ಕೃಷ್ಣ ಜನ್ಮಾಷ್ಟಮಿ 2023: ನೀವು ಭೇಟಿ ನೀಡಲೇಬೇಕಾದ 10 ಶ್ರೀಕೃಷ್ಣನಿಗೆ ಅರ್ಪಿತವಾದ ದೇವಾಲಯಗಳು
ಕೃಷ್ಣ ಜನ್ಮಾಷ್ಟಮಿ ಇನ್ನೇನು ದೂರವಿಲ್ಲ. ಈ ದಿನ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬರಾದ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 06ರಂದು ಬಂದಿದೆ.
ದೇಶಾದ್ಯಂತ ಈ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಲ್ಲೂ ಶ್ರೀಕೃಷ್ಣನಿಗೆ ಅರ್ಪಿತವಾದ ದೇವಾಲಯಗಳಲ್ಲಿ ಈ ಹಬ್ಬದ ಸಡಗರ ಮುಗಿಲುಮುಟ್ಟಿರುತ್ತದೆ. ವಾರದ ಮಧ್ಯ ಕೃಷ್ಣ ಜನ್ಮಾಷ್ಟಮಿ ಬಂದಿರುವುದರಿಂದ ಕೆಲಸಕ್ಕೆ ಹೋಗುವವರಿಗೆ ದೇವಸ್ಥಾನಗಳಿಗೆ ಹೋಗಲು ಕಷ್ಟವಾಗಬಹುದು.

ಆದರೆ ವಾರಾಂತ್ಯಕ್ಕೆ ಈ ದೇವಾಲಯಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಈ ವಾರ ಎಲ್ಲಾದರು ಹೋಗಬೇಕು ಅಂದುಕೊಂಡಿದ್ದರೆ ಶ್ರೀಕೃಷ್ಣನಿಗೆ ಸಂಬಂಧಿಸಿದ ಜನಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ. ಅಂತಹ ಹಲವು ದೇವಸ್ಥಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಈ ವಾರಾಂತ್ಯದಲ್ಲಿ ಕೃಷ್ಣನಿಗೆ ಸಮರ್ಪಿತವಾಗಿರುವ 10 ದೇವಾಲಯಗಳ ಮೂಲಕ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸೋಣ ಮತ್ತು ವಾಸ್ತುಶಿಲ್ಪದ ಅದ್ಭುತಗಳನ್ನು ಕಣ್ತುಂಬಿಕೊಳ್ಳೋಣ.
1. ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನ, ಮಥುರಾ
ಶ್ರೀಕೃಷ್ಣನ ಜನ್ಮಸ್ಥಳವೆಂದು ನಂಬಲಾದ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದಲ್ಲಿ ನಿಮ್ಮ ತೀರ್ಥಯಾತ್ರೆಯನ್ನು ಪ್ರಾರಂಭಿಸಿ. ಸುಂದರವಾದ ವಿಗ್ರಹಗಳು ನಿಮ್ಮ ಭಕ್ತಿಯನ್ನು ಹೆಚ್ಚಿಸುತ್ತವೆ. ಇಲ್ಲಿ ಭಕ್ತರ ಮೋಡಿಮಾಡುವ ಭಜನೆಗಳು ನಡೆಯುತ್ತವೆ. ಇದರಲ್ಲಿ ಭಾಗವಹಿಸುವ ಮೂಲಕ ಕೃಷ್ಣನ ಆರಾಧನೆ ಮಾಡಿ.

2. ದ್ವಾರಕಾಧೀಶ ದೇವಸ್ಥಾನ, ದ್ವಾರಕಾ
ಗುಜರಾತ್‌ನ ದ್ವಾರಕಾ ನಗರದಲ್ಲಿರುವ ದ್ವಾರಕಾಧೀಶ ದೇವಾಲಯಕ್ಕೆ ನಿಮ್ಮ ಪ್ರಯಾಣವನ್ನು ಮುಂದುವರಿಸಿ. ಅದರ ಭವ್ಯವಾದ ವಾಸ್ತುಶಿಲ್ಪಕ್ಕೆ ಬೆರಗಾಗಿಸುವ ಶಕ್ತಿ ಇದೆ. ಭಕ್ತಿಯಿಂದ ಸಂಜೆಯ ಆರತಿಯನ್ನು ವೀಕ್ಷಿಸಿ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ, ನೆಮ್ಮದಿಯ ವಾತಾವರಣ ನೀಡುತ್ತದೆ.
