ಪ್ರವಾಸಿಗರಿಗೆ ಗುಡ್ ನ್ಯೂಸ್: ಭಾರತದ ಗಡಿ ಭಾಗದ ಪ್ರಸಿದ್ಧ ಯುದ್ಧ ಭೂಮಿ ನೋಡುವ ಅವಕಾಶ- ಎಲ್ಲಿ? ಹೇಗೆ?
ಭಾರತದ ಗಡಿ ಭಾಗದಲ್ಲಿರುವ ಐತಿಹಾಸಿಕ ಯುದ್ಧ ಭೂಮಿಗಳನ್ನು ನೇರವಾಗಿ ನೋಡಲು ಬಯಸುವ ಪ್ರವಾಸಿಗರಿಗೆ ಭಾರತೀಯ ಸೇನೆ ಅವಕಾಶವನ್ನು ನೀಡಿದೆ. ಇದರ ಮಾಹಿತಿಯನ್ನು ಒಳಗೊಂಡ 'ಭಾರತ್ ರಣಭೂಮಿ ದರ್ಶನ' ವೆಬ್‌ಸೈಟ್‌ಗೆ ಇಂದು ಚಾಲನೆ ನೀಡಲಾಗಿದ್ದು, ಇದರಲ್ಲಿ 77 ವೀಕ್ಷಣಿಯ ತಾಣಗಳ ಇತಿಹಾಸ, ಭೇಟಿ ನೀಡುವುದು ಹೇಗೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ.
ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ಗಡಿ ಭಾಗಗಳ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ಸೇನೆ ಮುಂದಾಗಿದೆ. ಭಾರತದ ಗಡಿ ಭಾಗಗಳಲ್ಲಿ ಇರುವ ಪ್ರಮುಖ ಯುದ್ಧ ಭೂಮಿಗಳನ್ನು ಪ್ರೇಕ್ಷಣೀಯ ಸ್ಥಳಗಳಾಗಿ ಮಾರ್ಪಡಿಸಲು ಭಾರತೀಯ ಸೇನೆಯು ಪ್ರವಾಸೋದ್ಯಮ ಸಚಿವಾಲಯದೊಂದಿಗೆ ಕೈ ಜೋಡಿಸಿದೆ. ಈ ಮೂಲಕ ಗಡಿ ಪ್ರದೇಶಗಳ ಸಂಪರ್ಕ, ಪ್ರವಾಸೋದ್ಯಮ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತೀಯ ಸೇನೆ ಮುಂದಾಗಿದೆ.

ಎಷ್ಟು ತಾಣಗಳಿಗೆ ಭೇಟಿ ನೀಡಬಹುದು?
ಲಡಾಖ್‌ನಲ್ಲಿರುವ ನದಿ ಕಣಿವೆಯಾದ ಗಾಲ್ವಾನ್ ಅನ್ನು ಜೂನ್ 2020 ರಲ್ಲಿ ಭಾರತ ಮತ್ತು ಚೀನಾ ನಡುವಿನ ಹಿಂಸಾತ್ಮಕ ಗಡಿ ಘರ್ಷಣೆಗಳ ತಾಣವೆಂದು ಕರೆಯಲಾಗುತ್ತದೆ. ಇದರಲ್ಲಿ 20 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡರು. ಜೊತೆಗೆ 2017ರಲ್ಲಿ ಎರಡು ಏಷ್ಯಾದ ನೆರೆಹೊರೆಯವರ ನಡುವೆ ಡೋಕ್ಲಾಮ್ ಬಿಕ್ಕಟ್ಟು ಉಂಟಾಗಿತ್ತು. ಡೋಕ್ಲಾಮ್ ಭಾರತ, ಭೂತಾನ್ ಮತ್ತು ಚೀನಾ ನಡುವಿನ ತ್ರಿ-ಜಂಕ್ಷನ್ ಆಗಿತ್ತು. ಈ ಎರಡು ಮತ್ತು ದೇಶದ ಗಡಿಯ ಪಕ್ಕದಲ್ಲಿರುವ ಅಂತಹ 77 ಇತರ ಮುಂಚೂಣಿಯ ತಾಣಗಳನ್ನು ವೀಕ್ಷಣಿಯ ತಾಣಗಳನ್ನಾಗಿ ಲಿಸ್ಟ್ ಮಾಡಲಾಗಿದೆ.
