Mysuru airport: 6ರಲ್ಲಿ ನಾಲ್ಕು ಮಾರ್ಗಗಳಿಗೆ ವಿಮಾನ ಹಾರಾಟ ರದ್ದು, ಕಾರಣ ಏನು ಗೊತ್ತಾ?
ಮೈಸೂರು, ನವೆಂಬರ್, 06: ಮೈಸೂರು ಏರ್‌ಪೋರ್ಟ್‌ನಿಂದ ನಾಲ್ಕು ಮಾರ್ಗಗಳಿಗೆ ವಿಮಾನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಹಾಗೂ ಯಾವ ಮಾರ್ಗಗಳ ಸೇವೆಗಳನ್ನು ರದ್ದುಪಡಿಸಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಇದೀಗ ಮೈಸೂರು ಏರ್ಪೋರ್ಟ್‌ನಿಂದ 6 ಮಾರ್ಗಗಳಿಗೆ ಬದಲಾಗಿ ಕೇವಲ ಹೈದರಾಬಾದ್, ಚೆನ್ನೈ ಮಾರ್ಗಗಳಿಗೆ ಮಾತ್ರ ವಿಮಾನ ಸೇವೆ ನೀಡಲಾಗುತ್ತಿದೆ. ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ಸೇರಿದಂತೆ ವಾರಕ್ಕೆ 4 ದಿನ 3 ಹಾಗೂ ಇನ್ನುಳಿದ ದಿನ ಬರಿ 2 ವಿಮಾನಗಳು ನಿಲ್ದಾಣಕ್ಕೆ ಆಗಮಿಸುತ್ತಿವೆ. 2 ವಿಮಾನ ಹೈದರಾಬಾದ್ ಮತ್ತು 1 ಚೆನ್ನೈಗೆ ಹಾರಾಟ ನಡೆಸುತ್ತಿದೆ ಅಷ್ಟೇ.

ಕೇಂದ್ರ ಸರ್ಕಾರ ಈ ಮೊದಲು ಮೈಸೂರು ವಿಮಾಣ ನಿಲ್ದಾಣದಿಂದ 6 ಮಾರ್ಗಗಳ ವಿಮಾನ ಹಾರಾಟಕ್ಕೆ ಸಬ್ಸಿಡಿ ನೀಡುತ್ತಿತ್ತು. ಆದರೆ ಇದೀಗ ಸಬ್ಸಿಡಿ ಸ್ಥಗಿತಗೊಳಿಸಿ ಕಾರಣ, ಏರ್‌ಕ್ರಾಫ್ಟ್‌ಗಳ ಸಂಖ್ಯೆ ಇಳಿಮುಖ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಮೈಸೂರಿನಿಂದ 4 ಮಾರ್ಗಗಳ ವಿಮಾನ ಹಾರಾಟ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಪ್ರಚಲಿತದಲ್ಲಿದ್ದ ಈ ಸೇವೆಗಳು ಇದೀಗ ಸ್ಥಗಿತವಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
6 ತಿಂಗಳುಗಳ ಹಿಂದೆ ಮೈಸೂರು ಏರ್ಪೋರ್ಟ್‌ನಿಂದ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಗೋವಾ, ಚೆನ್ನೈ ಮತ್ತು ಹೈದರಾಬಾದ್‌ಗೆ ವಿಮಾನಗಳ ಹಾರಟ ಸೇವೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಗೋವಾ ಮಾರ್ಗಗಳಲ್ಲಿ ಈ ಸೇವೆಗಳು ಸ್ಥಗಿತವಾಗಿವೆ ಎಂದು ತಿಳಿದುಬಂದಿದೆ.
ಮೈಸೂರು-ಬೆಂಗಳೂರು ನಡುವೆ ಸೇವೆ ರದ್ದಾಗಿದ್ದೇಕೆ?
ಮೈಸೂರು-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಆದ ಬಳಿಕ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಬೆಲೆಯಲ್ಲಿ ಸೇವೆ ಪಡೆಯಬಹುದು ಎಂಬ ಕಾರಣಕ್ಕೆ ರಸ್ತೆ ಮಾರ್ಗವನ್ನೇ ಹೆಚ್ಚು ಜನ ಬಳಕೆ ಮಾಡಲು ಶುರು ಮಾಡಿದ್ದಾರೆ. ಆದ್ದಾರಿಂದ ಈ ಮಾರ್ಗದಲ್ಲಿ ವಿಮಾನ ಹಾರಾಟ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಗೋವಾ, ಕೊಚ್ಚಿ, ಹುಬ್ಬಳ್ಳಿ ಮಾರ್ಗದ ಸೇವೆಗೆ ಪ್ರಯಾಣಿಕರು ಬೇಡಿಕೆಯಿಟ್ಟಿದ್ದರು. ಆದರೆ ವಿಮಾನ ನಿಲ್ದಾಣ ಪ್ರಾಧಿಕಾರ ಈ ಮಾರ್ಗದ ಸೇವೆಯನ್ನು ಕಳೆದ ಮೂರು ತಿಂಗಳಿನಿಂದ ರದ್ದುಗೊಳಿಸಿದೆ. ಇತ್ತೀಚೆಗಷ್ಟೇ ಗೋವಾ ಫ್ಲೈಟ್ ಸೇವೆಯನ್ನು ಕೂಡ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸೇವೆ ಹಿಂಪಡೆಯಲು ಕಾರಣವೇನು?
1. ಸೇವೆ ನೀಡಲು ವಿಮಾನಗಳ ಸಂಖ್ಯೆ ಕಡಿಮೆ ಇದೆ.
2. ತಾಂತ್ರಿಕ ಕಾರಣಗಳು ಎದುರಾಗಿದ್ದವು.
3. ಕೆಲವೊಂದು ಮಾರ್ಗಗಳಿಗೆ ಉಡಾನ್ ಯೋಜನೆಯಂತೆ ಕೇಂದ್ರ ಸರಕಾರ ನೀಡುತ್ತಿದ್ದ ಸಬ್ಸಿಡಿ ರದ್ದಾಗಿದೆ.
4. ಆರಂಭದಲ್ಲಿಯೇ 3 ವರ್ಷಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುವುದೆಂದು ತಿಳಿಸಲಾಗಿದ್ದು, ಇದೀಗ ಕೆಲವು ಮಾರ್ಗಗಳಿಗೆ ನೀಡಲಾಗುವ ಸಬ್ಸಿಡಿ 3 ವರ್ಷಗಳ ಅವಧಿ ಅಪೂರ್ಣವಾಗಿದೆ. ಆದ್ದರಿಂದ ಸರ್ಕಾರ ಆ ಮಾರ್ಗಗಳ ಸಬ್ಸಿಡಿಯನ್ನು ರದ್ದುಪಡಿಸಿ ಬೇರೆ ಮಾರ್ಗಗಳಿಗೆ ನೀಡಿದೆ.
5. ನೂತನವಾಗಿ ಮತ್ತೆ ಸಬ್ಸಿಡಿ ನೀಡಿದರೆ ಮಾತ್ರ ಈ ಮಾರ್ಗಗಳಲ್ಲಿ ಆಪರೇಟ್ ಮಾಡಲಾಗುವುದು ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಬಿ.ಆರ್. ಅನೂಪ್ ತಿಳಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಪ್ರಯಾಣಿಕರ ಸಂಖ್ಯೆ ಕಡಿಮೆ
1. 2022 ಸೆಪ್ಟೆಂಬರ್ - 16,539 ಮಂದಿ ಪ್ರಯಾಣ
2. 2023 ಸೆಪ್ಟೆಂಬರ್ - 8,848 ಮಂದಿ ಪ್ರಯಾಣ
ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ - ಶೇ.46.5ರಷ್ಟು ಇಳಿಕೆಯಾಗಿರುವುದಲ್ಲದೇ ಈ ತಿಂಗಳಲ್ಲಿ ಕಳೆದ ವರ್ಷ 422 ಬಾರಿ ವಿಮಾನಗಳು ಹಾರಾಟ
ನಡೆಸಿದ್ದರೆ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೇವಲ 116 ಬಾರಿ ಹಲವು ಮಾರ್ಗಗಳಿಗೆ ವಿಮಾನಗಳು ಸೇವೆ ಒದಗಿಸಿವೆ.












Click it and Unblock the Notifications