IRCTC Tour Package: ಐಆರ್‌ಸಿಟಿಸಿಯಿಂದ ದುಬೈಗೆ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಘೋಷಣೆ: ಇಲ್ಲಿದೆ ದರ, ಸ್ಥಳಗಳ ವಿವರ
IRCTC Tour Package: ಭಾರತೀಯ ರೈಲ್ವೆಯ ವಿಭಾಗವಾಗಿರುವ ಐಆರ್‌ಸಿಟಿಸಿ ಕೈಗೆಟಕುವ ದರದಲ್ಲಿ ಹೊಸ ಯೋಜನೆಗಳನ್ನು ರೂಪಿಸುತ್ತಲಿರುತ್ತದೆ. ಹಾಗೆಯೇ ಇದೀಗ ಗಣರಾಜ್ಯೋತ್ಸವಕ್ಕೆ ಬೆಂಗಳೂರು ಸೇರಿದಂತೆ ಈ ನಗರಗಳಿಂದ ದುಬೈಗೆ ಪ್ರವಾಸ ಬೆಳೆಸುವ ಪ್ಯಾಕೇಜ್ ಘೋಷಣೆ ಮಾಡಿದೆ. ಹಾಗಾದ್ರೆ, ದರ ಎಷ್ಟು ಹಾಗೂ ಎಷ್ಟು ದಿನ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಆರ್‌ಟಿಸಿ ಆಗಾಗ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ದುಬೈ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಹಾಗಾದ್ರೆ ಯಾವೆಲ್ಲಾ ನಗರಗಳ ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಭಾರತೀಯ ರೈಲ್ವೆಯ ವಿಭಾಗ ಆಗಿರುವ ಐಆರ್‌ಸಿಟಿಸಿ ದುಬೈಗೆ ಭೇಟಿ ನೀಡುವವರಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ. ಗಣರಾಜ್ಯೋತ್ಸವಕ್ಕೆ ದುಬೈ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಈ ಪ್ರವಾಸ ಪ್ಯಾಕೇಜ್‌ನ ವಿಶೇಷತೆ ಏನೆಂದರೆ, ಕರ್ನಾಟಕದ ಬೆಂಗಳೂರಿನಿಂದ ಸೇರಿದಂತೆ ದೇಶದ ವಿವಿಧ ರಾಜ್ಯಗಳ ನಗರಗಳ ಜನರು ದುಬೈಗೆ ಒಟ್ಟಿಗೆ ಪ್ರವಾಸ ಮಾಡಲು ಅವಕಾಶ ಕಲ್ಪಿಸಿದೆ. ಇದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಏಕತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಎತ್ತಿಹಿಡಿಯುತ್ತದೆ ಎಂದು ಹೇಳಬಹುದು.
ಈ ಪ್ರವಾಸ ಜನವರಿ 26ರ ಗಣರಾಜ್ಯೋತ್ಸವದಂದು ಪ್ರಾರಂಭ ಆಗಲಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಭಾರತದ ಕೊಚ್ಚಿ, ಬೆಂಗಳೂರು, ಅಹಮದಾಬಾದ್, ಮುಂಬೈ, ಇಂದೋರ್, ಜೈಪುರ, ದೆಹಲಿ, ಚಂಡೀಗಢ ಮತ್ತು ಲಕ್ನೋ ಸೇರಿದಂತೆ ದೇಶದಾದ್ಯಂತ ವಿವಿಧ ನಗರಗಳಿಂದ ಈ ಪ್ಯಾಕೇಜ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಯಾವೆಲ್ಲಾ ನಗರಗಳ ಜನರಿಗೆ ಅವಕಾಶ
* ಬೆಂಗಳೂರು
* ಅಹಮದಾಬಾದ್
* ಮುಂಬೈ
* ಇಂದೋರ್
* ಜೈಪುರ
* ದೆಹಲಿ
* ಚಂಡೀಗಢ
* ಲಕ್ನೋ
ಪ್ರವಾಸ ಪ್ಯಾಕೇಜ್ ದರದ ವಿವರ: ಎಲ್ಲಾ ಪ್ರವಾಸಿಗರನ್ನ ದುಬೈನಲ್ಲಿ ಒಟ್ಟಿಗೆ ಭಾರತೀಯ ಗುಂಪಾಗಿ ಸಂಘಟಿಸಲಿದೆ. 4 ರಾತ್ರಿ, 5 ಹಗಲುಗಳ ಪ್ರವಾಸ ಇದಾಗಿದೆ. ದರದ ವಿವರವನ್ನು ನೋಡುವುದಾದ್ರೆ, ಪ್ರತಿ ವ್ಯಕ್ತಿಗೆ 94,730 ರೂಪಾಯಿ ದರರ ನಿಗದಿ ಮಾಡಲಾಗಿದೆ. ಇದರಲ್ಲಿ ವಿಮಾನ ಪ್ರಯಾಣ, ತ್ರೀ-ಸ್ಟಾರ್ ಹೋಟೆಲ್‌ನಲ್ಲಿ ವಸತಿ, ವೀಸಾ ಶುಲ್ಕ, ಊಟ, ಎಸಿ ಡಿಲಕ್ಸ್ ಬಸ್‌ನಲ್ಲಿ ವಿವಿಧ ಸ್ಥಳಗಳ ವೀಕ್ಷಣೆ, ಮರುಭೂಮಿ ಸಫಾರಿ ಮತ್ತು ಪ್ರಯಾಣದ ವೆಚ್ಚ ಕೂಡ ಸೇರಿವೆ.
ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು?: ಪ್ರವಾಸಿಗರು ದುಬೈ, ಪಾಮ್ ಜುಮೇರಾ, ಮಿರಾಕಲ್ ಗಾರ್ಡನ್, ಬುರ್ಜ್ ಖಲೀಫಾದ ಲೈಟಿಂಗ್ಸ್ ಹಾಗೂ ಧ್ವನಿ ಪ್ರದರ್ಶನ, ಗೋಲ್ಡ್ ಸೌಕ್ ಮತ್ತು ಸ್ಪೈಸ್ ಸೌಕ್‌ದಲ್ಲಿನ ದೃಶ್ಯಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಅಲ್ಲದೆ, ಅಬುಧಾಬಿ ನಗರ ಪ್ರವಾಸದಲ್ಲಿ ಶೇಖ್ ಜಾಯೆದ್ ಮಸೀದಿ ಮತ್ತು ದೇವಾಲಯಕ್ಕೆ ಭೇಟಿ ನೀಡಬಹುದು.
ಬುಕ್ ಮಾಡುವ ವಿಧಾನ: ದುಬೈ ಪ್ರವಾಸ ಮಾಡುವ ಬಹುತೇಕರ ಕನಸು ಕನಸಾಗಿಯೇ ಉಳಿದಿರುತ್ತದೆ. ಅಂತಹವರಿಗೆ ಈ ಪ್ರವಾಸ ಪ್ಯಾಕೇಜ್ ತುಂಬಾ ಅನುಕೂವಾಗಲಿದೆ. ಹಾಗಾದ್ರೆ, ಮತ್ತೇಕೆ ತಡ ಈಗಲೇ ಬುಕ್ ಮಾಡಿ ದುಬೈನತ್ತ ಪ್ರವಾಸ ಬೆಳೆಸಲು ಸಜ್ಜಾಗಿ. ಇಂದಿನಿಂದ ಅಂದರೆ ಜನವರಿ 6ರಿಂದಲೇ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಈ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಟಿಸಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈಲ್‌ನಲ್ಲಿ ಬುಕ್ ಮಾಡಿಕೊಳ್ಳಬಹುದು.
ಒಟ್ಟಿನಲ್ಲಿ ಹೇಳುವುದಾದ್ರೆ ಕಡಿಮೆ ಖರ್ಚಿನಲ್ಲಿ ಭಾರತದಿಂದ ದುಬೈ ಪ್ರವಾಸ ಮಾಡಲು ಬಯಸಿದವರಿಗೆ ಇದು ಹೇಳಿ ಮಾಡಿಸಿದ ಉತ್ತಮ ಪ್ರವಾಸ ಪ್ಯಾಕೇಜ್ ಆಗಿದೆ. ಮತ್ತೇಕೆ ತಡ ಈಗಲೇ IRCTC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವಾಸ ಪ್ಯಾಕೇಜ್ ಅನ್ನು ಬುಕ್ ಮಾಡಿಕೊಳ್ಳಿ.












Click it and Unblock the Notifications