Dasara Special Train: ಮೈಸೂರು ದಸರಾ, ರೈಲುಗಳಿಗೆ ವಿಶೇಷ ನಿಲುಗಡೆ, ನಿಲ್ದಾಣಗಳ ಪಟ್ಟಿ
ಬೆಂಗಳೂರು, ಅಕ್ಟೋಬರ್ 01: ಮೈಸೂರು ದಸರಾ 2024ಕ್ಕೆ ಅಕ್ಟೋಬರ್ 3ರ ಗುರುವಾರ ಚಾಲನೆ ಸಿಗಲಿದೆ. ಅಕ್ಟೋಬರ್ 12ರ ಶನಿವಾರ ವಿಶ್ವವಿಖ್ಯಾತ ಜಂಬೂ ಸವಾರಿ ಮೂಲಕ ದಸರಾಕ್ಕೆ ತೆರೆ ಬೀಳಲಿದೆ. ದಸರಾ ಸಂದರ್ಭದಲ್ಲಿ ಕರ್ನಾಟಕ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಮೈಸೂರಿಗೆ ಪ್ರಯಾಣ ಮಾಡುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಹಲವು ರೈಲುಗಳಿಗೆ ವಿಶೇಷ ನಿಲುಗಡೆ ನೀಡಿ ಆದೇಶಿಸಿದೆ.
ನೈಋತ್ಯ ರೈಲ್ವೆ ಕೆಲವು ರೈಲುಗಳಿಗೆ ದಸರಾ ಸಂದರ್ಭದಲ್ಲಿ ವಿಶೇಷ ನಿಲುಗಡೆಗಳನ್ನು ನೀಡುತ್ತಿದೆ. ಈ ನಿಲುಗಡೆ ಆದೇಶ ಅಕ್ಟೋಬರ್ 9 ರಿಂದ 13, 2024ರ ತನಕ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ. ಮೈಸೂರಿಗೆ ಹೋಗುವ, ವಾಪಸ್ ಆಗುವ ಪ್ರಯಾಣಿಕರು ಈ ನಿಲುಗಡೆಗಳ ಉಪಯೋಗ ಪಡೆದುಕೊಂಡು ರೈಲಿನಲ್ಲಿ ಸಂಚಾರ ನಡೆಸಬಹುದು.

ರೈಲುಗಳು ಮತ್ತು ನಿಲುಗಡೆ ವಿವರಗಳು
* ರೈಲು ಸಂಖ್ಯೆ 16555 ಮೈಸೂರು- ಶಿವಮೊಗ್ಗ ಟೌನ್ ಪ್ರತಿದಿನದ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಬೆಳಗುಳ (10:27/10:28 hrs), ಕೃಷ್ಣರಾಜಸಾಗರ (10:31/10:32 hrs), ಕಲ್ಲೂರು ಯಡಹಳ್ಳಿ (10:36/10:37 hrs), ಸಾಗರಕಟ್ಟೆ (10:41/10:42 hrs), ದೊರನಹಳ್ಳಿ (10:45/10:46 hrs), ಹಂಪಾಪುರ (10:54/10:55 hrs), ಅರ್ಜುನಹಳ್ಳಿ (11:00/11:01 hrs), ಹೊಸ ಅಗ್ರಹಾರ (11:06/11:07 hrs) ಮತ್ತು ಮಾವಿನಕೆರೆ (12:03/12:04 hrs) ನಿಲುಗಡೆ ನೀಡಲಾಗಿದೆ.
ರೈಲು ನಂಬರ್ 16226 ಶಿವಮೊಗ್ಗ ಟೌನ್-ಮೈಸೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಮಾವಿನಕೆರೆ (14:27/14:28 hrs), ಹೊಸ ಅಗ್ರಹಾರ (15:25/15:26 hrs), ಅರ್ಜುನಹಳ್ಳಿ (15:31/15:32 hrs), ಹಂಪಾಪುರ (15:37/15:38 hrs), ದೊರನಹಳ್ಳಿ (15:49/15:50 hrs), ಸಾಗರಕಟ್ಟೆ (15:55/15:56 hrs), ಕಲ್ಲೂರು ಯಡಹಳ್ಳಿ (16:00/16:01 hrs), ಕೃಷ್ಣರಾಜಸಾಗರ (16:07/16:08 hrs) ಮತ್ತು ಬೆಳಗುಳ (16:13/16:14 hrs) ಆಗಮಿಸಿ/ ನಿರ್ಗಮಿಸಲಿದೆ.
