IRCTC Goa tour package; ಪ್ರವಾಸಕ್ಕೆ ಈಗಲೇ ಪ್ಲಾನ್‌ ಮಾಡಿ

ರಜಾ ದಿನಗಳು ಬಂದರೆ ಸಾಕು ಪ್ರವಾಸ ಹೋಗುವ ಯೋಜನೆ ರೂಪಿಸುವವರೇ ಹೆಚ್ಚು. ಇಂತಹ ಪ್ರವಾಸಿಗರನ್ನು ಆಕರ್ಷಿಸಲು ಐಆರ್‌ಸಿಟಿಸಿ ಮೂರು ಪ್ಯಾಕೇಜ್ ಘೋಷಣೆ ಮಾಡಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಪ್ರವಾಸ ಹೋಗುವ ಆಲೋಚನೆಯಲ್ಲಿ ಇರುವವರು ಈ ಪ್ಯಾಕೇಜ್ ಉಪಯೋಗ ಪಡೆದುಕೊಳ್ಳಬಹುದು.

ದೇಶ-ವಿದೇಶಗಳ ಪ್ರವಾಸಿಗರನ್ನು ಸದಾ ಆಕರ್ಷಿಸುವ ಚಿಕ್ಕ ರಾಜ್ಯ ಗೋವಾ. ಐಆರ್‌ಸಿಟಿಸಿ ಗೋವಾ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಈ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಗೋವಾ ಪ್ರವಾಸದ ಯೋಜನೆ ರೂಪಿಸುತ್ತಿದ್ದರೆ ಈ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು.

ದಕ್ಷಿಣ ಮತ್ತು ಉತ್ತರ ಗೋವಾದ ಸೌಂದರ್ಯವನ್ನು ಸವಿಯಲು ಈ ಪ್ಯಾಕೇಜ್ ಸಹಕಾರಿಯಾಗಿದೆ. ಇದರ ಮೂಲಕ ಜನರು ವಿಮಾನದ ಮೂಲಕ ಗೋವಾಕ್ಕೆ ಸಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ವಸತಿ, ಆಹಾರ ಮುಂತಾದ ಸೌಲಭ್ಯಗಳನ್ನು ಸಹ ಈ ಪ್ಯಾಕೇಜ್ ಒಳಗೊಂಡಿದೆ.

ಒಟ್ಟು ಮೂರು ಮಾದರಿಯ ಪ್ಯಾಕೇಜ್‌ಗಳನ್ನು ಐಆರ್‌ಸಿಟಿಸಿ ಘೋಷಣೆ ಮಾಡಿದೆ. ಈ ಪ್ಯಾಕೇಜ್ ಮೂಲಕ ಸಾಗಿ ಗೋವಾ ಪ್ರವಾಸದ ಅನುಭವವನ್ನು ಜನರು ಪಡೆಯಬಹುದಾಗಿದೆ. ಪ್ಯಾಕೇಜ್ ದರ, ದಿನಗಳು ಮುಂತಾದ ಮಾಹಿತಿ ಇಲ್ಲಿದೆ ನೋಡಿ....

ಗೋವಾ ಮತ್ತು ಇಂಧೋರ್ ಟೂರ್ ಪ್ಯಾಕೇಜ್

ಗೋವಾ ಮತ್ತು ಇಂಧೋರ್ ಟೂರ್ ಪ್ಯಾಕೇಜ್

ಐಆರ್‌ಸಿಟಿಸಿ ಇಂಧೋರ್‌ ಮತ್ತು ಗೋವಾ ವೆಕೇಶನ್ಸ್ ಹೆಸರಿನ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ. ಈ ಟೂರ್‌ನಲ್ಲಿ ನೀವು ವಿಮಾನ ಪ್ರಯಾಣವನ್ನು ಮಾಡಬಹುದಾಗಿದೆ. 12/2/2023 ಮತ್ತು 1/03/2023 ಪ್ರವಾಸದ ದಿನಾಂಕವಾಗಿದೆ. 3 ರಾತ್ರಿ ಮತ್ತು 4 ಹಗಲು ಪ್ರವಾಸದ ಪ್ಯಾಕೇಜ್ ಇಂಧೋರ್‌ನಿಂದ ಆರಂಭವಾಗಲಿದೆ.

ಒಬ್ಬರಿಗೆ ದರ 26,200 ರೂ., ಇಬ್ಬರು ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ 20,300 ರೂ.ಗಳು. ಮೂವರು ಒಟ್ಟಿಗೆ ಪ್ರಯಾಣ ಮಾಡಿದರೆ ದರ 19,850 ಆಗಲಿದೆ.

ಗೋವಾ ಡಿಲೈಟ್ ಪ್ಯಾಕೇಜ್

ಗೋವಾ ಡಿಲೈಟ್ ಪ್ಯಾಕೇಜ್

ಐಆರ್‌ಸಿಟಿಸಿ ಘೋಷಣೆ ಮಾಡಿರುವ ಮತ್ತೊಂದು ಪ್ಯಾಕೇಜ್‌ ಗೋವಾ ಡಿಲೈಟ್. ಇದು ಮಾರ್ಚ್ 23ರ ತನಕ ಲಭ್ಯವಿದೆ. ಉತ್ತರ ಮತ್ತು ದಕ್ಷಿಣ ಗೋವಾಕ್ಕೆ ಭೇಟಿ ನೀಡಲು ಈ ಪ್ಯಾಕೇಜ್ ಜನರಿಗೆ ಸಹಕಾರಿಯಾಗಿದೆ. 15 ದಿನಗಳ ಮುಂಚಿತವಾಗಿ ಈ ಪ್ಯಾಕೇಜ್ ಬುಕ್ ಮಾಡಬೇಕಿದೆ. ಈ ಪ್ಯಾಕೇಜ್‌ ಸಹ ವಿಮಾನದಲ್ಲಿ ಗೋವಾಕ್ಕೆ ಸಾಗಲು ಸಹಾಯಕವಾಗಿದೆ.

ಈ ಪ್ಯಾಕೇಜ್ ರಾಯ್ಪರ್‌ನಿಂದ ಆರಂಭವಾಗಲಿದೆ. 3 ರಾತ್ರಿ ಮತ್ತು 4 ಹಗಲು ಈ ಪ್ಯಾಕೇಜ್‌ ಒಳಗೊಂಡಿದೆ. ಒಬ್ಬರಿಗೆ 30,790 ರೂ. ದರವಿದೆ. ಇಬ್ಬರು ಟಿಕೆಟ್ ಬುಕ್ ಮಾಡಿದರೆ 24,300 ರೂ., ಮೂವರು ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ 23,375 ರೂ. ದರವನ್ನು ನೀಡಬೇಕು.

ಗೋ ಗೋವಾ ಟೂರ್‌ ಪ್ಯಾಕೇಜ್

ಗೋ ಗೋವಾ ಟೂರ್‌ ಪ್ಯಾಕೇಜ್

ಪಾಟ್ನಾ ಅಥವ ಹೈದರಾಬಾದ್‌ನಿಂದ ಗೋವಾಕ್ಕೆ ಪ್ರವಾಸ ಹೋಗುವವರಿಗೆ ಗೋ ಗೋವಾ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಉತ್ತರ ಮತ್ತು ದಕ್ಷಿಣ ಗೋವಾದ ಪ್ರಮುಖ ಪ್ರವಾಸಿ ತಾಣಗಳನ್ನು ನೀವು ಈ ಪ್ಯಾಕೇಜ್ ಮೂಲಕ ನೋಡಬಹುದಾಗಿದೆ. ವಿಮಾನ ಪ್ರಯಾಣವು ಇದರಲ್ಲಿ ಒಳಗೊಂಡಿದೆ. ವಸತಿ, ಆಹಾರ ಎಲ್ಲವೂ ಈ ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.

ಗೋ ಗೋವಾ ಟೂರ್ ದರಪಟ್ಟಿ

ಗೋ ಗೋವಾ ಟೂರ್ ದರಪಟ್ಟಿ

ಗೋ ಗೋವಾ ಪ್ಯಾಕೇಜ್‌ ಪ್ರವಾಸದ ದಿನಾಂಕ 21/01/2023. 3 ರಾತ್ರಿ 4 ಹಗಲು ಈ ಪ್ರವಾಸ ಒಳಗೊಂಡಿದೆ. ಒಬ್ಬರಿಗೆ ಪ್ಯಾಕೇಜ್ ದರ 33,740 ರೂ.ಗಳು. ಇಬ್ಬರು ಟಿಕೆಟ್ ಬುಕ್ ಮಾಡಿದರೆ 28,180 ರೂ., ಮೂವರು ಒಟ್ಟಿಗೆ ಪ್ರಯಾಣ ಮಾಡಿದರೆ ಪ್ಯಾಕೇಜ್ ದರ 27,810 ರೂ. ಆಗಲಿದೆ. ಪಾಟ್ನಾ ಅಥವ ಹೈದರಾಬಾದ್ ಮೂಲಕ ನೀವು ಈ ಪ್ಯಾಕೇಜ್‌ನಲ್ಲಿ ಗೋವಾಗೆ ಸಂಚಾರ ನಡೆಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+