ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಭಾರತದ ಪಾಂಡವರು ಕಟ್ಟಿಸಿರುವ ದೇವಸ್ಥಾನಗಳಿಗೆ ಹೇಗೆ ಹೋಗುವುದು?

|
Google Oneindia Kannada News

ತಿರುವನಂತಪುರಂ, ಆಗಸ್ಟ್ 18: ಕೇರಳದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಹೊಸ ಐಡಿಯಾವೊಂದನ್ನು ಕಂಡುಕೊಂಡಿದೆ. ಕಡಿಮೆ ಖರ್ಚಿನಲ್ಲಿ ಮಹಾಭಾರತದ ಪ್ರಮುಖ ದೇಗುಲಗಳನ್ನು ಸುತ್ತಲು ಬಯಸುವ ಪ್ರಯಾಣಿಕರಿಗೆ ಬಂಪರ್ ಕೊಡುಗೆ ನೀಡಲು ಅಣಿಯಾಗಿದೆ.

ದಕ್ಷಿಣ ಭಾರತದ ಪ್ರವಾಸಿಗರು ಮತ್ತು ಯಾತ್ರಿಕರನ್ನು ಸೆಳೆಯುವ ಮೂಲಕ ಕೆಎಸ್‌ಆರ್‌ಟಿಸಿ ತನ್ನ ಆರ್ಥಿಕ ಮುಗ್ಗಟ್ಟನ್ನು ನೀಗಿಸಿಕೊಳ್ಳಲು ಯೋಜನೆ ಹಾಕಿಕೊಂಡಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಜೆಟ್ ಪ್ರವಾಸೋದ್ಯಮ ಘಟಕವು ಘೋಷಿಸಿದ ಹೊಸ ಪ್ಯಾಕೇಜ್, ಪ್ರಯಾಣ ಪ್ರಿಯರು ಮತ್ತು ಯಾತ್ರಾರ್ಥಿಗಳಿಗೆ ದಕ್ಷಿಣ ರಾಜ್ಯದ ಪ್ರಸಿದ್ಧ ಪಂಚ ಪಾಂಡವ ದೇವಾಲಯಗಳಿಗೆ ಭೇಟಿ ನೀಡುವ ಅವಕಾಶವನ್ನು ಒದಗಿಸುತ್ತದೆ.

ಕೇರಳದಲ್ಲಿ ಕೈಗೆಟುಕುವ ದರದಲ್ಲಿ ಟ್ಯಾಕ್ಸಿ: ಇ-ಟ್ಯಾಕ್ಸಿ ಸೇವೆಗೆ ಪಿಣರಾಯಿ ವಿಜಯನ್‌ ಚಾಲನೆಕೇರಳದಲ್ಲಿ ಕೈಗೆಟುಕುವ ದರದಲ್ಲಿ ಟ್ಯಾಕ್ಸಿ: ಇ-ಟ್ಯಾಕ್ಸಿ ಸೇವೆಗೆ ಪಿಣರಾಯಿ ವಿಜಯನ್‌ ಚಾಲನೆ

ಮಹಾಭಾರತಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದಲ್ಲಿರುವ ಪ್ರಸಿದ್ಧವಾದ ದೇವಾಲಯಗಳಿಗೆ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದು. 'ವಲ್ಲ ಸದ್ಯ', ಅರಾನ್ಮುಲಾದ ಪಾರ್ಥಸಾರಥಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾದ ಔತಣವನ್ನು ನೀಡಲಾಗುತ್ತದೆ. ಮಹಾಭಾರತದ ಹಳೆಯ ದೇಗುಲಗಳು ಕೇರಳ ಸಾರಿಗೆಗೆ ಹೇಗೆ ಲಾಭ ತಂದುಕೊಡಬಹುದೇ?, ರಾಜ್ಯ ಸಾರಿಗೆ ಸಂಸ್ಥೆಯ ಲೆಕ್ಕಾಚಾರ ಹೇಗೆ ಕೆಲಸ ಮಾಡುವುದು? ಪಂಚ ಪಾಂಡವರು ಕಟ್ಟಿಸಿದ ಆ ದೇವಸ್ಥಾನಗಳು ಯಾವುವು? ಪ್ರಯಾಣಿಕರನ್ನು ಸೆಳೆಯುವಲ್ಲಿ ಈ ಯೋಜನೆ ಯಶಸ್ವಿಯಾಗುತ್ತಾ ಎಂಬುದರ ಕುರಿತು ವರದಿಯಲ್ಲಿ ತಿಳಿದುಕೊಳ್ಳೋಣ.

