ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದ ನಶಿಸಿ ಹೋಗುತ್ತಿರುವ ಇತಿಹಾಸ ಪ್ರಸಿದ್ಧ ವೇಣುಕಲ್ ಗುಡ್ಡ

ಹಿರಿಯೂರು ತಾಲೂಕಿನ ಇತಿಹಾಸ ಪ್ರಸಿದ್ದ ವೇಣುಕಲ್ಲುಗುಡ್ಡ ನಶಿಸುವ ಹಂತಕ್ಕೆ ತಲುಪಿದ್ದು, ಇದರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.

By ಚಿದಾನಂದ್ ಮಸ್ಕಲ್
|
Google Oneindia Kannada News

ಚಿತ್ರದುರ್ಗ, ಜನವರಿ, 29: ವಿವಿಧ ಬುಡಕಟ್ಟು ಸಮುದಾಯಗಳು ಸೇರಿದಂತೆ ಹಲವಾರು ಸಮುದಾಯಗಳು ವಾಸಿಸುವ ಹಿರಿಯೂರು ತಾಲೂಕಿನ ವೇಣುಕಲ್ಲುಗುಡ್ಡ ನಶಿಸುವಮ ಹಂತಕ್ಕೆ ತಲುಪಿದೆ.

ಈ ವೇಣುಕಲ್ಲುಗುಡ್ಡ ಗ್ರಮವೂ ನೂರಾರು ವರ್ಷಗಳ ಕಾಲ ಇತಿಹಾಸ ಹೊಂದಿರುವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿದೆ. ಹಿರಿಯೂರು ನಗರದಿಂದ ಸುಮಾರು 28 ಕಿಲೋ ಮೀಟರ್‌ ದೂರದಲ್ಲಿರುವ ಈ ಗ್ರಾಮ ಒಂದು ಕಾಲದಲ್ಲಿ ಐತಿಹಾಸಿಕ ಪ್ರಖ್ಯಾತಿ ಪಡೆದಿದ್ದು, ಅನೇಕ ದೇವಾಲಯ ಹಾಗೂ ಶಾಸನಗಳನ್ನು ಕೂಡ ಹೊಂದಿದೆ. ಇದು ಸುಮಾರು 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮವಾಗಿದೆ. ಆದರೆ ಇಂದು ಇಂತಹ ಗ್ರಾಮಕ್ಕೆ ಬಸ್ ಸೌಲಭ್ಯವೇ ಇಲ್ಲದಂತಾಗಿದೆ. ಅದರಲ್ಲಿಯೂ ಇಲ್ಲಿಂದ ಹಿರಿಯೂರು ನಗರಕ್ಕೆ ಹೋಗಲು ಕೇವಲ ಒಂದು ಕೆಎಸ್‌ಆರ್‌ಟಿಸಿ ಬಸ್ ಮಾತ್ರ ಇದೆ. ಆದ್ದರಿಂದ ಇಲ್ಲಿನ ಜನರು ಆಟೋ, ಬೈಕ್ ಸೇರಿದಂತೆ ಇನ್ನಿತರ ವಾಹನಗಳ ಮೊರೆಹೋಗಿದ್ದಾರೆ.

Republic day 2023: ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಗೆ ಬಿ.ಸಿ ಪಾಟೀಲ್‌ ನೀಡಿದ ಭರವಸೆಗಳಿವುRepublic day 2023: ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಗೆ ಬಿ.ಸಿ ಪಾಟೀಲ್‌ ನೀಡಿದ ಭರವಸೆಗಳಿವು

