ದಸರಾ ವೇಳೆ ಮೈಸೂರಿನಿಂದ ಪ್ರವಾಸ ಬೆಳೆಸಲು KSRTC ಪ್ಯಾಕೇಜ್ ಟೂರ್ ಘೋಷಣೆ, ದರ, ಮಾರ್ಗಗಳ ವಿವರ ತಿಳಿಯಿರಿ
ಮೈಸೂರು, ಅಕ್ಟೋಬರ್, 16: ವಿಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್ ವ್ಯವಸ್ಥೆ ಕಲ್ಪಿಸಿದ್ದು, ಗಿರಿದರ್ಶಿನಿ, ದೇವದರ್ಶಿನಿ ಹಾಗೂ ಜಲದರ್ಶಿನಿ ಮೂಲಕ ಮೈಸೂರು ಮತ್ತು ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶ ಮಾಡಿಕೊಟ್ಟಿದೆ.
ಮೈಸೂರು ದಸರಾ ಮಹೋತ್ಸವದ ನಿಮಿತ್ತ ರಾಜ್ಯದ ಹಾಗೂ ದೇಶದ ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಿದೆ.

ಇದಕ್ಕಾಗಿ ಕರ್ನಾಟಕ ಸಾರಿಗೆ (ವೇಗದೂತ) ರಾಜಹಂಸ, ಸ್ಲೀಪರ್, ಐರಾವತ, ಐರಾವತಕ್ಲಬ್‌ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಉತ್ಸವ ಸಾರಿಗೆ ಸೇವೆಗಳ ಜೊತೆಗೆ ವಿಶೇಷ ಪ್ಯಾಕೇಜ್ ಸಾರಿಗೆ ಸೇವೆಗಳ ಸೌಲಭ್ಯವನ್ನುಒದಗಿಸಲು ಕ್ರಮಕೈಗೊಂಡಿದೆ.
ಮೈಸೂರಿಗೆ ಬರುವ ಪ್ರವಾಸಿಗರಿಗೆ ಅನುಕೂಲ
ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆ ವಾಹನಗಳಿಂದ ಒಂದು ದಿನದ ವಿಶೇಷ ಪ್ರವಾಸ ಸಾರಿಗೆಗಳ ಕಾರ್ಯಾಚರಣೆ ನಡೆಸಲಿದೆ. ಗಿರಿದರ್ಶಿನಿ ಪ್ರವಾಸದಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಗಿರಿರಂಗನ ಬೆಟ್ಟ, ನಂಜನಗೂಡು ಮತ್ತುಚಾಮುಂಡಿ ಬೆಟ್ಟ (ಪ್ರಯಾಣದರ ವಯಸ್ಕರಿಗೆ: 400 ರೂ. ಮತ್ತು ಮಕ್ಕಳಿಗೆ 250 ರೂ.) ನೋಡಬಹುದು.

ಜಲದರ್ಶಿನಿಯಲ್ಲಿ ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿಜಲಾಶಯ ಮತ್ತುಕೆ.ಆರ್.ಎಸ್. (ಪ್ರಯಾಣದರ ವಯಸ್ಕರಿಗೆ ವಯಸ್ಕರಿಗೆ: 400 ರೂ. ಮತ್ತು ಮಕ್ಕಳಿಗೆ 250 ರೂ)
ಮೈಸೂರು ದೀಪಾಲಂಕಾರ ವೀಕ್ಷಣೆಗೆ ಅವಕಾಶ
ದೇವದರ್ಶಿನಿಯಲ್ಲಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ ಪ್ರಯಾಣ ದರ ವಯಸ್ಕರಿಗೆ: 300 ರೂಪಾಯಿ ಮತ್ತು ಮಕ್ಕಳಿಗೆ 175 ರೂಪಾ ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಬಹುದು. ಸಿಟಿ ವೋಲ್ವೋ ಸಾರಿಗೆಗಳ ಪ್ಯಾಕೇಜ್ ನಲ್ಲಿ ದೇವದರ್ಶಿನಿಯಲ್ಲಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣದರ ವಯಸ್ಕರಿಗೆ 500 ರೂ. ಮತ್ತು ಮಕ್ಕಳಿಗೆ 400 ರೂ.)

