Christmas 2023: ಮೈಸೂರಿನ ಮುಕುಟ ಮಣಿ ಸಂತ ಫಿಲೋಮಿನಾ ಚರ್ಚ್ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು, ಡಿಸೆಂಬರ್ 25: ಮೈಸೂರು ನಗರದಲ್ಲಿರುವ ಆಕರ್ಷಕ ಮತ್ತು ಹೆಚ್ಚು ಭಕ್ತರು, ಪ್ರವಾಸಿಗರು ಭೇಟಿ ನೀಡುವ ಪಾರಂಪರಿಕ ಕಟ್ಟಡವೂ ಆಗಿರುವ ಸಂತ ಫಿಲೋಮಿನಾ ಚರ್ಚ್ ನಗರಕ್ಕೊಂದು ಮುಕುಟ ಮಣಿಯಾಗಿ ಭಾವೈಕ್ಯತೆ ಸಾರುವ ಭವ್ಯ ತಾಣವಾಗಿ ಕಣ್ಮನ ಸೆಳೆಯುತ್ತಾ ಬಂದಿದೆ. ಕ್ರಿಸ್ ಮಸ್ ಹಬ್ಬದಂದು ಇಲ್ಲಿಗೆ ಬರೀ ಕ್ರೈಸ್ತರು ಮಾತ್ರವಲ್ಲದೆ ಎಲ್ಲ ಜನಾಂಗದವರು ಭೇಟಿ ನೀಡಿ ಸಂಭ್ರಮಿಸುವುದರಿಂದ ಚರ್ಚ್‌ನ ಸುತ್ತ ಜನಸಾಗರ ಕಂಡು ಬರುತ್ತದೆ.
ವರ್ಷಪೂರ್ತಿ ಪ್ರವಾಸಿಗರಿಂದ ತುಂಬಿ ತುಳುಕುವ ಸಂತ ಫಿಲೋಮಿನಾ ಚರ್ಚ್ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇಲ್ಲಿಗೆ ತೆರಳುವ ಪ್ರತಿಯೊಬ್ಬರನ್ನೂ ದೂರದಿಂದಲೇ ಭವ್ಯ ಮತ್ತು ಸುಂದರ ಕಟ್ಟಡ ಹೊಂದಿದ ಚರ್ಚ್ ತನ್ನತ್ತ ಆಕರ್ಷಿಸುತ್ತದೆ. ಚರ್ಚ್‌ನ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಮನಶಾಂತಿ ನೆಲೆಸುತ್ತದೆ. ಜೊತೆಗೆ ದಿಟ್ಟಿಸಿ ನೋಡಿದರೆ ಮುಗಿಲೆತ್ತರಕ್ಕೆ ಎದ್ದು ನಿಂತ ಚರ್ಚ್‌ನ ಗೋಪುರಗಳು ಅಚ್ಚರಿಯನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲದೆ ಚರ್ಚ್ ನಿರ್ಮಿಸಲ್ಪಟ್ಟ ರೀತಿ ಮತ್ತು ಅದರಲ್ಲಿನ ಕಲಾನೈಪುಣ್ಯತೆ ಎಲ್ಲವೂ ಹೊಸ ಅನುಭವ ನೀಡುತ್ತದೆ.

ಸಂತ ಫಿಲೋಮಿನಾ ಚರ್ಚ್‌ನ ಪ್ರಮುಖ ಆಕರ್ಷಣೆಯೇ ಗಗನಚುಂಬಿ ಗೋಪುರಗಳು. ಇಡೀ ನಗರದ ನಡುವೆ ಎದ್ದು ಕಾಣುವ ಈ ಗೋಪುರಗಳು ನಗರಕ್ಕೊಂದು ಭೂಷಣ ಎಂದರೂ ತಪ್ಪಾಗಲಾರದು. ಫ್ರೆಂಚ್ ಶಿಲ್ಪಿಗಳ ಕಲಾಕೌಶಲ್ಯ ಇಲ್ಲಿ ಅನಾವರಣಗೊಂಡಿದ್ದು ಇಡೀ ಚರ್ಚ್ ಫ್ರೆಂಚ್ ಕಲಾಶೈಲಿಯಲ್ಲಿ ನಿರ್ಮಾಣಗೊಂಡಿದೆ.
