Hubballi-Sabarimala Special Trains: ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ರೈಲು- ಮಾಹಿತಿ

ಹುಬ್ಬಳ್ಳಿ, ಡಿಸೆಂಬರ್‌, 02: ಹುಬ್ಬಳ್ಳಿಯಿಂದ-ಶಬರಿಮಲೆಗೆ ಇಂದಿನಿಂದ ವಿಶೇಷ ರೈಲು ವ್ಯವಸ್ಥೆ ಮಾಡಿದ್ದು, ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಮಾಲಾಧಾರಿಗಳು ಪೂಜೆ ಸಲ್ಲಿಸಿದರು. ರೈಲಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಕಬ್ಬು, ಬಾಳೆ ಗಿಡ, ಹೂವು ಕಟ್ಟಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ರೈಲಿಗೆ ಪೂಜೆ ಸಲ್ಲಿಸಿದರು.

ಶಬರಿಮಲೆ ತೆರಳುವ ಭಕ್ತರಿಗೆ ಸಂತಸವೋ.. ಸತೋಷ

ಶಬರಿಮಲೆ ಯಾತ್ರಿಕರ ದಟ್ಟಣೆ ಪರಿಗಣಿಸಿ ನೈರುತ್ಯ ರೈಲ್ವೆಯು ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಕೇರಳದ ಕೊಟ್ಟಾಯಂಗೆ 2 ವಿಶೇಷ ರೈಲುಗಳನ್ನು ಆರಂಭಿಸಿದ್ದರಿಂದ ಅನುಕೂಲ ಆಗಿದೆ‌‌ ಎಂದು ಭಕ್ತರು ಸಂತಸ ವ್ಯಕ್ತಪಡಿಸುತ್ತಾರೆ. ಈ ವರ್ಷದ ಶಬರಿಮಲೆ ಮಂಡಲ ದರ್ಶನ ಆರಂಭವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕರ್ನಾಟಕದಿಂದ ತೆರಳುತ್ತಿದ್ದಾರೆ.

Hubballi-Sabarimala Special Trains

ಭಕ್ತಾಧಿಗಳ ಅನುಕೂಲಕ್ಕಾಗಿ ರೈಲು ವ್ಯವಸ್ಥೆ ಮಾಡಲಾಗಿದೆ. ಈ ರೈಲಿನಲ್ಲಿ ತೆರಳುವ ಪ್ರಯಾಣಿಕರು ಕಡೆಯ ನಿಲ್ದಾಣದ ಕೇಳದ ಕೊಟ್ಟಾಯಂಗೆ ಇಳಿದು ಅಲ್ಲಿಂದ 97 ಕಿಲೋ ಮೀಟರ್‌ ದೂರದ ಶಬರಿಮಲೆಗೆ ತಲುಪಲಾಗುವುದು. ಹುಬ್ಬಳ್ಳಿ-ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ (07305) ಡಿಸೆಂಬರ್‌ 2ರಿಂದ ಜನವರಿ 20ವರೆಗೆ ಸಂಚಾರ ನಡೆಸಲಿವೆ.

ಹಾಗೂ ಮತ್ತೊಂದು ರೈಲು ಹುಬ್ಬಳ್ಳಿ-ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ (07307) ಇದೀಗ ಇದಾಗಿದೆ. ವಿಶೇಷ ಎಕ್ಸ್‌ಪ್ರೆಸ್‌ (07307) ಡಿಸೆಂಬರ್‌ 6ರಂದು (ಜನವರಿ 14ವರೆಗೂ ಮುಂದಿನ 7 ಬುಧವಾರ). ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಡಿಸೆಂಬರ್‌ 7ರಂದು ಬೆಳಗ್ಗೆ 8:15ಕ್ಕೆ ಕೊಟ್ಟಾಯಂಗೆ ತಲುಪಲಿದೆ.

ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕರೆ, ತುಮಕೂರು, ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೆ.ಆರ್‌.ಪುರಂ, ವೈಟ್‌ಫೀಲ್ಡ್‌, ಬಂಗಾರಪೇಟೆ, ಸೇಲಂ, ಈರೋಡ್‌, ಪೋತ್ತನ್ನೂರ್‌, ಪಾಲಕ್ಕಾಡ್‌, ತ್ರಿಶೂರ್ : ಹುಬ್ಬಳ್ಳಿ - ಕೇರಳದ ಕೊಟ್ಟಾಯಂ ನಡುವೆ ವಿಶೇಷ ರೈಲುಗಳು ಸಂಚಾರ ಮಾಡಲಿವೆ.