3. ಬಂಕೆ ಬಿಹಾರಿ ಮಂದಿರ, ವೃಂದಾವನ
ಮುಂದಿನ ನಿಲ್ದಾಣ ವೃಂದಾವನದಲ್ಲಿರುವ ಬಂಕೆ ಬಿಹಾರಿ ಮಂದಿರ. ಅಲ್ಲಿ ನೀವು ಭಗವಾನ್ ಕೃಷ್ಣನ ಲವಲವಿಕೆಯ ರೂಪವನ್ನು ವೀಕ್ಷಿಸಬಹುದು. ಏಕೆಂದರೆ ಅವನು ತನ್ನ ಭಕ್ತರ ನಡುವೆ ಆಕರ್ಷಕವಾಗಿ ನಿಂತಿದ್ದಾನೆ. ಇಲ್ಲಿ ನೀವು ದೈವಿಕ ಪ್ರೀತಿ ಮತ್ತು ಭಕ್ತಿಯನ್ನು ಅನುಭವಿಸುವಿರಿ.
4. ಇಸ್ಕಾನ್ ದೇವಾಲಯ, ದೆಹಲಿ
ಭಗವಾನ್ ಕೃಷ್ಣನ ಸಮ್ಮೋಹನಗೊಳಿಸುವ ದೇವರನ್ನು ವೀಕ್ಷಿಸಲು ದೆಹಲಿಯಲ್ಲಿರುವ ಐಕಾನಿಕ್ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಆತ್ಮವನ್ನು ಕಲಕುವ ಭಜನೆಗಳು ಮತ್ತು ಆಧ್ಯಾತ್ಮಿಕ ಪ್ರವಚನಗಳಲ್ಲಿ ಮುಳುಗಿರಿ.
5. ಪ್ರೇಮ ಮಂದಿರ, ವೃಂದಾವನ
ವೃಂದಾವನದಲ್ಲಿರುವ ಮೋಡಿಮಾಡುವ ಪ್ರೇಮ ಮಂದಿರಕ್ಕೆ ನೀವು ಮುಸ್ ಮಾಡದೇ ಭೇಟಿ ನೀಡಲೇಬೇಕು. ಇದು ಕೃಷ್ಣನ ವಿವಿಧ ಕಾಲಕ್ಷೇಪಗಳನ್ನು ಚಿತ್ರಿಸುವ ಸೊಗಸಾದ ಅಮೃತಶಿಲೆಯ ಕೆತ್ತನೆಗಳನ್ನು ಪ್ರದರ್ಶಿಸುತ್ತದೆ. ಸಂಜೆಯ ಬೆಳಕಿನಲ್ಲಿ ಈ ಭವ್ಯತೆಯನ್ನು ವೀಕ್ಷಿಸುವುದೇ ಒಂದು ಆನಂದ.
6. ಉಡುಪಿ ಶ್ರೀಕೃಷ್ಣ ಮಠ, ಕರ್ನಾಟಕ
ಈ ವಾರಾಂತ್ಯಕ್ಕೆ ಕರ್ನಾಟಕದ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ. ಈ ಶ್ರೀಕೃಷ್ಣ ದೇವಾಲಯದಲ್ಲಿ ರುಚಿಕರವಾದ 'ಪ್ರಸಾದ' (ಪವಿತ್ರ ಆಹಾರ) ನೀಡಲಾಗುತ್ತದೆ. ವಿಶಿಷ್ಟ ಸಂಪ್ರದಾಯಕ್ಕೆ ಹೆಸರುವಾಸಿಯಾದ ದೇವಾಲಯ ಇದಾಗಿದೆ. ನೀವಿಲ್ಲಿ ದೈವಿಕ ಆನಂದ ಮತ್ತು ಸರಳತೆಯನ್ನು ಅನುಭವಿಸಬಹುದು.