ರೈಲು ನಂಬರ್ 16222 ಮೈಸೂರು-ತಾಳಗುಪ್ಪ ಕುವೆಂಪು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ತಾತ್ಕಾಲಿಕವಾಗಿ ಕೃಷ್ಣರಾಜಸಾಗರ (14:17/14:18 hrs), ಕಲ್ಲೂರು ಯಡಹಳ್ಳಿ (14:24/14:25 hrs), ದೊರನಹಳ್ಳಿ (14:35/14:36 hrs), ಹಂಪಾಪುರ (14:49/14:50 hrs) ಮತ್ತು ಅರ್ಜುನಹಳ್ಳಿ (14:55/14:56 hrs) ನಿಲುಗಡೆ ನೀಡಲಾಗಿದೆ.
ವಾಪಸ್ ಬರುವಾಗ ರೈಲು, ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಅರ್ಜುನಹಳ್ಳಿ (14:03/14:04 hrs), ಹಂಪಾಪುರ (14:09/14:10 hrs), ದೋರನಹಳ್ಳಿ (14:20/14:21 hrs), ಕಲ್ಲೂರು ಯಡಹಳ್ಳಿ (14:36/14:37 hrs) ಮತ್ತು ಕೃಷ್ಣರಾಜಸಾಗರ (14:43/14:44 hrs). ಆಗಮಿಸಿ, ನಿರ್ಗಮಿಸಲಿದೆ.
ತಾತ್ಕಾಲಿಕ ನಿಲುಗಡೆ ಮುಂದುವರಿಕೆ: ನೈಋತ್ಯ ರೈಲ್ವೆ ರಾಮಗಿರಿ, ಬೀರೂರು ಮತ್ತು ಆಲೂರು ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ ಮಾಡಿ ಆದೇಶಿಸಿದೆ. ಈ ಕೆಳಗಿನ ರೈಲುಗಳಿಗೆ ಇದ್ದ 1 ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲಾಗಿದೆ.
* ರೈಲು ಸಂಖ್ಯೆ 17325/ 17326 ಬೆಳಗಾವಿ-ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 17391/ 17392 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ರಾಮಗಿರಿ ನಿಲ್ದಾಣದಲ್ಲಿ ಇರುವ 1 ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಅಕ್ಟೋಬರ್ 1 ರಿಂದ ಡಿಸೆಂಬರ್ 31, 2024 ರವರೆಗೆ ಮೂರು ತಿಂಗಳ ಕಾಲ ಮುಂದುವರಿಸಲಾಗುತ್ತಿದೆ.
* ರೈಲು ಸಂಖ್ಯೆ 16587/ 16588 ಯಶವಂತಪುರ-ಬಿಕಾನೇರ್-ಯಶವಂತಪುರ ದಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳಿಗೆ ಬೀರೂರು ನಿಲ್ದಾಣದಲ್ಲಿ ಇರುವ 1 ನಿಮಿಷದ ತಾತ್ಕಾಲಿಕ ನಿಲುಗಡೆ ಅಕ್ಟೋಬರ್ 1 ರಿಂದ ಡಿಸೆಂಬರ್ 31, 2024 ರವರೆಗೆ ಮೂರು ತಿಂಗಳು ಮುಂದುವರಿಸಲಾಗುತ್ತಿದೆ.
* ರೈಲು ಸಂಖ್ಯೆ 16515/ 16516 ಯಶವಂತಪುರ-ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16575/ 16576 ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಗೋಮಟೇಶ್ವರ ಟೈ-ವೀಕ್ಲಿ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 16539/ 16540 ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳಿಗೆ ಆಲೂರು ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ನವೆಂಬರ್ 30ರ ತನಕ ಮುಂದುವರೆಸಲಾಗಿದೆ.












Click it and Unblock the Notifications