ಈ ಚರ್ಚ್ ನಿರ್ಮಾಣದ ಹಿಂದೆ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹಕಾರ ಮತ್ತು ಕೊಡುಗೆಯಿದೆ. ಮತ್ತು ಈ ಚರ್ಚ್ ನ ಆಸ್ತಿಭಾರ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದವರು ಕೂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿದ್ದಾರೆ. ಅವರು 1933ರ ಅಕ್ಟೋಬರ್ 28ರಂದು ಆಸ್ತಿಭಾರ ಪ್ರತಿಷ್ಠಾಪನಾ ಕಾರ್ಯ ನೆರವೇರಿಸುವುದರೊಂದಿಗೆ ಚರ್ಚ್ ನ ನಿರ್ಮಾಣ ಕಾರ್ಯ ಆರಂಭಗೊಂಡಿತು.
ಐದು ವರ್ಷಗಳ ಕಾಲ ನಡೆದ ಕಾಮಗಾರಿ
ಚರ್ಚ್ ನಿರ್ಮಾಣ ಕಾರ್ಯಕ್ಕೆ ಮೈಸೂರು ಮಹಾರಾಜರು ಸೇರಿದಂತೆ ದಾನಿಗಳು ನೆರವಿನ ಹಸ್ತ ನೀಡಿದರು. ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಚರ್ಚ್ ನಿರ್ಮಾಣಕ್ಕೆ ದೇಣಿಗೆ ಹರಿದು ಬಂದಿತು. ಫ್ರೆಂಚ್‌ನಿಂದ ಬಂದಿದ್ದ ಶಿಲ್ಪಿಗಳು ಫ್ರೆಂಚ್ ಕಲೆಯನ್ನು ಅನಾವರಣಗೊಳಿಸಿದರು. 1933ರಲ್ಲಿ ನಿರ್ಮಾಣದ ಕೆಲಸ ಆರಂಭಗೊಂಡು 1938ರಲ್ಲಿ ಮುಕ್ತಾಯವಾಯಿತು. 1941ರಲ್ಲಿ ಚರ್ಚ್ ನ ಮೊದಲ ಬಿಷಪ್ ಆಗಿ ರೈಟ್ ರೆವರೆಂಡ್ ಡಾ.ಪೂಗರ್ ನೇಮಕಗೊಂಡಿದ್ದು ಇತಿಹಾಸವಾಗಿದೆ. ಇನ್ನು ಮೂಲಗಳ ಪ್ರಕಾರ ಈ ಚರ್ಚ್ ನ ನಿರ್ಮಾಣ ಕಾರ್ಯಕ್ಕೆ ವೆಚ್ಚವಾಗಿರುವುದು 7ಲಕ್ಷ ರೂ ಎಂದು ಹೇಳಲಾಗಿದೆ.

ಚರ್ಚ್‌ನ ನಿರ್ಮಾಣ ಕರ್ತರು ಕಲಾನೈಪುಣ್ಯತೆಗಳನ್ನು ಮಾತ್ರವಲ್ಲದೆ ಅಚ್ಚರಿಗಳನ್ನು ಸೃಷ್ಟಿಸಿದ್ದಾರೆ. ಕಲ್ಪನೆಯ ಕಣ್ಣಿಗೆ ಇಡೀ ಕಟ್ಟಡ ಸಮುದ್ರದಲ್ಲಿ ಹಡಗನ್ನು ತಿರುವಿ ನಿಲ್ಲಿಸಿದಂತೆ ಗೋಚರವಾಗುತ್ತದೆ. ಇದರ ಉಲ್ಲೇಖವನ್ನು ಈ ಹಿಂದೆಯೇ ನೋಡುಗರು ಮಾಡಿದ್ದಾರೆ. ಇನ್ನು ಚರ್ಚ್ ಮುಂದೆ ನಿಂತು ನೋಡಿದರೆ ಇಲ್ಲಿನ ಪ್ರತಿ ದೃಶ್ಯವೂ ಸುಂದರವಾಗಿ ಮಾತ್ರವಲ್ಲದೆ ಹುಬ್ಬೇರಿಸುವಂತೆ ಮಾಡುತ್ತದೆ. ಪ್ರವೇಶ ದ್ವಾರದ ಬಳಿ ನಿಂತರೆ ಎರಡು ಪಕ್ಕಗಳಲ್ಲಿಯೂ ನಯವಾಗಿರುವ ಬೃಹತ್ ಕಂಬಗಳ ಸಾಲುಗಳಿವೆ. ಅಷ್ಟೇ ಅಲ್ಲದೆ ಅವುಗಳೆಲ್ಲವೂ ಸೂರನ್ನು ಅಂಟಿಕೊಂಡಂತೆ ನಿಂತಿವೆ. ಎರಡು ಕಂಬಗಳ ನಡುವಿನ ಸುಂದರ ಕೆತ್ತನೆಯ ಕಮಾನು ಮನಮೋಹಕವಾಗಿದೆ. ಇದರ ಮೇಲೆ ಆಕಾಶದತ್ತ ಮುಖ ಮಾಡಿ ನಿಂತ ಸುಮಾರು 165 ಅಡಿ ಎತ್ತರದ ಗೋಪುರಗಳು ಅದ್ಭುತವಾಗಿದ್ದು ಅದರ ಮೇಲೆ ಶಿಲುಬೆಯನ್ನಿರಿಸಲಾಗಿದೆ.
