸೂಕ್ತವಾಗಿ ನಿಭಾಯಿಸುವ ಬಗ್ಗೆ ಮತ್ತು ಸುಗಮ ಸಂಚಾರಕ್ಕೆ ವ್ಯವಸ್ಥೆಗಳನ್ನು ಮಾಡುವ ಕುರಿತು ಸೂಚನೆಗಳನ್ನು ನೀಡಿದ್ದಾರೆ.

Mysuru Dasara 2024 Vehicle Movement Restrictions In Bengaluru Mysuru Expressway

ಮಂಡ್ಯ ಪೊಲೀಸರು ಮೈಸೂರು ದಸರಾ ವಿಕ್ಷೀಸಿಸಲು ವಾಹನಗಳಲ್ಲಿ ಆಗಮಿಸುವ ಪ್ರವಾಸಿಗರು ದಿನಾಂಕ 3-10-2024 ರಿಂದ 17-10-2024ರ ತನಕ ಪ್ರತಿದಿನ ಮಧ್ಯಾಹ್ನ 3 ರಿಂದ ರಾತ್ರಿ 11 ಗಂಟೆಯವರೆಗೆ ಅನ್ವಯಿಸುವಂತೆ ಏಕಮುಖ ಸಂಚಾರವನ್ನು ಸೂಚಿಸಿದ ಮಾರ್ಗದಲ್ಲಿ ಅನುಸರಿಸಬೇಕು. ಪೊಲೀಸರ ಜೊತೆ ಸಹಕಾರ ನೀಡಬೇಕು ಎಂದು ಕರೆ ನೀಡಿದ್ದಾರೆ.

ಸೂಚನೆಗಳೇನು?; ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾವು ರಾಜ್ಯ, ಹೊರ ರಾಜ್ಯ ಮತ್ತು ವಿದೇಶಗಳಿಂದ ಪ್ರವಾಸಿಗರನ್ನು ಲಕ್ಷಾಂತರ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಅಲ್ಲಿಗೆ ಬಂದ ಪ್ರವಾಸಿಗರುಗಳು, ಜಗತ್‌ ಪ್ರಸಿದ್ಧವಾದ ಮಂಡ್ಯ ಜಿಲ್ಲಾ ವ್ಯಾಪ್ತಿಯ ಕೆ. ಆರ್. ಸಾಗರದ ಬೃಂದಾವನ ಗಾರ್ಡನ್ ಅನ್ನು ವೀಕ್ಷಿಸಲು ಬರುತ್ತಾರೆ. ಈ ಪ್ರವಾಸಿಗರುಗಳು ಸಂಜೆಯ ವೇಳೆಯಲ್ಲಿ ದೀಪಾಲಂಕಾರ ಹಾಗೂ ಫೌಂಟೆನ್‌ಗಳನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ವಿವಿಧ ಮಾದರಿಯ ವಾಹನಗಳಲ್ಲಿ ಬರುವವರಿದ್ದಾರೆ.

ಈ ಸಂಬಂಧ ಕಟ್ಟೇರಿ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳನ್ನು ಕಟ್ಟೇರಿ, ಅರಳಕುಪ್ಪೆ, ಎಲೆಕೆರೆ ಹ್ಯಾಂಡ್ ಪೋಸ್ಟ್, ಮಾರ್ಗ, ಕೆ. ಆರ್. ಪೇಟೆ ರಸ್ತೆಯಲ್ಲಿ ಚಲಿಸಿ, ಮೈಸೂರು-ಬೆಂಗಳೂರು ಕಡೆಗೆ ಸಂಚರಿಸುವುದು ಹಾಗೂ ಅದೇ ರೀತಿ ಮೈಸೂರು ಕಡೆಯಿಂದ ಗಾರ್ಡನ್ ವೀಕ್ಷಿಸಲು ಬರುವ ಪ್ರವಾಸಿಗರ ಎಲ್ಲಾ ಮಾದರಿಯ ವಾಹನಗಳು ಗಾರ್ಡನ್ ವೀಕ್ಷಿಸಿದ ನಂತರ ವಾಪಸ್ ಹೊರಡುವಾಗ ಹೊಸ ಸೇತುವೆಯಿಂದ ಉತ್ತರಕ್ಕೆ ತಿರುಗಿ ನಾರ್ಥಬ್ಯಾಂಕ್, ಕಟ್ಟೇರಿ, ಎಲೆಕೆರೆ ಹ್ಯಾಂಡ್ ಪೋಸ್ಟ್ ಮಾರ್ಗ ಕೆ. ಆರ್. ಪೇಟೆ ರಸ್ತೆಯಲ್ಲಿ ಚಲಿಸಿ ಮೈಸೂರು-ಬೆಂಗಳೂರು ಕಡೆಗೆ ಹೋಗುವುದು.

