Badrinath Dham Start: ವೇದಘೋಷದೊಂದಿಗೆ ಬದರಿನಾಥ ದೇವಸ್ಥಾನದ ಬಾಗಿಲು ಓಪನ್
ಉತ್ತರಖಂಡದ ಚಾರ್‌ಧಾಮ್‌ಗಳಲ್ಲಿ ಒಂದಾದ ಬದರಿನಾಥ ದೇವಸ್ಥಾನದ ಬಾಗಿಲನ್ನು ಇಂದು ಬೆಳಿಗ್ಗೆ ವೇದಘೋಷದೊಂದಿಗೆ ತೆರೆಯಲಾಗಿದೆ. ಬಾಗಿಲು ತೆರೆದ ತಕ್ಷಣ ಭಕ್ತರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಜೋರಾಗಿ ಹರ್ಷೋದ್ಗಾರ ಗಂಟಾನಾದದೊಂದಿಗೆ ಬದರಿನಾಥ ದೇವಾಲಯದ ಬಾಗಿಲನ್ನು ತೆರೆಯಲಾಯಿತು.
ಇಂದು ಬೆಳಗ್ಗೆ ಆರು ಗಂಟೆಗೆ ಭಕ್ತರಿಗಾಗಿ ಧಾಮದ ಬಾಗಿಲು ತೆರೆಯಲಾಗಿದ್ದು, ಬಾಗಿಲು ತೆರೆಯುವ ಮುನ್ನ ಪೂರ್ಣ ವೇದಘೋಷದೊಂದಿಗೆ ಪೂಜೆ ಸಲ್ಲಿಸಲಾಯಿತು ಎಂದು ತಿಳಿದುಬಂದಿದೆ. ವಿಶಾಲ್ ಲಾಲ್ ಕಿ ಜೈ ಎಂಬ ಘೋಷಣೆಗಳೊಂದಿಗೆ ಸೇನಾ ಬ್ಯಾಂಡ್ ನ ಸುಮಧುರ ನಾದದ ನಡುವೆ ಭಕ್ತರಿಗೆ ಬದರಿನಾಥ ದರ್ಶನ ನೀಡಿದ್ದಾನೆ.

ಮುಂದಿನ ಆರು ತಿಂಗಳ ಕಾಲ ಚಾರ್‌ಧಾಮ್ ಯಾತ್ರೆ ನಡೆಯಲಿದೆ. ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಚಾರ್‌ಧಾಮ್‌ಗೆ ಭೇಟಿ ನೀಡುವ ಭಕ್ತರಿಗಾಗಿ ತನ್ನ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
#WATCH उत्तराखंड: बद्रीनाथ धाम के कपाट खुलने के बाद भक्तों ने उत्सव मनाया गया। pic.twitter.com/cqeQ0IaDnl
— ANI_HindiNews (@AHindinews) May 12, 2024
ಅಂದಹಾಗೆ ಮೇ 10ರಂದು ಅಂದರೆ ಅಕ್ಷಯ ತೃತೀಯ ದಿನದಂದು ಕೇದಾರನಾಥ, ಗಂಗೋತ್ರಿ, ಯಮನೋತ್ರಿ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಇಂದಿನಿಂದ ಭಕ್ತರು ಚಾರ್‌ಧಾಮ್ ಯಾತ್ರೆಯಲ್ಲಿ ನಾಲ್ಕು ಧಾಮಗಳಿಗೂ ಭೇಟಿ ನೀಡಬಹುದಾಗಿದೆ. ಘಂಟೆ ಶಂಖನಾದ ಪೂಜೆಯೊಂದಿಗೆ ಈ ವರ್ಷದ ಚಾರ್ಧಾಮ್ ಯಾತ್ರೆ ಮೇ 10ರಂದು ಆರಂಭವಾಗಿದೆ.
ಕೇದಾರನಾಥ ದೇವಸ್ಥಾನದ ಬಾಗಿಲು ಮೇ 10ರಂದು ಬೆಳಿಗ್ಗೆ 7 ಗಂಟೆಗೆ ತೆರೆಯಲಾಯಿತು. ಯಮುನೋತ್ರಿ ದೇವಸ್ಥಾನದ ಬಾಗಿಲು ಮೇ 10ರಂದು ಬೆಳಿಗ್ಗೆ 10.29 ಕ್ಕೆ ತೆರೆಯಲಾಯಿತು. ನಂತರ ಗಂಗೋತ್ರಿಯ ಬಾಗಿಲು ಮಧ್ಯಾಹ್ನ 12.20 ಕ್ಕೆ ತೆರೆಯಲಾಗಿದೆ. ಚಾರ್ಧಾಮ್ ಎಂದು ಕರೆಯಲ್ಪಡುವ ಪ್ರಸಿದ್ಧ ಧಾಮಗಳಲ್ಲಿ ಸೇರಿಸಲಾದ ಮತ್ತೊಂದು ಶಿವಧಾಮವಾದ ಬದರಿನಾಥದ ಬಾಗಿಲುಗಳು ಮೇ 12 ರಂದು ಅಂದರೆ ಇಂದು ಬೆಳಿಗ್ಗೆ ತೆರೆಯಲಾಗಿದೆ.

