Indian Railways: ಭಾರತೀಯ ರೈಲ್ವೆಗೆ ₹60,000 ದಂಡ, ಯಾಕೆ ಗೊತ್ತಾ?, ಇಲ್ಲಿದೆ ವಿವರ
ನವದೆಹಲಿ, ಅಕ್ಟೋಬರ್, 27: ಸಾಮಾನ್ಯವಾಗಿ ಭಾರತೀಯ ರೈಲ್ವೆಯು ಟಿಕೆಟ್‌ರಹಿತ ಪ್ರಯಾಣ ಸೇರಿದಂತೆ ಹಲವು ತಪ್ಪುಗಳಿಗೆ ಪ್ರಯಾಣಿಕರಿಗೆ ದಂಡ ವಿಧಿಸಿದ ಉದಹರಣೆಗಳು ಇವೆ. ಆದರೆ ಇದೀಗ ಈ ಮಾರ್ಗದಲ್ಲಿ ರೈಲು ಆಗಮನ 13 ಗಂಟೆಗಳು ವಿಳಂಬವಾಗಿದ್ದರಿಂದ ಭಾರತೀಯ ರೈಲ್ವೆಗೆ 60,000 ಸಾವಿರ ದಂಡ ವಿಧಿಸಲಾಗಿದೆ.
ಚೆನ್ನೈ-ಆಲಪ್ಪುಳ ಎಕ್ಸ್‌ಪ್ರೆಸ್ ರೈಲು ಎರ್ನಾಕುಲಂಗೆ ಆಗಮಿಸಲು 13 ಗಂಟೆಗಳ ವಿಳಂಬವಾಗಿದ್ದು, ದೂರುದಾರರ ಮಾಹಿತಿ ಮೇರೆಗೆ ಕೇರಳದ ಎರ್ನಾಕುಲಂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಭಾರತೀಯ ರೈಲ್ವೆಗೆ ₹60,000 ದಂಡ ವಿಧಿಸಿದೆ. ರೈಲು ವಿಳಂಬ ಆಗಿದ್ದರಿಂದ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಿದ್ದಾರೆ.

ಆದ್ದರಿಂದ ಕೇರಳದ ಎರ್ನಾಕುಲಂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ಬಿ. ಬಿನು ಮತ್ತು ಸದಸ್ಯರಾದ ವಿ.ರಾಮಚಂದ್ರನ್ ಮತ್ತು ಶ್ರೀವಿಧಿಯಾ ಟಿ.ಎನ್. ಈ ತೀರ್ಪು ನೀಡಿದ್ದಾರೆ ಅಂತಾ ದಿ ಹಿಂದೂ ವರದಿ ಮಾಡಿದೆ.
ಭಾರತೀಯ ರೈಲ್ವೇಯು ಸಾಮಾನ್ಯವಾಗಿ ಸಮರ್ಥ ಸೇವೆಗಳನ್ನು ಒದಗಿಸಲು ವಿಫಲಗೊಳ್ಳುತ್ತಿದೆ. ಇದರಿಂದ ಕಾಯ್ದಿರಿಸಿದ ಆಸನಗಳ ಅಲಭ್ಯತೆಯಂತಹ ಸಮಸ್ಯೆಗಳು ಮುಂದುವರೆಯುತ್ತವೆ. ಇನ್ನು ಗ್ರಾಹಕ ಸಂರಕ್ಷಣಾ ಕಾಯಿದೆಯಲ್ಲಿ ಗ್ರಾಹಕರ ಹಕ್ಕು, ನಷ್ಟದ ಪರಿಹಾರವನ್ನು ಪಡೆಯಬಹುದೆಂದು ಆಯೋಗ ತಿಳಿಸಿದೆ.
