Get Updates
Get notified of breaking news, exclusive insights, and must-see stories!

ಮಹಾಶಿವರಾತ್ರಿ: ಶ್ರೀಶೈಲಂಗೆ ಕೆಕೆಆರ್‌ಟಿಸಿ ವಿಶೇಷ ಬಸ್, ವಿವರಗಳು

ಬಳ್ಳಾರಿ, ಮಾರ್ಚ್ 03: ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಮಹಾ ಕ್ಷೇತ್ರದಲ್ಲಿ ಮಾರ್ಚ್ 1 ರಿಂದ 11, 2024ರ ತನಕ ಮಹಾಶಿವರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ದೇವಾಲಯಕ್ಕೆ ಕರ್ನಾಟಕದಿಂದ ಸಾಗುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ ಓಡಿಸಲಾಗುತ್ತಿದೆ.

ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಳ್ಳಾರಿ ವಿಭಾಗ ಮಾಹಿತಿ ನೀಡಿದೆ. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ತೆರಳುವ ಭಕ್ತಾದಿಗಳಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

KKRTC Announces Special Bus For Srisailam Temple From March 4 To 10

ಬಳ್ಳಾರಿ, ಮೋಕಾ, ಕುರುಗೋಡು, ಸಿರುಗುಪ್ಪ, ತೆಕ್ಕಲಕೋಟ, ಹಳೇಕೋಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗುತ್ತಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಮಾರ್ಚ್ 4 ರಿಂದ 10ರ ವರೆಗೆ ವಿಶೇಷ ಸಾರಿಗೆ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದೆ.

ಈ ವಿಶೇಷ ಸಾರಿಗೆ ಸೇವೆಯನ್ನು ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಕರಸಾ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನರು ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ-1ನೇ ಘಟಕದ ವ್ಯವಸ್ಥಾಪಕರನ್ನು ಮೊಬೈಲ್ 7760992163, ಬಳ್ಳಾರಿ-2ನೇ ಘಟಕದ ವ್ಯವಸ್ಥಾಪಕರನ್ನು ಮೊಬೈಲ್ 7760992164, ಸಿರುಗುಪ್ಪ ಘಟಕದ ವ್ಯವಸ್ಥಾಪಕರನ್ನು ಮೊಬೈಲ್ 7760992165, ಕುರುಗೋಡು ಘಟಕದ ವ್ಯವಸ್ಥಾಪಕರನ್ನು ಮೊಬೈಲ್ 9606483671 ಸಂಖ್ಯೆ ಮೂಲಕ ಸಂಪರ್ಕಿಸಬಹುದು.

ವಾರ್ಷಿಕ ಜಾತ್ರಾ ಮಹೋತ್ಸವ: ಶ್ರೀಶೈಲ ಮಲ್ಲಿಕಾರ್ಜುನ ಮಹಾ ಕ್ಷೇತ್ರದಲ್ಲಿ ಮಾರ್ಚ್ 1 ರಿಂದ 11, 2024ರ ತನಕ ಮಹಾಶಿವರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ದೇವಾಲಯದ ಸೇವೆಗಳ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ. ಪೆದ್ದಿರಾಜು ಪ್ರಕಟಣೆ ಮೂಲಕ ಭಕ್ತರಿಗೆ ಮಾಹಿತಿ ಕೊಟ್ಟಿದ್ದಾರೆ.