ಈ ಗ್ರಾಮಕ್ಕೆ ಸುಮಾರು ಸಾವಿರಾರು ವರ್ಷಗಳ ಕಾಲ ಇತಿಹಾಸವಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಆದರೆ ಕೆಲವು ದಾಖಲೆಗಳ ಮಾಹಿತಿ ಪ್ರಕಾರ ಇದು ಪಾಳೇಗಾರರ ಪಟ್ಟು ಆಗಿತ್ತು. ಕರೆನಾಯಕ, ರಂಗನಾಯಕ, ಈರನಾಯಕ, ಓಬಳನಾಯಕ ಹಾಗೂ ಓಲೇಕಾರನಾಯಕರು ಪಾಳೇಗಾರ ಪಟ್ಟು ಮಾಡಿಕೊಂಡಿದ್ದರು. ಪ್ರಮುಖವಾಗಿ 1754 ರಲ್ಲಿ ಕಸ್ತೂರಿ ರಂಗಪ್ಪ ನಾಯಕ ಪಾಳೇಗಾರನು ಅತ್ಯಂತ ಪ್ರಸಿದ್ದಿಯಾಗಿ ಆಳ್ವಿಕೆ ನಡೆಸಿದ್ದಾನೆ. ಈತನ ಕಾಲದಲ್ಲಿ ದೇವಸ್ಥಾನಗಳು, ಮಠಗಳು, ಪುಷ್ಕರಣಿಗಳು, ಕಲ್ಯಾಣಿಗಳು, ಕೆರೆಗಳು, ಕೋಟೆ ಕೊತ್ತಲಗಳು ಸೇರಿದಂತೆ ಗ್ರಾಮ ಸಾಕಷ್ಟು ಅಭಿವೃದ್ದಿ ಸಾಧಿಸಿತ್ತು. ಹಾಗೆಯೇ ಕೃಷಿ ಚಟುವಟಿಕೆಗೆ ಕಪಿಲೆಗಳು, ಗೋಕಟ್ಟೆ, ಆರುಡಿ ಕಟ್ಟೆ, ಅಜ್ಜನಕಟ್ಟೆ, ದೊಡ್ಡ ಕೆರೆ, ಚಿಕ್ಕಕೆರೆ ಹೀಗೆ ನೀರಾವರಿ ಸೌಲಭ್ಯಕ್ಕೆ ಸಾಕಷ್ಟು ಒತ್ತು ನೀಡಿಲಾಗಿತ್ತು.

 ನಶಿಸಿ ಹೋದ ಕುರುಹುಗಳು

ನಶಿಸಿ ಹೋದ ಕುರುಹುಗಳು

ನಂತರ ಬಂದಂತಹ ಪಾಳೇಗಾರು ಅಷ್ಟೊಂದು ಬಲಿಷ್ಠವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ವಿಕೆ ಗುಡ್ಡದ ಮೇಲೆ ನವಾಬರು ದಾಳಿ ನಡೆಸಿದ್ದರು. ಆಗ ಗ್ರಾಮದ ಮೇಲೆ ಆಳ್ವಿಕೆಯ ಹಿಡಿತ ಸಾಧಿಸುವ ಜೊತೆಗೆ ಇಲ್ಲಿನ ಹಲವಾರು ದೇವಾಲಯಗಳು, ಕೋಟೆಗಳು, ಪುಷ್ಕರಣಿಗಳು ನಶಿಸಿ ಹೋದವು ಎನ್ನಲಾಗುತ್ತಿದೆ. ಆ ಸಂದರ್ಭದಲ್ಲಿ ಕೆಲವು ಜನಾಂಗಗಳು ಗ್ರಾಮಕ್ಕೆ ಬಂದು ವಾಸ ಮಾಡುತ್ತಿದ್ದರು. ವಾಸ್ತವವಾಗಿ ಕೆಲವು ಕುರುಹುಗಳು ನಶಿಸಿ ಹೋಗಿದ್ದು, ಒಂದಿಷ್ಟು ಉಳಿದುಕೊಂಡಿವೆ.