ಶಬರಿಮಲೆಗೆ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು

ಹಾಗೆಯೇ ಶಬರಿಮಲೆ ಋತುವಿನಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಅನುಸಾರವಾಗಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆ ಹುಬ್ಬಳ್ಳಿಯಿಂದ ಶಬರಿಮಲೆಗೆ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಿದೆ.

ಹುಬ್ಬಳ್ಳಿ-ಕೊಟ್ಟಾಯಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 07305/07306) ಎಂಟು ಬೋಗಿಗಳನ್ನು ಹೊಂದಿರಲಿದೆ. ಇದು ಡಿಸೆಂಬರ್ 2, 2023 ರಿಂದ ಜನವರಿ 20, 2024 ರವರೆಗೆ ಪ್ರತಿ ಶನಿವಾರ ಇರಲಿದೆ. ಇದು ಹುಬ್ಬಳ್ಳಿಯಿಂದ ಬೆಳಗ್ಗೆ 10:30ಕ್ಕೆ ಹೊರಡಲಿದ್ದು, ಕೊಟ್ಟಾಯಂಗೆ ಮರುದಿನ ಬೆಳಗ್ಗೆ 08:15ಕ್ಕೆ ತಲುಪಲಿದೆ.

ಹಾಗೆಯೇ ಡಿಸೆಂಬರ್ 3, 2023 ರಿಂದ ಜನವರಿ 21, 2024 ರವರೆಗೆ ಪ್ರತಿ ಭಾನುವಾರ ಇರಲಿದೆ. ಇದು ಕೊಟ್ಟಾಯಂನಿಂದ ಬೆಳಗ್ಗೆ 11:00 ಗಂಟೆಗೆ ಬಿಡಲಿದ್ದು, SSS ಹುಬ್ಬಳ್ಳಿಗೆ ಮರುದಿನ ಬೆಳಗ್ಗೆ 09:50ಕ್ಕೆ ಆಗಮಿಸಲಿದೆ.

ಈ ರೈಲು 1 ಎಸಿ ಎರಡು ಹಂತದ ಕೋಚ್, 1 ಎಸಿ ಮೂರು ಹಂತದ ಕೋಚ್, 10 ಎರಡನೇ ದರ್ಜೆಯ ಸ್ಲೀಪರ್ ಕೋಚ್‌ಗಳು, 4 ಸಾಮಾನ್ಯ ದ್ವಿತೀಯ ದರ್ಜೆ ತರಬೇತುದಾರರು, 2 ಲಗೇಜ್ ಕಮ್ ಬ್ರೇಕ್ ಕೋಚ್‌ಗಳನ್ನು ಹೊಂದಿರಲಿದೆ.

ಬೆಂಗ್ಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್‌ ಸಂಚಾರ

ರಾಜ್ಯದಲ್ಲಿ ಹಬ್ಬಗಳು ಸಮೀಪಿಸುತ್ತಿದ್ದಂತೆಯೇ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯು ವಿಶೇಷ ಬಸ್‌ಗಳನ್ನು ಬಿಡುತ್ತಲೇ ಬಂದಿದೆ. ಅದೇ ರೀತಿ ಇದೀಗ ಶಬರಿಮಲೆ ಭಕ್ತರಿಗಾಗಿ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸೇವೆಯನ್ನು ಕಲ್ಪಿಸಿದೆ. ಹಾಗಾದರೆ ಪ್ರಯಾಣಿಕರು ಯಾವಾಗಿನಿಂದ ಈ ಸೇವೆಯನ್ನು ಪಡೆಯಬಹುದು ಹಾಗೂ ದರ, ಸಮಯಗಳ ವಿವರವನ್ನು ಇಲ್ಲಿ ತಿಳಿಯಿರಿ.

KSRTCಯು ಶಬರಿಮಲೆ ಭಕ್ತರಿಗಾಗಿ ಬೆಂಗಳೂರಿನಿಂದ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿಲಕ್ಕಲ್‌ಗೆ ಡಿಸೆಂಬರ್ 1 ರಿಂದ ವೋಲ್ವೋ ಬಸ್ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಇನ್ನು ಟಿಕೆಟ್ ದರ ಪ್ರತಿ ಪ್ರಯಾಣಿಕರಿಗೆ 1,600 ರೂಪಾಯಿ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಈ ವೋಲ್ವೋ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಟು ಮರುದಿನ ಬೆಳಗ್ಗೆ 6:45ರ ಸುಮಾರಿಗೆ ನಿಲಕ್ಕಲ್‌ಗೆ ತಲುಪಲಿದೆ. ನಂತರ ಸಂಜೆ 6 ಗಂಟೆಗೆ ನಿಲಕ್ಕಲ್‌ನಿಂದದ ಹೊರಡಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+