Indian Railways: ರೈಲಿನ ಕೊನೆಯ ಬೋಗಿ ಹಿಂದೆ "X" ಅಕ್ಷರವನ್ನು ಯಾಕೆ ಬರೆಯುತ್ತಾರೆ?, ಇಲ್ಲಿದೆ ಮಾಹಿತಿ
ರೈಲಿನ ಹಿಂಬದಿಯಲ್ಲಿ "X" ಅಂತಾ ಏಕೆ ಬರೆದುರುತ್ತಾರೆ ಮತ್ತು ಇದರ ಹಿಂದಿರುವ ಉದ್ದೇಶ ಏನು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ನವದೆಹಲಿ, ಮಾರ್ಚ್, 07: ರೈಲಿನ ಹಿಂಬದಿಯಲ್ಲಿ "X" ಅಂತಾ ಏಕೆ ಬರೆದುರುತ್ತಾರೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಪ್ರಶ್ನೆ ಆಗಿರುತ್ತದೆ. ಎಲ್ಲರ ತಲೆಯಲ್ಲೂ ಸಾಮಾನ್ಯವಾಗಿ ಈ ಪ್ರಶ್ನೆ ಹುಟ್ಟಿರುತ್ತದೆ. ಹಾಗೆಯೇ ಇದರ ಹಿಂದಿರುವ ಉದ್ದೇಶ ಏನು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
Did you Know?
— Ministry of Railways (@RailMinIndia) March 5, 2023
The letter ‘X’ on the last coach of the train denotes that the train has passed without any coaches being left behind. pic.twitter.com/oVwUqrVfhE
ಭಾರತೀಯ ರೈಲ್ವೇಯು ಕೊನೆಯ ಬೋಗಿ ಹಿಂಭಾಗದಲ್ಲಿರುವ 'X' ಅಕ್ಷರದ ಅರ್ಥವನ್ನು ವಿವರಿಸಿದೆ. ರೈಲ್ವೇ ಸಚಿವಾಲಯವು ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಳಿ ಮತ್ತು ಹಳದಿಯಲ್ಲಿ ಬರೆದಿರುವ "X" ಅಕ್ಷರವು ರೈಲು ಯಾವುದೇ ಕೋಚ್‌ಗಳನ್ನು ಬಿಡದೆಯೇ ಸಾಗಿದೆ ಎಂದು ಸ್ಪಷ್ಟಪಡಿಸಿದೆ. ರೈಲು ಸಂಪೂರ್ಣವಾಗಿ ಹಾದುಹೋದ ನಂತರ, ಯಾವುದೇ ಕೋಚ್‌ಗಳನ್ನು ತೆಗೆದುಹಾಕದೆ, ರೈಲ್ವೆ ಅಧಿಕಾರಿಗಳು ಕೊನೆಯ ಕಂಪಾರ್ಟ್‌ಮೆಂಟ್‌ನಲ್ಲಿ "X" ಅಕ್ಷರವನ್ನು ವೀಕ್ಷಿಸುತ್ತಾರೆ.

"X" ಎಂದು ಯಾಕೆ ಬರೆದಿರುತ್ತಾರೆ?
ರೈಲು ನಿಲ್ದಾಣದಲ್ಲಿ, ರೈಲು ಕ್ರಾಸಿಂಗ್‌ನಲ್ಲಿ, ರೈಲು ಕಂಟ್ರೋಲ್ ರೂಂಗಳಲ್ಲಿ ರೈಲನ್ನು ಗಮನಿಸುತ್ತಿರುವ ಅಧಿಕಾರಿಗಲು, ರೈಲು ಯಾವುದೇ ಕೋಚ್ ಬಿಡದೆ ಸಾಗಿದೆ ಎಂದು ಖಾತ್ರಿಪಡಿಸಲು X ಚಿಹ್ನೆಯನ್ನು ಹಾಕಲಾಗುತ್ತದೆ.
X ಅಕ್ಷರ ಇರುವ ಬೋಗಿಯನ್ನು ನೋಡಿದರೆ ಇದು ರೈಲಿನ ಕೊನೆಯ ಬೋಗಿ ಅನ್ನುವುದು ಗುತ್ತಾಗುತ್ತದೆ. ಯಾವುದೇ ಸಮಯದಲ್ಲೂ ಯಾವುದೇ ಬೋಗಿ ಬೇರ್ಪಟ್ಟರೆ ಇದರಿಂದ ಮಾಹಿತಿ ಗೊತ್ತಾಗಲಿದೆ. ಹೀಗಾಗಿ ಈ ವ್ಯವಸ್ಥೆ ತುರ್ತು ಕ್ರಮ ಕೈಗೊಳ್ಳಲು ಸಹಾಯಕವಾಗಲಿದೆ ಎಂದು ತಿಳಿಸಿದೆ.

ರೈಲು ತನ್ನ ಕೊನೆಯ ಬೋಗಿಯ ಹಿಂದೆ 'X'ಎಂದು ಗುರುತಿಸದೆ ಹೊರಟರೆ, ರೈಲು ತುರ್ತು ಪರಿಸ್ಥಿತಿಯಲ್ಲಿದೆ. ರೈಲನ್ನು ಟ್ರ್ಯಾಕ್ ಮಾಡಲು ಮತ್ತು ಅದರ ಸುರಕ್ಷತೆಯನ್ನು ಖಾತರಿಪಡಿಸಲು ಇದನ್ನು ಬಳಸುತ್ತಾರೆ. ಬಿಳಿ ಮತ್ತು ಹಳದಿ ಬಣ್ಣದಿಂದ ಈ ಚಿಹ್ನೆಯನ್ನು ಹಾಕಲಾಗಿರುತ್ತದೆ. ಹಾಗೆಯೇ ಇಲ್ಲಿ ಕೆಂಪು ದೀಪವನ್ನು ಕೂಡ ಕಾಣಬಹುದಾಗಿದೆ. ಮುಖ್ಯವಾಗಿ ಕಲಬುರಗಿ ವಿಭಾಗದ ರೈಲುಗಳಲ್ಲಿ 'X'ಚಿಹ್ನೆಯು ಹೆಚ್ಚಾಗಿ ಕಂಡುಬರುತ್ತದೆ. ಇದು ನಿರ್ದಿಷ್ಟ ರೈಲಿಗೆ ಸೀಮಿತವಾಗಿಲ್ಲ. ಎಲ್ಲಾ ರೈಲುಗಳಿಗೆ ಅನ್ವಯಿಸುವ ಸಾಮಾನ್ಯ ಕಾರ್ಯವಿಧಾನವಾಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.












Click it and Unblock the Notifications