ಮಹಾಭಾರತದ ಇತಿಹಾಸದ ಮೂಲಕ ಒಂದು ತೀರ್ಥಯಾತ್ರೆ

ಮಹಾಭಾರತದ ಇತಿಹಾಸದ ಮೂಲಕ ಒಂದು ತೀರ್ಥಯಾತ್ರೆ

ವಿವಿಧ ದೇವಸ್ವಂಗಳು ಅಂದರೆ ದೇವಾಲಯಗಳ ಆಡಳಿತ ಮಂಡಳಿಗಳು ಮತ್ತು ಪಲ್ಲಿಯೋಡ ಸೇವಾ ಸಮಿತಿ ಸಹಯೋಗದೊಂದಿಗೆ "ಮಹಾಭಾರತದ ಇತಿಹಾಸದ ಮೂಲಕ ಒಂದು ತೀರ್ಥಯಾತ್ರೆ" ಎಂಬ ಹೆಸರಿನಲ್ಲಿ ಯಾತ್ರಿಕರ ಪ್ರವಾಸವನ್ನು ಪರಿಚಯಿಸಲಾಗಿದೆ. ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯು ಈ ಪ್ಯಾಕೇಜ್‌ ಪ್ರಕಟಿಸಿದ್ದು, ಆಸಕ್ತರನ್ನು ಆಯಾ ಡಿಪೋಗಳಿಂದ ತಮ್ಮ ಪ್ರಯಾಣಕ್ಕೆ ಸಂಬಂಧಿಸಿದಂತೆ ಟಿಕೆಟ್ ಅನ್ನು ಮುಂಗಡವಾಗಿ ಕಾಯ್ದಿರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಹಾಭಾರತದ ಪಾಂಡವರು ನಿರ್ಮಿಸಿದ ದೇವಸ್ಥಾನಗಳಿವು!

ಮಹಾಭಾರತದ ಪಾಂಡವರು ನಿರ್ಮಿಸಿದ ದೇವಸ್ಥಾನಗಳಿವು!

ಮಹಾಭಾರತದ ದಂತಕಥೆಯ ಪ್ರಕಾರ, ತ್ರಿಚಿಟ್ಟಾಟ್ ನಲ್ಲಿರುವ ಮಹಾವಿಷ್ಣುವಿನ ದೇವಸ್ಥಾನ, ಪುಲಿಯೂರ್ ಮಹಾವಿಷ್ಣು ದೇವಸ್ಥಾನ, ಅರನ್ಮುಲ ಪಾರ್ಥಸಾರಥಿ ದೇವಸ್ಥಾನ, ತಿರುವನ್ ವೆಂದೂರು ಮಹಾವಿಷ್ಣು ದೇವಸ್ಥಾನ ಮತ್ತು ತ್ರಿಕೋಡಿತಾನಂ ಮಹಾವಿಷ್ಣು ದೇವಸ್ಥಾನಗಳು ದಕ್ಷಿಣ ರಾಜ್ಯದ ಐದು ಪ್ರಮುಖ ದೇವಾಲಯಗಳಾಗಿವೆ. ಈ ದೇವಸ್ಥಾನಗಳನ್ನು ಪಂಚಪಾಂಡವರಾದ ಯುಧಿಷ್ಟಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವರು ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ.

