ಭಾರತದ ಕೊನೆಯ ರೈಲು ನಿಲ್ದಾಣ ಯಾವುದು ಗೊತ್ತಾ? ಇಲ್ಲಿದೆ ಕುತೂಹಲಕರ ಮಾಹಿತಿ

ಭಾರತೀಯ ರೈಲ್ವೆ ಜಾಲವು ದೇಶದ ಹಳ್ಳಿಗಳಿಂದ ಮಹಾನಗರಗಳವರೆಗೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಪರ್ವತಗಳು, ಅರಣ್ಯಗಳು, ಮರುಭೂಮಿಗಳು ಮತ್ತು ಗಡಿಭಾಗಗಳನ್ನು ದಾಟುತ್ತಾ ಸಾಗುವ ಈ ರೈಲು ಮಾರ್ಗಗಳ ಕೊನೆಯಲ್ಲಿ ಒಂದು ವಿಶೇಷ ನಿಲ್ದಾಣವಿದೆ. ಅತಿ ಸರಳವಾಗಿ ಕಾಣುವ ಈ ನಿಲ್ದಾಣವೇ ಭಾರತದ ಕೊನೆಯ ರೈಲು ನಿಲ್ದಾಣವೆಂದು ಪರಿಗಣಿಸಲ್ಪಡುತ್ತದೆ.

ಭಾರತದ ಕೊನೆಯ ರೈಲು ನಿಲ್ದಾಣ

ಪಶ್ಚಿಮ ಬಂಗಾಳದ ರಾಜ್ಯದಲ್ಲಿರುವ ಸಿಂಗಾಬಾದ್ ರೈಲು ನಿಲ್ದಾಣ ಭಾರತದ ಕೊನೆಯ ರೈಲು ನಿಲ್ದಾಣವಾಗಿದೆ. ಇದು ಭಾರತ-ಬಾಂಗ್ಲಾದೇಶ ಗಡಿಯ ಸಮೀಪದಲ್ಲಿದ್ದು, ಭಾರತೀಯ ರೈಲ್ವೆಯ ಪೂರ್ವ ದಿಕ್ಕಿನ ಅಂತಿಮ ನಿಲ್ದಾಣ ಎಂದು ಗುರುತಿಸಿಕೊಂಡಿದೆ. ಈ ನಿಲ್ದಾಣದ ನಂತರ ರೈಲು ಹಳಿ ಬಾಂಗ್ಲಾದೇಶದ ಕಡೆಗೆ ಸಾಗುತ್ತದೆ.

Indian railways

ಸಿಂಗಾಬಾದ್ ರೈಲು ನಿಲ್ದಾಣ ಎಲ್ಲಿದೆ?

ಸಿಂಗಾಬಾದ್ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿದೆ. ಇದು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಿಂಗಾಬಾದ್-ರೋಹನ್ಪುರ್ ರೈಲು ಮಾರ್ಗದ ಭಾಗವಾಗಿದೆ. ಬ್ರಿಟಿಷರ ಕಾಲದಲ್ಲಿ ಈ ಮಾರ್ಗವು ವ್ಯಾಪಾರ ಮತ್ತು ಸಂಚಾರದ ದೃಷ್ಟಿಯಿಂದ ಮಹತ್ವ ಪಡೆದಿತ್ತು.

Special Express Train: ಬೆಂಗಳೂರಿನಿಂದ ಇಲ್ಲಿಗೆ ಏಕಮಾರ್ಗ ವಿಶೇಷ ರೈಲು, ವೇಳಾಪಟ್ಟಿ ಹೀಗಿದೆ
Special Express Train: ಬೆಂಗಳೂರಿನಿಂದ ಇಲ್ಲಿಗೆ ಏಕಮಾರ್ಗ ವಿಶೇಷ ರೈಲು, ವೇಳಾಪಟ್ಟಿ ಹೀಗಿದೆ

ಈ ನಿಲ್ದಾಣದ ವಿಶೇಷತೆ ಏನು?

ಸಿಂಗಾಬಾದ್ ರೈಲು ನಿಲ್ದಾಣದಲ್ಲಿ ಸಾಮಾನ್ಯವಾಗಿ ಪ್ರಯಾಣಿಕರ ಸಂಚಾರವು ಬಹಳ ಕಡಿಮೆ. ಆದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸರಕು ಸಾಗಣೆಯಲ್ಲಿ ಇದು ಅತ್ಯಂತ ಮುಖ್ಯವಾದ ಪಾತ್ರವಹಿಸುತ್ತದೆ. ಜಲ್ಲಿಕಲ್ಲು ಮತ್ತು ಖನಿಜಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಈ ಮಾರ್ಗದ ಮೂಲಕ ಸಾಗಿಸಲಾಗುತ್ತದೆ.

