ಕರಾವಳಿ ಜನರಿಗೆ ಉಪಯೋಗ, ಮಡಗಾಂವ್-ವೆಲಂಕಣಿ ವಿಶೇಷ ರೈಲು: ವೇಳಾಪಟ್ಟಿ
ಉಡುಪಿ, ಸೆಪ್ಟೆಂಬರ್ 03: ಕೊಂಕಣ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಮಡಗಾಂವ್ ಮತ್ತು ತಮಿಳುನಾಡಿನ ವೆಲಂಕಣಿ ನಡುವೆ ವಿಶೇಷ ರೈಲು ಓಡಿಸುತ್ತಿದೆ. ಈ ರೈಲು ಕರ್ನಾಟಕದ ಕರಾವಳಿ ಮೂಲಕ ಸಾಗಲಿದ್ದು, ಹಲವು ನಿಲ್ದಾಣಗಳನ್ನು ಹೊಂದಿದೆ. ಇದರಿಂದಾಗಿ ಕಾರವಾರ, ಉಡುಪಿ, ಮಂಗಳೂರು ಭಾಗದ ಜನರಿಗೆ ಅನುಕೂಲವಾಗಲಿದೆ. ರೈಲು ಸೇವೆಯ ಮಾರ್ಗ, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ತಮಿಳುನಾಡಿನ ವೆಲಂಕಣಿಯಲ್ಲಿ ನಡೆಯಲಿರುವ ಹಬ್ಬದ ಪ್ರಯುಕ್ತ ಉಂಟಾಗುವ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಮಡಗಾಂವ್ ಮತ್ತು ವೆಲಂಕಣಿ ನಡುವೆ ವಿಶೇಷ ರೈಲು ಓಡಿಸಲಾಗುತ್ತಿದೆ. ಪ್ರಯಾಣಿಕರು ರೈಲು ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ರೈಲು ನಂಬರ್ 01007/ 01008 ಮಡಗಾಂವ್ ಜಂಕ್ಷನ್-ವೆಲಂಕಣಿ-ಮಡಗಾಂವ್ ಜಂಕ್ಷನ್ ನಡುವೆ ಸಂಚಾರವನ್ನು ನಡೆಸಲಿದೆ. ಇದು ಪ್ರಯಾಣಿಕರ ಬೇಡಿಕೆಯಂತೆ ಓಡಿಸುತ್ತಿರುವ ವಿಶೇಷ ಎಕ್ಸ್‌ಪ್ರೆಸ್ ರೈಲಾಗಿದೆ. 19 ಬೋಗಿಯನ್ನು ಹೊಂದಿರುವ ರೈಲು ಇದಾಗಿದ್ದು, ಎರಡೂ ಕಡೆಯಿಂದ ಒಂದು ಟ್ರಪ್ ಮಾತ್ರ ಸಂಚಾರವನ್ನು ನಡೆಸಲಿದೆ.
ಉಡುಪಿ-ಚಿಕ್ಕ ಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿಯಂತೆ ಕೊಂಕಣ ರೈಲ್ವೆ ಮಡಗಾಂವ್-ವೆಲಂಕಣಿ ರೈಲನ್ನು ಕುಂದಾಪುರ-ಉಡುಪಿ-ಮಂಗಳೂರು ಮಾರ್ಗವಾಗಿ ಓಡಿಸಲು ಆದೇಶ ಹೊರಡಿಸಿದೆ.
ರೈಲು ನಂಬರ್ 01007 ಮಡಗಾಂವ್ ಜಂಕ್ಷನ್-ವೆಲಂಕಣಿ ರೈಲು ದಿನಾಂಕ 6/09/2024ರಂದು ಮಧ್ಯಾಹ್ನ 12.30ಕ್ಕೆ ಮಡಗಾಂವ್‌ನಿಂದ ಹೊರಟು ಸಂಜೆ ಮರುದಿನ ಮಧ್ಯಾಹ್ನ 12.25ಕ್ಕೆ ವೆಲಂಕಣಿ ತಲುಪಲಿದೆ. ರೈಲು ನಂಬರ್ 01008 ವೆಲಂಕಣಿ-ಮಡಗಾಂವ್ ವಿಶೇ ರೈಲು 7/09/2024ರ ರಾತ್ರಿ 11.55ಕ್ಕೆ ವೆಲಂಕಣಿಯಿಂದ ಹೊರಟು ಮರುದಿನ ರಾತ್ರಿ 11ಕ್ಕೆ ಮಡಗಾಂವ್ ತಲುಪಲಿದೆ.
