Get Updates
Get notified of breaking news, exclusive insights, and must-see stories!

ಪ್ರವಾಸಿಗರ ಹಾಟ್‌ಸ್ಪಾಟ್‌ ಆದ ಹುಬ್ಬಳ್ಳಿಯ ನೃಪತುಂಗ ಬೆಟ್ಟ

ಹುಬ್ಬಳ್ಳಿ, ಅಕ್ಟೋಬರ್‌, 05: ಉಣಕಲ್‌ನ ನೃಪತುಂಗ ಬೆಟ್ಟದ ಮೇಲೆ ನಿಂತರೆ ಹುಬ್ಬಳ್ಳಿಯ ಇಡೀ ನಗರದ ಅದ್ಭುತ ನೋಟವೇ ಕಾಣುತ್ತದೆ. ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿರುವ ಎತ್ತರದ ಹಿಲ್‌ಸ್ಟೇಶನ್ ಇದಾಗಿದೆ. ಬೆಟ್ಟದ ತುದಿಯಲ್ಲಿ ದೇವಿ ದೇವಸ್ಥಾನವೂ ಒಂದಿದೆ. ಸುಸಜ್ಜಿತವಾದ ರಸ್ತೆಗಳ ಲಭ್ಯತೆಯಿಂದ, ಸ್ಥಳೀಯರು ಮತ್ತು ಪ್ರವಾಸಿಗರು ಸೇರಿದಂತೆ ಬೆಳಗ್ಗೆ ವಾಕಿಂಗ್‌ ಹೋಗುವವರಿಗೂ ಈ ತಾಣ ಜನಪ್ರಿಯವಾಗಿದೆ.

ವಾಣಿಜ್ಯ ನಗರಿ ಎಂದು ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿ ನಗರ ಅನೇಕ ಸುಂದರ ಪ್ರವಾಸಿ ತಾಣಗಳನ್ನು ಹೊಂದಿದೆ. ಪ್ರಮುಖ ಪ್ರವಾಸಿ ತಾಣಗಳಲ್ಲಿ ನೃಪತುಂಗ ಬೆಟ್ಟವು ಒಂದಾಗಿದೆ. ನಗರದಿಂದ 4 ಕಿಲೋ ಮೀಟರ್‌ ದೂರದಲ್ಲಿ ಹಾಗೂ ಉಣಕಲ್ ರೈಲು ನಿಲ್ದಾಣದಿಂದ ಅತಿ ಸಮೀಪದಲ್ಲಿ ನೃಪತುಂಗ ಬೆಟ್ಟ ಇದೆ. ನೃಪತುಂಗ ಬೆಟ್ಟದ ಉದ್ಯಾನವನದಲ್ಲಿ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಜರುಗುತ್ತವೆ.

ಪ್ರವಾಸಿಗರಿಗೆ ಹುಬ್ಬಳ್ಳಿಯ ನೃಪತುಂಗ ಬೆಟ್ಟವು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಈ ಬೆಟ್ಟವನ್ನು ತಲುಪಿದ ನಂತರ ಪ್ರಯಾಣಿಕರಿಗೆ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ಸುಂದರ ನೋಟವನ್ನು ಸವಿಯಲು ಅವಕಾಶ ಸಿಗುತ್ತದೆ. ಜೊತೆಗೆ ಪಶ್ಚಿಮದ ವಿಮಾನ ನಿಲ್ದಾಣಕ್ಕೂ, ಉತ್ತರದ ಅಮರಗೋಳದ ಕಡೆಗೂ ಭೇಟಿ ನೀಡಿ ಅಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ. ಅಲ್ಲದೆ ನೃಪತುಂಗ ಬೆಟ್ಟದ ತುದಿಯಲ್ಲಿರುವ ದೇವಿ ದೇವಾಲಯಕ್ಕೂ ಭೇಟಿ ನೀಡಬಹುದಾಗಿದ್ದು, ಇದು ಪ್ರವಾಸಿಗರಿಗೆ ಸೂಕ್ತ ಪ್ರವಾಸಿ ತಾಣವಾಗಿದೆ. 1974ರಲ್ಲಿ ಇಲ್ಲಿನ ರಸ್ತೆಗಳು ಸುಗಮವಾದ ನಂತರ ಈ ಪ್ರದೇಶ ಜನಪ್ರಿಯವಾಗಿದೆ. ಉತ್ತಮ ರಸ್ತೆಗಳ ಲಭ್ಯತೆಯಿಂದ, ಈ ಬೆಟ್ಟಕ್ಕೆ ಸ್ಥಳೀಯರು ಮತ್ತು ಪ್ರವಾಸಿಗರು ಕಿಕ್ಕಿರಿದು ಬರುತ್ತಾರೆ.