ಇದಕ್ಕಾಗಿ ಬದರಿನಾಥ ದೇವಾಲಯವನ್ನು 15 ಕ್ವಿಂಟಾಲ್ ಹೂವುಗಳಿಂದ ಭವ್ಯವಾಗಿ ಅಲಂಕರಿಸಲಾಗಿದೆ. ಬಾಗಿಲು ತೆರೆದಾಗ ಕಂಡ ದೃಶ್ಯ ಅತ್ಯಂತ ಅಲೌಕಿಕವಾಗಿತ್ತು. 5000 ಕ್ಕೂ ಹೆಚ್ಚು ಯಾತ್ರಿಕರು ಬದರಿನಾಥನನ್ನು ಪೂಜಿಸಲು ಬದರಿನಾಥ ಧಾಮವನ್ನು ತಲುಪಿದರು. ಚಾರ್ ಧಾಮ್ ಯಾತ್ರೆಯ ಬಗ್ಗೆ ಭಕ್ತರಲ್ಲಿ ತೀವ್ರ ಉತ್ಸಾಹ ಕಂಡು ಬರುತ್ತಿದೆ.
ಪ್ರವಾಸಿಗರನ್ನು ಆಹ್ವಾನಿಸಿದ ಸಿಎಂ
ಕೇದಾರನಾಥ ದೇಗುಲದ ಬಾಗಿಲನ್ನು ತೆರೆಯುವುದರಿಂದ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಇದಲ್ಲದೇ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಲಾಯಿತು. ಬಾಬಾರವರ ದೇವಸ್ಥಾನದ ಬಾಗಿಲು ತೆರೆದಾಗ, ಈ ಪ್ರದೇಶದಲ್ಲಿ ತಾಪಮಾನವು -1 ಡಿಗ್ರಿಯಲ್ಲಿ ದಾಖಲಾಗಿತ್ತು. ಬಾಗಿಲು ತೆರೆಯುವ ಸಂದರ್ಭದಲ್ಲಿ ಅಪಾರ ಭಕ್ತರು ನೆರೆದಿದ್ದರು. ಬಾಬಾ ಕೇದಾರನಾಥನ ಬಾಗಿಲು ತೆರೆದ ನಂತರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಾರ್ಧಾಮ್ ಯಾತ್ರೆಗೆ ಜನರನ್ನು ಆಹ್ವಾನಿಸಿದರು.
"ಜೈ ಬಾಬಾ ಕೇದಾರ್! 2024 ರ ಚಾರ್ಧಾಮ್ ಯಾತ್ರೆಯಲ್ಲಿ ಎಲ್ಲಾ ಭಕ್ತರಿಗೆ ಹೃತ್ಪೂರ್ವಕ ಸ್ವಾಗತ ಮತ್ತು ಅಭಿನಂದನೆಗಳು. ಚಾರ್‌ಧಾಮ್‌ಗೆ ಬರುವ ವೃದ್ಧರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಮ್ಮ ಸರ್ಕಾರದಿಂದ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ'' ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದರು.












Click it and Unblock the Notifications