ಪಂಬಾ ನದಿ ದಡದಲ್ಲಿರುವ ಪಂಚ ದೇಗುಲಗಳು

ಪಂಬಾ ನದಿ ದಡದಲ್ಲಿರುವ ಪಂಚ ದೇಗುಲಗಳು

ಪವಿತ್ರ ನದಿ ಪಂಬಾ ದಡದಲ್ಲಿರುವ ಮಧ್ಯ ತಿರುವಾಂಕೂರಿನ ಚೆಂಗನ್ನೂರು ಮತ್ತು ಚಂಗನಾಶ್ಶೇರಿ ತಾಲೂಕಿನಲ್ಲಿಯೇ ಎಲ್ಲಾ ದೇವಾಲಯಗಳಿವೆ. ಇವುಗಳನ್ನು ಐದು ವೈಷ್ಣವ ದೇವಾಲಯಗಳು ಎಂದೂ ಕರೆಯುತ್ತಾರೆ ಎಂದು ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಆಗಸ್ಟ್ 4 ರಿಂದ ಅಕ್ಟೋಬರ್ 9ರವರೆಗೆ ಈ ಪ್ರವಾಸದ ಸಮಯದಲ್ಲಿ ಪ್ರಯಾಣಿಕರು ವಲ್ಲಸದ್ಯದಲ್ಲಿ ಅರನ್ಮುಲ ದೇವಸ್ಥಾನದ ಪಾರ್ಥಸಾರಥಿ ದೇವರ ಧಾರ್ಮಿಕ ನೈವೇದ್ಯದಲ್ಲಿ ಭಾಗವಹಿಸಬಹುದು.

ಕರಕುಶಲಕರ್ಮಿಗಳಿಂದ ಕನ್ನಡಿ ತಯಾರಿಕೆ ಕಣ್ತುಂಬಿಕೊಳ್ಳಿರಿ

ಕರಕುಶಲಕರ್ಮಿಗಳಿಂದ ಕನ್ನಡಿ ತಯಾರಿಕೆ ಕಣ್ತುಂಬಿಕೊಳ್ಳಿರಿ

ಕೇರಳ ಪ್ರವಾಸದ ಸಂದರ್ಭದಲ್ಲಿ ಐತಿಹಾಸಿಕ ಅರನ್ಮುಲ ಕನ್ನಡಿಗಳನ್ನು ನುರಿತ ಕುಶಲಕರ್ಮಿಗಳು ತಯಾರಿಸುವುದನ್ನು ಪ್ರವಾಸಿಗರು ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶ ಇರುತ್ತದೆ. ಇನ್ನು ಕೆಎಸ್‌ಆರ್‌ಟಿಸಿ ನೀಡಿರುವ ಪ್ಯಾಕೇಜ್‌ನ ಮತ್ತೊಂದು ಆಕರ್ಷಣೆಯೆಂದರೆ ಆಡಿಯೊ ಗೈಡ್‌ನ ಲಭ್ಯತೆಯು ಸಿಗುತ್ತದೆ. ಈ ದೇವಾಲಯಗಳ ಇತಿಹಾಸ, ಆಚರಣೆಗಳು ಮತ್ತು ಅಲ್ಲಿನ ಕೊಡುಗೆಗಳ ವಿವರವಾದ ಅಂಶವನ್ನು ಅದು ಒಳಗೊಂಡಿರುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿವೆ. ಸಾಮಾನ್ಯ ಜನರಿಗೆ ಕೈಗೆಟುಕುವ ಪ್ರವಾಸಗಳನ್ನು ಒದಗಿಸುವುದು ಮತ್ತು ಸ್ಥಿರವಾಗಿ ಉತ್ತಮ ಆದಾಯವನ್ನು ಗಳಿಸುವುದು ಬಜೆಟ್ ಪ್ಯಾಕೇಜ್‌ಗಳ ಮುಖ್ಯ ಉದ್ದೇಶವಾಗಿದೆ.

Recommended Video

ಆಸ್ಟ್ರೇಲಿಯಾದ T20 ವಿಶ್ವಕಪ್ ಗೆ ರೊಹಿತ್-ರಾಹುಲ್ ಹೊಸ ತಂಡ ರೆಡಿಯಾಗ್ತಿದೆ | *Cricket | Oneindia Kannada

English summary
Kerala State Road Transport Corporation (KSRTC), offers travel buffs and pilgrims a cost-effective opportunity to visit the famed Pancha Pandava Temples in the southern state with focus on Mahabharatha. Know details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X