 ನಶಿಸಿ ಹೋಗಿರುವ ಕೋಟೆಗಳು

ನಶಿಸಿ ಹೋಗಿರುವ ಕೋಟೆಗಳು

ಇದೊಂದು ಏಳು ಸುತ್ತಿನ ಕೋಟೆಯಾಗಿದ್ದು, 1ರಲ್ಲಿ ಬಸವಣ್ಣ ದೇವಾಲಯ, (ಶಿಲಾಶಾಸನ), 2ರಲ್ಲಿ ಆಂಜನೇಯ ದೇವಸ್ಥಾನ ಮತ್ತು ಗುಡ್ಡೆ ಕಲ್ಲು, 3ರಲ್ಲಿ ತಿಮ್ಮಪ್ಪ ದೇವಸ್ಥಾನ, 4ರಲ್ಲಿ ಕೆಳಗಡೆ ಮಠ ಮತ್ತು ಮೇಗಳ ಮಠ (ಮಧ್ಯದಲ್ಲಿ ಲಿಂಗ ಮುದ್ರೆ ಕೈಯಲ್ಲಿದೆ). ಇನ್ನು 5ರಲ್ಲಿ ಹೊಲೇರು ಸುತ್ತು, (ಕಲ್ಯಾಣಿ), 6ರಲ್ಲಿ ಹುಣಸೆ ಮರ, ಶಕುನ ರಂಗಪ್ಪ ದೇವಸ್ಥಾನ, 7ರಲ್ಲಿ ಚೌಡಮ್ಮ ದೇವಸ್ಥಾನ ಇದೆ. ಹೀಗೆ ಏಳು ಕೋಟೆಗಳಲ್ಲಿ ನಾಲ್ಕು ನಾಶವಾಗಿದ್ದು, ಮೂರು ಮಾತ್ರ ಉಳಿದಿವೆ. ಶಕುನಿ ರಂಗಪ್ಪ ಕೋಟೆ, ಹೊಲೇರು ಸುತ್ತು, ಚೌಡಮ್ಮ ಕೋಟೆ ಉಳಿದುಕೊಂಡಿರುವ ಕೋಟೆಯಾಗಿವೆ.

ಪ್ರಮುಖವಾಗಿ ಊರಿನ ಬಸ್‌ನಿಲ್ದಾಣ ಮುಭಾಗದಲ್ಲಿ ಮುಖ್ಯವಾದ ಎರಡು ಶಾಸನಗಳಿವೆ. ಈ ಶಾಸನಗಳು ಕೋಟೆ ಕಟ್ಟುವುದನ್ನು ತಿಳಿಸುತ್ತವೆ. ಗ್ರಾಮದ ಇತಿಹಾಸದ ಬಗ್ಗೆ ತಾಳೆಗರಿಗಳಲ್ಲಿ ಬರೆದಿರುವ ಮಾಹಿತಿ ದೊರೆಯುತ್ತದೆ. ಜೊತೆಗೆ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಎಂದು ತಿಳಿದುಬಂದಿದೆ.

 ವೇಣುಕಲ್ಲು ಗುಡ್ಡದ ವಿಸ್ತೀರ್ಣ

ವೇಣುಕಲ್ಲು ಗುಡ್ಡದ ವಿಸ್ತೀರ್ಣ

ವೇಣುಕಲ್ಲು ಗುಡ್ಡವು ವಿಸ್ತಾರವಾಗಿ ಬೆಳೆದು ನಿಂತ ರಾಜ್ಯವಾಗಿತ್ತು. ಉತ್ತರಕ್ಕೆ ಮೊಳಕಾಲ್ಮೂರು, ದಕ್ಷಿಣಕ್ಕೆ ರತ್ನಗಿರಿ, ಪೂರ್ವಕ್ಕೆ ನಿಡಗಲ್ಲು, ಹಾಗೂ ಪಶ್ಚಿಮಕ್ಕೆ ಮತ್ತೋಡುನಿಂದ ಹೊಸದುರ್ಗದವರೆಗೆ ಹಬ್ಬಿತ್ತು. ವಿಕೆ ಗುಡ್ಡವು ಬಲವಾದ ಏಳುಸುತ್ತಿನ ಕೋಟೆಯಿಂದ ಸುತ್ತುವರೆದಿತ್ತು. ನಿಪುಣರಾದ ಸೈನಿಕರನ್ನು ಹೊಂದಿರುವ ಸೈನ್ಯವೂ ಕೂಡ ಇತ್ತು. ರಾಜ್ಯದಲ್ಲಿ ಪಂಡಿತರು ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಿದ್ದರು. ಹೀಗೆ ಉತ್ತಮವಾದ ವ್ಯಾಪಾರ, ವ್ಯವಹಾರ ಹಾಗೂ ವ್ಯವಸಾಯಗಳಿಂದ ಸಂಪದ್ಭರಿತವಾದ ರಾಜ್ಯವಾಗಿತ್ತು.

 7 ದಿನಗಳ ಕಾಲ ಕೋಟೆ ಬಾಗಿಲು ಮುಚ್ಚಿದ್ದೇಕೆ?

7 ದಿನಗಳ ಕಾಲ ಕೋಟೆ ಬಾಗಿಲು ಮುಚ್ಚಿದ್ದೇಕೆ?

ಕಸ್ತೂರಿ ರಂಗಪ್ಪ ನಾಯಕ ಪಾಳೇಗಾರನ ಕಾಲದಲ್ಲಿ ಗೋವುಗಳಿದ್ದವು. ಈ ಗೋವುಗಳ ಮೇಲೆ ನವಾಬರು ದಾಳಿ ಮಾಡಲು ಬರುತ್ತಾರೆ. ನವಾಬರ ದಾಳಿ ತಿಳಿದ ಓರ್ವ ಗೋವು ಕಾಯುವ ವ್ಯಕ್ತಿ ಕಸ್ತೂರಿ ರಂಗಪ್ಪ ನಾಯಕನಿಗೆ ತಿಳಿಸಿದಾಗ 7 ದಿನಗಳ ಕಾಲ ಕೋಟೆಯ ಬಾಗಿಲನ್ನು ತೆರೆದಿರಲಿಲ್ಲ ಎಂಬ ಮಾತುಗಳಿವೆ. ಇದಕ್ಕೆ ಗೋವುಗಳು ಮೇಯುವ ಜಾಗವನ್ನು ಗ್ವುದ್ವಾಳು ಎಂದು ಕರೆಯುತ್ತಾರೆ.

ವಿಕೆ ಗುಡ್ಡ ಗ್ರಾಮ ತುಂಬಾ ಸಂಪತ್ತನ್ನು ಹೊಂದಿತ್ತು. ಈ 16 ಹಳ್ಳಿಗಳಲ್ಲಿ 4 ಗ್ರಾಮಗಳು ನಶಿಸಿ ಹೋಗಿವೆ. ಚಿಲ್ಲಹಳ್ಳಿ, ಈಶ್ವರಗೆರೆ, ಗೂಳ್ಯ, ಬ್ಯಾಡರಹಳ್ಳಿ, ಅಬ್ಬಿನಹೊಳೆ, ಹೊಸಳ್ಳಿ, ಸಾಲುಹುಣಸೆ, ಸೂಗೂರು, ಮುಂಗಸವಹಳ್ಳಿ, ಗೊಲ್ಲಹಳ್ಳಿ, ಹರಿಯಬ್ಬೆ, ಹಳ್ಳಿಗಳು ಇನ್ನು ಇವೆ. ಮತ್ತೊಂದೆಡೆ ರಂಗಾಪುರ, ಸುಂಗನ ತಿಮ್ಮನಹಳ್ಳಿ, ಗುಡೆಗಲ್ಲು, ಕಟಮ್ಮನಹಳ್ಳಿ ಇವು ನಶಿಸಿಹೋದ ಗ್ರಾಮಗಳಾಗಿವೆ. ವೇಣುಕಲ್ ಗುಡ್ಡದಿಂದ ಚಿತ್ರದುರ್ಗ ನಗರಕ್ಕೆ ಸುರಂಗ ಮಾರ್ಗ ಹಾಗೂ ವೇಣುಕಲ್ ಗುಡ್ಡದಿಂದ ನಿಡಗಲ್ಲು ಕೋಟೆಗೆ ಸುರಂಗ ಮಾರ್ಗ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