ದೇವಾಲಯಕ್ಕೆ ಆಂಧ್ರ ಪ್ರದೇಶ ಮಾತ್ರವಲ್ಲ ಕರ್ನಾಟಕದಲ್ಲಿಯೂ ಅಪಾರ ಭಕ್ತರು ಇದ್ದಾರೆ. ಶಿವರಾತ್ರಿ ಸಮಯದಲ್ಲಿ ಸಾವಿರಾರು ಭಕ್ತರು ರಾಜ್ಯದಿಂದ ದೇವರ ದರ್ಶನಕ್ಕಾಗಿ ಸಾಗುತ್ತಾರೆ. ಅವರ ಅನುಕೂಲಕ್ಕಾಗಿಯೇ ವಿಶೇಷ ಬಸ್ ಓಡಿಸಲಾಗುತ್ತಿದೆ. ಕಾಲ್ನಡಿಗೆ ಮೂಲಕ ಸಹ ನೂರಾರು ಜನರು ಸಾಗುತ್ತಾರೆ.

ದೇವಾಲಯದಲ್ಲಿ ಭಕ್ತಾದಿಗಳಿಗೆ ಉಚಿತ ದರ್ಶನ ಸೌಲಭ್ಯವಿದೆ. ಶೀಘ್ರ ದರ್ಶನಕ್ಕಾಗಿ ರೂ. 200, ಅತಿ ಶೀಘ್ರ ದರ್ಶನಕ್ಕಾಗಿ ರೂ. 500 ಟಿಕೆಟ್ ಪಡೆಯಬಹುದು. ಈ ಟಿಕಟ್‍ಗಳನ್ನು ದೇವಾಲಯದ ವೆಬ್‍ಸೈಟ್ www.srisailadevasthanam.org ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು. ದೇವಾಲಯದ ಬುಕ್ಕಿಂಗ್ ಕೌಂಟರ್‌ನಲ್ಲಿಯೂ ಪಡೆಯಲು ಅವಕಾಶವಿದೆ.

ಬ್ರಹ್ಮೋತ್ಸವದ ಪ್ರಾರಂಭದ 5 ದಿನಗಳು ಅಂದರೆ ಮಾರ್ಚ್ 1 ರಿಂದ 5 ರವರೆಗೆ ಜ್ಯೋತಿರ್ಮುಡಿ (ಇರುಮುಡಿ) ಇರುವ ಶಿವದೀಕ್ಷಾ ಭಕ್ತರಿಗೆ ಮಾತ್ರ ಹಂತ ಹಂತವಾಗಿ ನಿರ್ದಿಷ್ಟ ಸಮಯದಲ್ಲಿ ಸ್ವಾಮಿಯ ಉಚಿತ ಸ್ಪರ್ಶ್ ದರ್ಶನವನ್ನು ಕಲ್ಪಿಸಲಾಗುತ್ತದೆ. ಭಕ್ತರು ದರ್ಶನದ ಬಗ್ಗೆ ಮಾಹಿತಿ ತಿಳಿದು ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಬ್ರಹ್ಮೋತ್ಸವ ಮುಗಿಯುವವರೆಗೂ ಎಲ್ಲಾ ಅರ್ಜಿತ (ಸಂಚಿತ) ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಬ್ರಹೋತ್ಸವದದ ಸಂದರ್ಭದಲ್ಲಿ ಮಾರ್ಚ್ 5ರಂದು ರಾತ್ರಿ 7.30 ರಿಂದ 11/03/2024 ರಾತ್ರಿಯವರೆಗೆ ಭಕ್ತರೆಲ್ಲರಿಗೂ ಶ್ರೀ ಸ್ವಾಮಿಯವರ ಅಲಂಕಾರ ದರ್ಶನಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ.

ಶ್ರೀಶೈಲ ಮಹಾಕ್ಷೇತ್ರಕ್ಕೆ ಮಾರ್ಚ್ 1 ರಿಂದ 11ರ ವರೆಗೆ ಮಹಾಶಿವರಾತ್ರಿ ಬ್ರಹೋತ್ಸವ ಅಂಗವಾಗಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ದೇವಾಲಯದ ಆಡಳಿತ ಮಂಡಳಿ ಸಹ ಭಕ್ತರ ಅನುಕೂಲಕ್ಕಾಗಿ ಹಲವು ವ್ಯವಸ್ಥೆಗಳನ್ನು ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+