ಇದಕ್ಕಾ ಭಾರತೀಯ ಸೇನೆ 'ಯುದ್ಧ ಪ್ರವಾಸೋದ್ಯಮ' ನಕ್ಷೆಯನ್ನು ಅಭಿವೃದ್ಧಿಪಡಿಸಿದ್ದು, ಈ ನಕ್ಷೆಯಲ್ಲಿ ಕೆಲ ಯುದ್ಧ ಭೂಮಿಯನ್ನು ಗುರುತಿಸಿ ಪಟ್ಟಿ ಮಾಡಿದೆ. ಭಾರತೀಯ ಸೇನೆಯು ಪ್ರವಾಸೋದ್ಯಮ ಸಚಿವಾಲಯದ ಜೊತೆಯಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಿದೆ.

ಜನವರಿ 15ರಂದು ಬುಧವಾರ 77ನೇ ಸೇನಾ ದಿನವನ್ನು ಗುರುತಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 'ಭಾರತ್ ರಣಭೂಮಿ ದರ್ಶನ' ವೆಬ್‌ಸೈಟ್ ಅನ್ನು ಪ್ರಾರಂಭಿಸಿದರು. ಈ ವೆಬ್‌ಸೈಟ್‌ನಲ್ಲಿ ಪ್ರವಾಸಿಗರಿಗೆ 77 ತಾಣಗಳು, ಅವುಗಳ ಕಥೆಗಳು ಮತ್ತು ಅಲ್ಲಿಗೆ ಹೇಗೆ ಹೋಗುವುದು ಎಂಬುದರ ಕುರಿತು ಮಾಹಿತಿಯನ್ನು ನೀಡಲಾಗಿದೆ. 'ಭಾರತ್ ರಣಭೂಮಿ ದರ್ಶನ' ವೆಬ್‌ಸೈಟ್ ಮೂಲಕ ಪ್ರವಾಸಿಗರು ಭಾರತದ ಗಡಿಭಾಗದಲ್ಲಿ ಗುರುತಿಸಲಾದ 77 ತಾಣಗಳಿಗೆ ಭೇಟಿ ನೀಡಬಹುದು.
'ಭಾರತ್ ರಣಭೂಮಿ ದರ್ಶನ' ವೆಬ್‌ಸೈಟ್‌ನಲ್ಲಿ ಏನಿದೆ?
ಇಂದು 'ಭಾರತ್ ರಣಭೂಮಿ ದರ್ಶನ' ವೆಬ್‌ಸೈಟ್ ಗೆ ಚಾಲನೆ ನೀಡಲಾಗಿದೆ. ಇದು ಪ್ರವಾಸಿಗರಿಗೆ ಸ್ಥಳಗಳ ಬಗ್ಗೆ ಐತಿಹಾಸಿಕ ಮಾಹಿತಿ, ಪ್ರಯಾಣ ಯೋಜನೆ ಮತ್ತು ಅಗತ್ಯ ಪರವಾನಗಿಗಳನ್ನು ಪಡೆಯಲು ಸಹಾಯ ಮಾಡುತ್ತದೆ. ವೆಬ್‌ಸೈಟ್ ವರ್ಚುವಲ್ ಪ್ರವಾಸಗಳು, ಐತಿಹಾಸಿಕ ಘಟನೆಗಳ ವಿವರಣೆಗಳನ್ನು ನೀಡುತ್ತದೆ. ಇದಲ್ಲದೆ ಈ ಸ್ಥಳಗಳನ್ನು 'ಇನ್‌ಕ್ರೆಡಿಬಲ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಪ್ರಚಾರ ಕೂಡ ಮಾಡಲಾಗುವುದು.

ಗಡಿ ಘರ್ಷಣೆಗಳ ಕಥೆಗಳ ನೇರ ಅನುಭವ
ಭಾರತ-ಚೀನಾ ಮತ್ತು ಭಾರತ-ಪಾಕಿಸ್ತಾನ ಗಡಿಗಳಲ್ಲಿ ನೆಲೆಗೊಂಡಿರುವ ಈ ಸ್ಥಳಗಳು ಭಾರತೀಯ ಇತಿಹಾಸದ ಪ್ರಮುಖ ಅಧ್ಯಾಯಗಳಿಗೆ ಸಾಕ್ಷಿಯಾಗಿವೆ. ಉದಾಹರಣೆಗೆ 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಲೋಂಗೆವಾಲಾ ಕದನ ಅಥವಾ 1962 ರ ಇಂಡೋ-ಚೀನಾ ಯುದ್ಧದ ಸಮಯದಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಘಟನೆಗಳು. ಈ ಸ್ಥಳಗಳಲ್ಲಿ ಈಗಾಗಲೇ ಇರುವ ಯುದ್ಧ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ನೇರವಾಗಿ ಪ್ರವಾಸಿಗರು ನೋಡಬಹುದಾಗಿದೆ. ಈ ಅನುಭವ ಇನ್ನಷ್ಟು ಆಸಕ್ತಿದಾಯಕ ಮತ್ತು ಮಾಹಿತಿಯುಕ್ತವಾಗಿಸುತ್ತದೆ.