ದಿನಾಂಕ 03.10.2024 ರಿಂದ 17.10,2024 ರವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಏಕಮುಖ ಸಂಚಾರ ಪಾಲನೆ ಮಾಡುವ ಸಲುವಾಗಿ ಆದೇಶ ಮಾಡುವಂತೆ ಪೊಲೀಸ್ ಅಧೀಕ್ಷಕರು, ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿಗಳನ್ನು ಕೋರಿದ್ದರು. ಕೋರಿಕೆಯನ್ನು ಪರಿಗಣಿಸಿ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಏಕಮುಖ ಸಂಚಾರ ಆದೇಶ ಹೊರಡಿಸುವುದು ಸೂಕ್ತವೆಂದು ಈ ಕೆಳಕಂಡಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಕರ್ನಾಟಕ ಮೋಟಾರು ವಾಹನ ನಿಯಮಗಳ 1989 ನಿಯಮ 221 (ಎ) (5) ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರದ ವ್ಯವಸ್ಥೆಯನ್ನು ಮಾಡಬೇಕಾಗಿರುವುದರಿಂದ ದಿನಾಂಕ 03.10.2024 ರಿಂದ 17.10.2024 ರವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಕಟ್ಟೇರಿ ಕಡೆಯಿಂದ ಬರುವ ಎಲ್ಲಾ ಮಾದರಿಯ ವಾಹನಗಳು ಕಟ್ಟೇರಿ, ಅರಳಕುಪ್ಪೆ, ಎಲೆಕೆರೆ ಹ್ಯಾಂಡ್ ಪೋಸ್ಟ್ ಮಾರ್ಗ ಕೆ. ಆರ್. ಪೇಟೆ ರಸ್ತೆಯಲ್ಲಿ ಚಲಿಸಿ, ಮೈಸೂರು-ಬೆಂಗಳೂರು ಕಡೆಗೆ ಸಂಚರಿಸುವುದು.

ಅದೇ ರೀತಿ ಮೈಸೂರು ಕಡೆಯಿಂದ ಗಾರ್ಡನ್ ವೀಕ್ಷಿಸಲು ಬರುವ ಪ್ರವಾಸಿಗರ ಎಲ್ಲಾ ಮಾದರಿಯ ವಾಹನಗಳು ಗಾರ್ಡನ್ ವೀಕ್ಷಿಸಿದ ನಂತರ ವಾಪಸ್ ಹೊರಡುವಾಗ ಹೊಸ ಸೇತುವೆಯಿಂದ ಉತ್ತರಕ್ಕೆ ತಿರುಗಿ ನಾರ್ಥಬ್ಯಾಂಕ್, ಕಟ್ಟೇರಿ, ಎಲೆಕೆರೆ ಹ್ಯಾಂಡ್ ಪೋಸ್ಟ್ ಮಾರ್ಗ ಕೆ. ಆರ್. ಪೇಟೆ ರಸ್ತೆಯಲ್ಲಿ ಚಲಿಸಿ ಮೈಸೂರು-ಬೆಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸುವಂತೆ ಆದೇಶಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+