IRCTC: ಚಂಡೀಗಢ, ಶಿಮ್ಲಾಗೆ ಪ್ರವಾಸ ಕೈಗೊಳ್ಳುವವರಿಗೆ ಸಿಹಿಸುದ್ದಿ ನೀಡಿದ ಐಆರ್‌ಸಿಟಿಸಿ: ದರ, ನೋಂದಣಿ ವಿವರ ಇಲ್ಲಿದೆ
ಚಂಡೀಗಢ, ಶಿಮ್ಲಾಗೆ ಪ್ರವಾಸ ಕೈಗೊಳ್ಳುವವರಿಗೆ ಐಆರ್‌ಸಿಟಿಸಿಯು ಟೂರ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್‌ನ ಬೆಲೆಯ ವಿವರವನ್ನು ಇಲ್ಲಿ ತಿಳಿಯಿರಿ.
ನವದೆಹಲಿ, ಫೆಬ್ರವರಿ, 28: ಭಾರತೀಯ ರೈಲ್ವೇಯ ಅಂಗಸಂಸ್ಥೆಯಾದ ಐಆರ್‌ಸಿಟಿಸಿಯು ಹೊಸ ಹೊಸ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಹಾಗೆಯೇ ಮತ್ತೆ ಇದೀಗ ಐದು ರಾತ್ರಿ ಮತ್ತು ಆರು ದಿನ ಹಗಲುಗಳ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ರವಾಸವು ಪ್ರತಿ ಶುಕ್ರವಾರ ಪ್ರಾರಂಭವಾಗುತ್ತದೆ. ಹಾಗಾದರೆ ಈ ಪ್ರವಾಸ ಪ್ಯಾಕೇಜ್ ಎಲ್ಲಿಂದ ಆರಂಭವಾಗಿ ಎಲ್ಲಿಗೆ ಕೊನೆಗೊಳ್ಳುತ್ತದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಪ್ರವಾಸ ಪ್ಯಾಕೇಜ್ ಘೋಷಿಸಿದ IRCTC
ಈ ಪ್ರವಾಸ ಏಪ್ರಿಲ್ 15ರಿಂದ ಆರಂಭವಾಗಲಿದ್ದು, ಜುಲೈ 14ರವರೆಗೂ ನಡೆಯಲಿದೆ. ಇದು ಲಕ್ನೋದಿಂದ ಪ್ರಾರಂಭವಾಗಲಿದೆ. ಈ ಪ್ಯಾಕೇಜ್ ಅನ್ನು ವರ್ಷಕ್ಕೆ ಎರಡು ಬಾರಿ ಆಯೋಜಿಸಲಾಗುತ್ತದೆ. ಏಪ್ರಿಲ್‌ನಿಂದ ಜುಲೈವರೆಗೆ ಗರಿಷ್ಠ ಅವಧಿ ಮತ್ತು ಡಿಸೆಂಬರ್‌ನಿಂದ ಜನವರಿವರೆಗೆ ಆಯೋಜಿಸಲಾಗುತ್ತದೆ. ಪ್ರವಾಸವು ಚಂಡೀಗಢ, ಶಿಮ್ಲಾ ಮತ್ತು ಕುಫ್ರಿ ಎನ್ನುವ ಮೂರು ಸ್ಥಳಗಳನ್ನು ಒಳಗೊಂಡಿದೆ.

ಯಾವೆಲ್ಲ ಸ್ಥಳಗಳನ್ನು ವೀಕ್ಷಿಸಬಹುದು?
ಪ್ರವಾಸದ ಸಮಯದಲ್ಲಿ ಪ್ರಯಾಣಿಕರು ಚಂಡೀಗಢದ ರೋಸ್ ಗಾರ್ಡನ್, ರಾಕ್ ಗಾರ್ಡನ್, ಮಾನಸಾ ದೇವಿ ಮಂದಿರ, ಶಿಮ್ಲಾದ ಪಿಂಜೋರ್ ಗಾರ್ಡನ್ ಅನ್ನು ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಕುಫ್ರಿಯ ಸುಖನಾ ಸರೋವರ ಸೇರಿದಂತೆ ಜನಪ್ರಿಯ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದಾಗಿದೆ. ಮತ್ತು ಲಕ್ನೋ-ಚಂಡೀಗಢ ಎಕ್ಸ್‌ಪ್ರೆಸ್ ಎರಡೂ ಪ್ರವಾಸ ಕೈಗೊಳ್ಳುವ ರೈಲುಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಪಾವತಿಸಬೇಕಾದ ಮೊತ್ತದ ವಿವರ
ಸೆಕೆಂಡ್ ಕ್ಲಾಸ್ ಎಸಿ ಬೋಗಿಯಲ್ಲಿ ಒಬ್ಬರು 39,225 ರೂಪಾ ಪಾವತಿಸಬೇಕಾಗುತ್ತದೆ. ಇಬ್ಬರಿಗೆ 22,170 ರೂಪಾಯಿ, ಮೂವರಿಗೆ 17,620 ರೂಪಾಯಿ ಆಗುತ್ತದೆ. ಇನ್ನು ಮೂರನೇ ಹಂತದ ಎಸಿ ಕ್ಲಾಸ್‌ನಲ್ಲಿ ಪ್ರಯಾಣಿಸುವ ಒಬ್ಬರಿಗೆ 38,025 ರೂ, ಇಬ್ಬರಿಗೆ 20,970 ರೂ, ಮತ್ತು ಮೂವರಿಗೆ 16,420 ರೂ. ಆಗುತ್ತದೆ. ಹಾಗೆಯೇ 2ನೇ ಹಂತದ ಎಸಿ ಬೋಗಿಯಲ್ಲಿ ಒಬ್ಬರಿಗೆ 37,740 ರೂಪಾಯಿ, ಇಬ್ಬರಿಗೆ 21,055 ರೂಪಾಯಿ ಮತ್ತು ಮೂವರು ಪ್ರಯಾಣ ಮಾಡಲು ಬಯಸಿದರೆ 16,875 ರೂಪಾಯಿ ಪಾವತಿಸಬೇಕಾಗುತ್ತದೆ.

ಟಿಕೆಟ್ ಕಾಯ್ದಿರಿಸುವುದು ಹೇಗೆ?
ಟಿಕೆಟ್ ಕಾಯ್ದಿರಿಸಲು ಬಯಸುವವರು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಅಥವಾ 8287930908 ಮತ್ತು 8287930902ಗೆ ಸಂಪರ್ಕಿಸಬಹುದು. ಹಾಗೆಯೇ ಐಆರ್‌ಸಿಟಿಸಿಯು ಏಪ್ರಿಲ್‌ನಿಂದ ಎಂಟು ದಿನಗಳ ಕಾಲ ಬಾಬಾ ಸಾಹೇಬ್ ಅಂಬೇಡ್ಕರ್ ಯಾತ್ರೆಗಾಗಿ ಭಾರತ್ ಗೌರವ್ ಟೂರಿಸ್ಟ್ ರೈಲನ್ನು ಸಹ ಘೋಷಿಸಿದೆ. ಈ ಪ್ರವಾಸವು ಭಾರತದ ವಿವಿಧ ಪ್ರದೇಶಗಳ ನಡುವೆ ಪ್ರಯಾಣ ಬೆಳೆಸಲು ಉತ್ತಮವಾಗಿದೆ.












Click it and Unblock the Notifications