7. ಗುರುವಾಯೂರ್ ದೇವಸ್ಥಾನ, ಕೇರಳ
ಕೇರಳದ ಪುರಾತನವಾದ ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿ. ಇಲ್ಲಿ ಕೃಷ್ಣನ ರೂಪವನ್ನು ಗುರುವಾಯೂರಪ್ಪನಿಗೆ ಸಮರ್ಪಿಸಲಾಗಿದೆ. ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟ ಭವ್ಯ ಮೂರ್ತಿ ಇಲ್ಲಿದೆ. ಇಲ್ಲಿ ಆಧ್ಯಾತ್ಮಿಕ ಸೆಳವು ಅನುಭವಿಸುವಿರಿ.
8. ನಾಥದ್ವಾರ ಶ್ರೀನಾಥಜಿ ದೇವಸ್ಥಾನ, ರಾಜಸ್ಥಾನ
ರಾಜಸ್ಥಾನದ ನಾಥದ್ವಾರ ಶ್ರೀನಾಥ್‌ಜಿ ದೇವಸ್ಥಾನಕ್ಕೆ ನಿಮ್ಮ ತೀರ್ಥಯಾತ್ರೆಯನ್ನು ಮುಂದುವರಿಸಬಹುದು. ಅಥವಾ ಇದೊಂದೇ ಸ್ಥಳಕ್ಕೆ ನೀವು ಭೇಟಿ ನೀಡಬಹುದು. ಇಲ್ಲಿ ಶ್ರೀಕೃಷ್ಣನು ಏಳು ವರ್ಷದ ಮಗುವಿನಂತೆ ಪೂಜಿಸಲ್ಪಡುತ್ತಾನೆ. ಈ ಭವ್ಯ ದರ್ಶನಕ್ಕೆ ಸಾಕ್ಷಿಯಾಗಿ ಭಕ್ತಿಯಲ್ಲಿ ಮುಳುಗಿರಿ.
9. ಜಗನ್ನಾಥ ದೇವಾಲಯ, ಪುರಿ
ಒಡಿಶಾದ ಪುರಿಯಲ್ಲಿರುವ ಪವಿತ್ರ ಜಗನ್ನಾಥ ದೇವಾಲಯಕ್ಕೆ ಹೋಗಿ. ಇಲ್ಲಿ ಶ್ರೀಕೃಷ್ಣನ ರೂಪವನ್ನು ಭಗವಾನ್ ಜಗನ್ನಾಥನಿಗೆ ಸಮರ್ಪಿಸಲಾಗಿದೆ. ನೀವಿಲ್ಲಿ ಪ್ರಸಿದ್ಧ ರಥಯಾತ್ರೆಯ ಉತ್ಸವಕ್ಕೆ ಸಾಕ್ಷಿಯಾಗಬಹುದು. ದೇವರಿಂದ ಆಶೀರ್ವಾದ ಪಡೆಯಬಹುದು.
10. ಶ್ರೀ ಕೃಷ್ಣ ಬಲರಾಮ ಮಂದಿರ (ಇಸ್ಕಾನ್), ವೃಂದಾವನ
ಪ್ರಮುಖ ಇಸ್ಕಾನ್ ದೇವಾಲಯವಾದ ವೃಂದಾವನದಲ್ಲಿರುವ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ನಿಮ್ಮ ದೈವಿಕ ಪ್ರಯಾಣವನ್ನು ಮುಕ್ತಾಯಗೊಳಿಸಿ. ಮೋಡಿಮಾಡುವ ಆರತಿ ಇಲ್ಲಿ ನಡೆಯಲಿದೆ. ಇದಕ್ಕೆ ನೀವು ಸಾಕ್ಷಿಯಾಗಿ ಮತ್ತು ಲೌಕಿಕ ಗಡಿಗಳನ್ನು ಮೀರಿದ ಆಧ್ಯಾತ್ಮಿಕ ವಾತಾವರಣವನ್ನು ಅನುಭವಿಸಿ.












Click it and Unblock the Notifications