Indian Independence Day 2023: ಈ ಮಾರ್ಗಗಳಲ್ಲಿ ವಿಶೇಷ ರೈಲು ಸಂಚಾರ, ಸಮಯ, ದಿನಾಂಕಗಳ ವಿವರ ತಿಳಿಯಿರಿ
ಹುಬ್ಬಳ್ಳಿ, ಆಗಸ್ಟ್, 12: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಂಟಾಗುವ ಜನದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯವು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ವಿುನಲ್ ಹಾಗೂ ವಾಸ್ಕೊ ನಿಲ್ದಾಣದ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ.
ಈ ಕುರಿತು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದು, ಈ ರೈಲು ಆಗಸ್ಟ್ 14ರಂದು ಸಂಜೆ 5:30ಕ್ಕೆ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ವಿುನಲ್ನಿಂದ ಹೊರಟು, ಮಾರನೇ ದಿನ ಬೆಳಗ್ಗೆ 9:30ಕ್ಕೆ ವಾಸ್ಕೊ ನಿಲ್ದಾಣ ತಲುಪಲಿದೆ. ಹಾಗೂ ಆಗಸ್ಟ್ 15ರಂದು ಮಧ್ಯಾಹ್ನ 2:30ಕ್ಕೆ ವಾಸ್ಕೊ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗಿನಜಾವ 5 ಗಂಟೆಗೆ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ವಿುನಲ್ ತಲುಪಲಿದೆ.

ಈ ಮಾರ್ಗದಲ್ಲಿ ರೈಲು ಸಂಚಾರ ಭಾಗಶಃ ರದ್ದು
ಇನ್ನು ದೇವನೂರು, ಕಡೂರು, ಬಲ್ಲೆಕೆರೆ ಮತ್ತು ಬಿರೂರು ಯಾರ್ಡ್ ಮಾರ್ಗದಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಆಗಸ್ಟ್ 14, 15, 16, 18, 23, 24 ಮತ್ತು 28ರಂದು ಅರಸಿಕೆರೆ -ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರ ಅರಸಿಕೆರೆ-ಬಿರೂರ ಮಧ್ಯೆ ರದ್ದಾಗಲಿದ್ದು, ಬಿರೂರಿನಿಂದ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ.
ಆಗಸ್ಟ್ 21ರಂದು ಅರಸಿಕೆರೆ -ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರ ಅರಸಿಕೆರೆ-ನಾಗವಂಗಲ ಮಧ್ಯೆ ರದ್ದಾಗಲಿದ್ದು, ಈ ರೈಲು ನಾಗವಂಗಲ ನಿಲ್ದಾಣದಿಂದ ಸಂಚಾರ ಪ್ರಾರಂಭಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications