ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು; 3,800 ಅಡಿಯ ದೇವಿರಮ್ಮನ ಬೆಟ್ಟ ಹತ್ತಿದ 80 ಸಾವಿರಕ್ಕೂ ಅಧಿಕ ಭಕ್ತರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್‌, 24: ವರ್ಷಕ್ಕೊಮ್ಮೆ ದರ್ಶನ ಕೊಡುವ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮನ ದರ್ಶನ ಪಡೆಯಲು ಈ ಬಾರಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿತ್ತು. ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟವನ್ನು ಹತ್ತುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಮಳೆ ಹಾಗೂ ಕೊರೊನಾದಿಂದ ಭಕ್ತರ ಸಂಖ್ಯೆ ಕ್ಷೀಣಿಸಿತ್ತು. ಆದರೆ ಈ ವರ್ಷ ಮಧ್ಯರಾತ್ರಿಯಿಂದಲೇ ಬೆಟ್ಟ ಹತ್ತಿದ ಭಕ್ತರ ಸಂಖ್ಯೆ ಅಂದಾಜು 80 ಸಾವಿರ ದಾಟಿದೆ. ಕಲ್ಲು-ಬಂಡೆ, ಮುಳ್ಳುಗಳ ಬೆಟ್ಟದಲ್ಲಿ ಭಕ್ತರು ಹಿಂದಿನ ರಾತ್ರಿ 10 ಗಂಟೆಯಿಂದಲೇ ಬೆಟ್ಟ ಹತ್ತುವುದಕ್ಕೆ ಶುರು ಮಾಡಿ ರಾತ್ರೋರಾತ್ರಿ ಕೆಳಗಿಳಿಯುತ್ತಾರೆ. ಬೆಟ್ಟವನ್ನು ಏರುವಾಗ ಸ್ವಲ್ಪ ಎಡವಿದರೂ ಪಾತಾಳ ಸೇರುವುದು ಗ್ಯಾರಂಟಿ. ಇಲ್ಲಿ ಹರಕೆ ಕಟ್ಟಿಕೊಂಡವರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದರೂ ಕೂಡ ಅವರ ಶಕ್ತಿಗೆ ಅನುಸಾರವಾಗಿ ಸೌದೆಯನ್ನು ಹೊತ್ತೊಯ್ಯುತ್ತಾರೆ. ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆ ಹಣ್ಣನ್ನು ದೇವಿಗೆ ಸಮರ್ಪಿಸ್ತಾರೆ.

Chikkamagalur; More than 80,000 devotees special pooja at Deviramma hill

ದೇವಿರಮ್ಮ ಬೆಟ್ಟದ ಎತ್ತರ ಎಷ್ಟು?

ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತರದಲ್ಲಿರುವ ದೇವಿರಮ್ಮನ ಬೆಟ್ಟದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುತ್ತದೆ. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸ ಇದ್ದವರು ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ. ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡುತ್ತಾರೆ. ಇಂದು ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನು ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನು ಆಚರಿಸುತ್ತಾರೆ.

ಚಿಕ್ಕಮಗಳೂರು; ರಾಷ್ಟ್ರದ ಜನತೆಯ ಒಳಿತಿಗಾಗಿ ದೇವಿರಮ್ಮನಲ್ಲಿ ಪಾರ್ಥಿಸಿದ್ದೇನೆ; ಸಿ.ಟಿ.ರವಿ ಚಿಕ್ಕಮಗಳೂರು; ರಾಷ್ಟ್ರದ ಜನತೆಯ ಒಳಿತಿಗಾಗಿ ದೇವಿರಮ್ಮನಲ್ಲಿ ಪಾರ್ಥಿಸಿದ್ದೇನೆ; ಸಿ.ಟಿ.ರವಿ

Chikkamagalur; More than 80,000 devotees special pooja at Deviramma hill

ಮೈಸೂರಿನಿಂದ ಬರುತ್ತವೆ ಪೂಜೆ ಸಾಮಗ್ರಿಗಳು

ಈ ಬೆಟ್ಟದ ದೇವಿರಮ್ಮ ತಾಯಿಗೂ ಮೈಸೂರು ಅರಸರಿಗೂ ತೀರಾ ಅವಿನಾಭಾವ ಸಂಬಂಧ ಇತ್ತು. ಪ್ರತಿವರ್ಷ ಮೈಸೂರಿನ ಅರಮನೆಯಿಂದ ಈ ದೇವಾಲಯಕ್ಕೆ ಇಂದಿಗೂ ಎಣ್ಣೆ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ಪೂಜೆ ವಸ್ತುಗಳು ಬರುತ್ತದೆ. ಇನ್ನು ಈ ವರ್ಷ ಸಾವಿರಾರು ಜನ ಅಪ್ಪು ಅಭಿಮಾನಿಗಳು ಬೆಟ್ಟ ಹತ್ತಿದ್ದು, ಜೊತೆಗೆ ಅಪ್ಪುವಿನ ಫ್ಲೆಕ್ಸ್ ಕೂಡ ಗುಡ್ಡದ ತುದಿಯಲ್ಲಿ ಹಾರಾಡಿದ್ದು ವಿಶೇಷವಾಗಿತ್ತು. ಒಟ್ಟಾರೆ ದೇವಿರಮ್ಮ ತಾಯಿಯನ್ನು ನೋಡುವುದಕ್ಕೆ ಪ್ರತಿವರ್ಷ ರಾಜ್ಯ-ಹೊರರಾಜ್ಯದಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಆದರೆ ಬೆಟ್ಟದ ತಾಯಿ ಮಾತ್ರ ತನ್ನ ಮಡಿಲಿಗೆ ಬರುವ ಯಾರೊಬ್ಬರಿಗೂ ಎಳ್ಳಷ್ಟು ಅನಾಹುತ ಆಗದಂತೆ ಕಾಯುತ್ತಿದ್ದಾಳೆ.

English summary
More than 80,000 people come to visit Deviramma hill of Chikkamagaluru district, attracted attention. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X