ಸಂತ ಫಿಲೋಮಿನಾ ಚರ್ಚ್‌ನ ಹತ್ತು ಹಲವು ವಿಶೇಷತೆಗಳು
ಒಳ ಪ್ರವೇಶಿಸಿದರೆ ವಿಶಾಲವಾದ ಸಭಾಭವನವಿದೆ. ಇಲ್ಲಿ ಏಸುಕ್ರಿಸ್ತ ಶಿಲುಬೇರಿಸುವ ಚಿತ್ರ ಕರುಣಾಜನಕವಾಗಿದೆ. ಒಳಗೆ ಕಲಾ ಕೃತಿಗಳು ಕೂಡ ಗಮನಾರ್ಹವಾಗಿವೆ. ಒಳಾಂಗಣದ ಸುತ್ತಲೂ ಇರುವ ಕಿಟಿಕಿಗಳ ಮಧ್ಯಭಾಗದಲ್ಲಿ ಕ್ರಿಸ್ತನ ಜೀವನ ಮತ್ತು ಬೋಧನೆಯ ಚಿತ್ರಗಳನ್ನು ಬಿಡಿಸಲಾಗಿದೆ. ಇಲ್ಲಿನ ಅಂಗಳದ ಮೆಟ್ಟಿಲನ್ನು ಇಳಿದು ಹೋದರೆ ಸುಂದರ ಗುಹೆಯ ಮಂಚದ ಮೇಲೆ ಶಾಂತಿಸಾಗರದ ಸುಖನಿದ್ದೆಯಲ್ಲಿ ತಲ್ಲೀನರಾಗಿ ಮಲಗಿರುವ ಸಂತ ಫಿಲೋಮಿನಾರವರ ವಿಗ್ರಹ ಮನಸೆಳೆಯುತ್ತದೆ. ಚರ್ಚ್‌ನಲ್ಲಿ ಗವಿಯಿದ್ದು ಇಲ್ಲಿ ಲೂರ್ದ್ ಮಾತೆಯ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ಗುಹೆಯ ಕೆತ್ತನೆಯನ್ನು ಫ್ರಾನ್ಸ್ ದೇಶದ ಲೂರ್ದ್ ಪಟ್ಟಣದಲ್ಲಿರುವ ಗುಹೆಯ ಮಾದರಿಯಲ್ಲಿಯೇ ನಿರ್ಮಿಸಲಾಗಿದೆ.

ಇನ್ನು ಚರ್ಚ್ ಒಳಗೆ ಮತ್ತು ಹೊರಗೆ ಹತ್ತು ಹಲವು ವಿಶೇಷತೆಗಳಿದ್ದು, ಎಲ್ಲವೂ ಆಕರ್ಷಣೀಯವಾಗಿದೆ. ಕ್ರೈಸ್ತ ಬಾಂಧವರಿಗೆ ಇದು ಪವಿತ್ರತಾಣವಾಗಿದ್ದರೆ, ಹೊರಗಿನಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಆಕರ್ಷಣೆಯ ಪ್ರವಾಸಿ ತಾಣವಾಗಿದೆ. ಹೀಗಾಗಿ ಮೈಸೂರಿಗೆ ಆಗಮಿಸುವ ಹೆಚ್ಚಿನವರು ಚರ್ಚ್‌ಗೆ ಭೇಟಿ ನೀಡಿ ತಮ್ಮ ಪ್ರವಾಸವನ್ನು ಮುಂದುವರೆಸುತ್ತಾರೆ. ಕ್ರಿಸ್‌ಮಸ್ ದಿನವಂತೂ ಚರ್ಚ್ ಜನರಿಂದ ತುಂಬಿ ತುಳುಕುತ್ತಿರುತ್ತದೆ.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications