ಅಂಡಮಾನ್‌ಗೆ ಐದು ದಿನಗಳ IRCTC ಪ್ಯಾಕೇಜ್ ಟೂರ್
ಈ ಪ್ಯಾಕೇಜ್‌ನಲ್ಲಿ ಪ್ರಯಾಣ ದೆಹಲಿಯಿಂದ ವಿಮಾನ ಪ್ರಯಾಣದ ಮೂಲಕ ಪ್ರಾರಂಭವಾಗುತ್ತದೆ. ಪ್ಯಾಕೇಜ್‌ನ ಹೆಸರು ಅಮೇಜಿಂಗ್ ಅಂಡಮಾನ್ ಎಕ್ಸ್ ದೆಹಲಿ. ಈ ಪ್ಯಾಕೇಜ್ ಅಡಿಯಲ್ಲಿ ನೀವು ಎರಡು ದಿನಾಂಕಗಳಲ್ಲಿ ಅಂಡಮಾನ್‌ಗೆ ಪ್ರಯಾಣಿಸಬಹುದು.
ನವದೆಹಲಿ, ಮಾರ್ಚ್ 2: ಭಾರತದ ಪ್ರಸಿದ್ಧ ಕಡಲತೀರ ಅಂಡಮಾನ್ ದ್ವೀಪಗಳು ತಣ್ಣನೆಯ ಹಿತಕರ ಪ್ರವಾಸದ ಅನುಭವಕ್ಕೆ ಸುಕ್ತವಾದ ಸ್ಥಳವಾಗಿದೆ. ಇಲ್ಲಿನ ಕಡಲ ಸೌಂದರ್ಯಕ್ಕೆ ಮಾರುಹೋಗದವರೆ ಇಲ್ಲ. ಈ ಸುಂದರ ಸ್ಥಳ ಸೊಂಪಾದ ಅರಣ್ಯ ಅದ್ಬುತ ಸಾಹಸಕ ಕ್ರೀಡೆಗಳ ತಾಣವಾಗಿದೆ. ಹೀಗಾಗಿ ಇಲ್ಲಿಗೆ ನೀವು ಪ್ರವಾಸ ಮಾಡಬೇಕೆನಿದರೆ ಅದಕ್ಕೆ ಇಲ್ಲಿ ಒಂದು ಹೊಸ ಆಫರ್ ಇದೆ.
ಅಂಡಮಾನ್‌ಗೆ ಐಆರ್‌ಸಿಟಿಸಿ ಪ್ಯಾಕೇಜ್ ಟೂರ್ ಅನ್ನು ಆರಂಭ ಮಾಡಿದೆ. ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಅಂಡಮಾನ್‌ಗೆ 5 ರಾತ್ರಿ ಮತ್ತು 6 ಹಗಲುಗಳ ವಿಮಾನ ಪ್ಯಾಕೇಜ್ ಟೂರ್ ಅನ್ನು ಪ್ರಾರಂಭಿಸಿದೆ.

ಈ ಪ್ಯಾಕೇಜ್‌ನಲ್ಲಿ ಪ್ರಯಾಣ ದೆಹಲಿಯಿಂದ ವಿಮಾನ ಪ್ರಯಾಣದ ಮೂಲಕ ಪ್ರಾರಂಭವಾಗುತ್ತದೆ. ಪ್ಯಾಕೇಜ್‌ನ ಹೆಸರು ಅಮೇಜಿಂಗ್ ಅಂಡಮಾನ್ ಎಕ್ಸ್ ದೆಹಲಿ. ಈ ಪ್ಯಾಕೇಜ್ ಅಡಿಯಲ್ಲಿ ನೀವು ಎರಡು ದಿನಾಂಕಗಳಲ್ಲಿ ಅಂಡಮಾನ್‌ಗೆ ಪ್ರಯಾಣಿಸಬಹುದು. ಅವುಗಳೆಂದರೆ ಮಾರ್ಚ್ 13 ಮತ್ತು 27. ಈ ಪ್ಯಾಕೇಜ್‌ನಲ್ಲಿ ನೀವು 4 ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ಪೋರ್ಟ್ ಬ್ಲೇರ್, ಹ್ಯಾವ್‌ಲಾಕ್ ದ್ವೀಪ, ನೀಲ್, ನಾರ್ತ್ ಬೇ ಮತ್ತು ರಾಸ್ ದ್ವೀಪ. ದೆಹಲಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 5:50 ಕ್ಕೆ ಹೊರಡುತ್ತದೆ. ವಿಮಾನವು ಅಂಡಮಾನ್‌ಗೆ ಒಂದು ದಿನ 1 ಕ್ಕೆ 11 ಗಂಟೆಗೆ ಪೋರ್ಟ್ ಬ್ಲೇರ್ ತಲುಪುತ್ತದೆ.
ಈ ಪ್ಯಾಕೇಜ್‌ನ ಬೆಲೆ ಪ್ರಯಾಣಿಸುವವರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಈ ಪ್ಯಾಕೇಜ್‌ನ ಕನಿಷ್ಠ ಬೆಲೆ ಪ್ರತಿ ವ್ಯಕ್ತಿಗೆ 53,500 ರೂಪಾಯಿ ಆಗಿರುತ್ತದೆ. ಈ ವೇಳೆ ಮೂವರು ಒಟ್ಟಿಗೆ ಪ್ರಯಾಣಿಸಿದರೆ, ಇಬ್ಬರಿಗೆ ತಲಾ 54,500 ರೂಪಾಯಿಯಾಗುತ್ತದೆ. ಏಕಾಂಗಿ ಪ್ರಯಾಣಿಕರಿಗೆ ಪ್ಯಾಕೇಜ್ ಬೆಲೆ 67,100 ರೂಪಾಯಿ ವೆಚ್ಚವಾಗುತ್ತದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

5-11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆಯೊಂದಿಗೆ 48,900 ರೂಪಾಯಿ ಮತ್ತು ಹಾಸಿಗೆ ಇಲ್ಲದೆ 46,800 ರೂಪಾಯಿ ಪಾವತಿಸಬೇಕಾಗುತ್ತದೆ. 2ರಿಂದ 4 ವರ್ಷದ ಮಕ್ಕಳಿಗೆ ಹಾಸಿಗೆಯಿಲ್ಲದೆ 35,200 ರೂಪಾಯಿ ವೆಚ್ಚವಾಗುತ್ತದೆ.
ಪ್ಯಾಕೇಜ್ ಕುರಿತ ಸಂಕ್ಷೀಪ್ತ ಮಾಹಿತಿ ಇಲ್ಲಿದೆ.
1. ಗೋ ಫಸ್ಟ್ ಏರ್‌ಲೈನ್ಸ್‌ನಲ್ಲಿನ ವಿಮಾನ ಟಿಕೆಟ್‌ಗಳು ಎರಡು ಕಡೆಯಿಂದ ಬುಕ್ ಆಗಿರುತ್ತದೆ. (ದೆಹಲಿ - ಪೋರ್ಟ್ ಬ್ಲೇರ್ ಮತ್ತು ಪೋರ್ಟ್ ಬ್ಲೇರ್ - ದೆಹಲಿ).
2. ಸುಸಜ್ಜಿತ ಎಸಿ ಕೊಠಡಿಗಳಲ್ಲಿ ವಸತಿ ವ್ಯವಸ್ಥೆ ಇರುತ್ತದೆ (ಪೋರ್ಟ್ ಬ್ಲೇರ್‌ನಲ್ಲಿ ಮೂರು ರಾತ್ರಿಗಳು, ನೀಲ್‌ನಲ್ಲಿ ಒಂದು ರಾತ್ರಿ ಮತ್ತು ಹ್ಯಾವ್‌ಲಾಕ್‌ನಲ್ಲಿ ಒಂದು ರಾತ್ರಿ).
3. ಹಂಚಿಕೆ ಆಧಾರದ ಮೇಲೆ ಎಸಿ ವಾಹನದ ಮೂಲಕ ಎಲ್ಲಾ ವರ್ಗಾವಣೆಗಳು ಮತ್ತು ದೃಶ್ಯವೀಕ್ಷಣೆ ಇರುತ್ತದೆ.
4. ಹೋಟೆಲ್‌ನಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಅದು 5 ಬೆಳಗ್ಗಿನ ಉಪಹಾರ ಮತ್ತು 5 ಊಟಗಳು.
5. ಐಆರ್‌ಸಿಟಿಸಿಯಿಂದ ದೋಣಿಯ ಟಿಕೆಟ್ ವ್ಯವಸ್ಥೆ.
6. ಸೆಲ್ಯುಲಾರ್ ಜೈಲ್, ಚಾಥಮ್ ಮಿಲ್, ಸಾಮುದ್ರಿಕಾ ನೇವಲ್ ಮೆರೈನ್ ಮ್ಯೂಸಿಯಂ ಪ್ರವೇಶ ಶುಲ್ಕವನ್ನು ಈ ಪ್ಯಾಕೇಜ್ ಒಳಗೊಂಡಿರುತ್ತದೆ.
7. ಈ ಪ್ಯಾಕೇಜ್‌ನಲ್ಲಿ ಜಿಎಸ್‌ಟಿ ಮತ್ತು ಎಲ್ಲಾ ಇತರ ತೆರಿಗೆಗಳು ಅನ್ವಯಿಸುತ್ತವೆ. ಹೆಚ್ಚಿನ ಮಾಹಿತಿಗೆ ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಹೋಗಿ ತಿಳಿದುಕೊಳ್ಳಬಹುದು.











Click it and Unblock the Notifications