ಚೆನ್ನೈ-ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಆಗಮನ 30 ನಿಮಿಷ ತಡ-ಮಾಹಿತಿ ಇಲ್ಲಿದೆ

ಬೆಂಗಳೂರು, ಏಪ್ರಿಲ್‌, 28: ಕಾಮಗಾರಿಗಳು ಇರುವ ಸಂದರ್ಭದಲ್ಲಿ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ. ಇದೀಗ ಮೇ 5ರಂದು ಚೆನ್ನೈ-ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು 30 ನಿಮಿಷ ತಡವಾಗಿ ಹೊರಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ವರದಪುರದಲ್ಲಿ ಹೆಚ್ಚುವರಿ ಲೂಪ್‌ಲೈನ್‌ ಕಾರ್ಯಾರಂಭಕ್ಕಾಗಿ ಈ ಮಾರ್ಗವನ್ನು ಮೇ 5ರಂದು ಅರ್ಧ ಗಂಟೆಗಳ ಕಾಲ ಮುಚ್ಚಲು ನಿರ್ಧಾರ ಮಾಡಲಾಗಿದೆ. ಅದಕ್ಕಾಗಿ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಪ್ರತಿದಿನ ಬೆಳಗ್ಗೆ 5:50ಕ್ಕೆ ಹೊರಡುತ್ತಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ತಡವಾಗಿ ಹೊರಡಲಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನಡಿದ್ದಾರೆ.

Chennai-Mysuru Vande Bharat Express train arrives 30 minutes late what is the reason

ವಂದೇ ಭಾರತ್ ಪ್ರಯಾಣಿಕರಿಗೆ 500ml ಉಚಿತ ನೀರು: ಐಷಾರಾಮಿ, ಹೈಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಮೊದಲಿಗೆ ಭಾರತೀಯ ರೈಲ್ವೆಯಿಂದ 1 ಲೀಟರ್‌ ನೀರಿನ ಬಾಟಲಿಯನ್ನು ಕೊಡಲಾಗುತ್ತಿತ್ತು. ಇದೀಗ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ನೀರಿನ ಹಾಹಾಕಾರವೂ ಶುರುವಾಗಿದೆ. ಆದ್ದರಿಂದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದೆ. ಹಾಗಾದರೆ ಮಾಹಿತಿ ಇಲ್ಲಿದೆ.

ರಾಜಧಾನಿ, ಶತಾಬ್ದಿ, ವಂದೇ ಭಾರತ್‌ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸಿದರೆ, ಪ್ರಯಾಣದ ಸಮಯದಲ್ಲಿ ರೈಲ್ವೆಯು ಪ್ರಯಾಣಿಕರಿಗೆ 1 ಲೀಟರ್ ನೀರಿನ ಬಾಟಲಿ ನೀಡಲಾಗುತ್ತಿತ್ತು. ಇದೀಗ ರೈಲ್ವೇ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೇವಲ 500 ಮಿಲಿ ಬಾಟಲಿಯನ್ನು ನೀಡಲು ನಿರ್ಧರಿಸಿದೆ.

ರೈಲುಗಳಲ್ಲಿ ಕುಡಿಯುವ ನೀರು ವ್ಯರ್ಥವಾಗುವುದನ್ನು ನಿಯಂತ್ರಿಸಲು ರೈಲ್ವೆ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಎಲ್ಲಾ ವಂದೇ ಭಾರತ್ ರೈಲುಗಳಲ್ಲಿ ಪ್ರತಿ ಪ್ರಯಾಣಿಕರಿಗೆ 500 ಮಿಲಿಯ ಒಂದು ರೈಲ್ ನೀರ್ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಯನ್ನು ನೀಡಲಾಗುವುದು ಎಂದು ರೈಲ್ವೆ ನಿರ್ಧಾರ ಮಾಡಿದೆ.

ಇದೇ ವೇಳೆ ಪ್ರಯಾಣಿಕರಿಗೆ ಬೇಡಿಕೆಯ ಮೇರೆಗೆ 500 ಎಂಎಲ್‌ನ ಮತ್ತೊಂದು ಬಾಟಲ್ ರೈಲ್ ನೀರ್ ಲಭ್ಯ ಇರುತ್ತದೆ ಎಂದು ರೈಲ್ವೆ ಸ್ಪಷ್ಟಪಡಿಸಿದ್ದು, ಇದಕ್ಕೆ ಪ್ರಯಾಣಿಕರಿಂದ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಶುಲ್ಕವಿಲ್ಲದೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 500 ಮಿಲಿ ಬಾಟಲಿಯನ್ನು ನೀವು ಹೆಚ್ಚುವರಿಯಾಗಿ ಉಚಿತವಾಗಿ ಪಡೆಯಬಹುದಾಗಿದೆ.

ವಂದೇ ಭಾರತ್ ಪ್ರಾರಂಭವಾಗಿದ್ದು ಯಾವಾಗ?: 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದು, ಪ್ರಸ್ತುತ ದೇಶದ 40ಕ್ಕೂ ಹೆಚ್ಚು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಫೆಬ್ರವರಿ 15, 2019ರಂದು, ನವದೆಹಲಿ-ಕಾನ್ಪುರ್-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಪ್ರಧಾನಿ ಮೋದಿ ಅವರು ಮೊದಲ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದರು. ಈ ರೈಲುಗಳು ಅತೀ ವೇಗದಲ್ಲಿ ಚಲಿಸುತ್ತವೆ ಮತ್ತು ವೈಫೈ ಸಂಪರ್ಕ ಸೇರಿದಂತೆ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+