ಇನ್ನು ಮೈಸೂರು ನಗರ ದೀಪಾಲಂಕಾರದರ್ಶನದಲ್ಲಿ ನಗರ ಬಸ್ ನಿಲ್ದಾಣದಿಂದ ಅರಮನೆ ರಸ್ತೆ, ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ರಸ್ತೆ, ಎಲ್.ಐ.ಸಿ ವೃತ್ತ, ಬಂಬೂ ಬಜಾರ್‌ರಸ್ತೆ, ರೈಲ್ವೆ ನಿಲ್ದಾಣ ವೃತ್ತ ಜೆ.ಎಲ್.ಬಿ ರಸ್ತೆ (ಮುಡಾಕಚೇರಿ ರಸ್ತೆ) ಮತ್ತು ನಗರ ಬಸ್ ನಿಲ್ದಾಣಕ್ಕೆ ಪ್ರಯಾಣದರ ವಯಸ್ಕರಿಗೆ 200 ರೂpAyi ಮತ್ತು ಮಕ್ಕಳಿಗೆ 150 ರೂಪಾಯಿ ನಿಗದಿಪಡಿಸಲಾಗಿದೆ.
ಮೈಸೂರಿನಿಂದ ಬೆಳಗ್ಗೆ ತೆರಳಿ ಸಂಜೆ ವಾಪಸ್
ನಗರ ವೋಲ್ವೋ ವಾಹನಗಳು- ಸಂಜೆ 6ಕ್ಕೆ ನಿರ್ಗಮನವಾಗಲಿದೆ. ಐರಾವತ ಕ್ಲಬ್‌ಕ್ಲಾಸ್ ವಿಶೇಷ ಟ್ರಿಪ್ ನಲ್ಲಿ ಮಡಿಕೇರಿ ಪ್ಯಾಕೇಜ್ನಲ್ಲಿ ನಿಸರ್ಗಧಾಮ, ಗೋಲ್ಡನ್‌ಟೆಂಪಲ್, ಹಾರಂಗಿ ಜಲಾಶಯ, ರಾಜಾ ಸೀಟ್ ಅಬ್ಬಿ ಫಾಲ್ಸ್ (ಪ್ರಯಾಣದರ ವಯಸ್ಕರಿಗೆ 1200 ರೂ ಮತ್ತು ಮಕ್ಕಳಿಗೆ 1000 ರೂ.)

ಈ ಎಲ್ಲ ಪ್ಯಾಕೇಜ್ ಬಸ್‌ಗಳು (ಮೈಸೂರು ನಗರ ದೀಪಾಲಂಕಾರದರ್ಶನ ಹೊರತುಪಡಿಸಿ) ಬೆಳಗ್ಗೆ ಮೈಸೂರಿನಿಂದ ಹೊರಟು ಮೇಲ್ಕಂಡ ವಿವಿಧ ಸ್ಥಳಗಳನ್ನು ಸಂದರ್ಶಿಸಿದ ನಂತರ ಸಾಯಂಕಾಲ ಮೈಸೂರಿಗೆ ವಾಪಸಾಗುತ್ತವೆ. ಅ.20 ರಿಂದ 26ರವರೆಗೆ ಪ್ಯಾಕೇಜ್ ಟ್ರಿಪ್ ವ್ಯವಸ್ಥೆ ಇರಲಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ಮೂಲಕ ತಿಳಿಸಿದೆ.
ಆಸನಗಳನ್ನು ಕಾಯ್ದಿರಿಸುವುದು ಹೇಗೆ?
ರಾಜಹಂಸ ವಿಶೇಷ ಗಿರಿದರ್ಶಿನಿಯಲ್ಲಿ ಬಂಡೀಮರ, ಗೋಪಾಲಸ್ವಾಮಿ ಬೆಟ್ಟ, ಬಿಳಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣದರ ವಯಸ್ಕರಿಗೆ 625 ರೂ ಮತ್ತು ಮಕ್ಕಳಗೆ 400 ರೂ.) ದೇವದರ್ಶಿನಿಯಲ್ಲಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣದರ ವಯಸ್ಕರಿಗೆ 525 ರೂ. ಮತ್ತು ಮಕ್ಕಳಗೆ 350 ರೂ)

ಇ-ಟಿಕೆಟ್ ಬುಕಿಂಗ್‌ನ್ನು ವೆಬ್‌ಸೈಟ್ ಮುಖಾಂತರ, ಮೊಬೈಲ್ ಹಾಗೂ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಸಾರಿಗೆ ನಿಗಮ ಮಾಹಿತಿ ನೀಡಿದೆ. ಒಟ್ಟಾರೆ ಮೈಸೂರಿಗೆ ಬರುವ ಪ್ರವಾಸಿಗರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಯೇ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಈ ಪ್ಯಾಕೇಜ್ ಅನುಕೂಲವಾಗಲಿದೆ.












Click it and Unblock the Notifications