 ಭರವಸೆ ನೀಡಿದ್ದ ಅಧಿಕಾರಿಗಳು

ಭರವಸೆ ನೀಡಿದ್ದ ಅಧಿಕಾರಿಗಳು

ವಿಕೆ ಗುಡ್ಡ ಗ್ರಾಮಕ್ಕೆ ಹಿಂದೆ ಹಿರಿಯೂರಿನಲ್ಲಿ ತಹಶೀಲ್ದಾರ್ ಆಗಿದ್ದ ಮರಿಯಪ್ಪ ಹಾಗೂ ಇತರೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕೋಟೆಯನ್ನು ಸಂರಕ್ಷಣೆ ಮಾಡಲು ಭರವಸೆ ನೀಡಿದ್ದರು. ನಂತರ ಬಂದತಹ ಅಧಿಕಾರಿಗಳು ಇದರ ಕಡೆ ಗಮನಹರಿಸಲಿಲ್ಲ. ತಹಶೀಲ್ದಾರ್ ಕೆಲವೊಂದು ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಿದ್ದರು. ಆದರೆ ಕೋಟೆ ಸಂರಕ್ಷಣೆಗೆ ಒತ್ತು ನೀಡಿಲ್ಲ. ಈ ಅರಣ್ಯ ಪ್ರದೇಶದಲ್ಲಿ ಈಗಲೂ ಹಾಲ್ ಭೂತಹಳ್ಳಿ, ಕಲ್ಲೂವು, ಮಯೂರಶಕೆ, ತಾಮ್ರಶಕೆ ಮುಂತಾದ ಗಿಡಮೂಲಿಕೆಗಳು ದೊರೆಯುತ್ತದೆ.

 ಗ್ರಾಮದಲ್ಲಿನ ದೇವಾಲಯಗಳ ವಿವರ

ಗ್ರಾಮದಲ್ಲಿನ ದೇವಾಲಯಗಳ ವಿವರ

ಗ್ರಾಮದಲ್ಲಿ ಕಸ್ತೂರಿ ರಂಗಪ್ಪ ನಾಯಕನ ಕಾಲದಲ್ಲಿ ಹಲವಾರು ದೇವಾಲಯಗಳು ನಿರ್ಮಾಣಗೊಂಡವು. ಅದರಲ್ಲಿ ಪ್ರಮುಖವಾಗಿ ಹಾಲಪ್ಪ ಸ್ವಾಮಿ ದೇವಸ್ಥಾನ, ಎತ್ತಪ್ಪ ಮತ್ತು ಯರಬಳ್ಳಿ ಮಾರಕ್ಕ, ಮೆಕೆ ಮಾರಣ್ಣ, ಮೈಲಾರ ದೇವರು, ಆಂಜನೇಯ ದೇವಸ್ಥಾನ, ದೊಡ್ಡ ಲಕ್ಕಮ್ಮ ಹೀಗೆ ಹಲವಾರು ದೇವಾಲಯಗಳಿವೆ.

ಒಟ್ಟಾರೆ ಹೇಳುವುದಾದರೆ ಐತಿಹಾಸಿಕ ಕೋಟೆಗಳನ್ನು ಸಂರಕ್ಷಣೆ ಮಾಡುವುದು ಪ್ರಮುಖ ಕರ್ತವ್ಯ. ಆ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ, ಪುರಾತತ್ವ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಇಲಾಖೆಗಳು ಹೆಚ್ಚಿನ ಗಮನ ಹರಿಸಿ ಉಳಿದಿರುವಂತಹ ಕೋಟೆಗಳನ್ನು ಸಂರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ರಕ್ಷಿಸಬಹುದು. ಇಲ್ಲವಾದರೆ ಕೋಟೆ ಸರ್ವನಾಶದತ್ತ ದಾಪುಗಾಲಿಡುತ್ತಿದೆ ಎಂಬುದು ಗ್ರಾಮಸ್ಥರಿಂದ ಒಕ್ಕೂರಲ ಮಾತುಗಳು ಕೇಳಿಬರುತ್ತಿವೆ.

English summary
No maintenance of Hiriyur taluk Venukallu gudda, people outrage agaianst authorities, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X