ಪ್ರವಾಸಿಗರ ದಂಡೇ ನೆರೆಯುತ್ತದೆ

ಪ್ರವಾಸಿಗರ ದಂಡೇ ನೆರೆಯುತ್ತದೆ

ಇಲ್ಲಿನ ವಾತಾವರಣವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ನೃಪತುಂಗ ಬೆಟ್ಟದ ಅತ್ಯುತ್ತಮ ನಿರ್ವಹಣೆಯಲ್ಲಿ ಕಾರ್ಮಿಕರ ಪಾತ್ರವು ಪ್ರಮುಖವಾಗಿದ್ದು, ಅವರಿಗೆ ಪ್ರಶಂಸೆಗಳು ಹರಿದುಬರುತ್ತಿವೆ. ಈ ಸ್ಥಳದಲ್ಲಿ ದೇವಸ್ಥಾನ ಮತ್ತು ದರ್ಗಾವನ್ನು ಹೊಂದಿರುವುದರಿಂದ, ಯಾವುದೇ ಜಾತಿ ಧರ್ಮ ಎನ್ನದೇ ಸಮಾನ ಮನೋಭಾವದಿಂದ ಇಲ್ಲಿಗೆ ಬಂದ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಸವಿದು ಹಿಂದಿರುತ್ತಾರೆ.

ವಯಸ್ಸಿಗನುಗುಣವಾಗಿ ಟಿಕೆಟ್‌ ದರ ನಿಗದಿ

ವಯಸ್ಸಿಗನುಗುಣವಾಗಿ ಟಿಕೆಟ್‌ ದರ ನಿಗದಿ

ಈ ಸುಂದರವಾದ ಸ್ಥಳಕ್ಕೆ ಹೋಗುವಾಗ ನೀವು ನಗರದ ಜನಸಂದಣಿಯಿಂದ ದೂರಬಂದಂತೆ ಅನಿಸುತ್ತದೆ. ಅಲ್ಲಿನ ಆವರಣದಲ್ಲಿ ಮಾರಾಟ ಮಾಡಲಾಗುವ ರುಚಿಕರವಾದ ತಿಂಡಿಗಳನ್ನು ಸವಿಯಲು ಜನಸಾಗರವೇ ನೆರೆಯುತ್ತದೆ. ಬೆಟ್ಟದ ಮೇಲಿನಿಂದ 1 ಕಿಲೋ ಮೀಟರ್‌ ದೂರದಲ್ಲಿ ಹೊಸ ದ್ವಾರವನ್ನು ನಿರ್ಮಿಸಲಾಗಿದೆ. ಪ್ರವೇಶ ದ್ವಾರದಲ್ಲಿ ವಾಹನಗಳು ನಿಲುಗಡೆ ಇದ್ದು, ಪ್ರವಾಸಿಗರು ದ್ವಾರದವರೆಗೂ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇಲ್ಲಿ ಒಬ್ಬರಿಗೆ 10 ರೂಪಾಯಿ ಪ್ರವೇಶ ಶುಲ್ಕ ಇದ್ದು, ಮತ್ತು 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 5 ರೂಪಾಯಿ ಟಿಕೆಟ್‌ ದರವನ್ನು ನಿಗದಿಪಡಿಸಿದ್ದಾರೆ. ನಡೆಯಲು ಸಾಧ್ಯವಾಗದ ಹಿರಿಯ ಅತ್ಯಲ್ಪ ಶುಲ್ಕವನ್ನು ನೀಡಿ ಸಾರಿಗೆ ಸೌಲಭ್ಯವನ್ನು ಪಡೆಯಬಹುದಾಗಿದೆ.

