ಮೈಸೂರು-ಬೆಂಗಳೂರು ಮೆಮು ರೈಲು ಪ್ರಯಾಣಿಕರ ಗಮನಕ್ಕೆ

ಮೈಸೂರು, ಅಕ್ಟೋಬರ್ 06; ಮೈಸೂರು-ಬೆಂಗಳೂರು ನಡುವೆ ಮೆಮು ರೈಲಿನಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಪ್ರಮುಖ ಮಾಹಿತಿಯೊಂದಿದೆ. ಇನ್ನು ಮುಂದೆ ರೈಲುಗಳು ಮೈಸೂರು ನಗರ ನಿಲ್ದಾಣದ ಬದಲು ಅಶೋಕಪುರಂ ನಿಲ್ದಾಣದಿಂದ ಸಂಚಾರ ನಡೆಸಲಿವೆ.

ನಾಲ್ಕು ಮೆಮು ರೈಲುಗಳು ಮೈಸೂರು- ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುತ್ತಿವೆ. ದಸರಾ ಸಂದರ್ಭದಿಂದ ಎಲ್ಲಾ ರೈಲುಗಳು ಅಶೋಕಪುರಂನಿಂದ ಹೊರಡಲಿದೆ. ಇದರಿಂದಾಗಿ ಮೈಸೂರು ನಗರ ರೈಲು ನಿಲ್ದಾಣದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ.

Mysuru And Bengaluru Four MEMU Trains To Start From Ashokapuram

ಸುಮಾರು 90 ಕೋಟಿ ರೂ. ವೆಚ್ಚದಲ್ಲಿ ಅಶೋಕಪುರಂ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ. ಹೊಸ ಫ್ಲಾಟ್‌ ಫಾರಂ, ಫುಟ್ ಓವರ್ ಬ್ರಿಡ್ಜ್ ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲಗಳನ್ನು ಒದಗಿಸಲಾಗಿದೆ. ಇದು ಮೈಸೂರು ನಗರದ 2ನೇ ಅತಿ ದೊಡ್ಡ ನಿಲ್ದಾಣವಾಗಿ ಬದಲಾಗಿದೆ.

ಮೈಸೂರು ನಗರ ರೈಲು ನಿಲ್ದಾಣದ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದಲೇ ಅಶೋಕಪುರಂ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ. ಈಗ ಕೆಲವು ರೈಲುಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇವುಗಳಲ್ಲಿ ಮೈಸೂರು-ಬೆಂಗಳೂರು ನಡುವಿನ 4 ಮೆಮು ರೈಲುಗಳು ಸೇರಿವೆ.

ಸಂಸದರ ಹೇಳಿಕೆ; "ಮೈಸೂರು-ಬೆಂಗಳೂರು ನಡುವಿನ ಮೆಮು ರೈಲುಗಳು ಕಡಿಮೆ ದರದಲ್ಲಿ ವೇಗವಾಗಿ ಉಭಯ ನಗರಗಳನ್ನು ಸಂಪರ್ಕಿಸುತ್ತವೆ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿರುತ್ತದೆ. ಆದ್ದರಿಂದ ಆಗಲೇ ಮೈಸೂರು-ಬೆಂಗಳೂರು ನಡುವಿನ 4 ಮೆಮು ರೈಲುಗಳನ್ನು ಅಶೋಕಪುರಂಗೆ ಸ್ಥಳಾಂತರ ಮಾಡಲು ನೈಋತ್ಯ ರೈಲ್ವೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅಶೋಕಪುರಂ ರೈಲು ನಿಲ್ದಾಣದ ಅಭಿವೃದ್ಧಿಕಾರ್ಯವನ್ನು ಕೈಗೊಂಡಿತ್ತು. ನಿಲ್ದಾಣ ಮೊದಲು 3 ಫ್ಲಾಟ್‌ಫಾರಂ ಹೊಂದಿತ್ತು. ಈಗ 5 ಫ್ಲಾಟ್‌ಫಾರಂನೊಂದಿಗೆ ಮೈಸೂರು ನಗರದ 2ನೇ ಅತಿ ದೊಡ್ಡ ರೈಲು ನಿಲ್ದಾಣವಾಗಿ ಅಭಿವೃದ್ಧಿಗೊಳಿಸಲಾಗಿದೆ.

ನಿಲ್ದಾಣಕ್ಕೆ ಹೊಸದಾಗಿ ಎರಡು ರೈಲ್ವೆ ಹಳಿ ಸಿಕ್ಕಿರುವುದರಿಂದ ಹಲವಾರು ರೈಲುಗಳನ್ನು ಅಶೋಕಪುರಂ ತನಕ ವಿಸ್ತರಣೆ ಮಾಡಲು ಸಾಧ್ಯವಾಗಲಿದೆ. ಚಾಮರಾಜನಗರ ಭಾಗಕ್ಕೆ ಸಂಚಾರ ನಡೆಸುವ ಕಡೆಗೆ ಹೊಸ ಲೈನ್ ಅಳವಡಿಕೆ ಮಾಡಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಚಾಮರಾಜನಗರ ಭಾಗದ ಎಲ್ಲಾ ರೈಲುಗಳು ಅಶೋಕಪುರಂಗೆ ಸ್ಥಳಾಂತರಗೊಳ್ಳುವ ನಿರೀಕ್ಷೆ ಇದೆ.

ಅಶೋಕಪುರಂ ರೈಲು ನಿಲ್ದಾಣದಲ್ಲಿ 24 ಬೋಗಿಗಳನ್ನು ಹೊಂದಿರುವ ರೈಲುಗಳನ್ನು ಸಹ ನಿಲುಗಡೆ ಮಾಡಲು ಅನುಕೂಲವಾಗುವಂತೆ ಫ್ಲಾಟ್‌ಫಾರಂ ಉದ್ದವನ್ನು ವಿಸ್ತರಣೆ ಮಾಡಲಾಗಿದೆ. ಎರಡು ಸ್ಟಾಬ್ಲಿಂಗ್ ಲೈನ್‌ಗಳನ್ನು ಸಹ ನಿರ್ಮಾಣ ಮಾಡಲಾಗಿದ್ದು, ಹೆಚ್ಚು ಹೊತ್ತು ರೈಲುಗಳನ್ನು ನಿಲ್ಲಿಸಲು ಅನುಕೂಲವಾಗಲಿದೆ.

ಈ ರೈಲು ನಿಲ್ದಾಣಕ್ಕೆ ಸಹ ಎರಡು ಪ್ರವೇಶ ದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ. ಮೈಸೂರು-ಬೆಂಗಳೂರು ನಡುವೆ ಜೋಡಿ ಹಳಿ ಇದೆ. ಆದರೆ ಪಿಟ್‌ಲೈನ್ ಹಾಗೂ ಸ್ಟಾಬ್ಲಿಂಗ್ ಲೈನ್‌ಗಳು ಇಲ್ಲದ ಕಾರಣ ನಿಲುಗಡೆಗೆ ತೊಂದರೆ ಆಗಿತ್ತು. ಆದರೆ ಅಶೋಕಪುರಂ ನಿಲ್ದಾಣ ಅಭಿವೃದ್ಧಿಗೊಂಡ ಬಳಿಕ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+