ಭಾರತೀಯ ರೈಲ್ವೆಯ ಕಾರ್ಯಾಚರಣೆಗಳು ಇಲ್ಲಿ ಅಂತ್ಯಗೊಳ್ಳುತ್ತವೆ ಎಂಬ ಕಾರಣಕ್ಕೆ ಈ ನಿಲ್ದಾಣ ಭೌಗೋಳಿಕ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ವಿಶೇಷವಾದ ಮಹತ್ವ ಪಡೆದಿದೆ.

Vande Bharat: ಬೆಂಗಳೂರು ವಂದೇ ಭಾರತ್, ಶತಾಬ್ಧಿ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ರದ್ದು
Vande Bharat: ಬೆಂಗಳೂರು ವಂದೇ ಭಾರತ್, ಶತಾಬ್ಧಿ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ರದ್ದು

ಅಂತ್ಯಗೊಳ್ಳುವ ರೈಲು ಪಯಣ

ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾದ ಭಾರತೀಯ ರೈಲ್ವೆಯ ಪಯಣ ಇಲ್ಲಿ ನಿಶ್ಶಬ್ದವಾಗಿ ಅಂತ್ಯಗೊಳ್ಳುತ್ತದೆ. ಯಾವುದೇ ದೊಡ್ಡ ಘೋಷಣೆಗಳಿಲ್ಲದೆ, ಶಾಂತವಾಗಿ ನಿಂತಿರುವ ಸಿಂಗಾಬಾದ್ ನಿಲ್ದಾಣ ಭಾರತೀಯ ರೈಲ್ವೆಯ ಅಪಾರ ವ್ಯಾಪ್ತಿಗೆ ಸಾಕ್ಷಿಯಾಗಿದೆ.

ಹೇಗೆ ತಲುಪಬಹುದು?

ಸಿಂಗಾಬಾದ್ ರೈಲು ನಿಲ್ದಾಣಕ್ಕೆ ನೇರ ಪ್ರಯಾಣಿಕರ ರೈಲು ಸೇವೆಗಳು ಸೀಮಿತವಾಗಿವೆ. ಗಡಿಭಾಗದಲ್ಲಿರುವುದರಿಂದ ಭದ್ರತಾ ನಿಯಮಗಳು ಕೂಡ ಕಠಿಣವಾಗಿವೆ. ಆದರೂ ರೈಲು ಪ್ರಿಯರು ಮತ್ತು ಪ್ರವಾಸಾಸಕ್ತರಿಗೆ ಈ ಸ್ಥಳ ವಿಶೇಷ ಆಕರ್ಷಣೆಯಾಗಿದೆ.

ಸಾಮಾನ್ಯವಾಗಿ ದೊಡ್ಡ ನಗರಗಳ ರೈಲು ನಿಲ್ದಾಣಗಳು ಯಾವಾಗಳು ಜನಸಂದಣಿ ಮತ್ತು ಗದ್ದಲಗಳಿಗೆ ಹೆಸರಾಗಿದ್ದರೆ, ಸಿಂಗಾಬಾದ್ ನಿಲ್ದಾಣವು ವಿಬಿನ್ನವಾದ ಅನುಭವ ನೀಡುತ್ತದೆ. ಇಲ್ಲಿನ ನಿಶ್ಶಬ್ದ ವಾತಾವರಣ, ಗಡಿಯ ಸಮೀಪದ ಗ್ರಾಮೀಣ ಸೌಂದರ್ಯ ಮತ್ತು ಕೊನೆಯವರೆಗೂ ಸಾಗುವ ರೈಲು ಹಳಿಗಳು ಪ್ರವಾಸಿಗರ ಕುತೂಹಲವನ್ನು ಹೆಚ್ಚಿಸುತ್ತವೆ. ರೈಲ್ವೆ ಪ್ರಿಯರು, ಭೂಗೋಳ ಅಧ್ಯಯನ ಆಸಕ್ತರು ಮತ್ತು ಅಪರೂಪದ ಸ್ಥಳಗಳನ್ನು ಅನ್ವೇಷಿಸಲು ಇಚ್ಛಿಸುವವರಿಗೆ ಇದು ವಿಶೇಷ ಆಕರ್ಷಣೆಯ ತಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+