ರೆಟ್ಟೋರೆಂಟ್‌ನಲ್ಲಿರುವ ತಿನಿಸುಗಳ ವಿವರ

ರೆಟ್ಟೋರೆಂಟ್‌ನಲ್ಲಿರುವ ತಿನಿಸುಗಳ ವಿವರ

ಇಲ್ಲಿ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಅನ್ನು ಸ್ಥಾಪಿಸಲಾಗಿದೆ. ಗಿರ್ಮಿಟ್, ಭಜ್ಜಿ, ಫ್ರೈಡ್ ರೈಸ್ ಮತ್ತು ನೂಡಲ್ಸ್, ದಕ್ಷಿಣ ಭಾರತದ ಊಟ, ಡೋಸಸ್, ಐಸ್ ಕ್ರೀಮ್ಸ್ ಮುಂತಾದ ನೂಡಲ್ಸ್‌ ತಿಂಡಿಗಳನ್ನು ಇಲ್ಲಿ ಸವಿಯಬಹುದಾಗಿದೆ. ಈ ಸ್ಥಳದಲ್ಲಿ ಮಕ್ಕಳ ಉದ್ಯಾನವನವೂ ಇದ್ದು, ಮಕ್ಕಳಿಗೆ ಇಷ್ಟ ಆಗುವಂತಹ ವಿವಿಧ ಆಟದ ಸವಾರಿಗಳನ್ನು ಅಳವಡಿಸಿದ್ದಾರೆ. 1974ರಲ್ಲಿ ಸ್ಥಾಪಿಸಲಾದ ಆನೆ ಸ್ಲೈಡ್ ಪಾರ್ಕ್‌ ಕಾರ್ಮಿಕರ ಶ್ರಮದ ಕಾರಣ ಇನ್ನು ಅಳಿವಿನಂಚಿಗೆ ಸಾಗದೇ ಹೊಸರೀತಿಯಲ್ಲಿ ನಿರ್ಮಾಣ ಆದಂತೆ ಭಾಸ ಆಗುತ್ತದೆ.

ಪ್ರವೇಶ ದ್ವಾರದ ಬಳಿ ನಿಗದಿ ಮಾಡಿದ ಶುಲ್ಕ?

ಪ್ರವೇಶ ದ್ವಾರದ ಬಳಿ ನಿಗದಿ ಮಾಡಿದ ಶುಲ್ಕ?

ನೃಪತುಂಗ ಬೆಟ್ಟಕ್ಕೆ ಭೇಟಿ ನೀಡಲು ಸೂರ್ಯಾಸ್ತ ಅತ್ಯುತ್ತಮ ಸಮಯ ಆಗಿದೆ. ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ನೃಪತುಂಗ ಬೆಟ್ಟಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ. ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1:30ರವರೆಗೆ ಮತ್ತು ಮಧ್ಯಾಹ್ನ 2ರಿಂದ 8:30ರವರೆಗೆ ಈ ಬೆಟ್ಟಕ್ಕೆ ಹೋಗಲು ಅವಕಾಶವನ್ನು ಕಲ್ಪಿಸಲಾಗಿದೆ. ಪ್ರವೇಶವನ್ನು ಬೆಟ್ಟದಿಂದ ಕೇವಲ 1 ಕಿಲೋ ಮೀಟರ್‌ ದೂರ ನಿರ್ಮಿಸಲಾಗಿದೆ. ಕಾರಿನಲ್ಲಿ ಬರುವ ಪ್ರವಾಸಿಗರು ಈ ಪ್ರವೇಶದ ಬಳಿ ತಮ್ಮ ವಾಹನ ನಿಲುಗಡೆ ಮಾಡಿ ನೃಪತುಂಗ ಬೆಟ್ಟ ಪ್ರವೇಶಿಸಲು ಟಿಕೆಟ್ ಕೊಂಡುಕೊಳ್ಳಬಹುದು. ಪ್ರವೇಶ ಶುಲ್ಕ ವಯಸ್ಕರಿಗೆ 10 ರೂಪಾಯಿ ಇದ್ದು, ಮಕ್ಕಳಿಗೆ 5 ರೂಪಾಯಿ ನಿಗದಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+