ಮಂಗಳೂರು ಕಡೆಗೆ ಪ್ರವಾಸ ಹೋಗುವವರು ತಪ್ಪದೇ ಈ ಸುದ್ದಿ ಓದಿ!

ಮಕ್ಕಳಿಗೆ ಶಾಲಾ-ಕಾಲೇಜಿನ ರಾಜಾ ದಿನಗಳು ಹತ್ತಿರುವಾಗುತ್ತಿದ್ದಂತೆ ರಾಜ್ಯ ಇಲ್ಲವೇ ದೇಶದ ಯಾವ ಕಡೆಗೆ ಪ್ರವಾಸ ಹೊರಡಬೇಕು ಎಂಬುದರ ಬಗ್ಗೆ ಮನೆಯಲ್ಲಿ ಚರ್ಚೆಗಳು ಶುರುವಾಗುತ್ತವೆ. ಒಂದು ವೇಳೆ ನಿಮ್ಮ ಆಯ್ಕೆ ಮಂಗಳೂರು ಆದ್ರೆ ಏನೆಲ್ಲ ತಯಾರಿ ಮಾಡಿಕೊಳ್ಳಬೇಕು‌ ಅನ್ನೋದರ ಕುರಿತ ವಿವರಗಳಿಗೆ ಈ ಸ್ಟೋರಿ ಓದಿ.

ಕಾಟನ್ ಬಟ್ಟೆಗೆ ಆದ್ಯತೆ ನೀಡಿ

ಕರ್ನಾಟಕದ ಭೌಗೋಳಿಕ ಪ್ರದೇಶವು ವೈವಿಧ್ಯತೆಯಿಂದ ಕೂಡಿದೆ‌. ಬಯಲು, ಕರವಾಳಿ, ಮಲೆನಾಡು ಪ್ರದೇಶಗಳನ್ನು ಒಳಗೊಂಡಿದೆ. ಈ ಮೂರು ಪ್ರದೇಶಗಳು ಏಕಕಾಲದಲ್ಲಿ ಮೂರು ವಿಭಿನ್ನ ರೀತಿಯ ವಾತಾವರಣವನ್ನು ಹೊಂದಿರುತ್ತದೆ.

 Mangaluru Travel Essentials: What You Should Know

ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಸದ್ಯ ಮಂಗಳೂರಿನಲ್ಲಿ ಧಗೆಯ ವಾತಾವರಣ ಇದ್ದು, ಬೆಳಗ್ಗೆ 8, 9 ಗಂಟೆಗೆಲ್ಲಾ ಸುಡು ಸುಡು ಬಿಸಿಲು ಮಧ್ಯಾಹ್ನದ ಹೊತ್ತಿಗೆ ಮತ್ತಷ್ಟು ತಾರಕಕ್ಕೆ ಹೋಗಲಿದೆ. ಈ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ತಿರುಗಾಡಿದರೂ ದೇಹಪೂರ್ತಿ ಬೆವರು ಸುರಿಯುತ್ತದೆ. ನಾವು ಧರಿಸುವ ಉಡುಪು ಬೆವರಿನಿಂದ ಒದ್ದೆ ಆಗುವುದು ಸಾಮಾನ್ಯವಾಗಿದೆ.

ಅದರಲ್ಲೂ ಬೆಂಗಳೂರು, ಮೈಸೂರ ಭಾಗದ ಜನತೆ ಬೇಸಿಗೆ ರಜೆಯ ನಿಮಿತ್ತ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಜೊತೆಗೆ ಬೀಚ್‌ಗಳಿಗೆ ಬರುವುದು ಸಾಮಾನ್ಯ. ಹೀಗಾಗಿ ಈ ಪ್ರವಾಸಿಗರು ಕರಾವಳಿ ಪ್ರದೇಶದ ಬಿಸಿಲ ಧಗೆಯ ಕಿರಿಕಿರಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ ಕಾಟನ್ ಉಡುಪು ಧರಿಸುವುದು ಉತ್ತಮ. ನಮ್ಮ ದೇಹದ ಬೆವರನ್ನು ಕಾಟನ್ ಬಟ್ಟೆ ಹೀರಿಕೊಳ್ಳುವುದರಿಂದ ದೇಹ ಹೆಚ್ಚು ಬೆವರುವುದರಿಂದ ಮುಕ್ತಿ ಪಡೆಯಬಹುದು.

ಹೆಚ್ಚು ನೀರು ಕುಡಿಯಿರಿ

ಪ್ರವಾಸಕ್ಕೆಂದು ಹೊರಟಾಗ ಸಾಮಾನ್ಯವಾಗಿ ಕಾಲ್ನಡಿಗೆ ಹೆಚ್ಚಿರುತ್ತದೆ. ದೇವಸ್ಥಾನಗಳ ಪ್ರದರ್ಶಣೆ, ಬೀಚ್ ನಲ್ಲಿ ಸುತ್ತಾಟ ಇರುತ್ತದೆ‌‌‌‌. ಮಂಗಳೂರು ಭಾಗದ ಬಿಸಿನಲ್ಲಿ ಸುಮ್ಮನೆ ನಿಂತರೂ ದೇಹದಿಂದ ಬೆವರು ಸುರಿಯಲು ಪ್ರಾರಂಭವಾಗುತ್ತದೆ. ಅಂತಹದರಲ್ಲಿ ನಡೆದರೆ ದೇಹದಲ್ಲಿರುವ ನೀರಿನಾಂಶ ಬೆವರಿನ ರೂಪದಲ್ಲಿ ಖಾಲಿ ಆಗುತ್ತದೆ.

ದೇಹದಲ್ಲಿ ನೀರಿನಾಂಶ ಕಡಿಮೆ ಆದರೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಕರಾವಳಿಯ ಪ್ರವಾಸದುದ್ದಕ್ಕೂ ಪದೇ ಪದೇ ನೀರು ಕುಡಿಯುವುದನ್ನು ತಪ್ಪಿಸಕೂಡದು. ಹಾಗೂ ದ್ರವಾಂಶ ಇರುವ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿದರೆ ದೇಹ ತೇವಾಂಶದಿಂದ ಕೂಡಿರುತ್ತದೆ. ಇದರಿಂದ ಪ್ರವಾಸದುದ್ದಕ್ಕೂ ಗೆಲುವಾಗಿರಲು ಸಾಧ್ಯವಾಗಮರೆಯಬೇಡಿ

ಉತ್ತಮ ಮೀನೂಟ ಸವಿಯಿರಿ

ಕರಾವಳಿ ಅಂತ ನೆನಪಾದರೆ ಸಮುದ್ರ, ಮೀನು ನಮ್ಮ ಕಣ್ಮುಂದೆ ಹಾದು ಹೋಗುತ್ತದೆ. ತರಹೇವಾರಿ ಮೀನುಗಳನ್ನು ನೋಡಬಹುದು. ಅದರ ರುಚಿಯನ್ನು ಸವಿಯಬಹುದಾಗಿದೆ. ಅಂತಹ ಅವಕಾಶವನ್ನು ಬಯಲು ಸೀಮೆಯ ಮಂದಿ ಮಿಸ್ ಮಾಡಿಕೊಳ್ಳಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+