ಈ ರೈಲು ಮಡಗಾಂವ್ ಜಂಕ್ಷನ್, ಕಾರವಾರ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ (ಬೈಂದೂರು), ಕುಂದಾಪುರ, ಉಡುಪಿ, ಸುರತ್ಕಲ್, ತೊಕೂರು, ಮಂಗಳೂರು ಜಂಕ್ಷನ್, ಕಾಸರಗೋಡು, ಪಯನ್ನಾರ್, ಕಣ್ಣೂರು, ತಿಲ್ಲಚ್ಚೇರಿ, ಕೊಯೀಕ್ಕೋಡ್, ತಿರೂರು, ಪಾಲಕ್ಕಾರ್, ಪೊದನೂರು, ಕೊಯಮತ್ತೂರು, ಈರೋಡ್, ಕರೂರು ಜಂಕ್ಷನ್ ಮೂಲಕ ವೆಲಂಕಣಿ ತಲುಪಲಿದೆ.
ಉತ್ತರ ಕರ್ನಾಟಕ ಭಾಗದ ಜನರಿಗೂ ಅನುಕೂಲ: ನೈಋತ್ಯ ರೈಲ್ವೆ ವಾಸ್ಕೋ-ಡ-ಗಾಮಾ ಮತ್ತು ವೆಲಂಕಣಿ ನಡುವೆ ವಿಶೇಷ ರೈಲು ಓಡಿಸುತ್ತಿದೆ. ರೈಲು ಉತ್ತರ ಕರ್ನಾಟಕದ ಮೂಲಕ ಸಾಗಲಿದ್ದು, ಹಲವು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಈ ರೈಲು ಬೆಂಗಳೂರು ನಗರಕ್ಕೆ ಆಗಮಿಸಿ, ಅಲ್ಲಿಂದ ವೆಲಂಕಣಿಗೆ ಸಂಚಾರ ನಡೆಸಲಿದೆ.
ರೈಲು ಸಂಖ್ಯೆ 07361 6ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ರಾತ್ರಿ 9.55 ಗಂಟೆಗೆ ಹೊರಟು, ಮೂರನೇ ದಿನ ಮಧ್ಯರಾತ್ರಿ 01.30 ಗಂಟೆಗೆ ವೆಲಂಕಣಿ ನಿಲ್ದಾಣವನ್ನು ತಲುಪಲಿದೆ. ರೈಲು ಸಂಖ್ಯೆ 07362 ಸೆಪ್ಟೆಂಬರ್ 4 ಮತ್ತು 8 ರಂದು ರಾತ್ರಿ 11.55 ಗಂಟೆಗೆ ವೆಲಂಕಣಿ ನಿಲ್ದಾಣದಿಂದ ಹೊರಟು, ಮೂರನೇ ದಿನ ಮಧ್ಯರಾತ್ರಿ 12.15 ಗಂಟೆಗೆ ವಾಸ್ಕೊ-ಡ-ಗಾಮಾ ನಿಲ್ದಾಣ ತಲುಪಲಿದೆ.
ರೈಲು ಎರಡು ಮಾರ್ಗದಲ್ಲಿ ಮಡಗಾಂವ್, ಸ್ಯಾನ್ವೋರ್ಡಮ್, ಕುಲೆಂ, ಕ್ಯಾಸಲ್ ರಾಕ್, ಲೋಂಡಾ, ಧಾರವಾಡ, ಎಸ್‌ಎಸ್ಎಸ್ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೃಷ್ಣರಾಜಪುರಂ, ವೈಟೇಲ್, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ತಂಜಾವೂರು, ತಿರುವರೂ ಮತ್ತು ನಾಗಪಟ್ಟಣಂನಲ್ಲಿ ನಿಲುಗಡೆ ಹೊಂದಿದೆ.












Click it and Unblock the Notifications