ದೂರುದಾರ, ಚೆನ್ನೈನ ಕಾರ್ತಿಕ್ ಮೋಹನ್ ಮಾತನಾಡಿ, 2018 ಮೇಲ್ಲಿ ಪ್ರಮುಖ ಸಭೆಗಾಗಿ ಎರ್ನಾಕುಲಂನಿಂದ-ಚೆನ್ನೈಗೆ ರೈಲು ಸಂಖ್ಯೆ 22640 ರಲ್ಲಿ ಟಿಕೆಟ್ ಕಾಯ್ದಿರಿಸಿದ್ದೆ. ಆದರೆ, ರೈಲು 13 ಗಂಟೆಗಳಿಗೂ ಹೆಚ್ಚು ವಿಳಂಬವಾಗಿದ್ದು, ಇದು ನನ್ನ ಕಾರ್ಯಗಳಿಗೆ ಅಡ್ಡಿಯಾದಂತಾಯಿತು. ಅಲ್ಲದೆ NEET ಅಭ್ಯರ್ಥಿಗಳು ಮತ್ತು ಅವರ ಪೋಷಕರು ಸೇರಿದಂತೆ ಇತರ ಅನೇಕ ಪ್ರಯಾಣಿಕರಿಗೆ ತೊಂದರೆ ಆಗಿದೆ ಎಂದು ಆರೋಪ ಮಾಡಿದರು.
ಯಾವುದೇ ತೊಂದತೆ ಆದರೂ ರೈಲ್ವೇ ಅಧಿಕಾರಿಗಳು ರೈಲು ವಿಳಂಬದ ಬಗ್ಗೆ ತ್ವರಿತವಾಗಿ ತಿಳಿಸಬೇಕು. ಮತ್ತು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಹಾಗೂ ಪ್ರಮುಖ ಸಭೆಯ ರದ್ದಾಗಿದ್ದರಿಂದ ಉಂಟಾಗುವ ಅನಾನುಕೂಲತೆ, ಒತ್ತಡ ಮತ್ತು ಆರ್ಥಿಕ ನಷ್ಟಕ್ಕೆ ₹5 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ರೈಲ್ವೇ ಸಚಿವಾಲಯವು, ಟ್ರ್ಯಾಕ್ ನಿರ್ವಹಣೆ, ಸಿಗ್ನಲ್ ವೈಫಲ್ಯಗಳು, ಅಪಘಾತಗಳಂತಹ ಅನಿರೀಕ್ಷಿತ ಘಟನೆಗಳಿಂದ ನಿಗದಿತ ಸಮಯವನ್ನು ನಿರ್ವಹಿಸಲು ಉತ್ತಮ ಪರ್ಯಾಯ ಮಾರ್ಗಗಳಿ ಇಲ್ಲದಿದ್ದಾಗ ರೈಲುಗಳನ್ನು ರದ್ದು ಮಾಡಲಾಗುತ್ತದೆ ಎಂದು ವಾದ ಮಾಡಿದೆ.
ರೈಲು ತಡವಾಗಿ ಆಗಮಿಸಿದ ಕಾರಣ ರೈಲು ಸಂಖ್ಯೆ 22640 ಅನ್ನು ಅಲಪ್ಪುಳ ನಿಲ್ದಾಣದಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸುರಕ್ಷತೆಗೆ ಸಂಬಂಧಿಸಿದ ಅವಶ್ಯಕತೆಯಾದ ಚೆನ್ನೈ ವಿಭಾಗದ ಅರಕ್ಕೋಣಂನಲ್ಲಿ ಯಾರ್ಡ್ ಮರುರೂಪಿಸುವ ಕಾರ್ಯದಿಂದಾಗಿ ವಿಲ್ಲುಪ್ಪುರಂ ಮತ್ತು ಕಟ್ಪಾಡಿ ಮೂಲಕ ರೈಲನ್ನು ತಿರುಗಿಸಿದ್ದರಿಂದ ವಿಳಂಬವಾಗಿದೆ ಎಂದು ಕೇಂದ್ರ ರೈಲ್ವೇ ಸಚಿವಾಲಯ ತಿಳಿಸಿದೆ. ಅಲ್ಲದೆ ರೈಲು ವಿಳಂಬದ ಬಗ್ಗೆ ದೂರುದಾರರು ಸೇರಿದಂತೆ ಎಲ್ಲಾ ಕಾಯ್ದಿರಿಸಿದ ಪ್ರಯಾಣಿಕರಿಗೆ SMS ಅಧಿಸೂಚನೆಗಳನ್ನು ಕಳುಹಿಸಲಾಗಿದೆ. ಹಾಗೂ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ಲಭ್ಯವಿದೆ. ಆದರೆ ಈ ದೂರು ಸತ್ಯಕ್ಕೆ ದೂರವಾದದ್ದು ಎಂದು ವಿಷಾದ ವ್ಯಕ್ತಪಡಿಸಿದೆ.












Click it and Unblock the Notifications