ಪ್ರವಾಸೋದ್ಯಮ ಅಭಿವೃದ್ಧಿಯ ಹೊಸ ಹಾದಿ
ಇದರ ಉದ್ದೇಶ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಗಡಿ ಪ್ರದೇಶಗಳಲ್ಲಿ ಸಂಪರ್ಕ, ಪ್ರವಾಸೋದ್ಯಮ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದಾಗಿದೆ. ಸ್ಥಳೀಯ ನಾಗರಿಕ ಆಡಳಿತದ ಸಹಯೋಗದೊಂದಿಗೆ ಸೇನೆಯು ಈ ಪ್ರಯತ್ನಗಳನ್ನು ಸಾಕಾರಗೊಳಿಸುತ್ತಿದೆ. ಈ ಪ್ರಮುಖ ಸ್ಥಳಗಳನ್ನು ಪ್ರವಾಸಿಗರಿಗೆ ಪ್ರವೇಶಿಸುವಂತೆ ಮಾಡುವುದು ಸೇನೆಯ ಪ್ರಮುಖ ಸಾಧನೆಯಾಗಿದೆ.
ಪ್ರವಾಸಿಗರಿಗೆ ಸೈನಿಕರ ಅನುಭವ
ಇಷ್ಟೇ ಅಲ್ಲ ಈ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ನಮ್ಮ ಸೈನಿಕರು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಕಠಿಣ ಪರಿಸ್ಥಿತಿಗಳನ್ನು ಕಣ್ಣಾರೆ ನೋಡುವ ಅವಕಾಶ ಸಿಗುತ್ತದೆ. ಇಲ್ಲಿನ ಸವಾಲಿನ ಪರಿಸ್ಥಿತಿಗಳು ಮತ್ತು ಕಠಿಣ ಹವಾಮಾನವನ್ನು ಎದುರಿಸುವುದು ಒಂದು ವಿಶಿಷ್ಟ ಅನುಭವವಾಗಿರುತ್ತದೆ.
ಯುದ್ಧಭೂಮಿ ಪ್ರವಾಸೋದ್ಯಮದ ಆರ್ಥಿಕ ಅಂಶ
ಕಳೆದ ನಾಲ್ಕು ವರ್ಷಗಳಲ್ಲಿ ಲಡಾಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಂತಹ ಗಡಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ರಕ್ಷಣಾ ಸಚಿವರು ಇತ್ತೀಚೆಗೆ ಹೇಳಿದ್ದರು. ಈ ಬೆಳವಣಿಗೆಯನ್ನು ಕಾಪಾಡಿಕೊಂಡು ಹೋಗಲು ಈ ಯೋಜನೆ ಸಹಕಾರಿಯಾಗಿದೆ.
ಒಟ್ಟಿನಲ್ಲಿ ನೀವು ಭಾರತದ ಗಡಿ ಭಾಗದಲ್ಲಿ ಕೆಲ ಐತಿಹಾಸಿಕ ಯುದ್ಧ ಭೂಮಿಗಳನ್ನು ನೇರವಾಗಿ ನೋಡುವ ಅವಕಾಶವನ್ನು ಪಡೆಯುತ್ತೀರಿ. ಅಲ್ಲಿನ ಸ್ಮಾರಕಗಳು ಹಾಗೂ ವಸ್ತು ಸಂಗ್ರಹಾಲಯಗಳನ್ನು ವೀಕ್ಷಿಸಬಹುದು. ಇದರಿಂದ ಹಿಂದೆ ದೇಶಕ್ಕಾಗಿ ಶ್ರಮಿಸಿದ ಯೋಧರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ನಕ್ಷೆಯಲ್ಲಿ ನಾವು ಯುದ್ಧ ಭೂಮಿಗಳನ್ನು ನೋಡುವುದಕ್ಕಿಂತ ನೇರವಾಗಿ ನೋಡುವುದರ ಅನುಭವ ವಿಭಿನ್ನವಾಗಿರುತ್ತದೆ. ಈ ವಿಭಿನ್ನ ಅನುಭವಕ್ಕೆ ಭಾರತೀಯ ಸೇನೆ ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಅವಕಾಶ ನೀಡಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications